Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 30.12.2020

ಧೈನಂದಿನ ಧ್ಯಾನ(Kannada) – 30.12.2020

ಲೆಕ್ಕ ಒಪ್ಪಿಸುವುದು

“ಬಹುಕಾಲವಾದ ಮೇಲೆ ಆ ಸೇವಕರ ಯಜಮಾನನು ಬಂದು ಅವರಿಂದ ಲೆಕ್ಕಾ ತೆಗೆದುಕೊಂಡನು” - ಮತ್ತಾಯ 25:19

ಒಂದೊಂದು ನಿರ್ವಹಣೆಯು ಮಾರ್ಚ್ ತಿಂಗಳ ಕೊನೆಯಲ್ಲಿ ತಮ್ಮ ನಿರ್ವಹಣೆಯ ಲೆಕ್ಕಗಳನ್ನು ಸರ್ಕಾರಕ್ಕೆ ಒಪ್ಪಿಸುವ ಜವಾಬ್ದಾರಿ ಹೊಂದಿದೆ. ಲೋಕ ಪ್ರಕಾರವಾದ ಒಂದು ನಿರ್ವಹಣೆಯೇ  ತಾವು ಖರ್ಚು ಮಾಡುವ ಸಣ್ಣ ಮೊತ್ತವೋ, ದೊಡ್ಡ ಮೊತ್ತವೋ ಒಂದೊಂದನ್ನು ಪಟ್ಟಿಮಾಡಿ ಅದನ್ನು ನಮೂದಿಸಿ ಅದನ್ನು ಸರಿಯಾಗಿ ಲೆಕ್ಕ ತೋರಿಸಬೇಕಾಗಿದೆ. ನಮ್ಮ ಪರಲೋಕ ಯಜಮಾನನು ನಮ್ಮ ಬಳಿ ಒಪ್ಪಿಸಿಕೊಟ್ಟ ಕಾರ್ಯಗಳ ಬಗ್ಗೆ ನ್ಯಾಯತೀರ್ಪಿನ ದಿನದಲ್ಲಿ ಲೆಕ್ಕ ಕೇಳುತ್ತಾರೆ ಎಂಬುದನ್ನು ಮರೆಯಬಾರದು. ನಾವು ಲೆಕ್ಕ ಒಪ್ಪಿಸಬೇಕಾದ ಕೆಲವು ಕಾರ್ಯಗಳನ್ನು ನೋಡೋಣವಾ?.

ತನ್ನನ್ನು ಕುರಿತು:  ರೋಮಾ 14:12 ರಲ್ಲಿ ನಮ್ಮಲ್ಲಿ ಪ್ರತಿಯೊಬ್ಬನೂ ತನ್ನನ್ನು ಕುರಿತು ದೇವರಿಗೆ ಲೆಕ್ಕ ಒಪ್ಪಿಸುತ್ತಾನೆ ಎಂದು ಬರೆಯಲ್ಪಟ್ಟ ಪ್ರಕಾರ ನಾವು ಜೀವಿಸುತ್ತಿರುವ ಜೀವನವನ್ನು ಕುರಿತು ನಾವೇ ದೇವರ ಮುಂದೆ ಲೆಕ್ಕ ಒಪ್ಪಿಸಬೇಕು. ನಮ್ಮ ಸಾಕ್ಷಿ ಮತ್ತೊಬ್ಬರನ್ನು ಕ್ರಿಸ್ತನ ಬಳಿಗೆ ನಡೆಸುವುದಕ್ಕೆ ಪ್ರಯೋಜನಕರವಾಗಿದೆಯಾ? ಅಥವಾ ಸಾಕ್ಷಿ ಇಲ್ಲದ ಜೀವನವನ್ನು ಜೀವಿಸಿ ಮತ್ತೊಬ್ಬರಿಗೆ ತಡೆ ಮಾಡುತ್ತಿದ್ದೇವಾ? ಕ್ರಿಸ್ತನನ್ನು ಧರಿಸಿರುವವರೇ ಕ್ರೈಸ್ತರು. ನಾನು ಕ್ರಿಸ್ತನಿಲ್ಲದ ಕ್ರೈಸ್ತನಾಗಿ ಜೀವಿಸುತ್ತಿದ್ದೇನಾ? ಅಥವಾ ನನ್ನನ್ನು ಕಾಣುವವರು ಕ್ರಿಸ್ತನನ್ನು ಕಾಣುತ್ತಿದ್ದಾರಾ? ನಮ್ಮ ಜೀವನ ಮೊದಲು ಮಾದರಿಯಾದ ಜೀವನವಾಗಿ, ಮತ್ತೊಬ್ಬರನ್ನು ಆದಾಯ ಮಾಡಿಕೊಳ್ಳುವ ಜೀವನವಾಗಿ ಇದೆಯಾ ಎಂದು ಯೋಚಿಸೋಣ.

ನಾನು ಮಾತನಾಡುವ ಮಾತುಗಳ ಬಗ್ಗೆ:   ಕರ್ತನಾದ ಯೇಸು ಮತ್ತಾಯ 12:36 ರಲ್ಲಿ ಮನುಷ್ಯರು ಆಡುವ ಪ್ರತಿಯೊಂದು ವ್ಯರ್ಥವಾದ ಮಾತಿಗಾಗಿ ನ್ಯಾಯವಿಚಾರಣೆಯ ದಿನದಲ್ಲಿ ಅವರು ಲೆಕ್ಕಕೊಡಬೇಕು. ಎಂದು ಬರೆಯಲ್ಪಟ್ಟಿದೆ. ಒಂದೊಂದು ದಿನವೂ ಮುಂಜಾನೆಯಲ್ಲಿ ಎದ್ದಾಗಿನಿಂದ ರಾತ್ರಿ ಹಾಸಿಗೆಗೆ ಹೋಗುವವರೆಗೂ ನಾವು ಮಾತನಾಡುವ ಒಂದೊಂದು ಮಾತುಗಳೂ ಪ್ರಯೋಜನಕರವಾದದ್ದೇನಾ? ಅಥವಾ ವ್ಯರ್ಥವಾದ ಮಾತುಗಳಾ? ಅಪೊಸ್ತಲನಾದ ಪೌಲನು ಕೇಳುವವರಿಗೆ ಭಕ್ತಿ ಅಭಿವೃದ್ಧಿಯಾಗುವುದಕ್ಕೆ ಅನುಕೂಲವಾದ ಮಾತುಗಳನ್ನು, ಪ್ರಯೋಜನಕರವಾದ ಮಾತುಗಳನ್ನು, ಮಾತನಾಡುವಂತೆ ಆಲೋಚನೆ ಹೇಳುತ್ತಿದ್ದಾರೆ.

ಪ್ರತಿಭೆಗಳನ್ನು ಕುರಿತು:   ಲೂಕ 16:2 ರಲ್ಲಿ  "ಮನೆವಾರ್ತೆಯ ನಿನ್ನ ಲೆಕ್ಕವನ್ನು ಒಪ್ಪಿಸು; ಎಂದು" ಬರೆದಿರುವ ದೇವರ ಮಾತಿನಂತೆ ಈ ಲೋಕದಲ್ಲಿ ದೇವರ ಬಳಿ ನಾವು ಹೊಂದಿದ ಪ್ರತಿಭೆಗಳನ್ನು ಅವರಿಗಾಗಿ, ಅವರ ನಾಮ ಮಹಿಮೆಗಾಗಿ ಉಪಯೋಗಿಸಬೇಕು. ನನಗೆ ಯಾವ ಪ್ರತಿಭೆಯೂ ಕೂಡ ಇಲ್ಲ ಎಂದು ಒಬ್ಬರೂ ಹೇಳಲು ಸಾಧ್ಯವಿಲ್ಲ. ನಮ್ಮೊಬ್ಬೊಬ್ಬರಿಗೂ ದೇವರು ಪ್ರತಿಭೆಯನ್ನೂ, ಕೌಶಲ್ಯವನ್ನು ಕೊಟ್ಟಿದ್ದಾರೆ. ಸಮಯ, ಹಣ, ಕೌಶಲ್ಯ ಇವುಗಳೆಲ್ಲ ದೇವರು ನಮಗೆ ಕೊಟ್ಟಿರುವುದು. ದೇವರು ಕೊಟ್ಟದ್ದನ್ನು ಅವರ ನಾಮ ಮಹಿಮೆಗಾಗಿ ಉಪಯೋಗಿಸಬೇಕಾದದ್ದು ನಮ್ಮ ಜವಾಬ್ದಾರಿ.

ಸ್ನೇಹಿತರೇ! ದೇವರ ಮುಂದೆ ಲೆಕ್ಕ ಒಪ್ಪಿಸಬೇಕಾದ ದಿನವನ್ನು ನಾವು ಸಮೀಪಿಸುತ್ತಿದ್ದೇವೆ. ಆದ್ದರಿಂದ ಸಿದ್ಧರಾಗೋಣ.
-    R. ಜಯಶೀಲ

ಪ್ರಾರ್ಥನಾ ಅಂಶ:-
ಹೊಸ ವರ್ಷವು ಆಶೀರ್ವಾದ ಕರವಾದ ವರ್ಷವಾಗಿರುವಂತೆ ಪ್ರಾರ್ಥಿಸಿರಿ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)