ಧೈನಂದಿನ ಧ್ಯಾನ(Kannada) – 11.02.2025
ಧೈನಂದಿನ ಧ್ಯಾನ(Kannada) – 11.02.2025
ಮಿಡತೆ
"...ಇಬ್ಬರು ಮೂವರು ನನ್ನ ಹೆಸರಿನಲ್ಲಿ ಎಲ್ಲಿ ಕೂಡಿ ಬಂದಿರುತ್ತಾರೋ ಅಲ್ಲಿ ಅವರ ನಡುವೆ ನಾನು ಇದ್ದೇನೆ ಅಂದನು" - ಮತ್ತಾಯ 18:20
ನಾವೆಲ್ಲರೂ ಮಿಡತೆಗಳನ್ನು ನೋಡಿದ್ದೇವೆ. ಅದು ಒಂಟಿಯಾಗಿ ಬಂದಾಗ ಯಾರೂ ಅದಕ್ಕೆ ಹೆದರುವುದಿಲ್ಲ. ಅದು ಯಾವ ದೊಡ್ಡ ಹಾನಿಯನ್ನೂ ಸಹ ಉಂಟುಮಾಡುವುದಿಲ್ಲ. ಆದರೆ ಅವುಗಳು ಒಂದು ಸೈನ್ಯವಾಗಿ ಬರುವಾಗ, ಹಾದಿಯಲ್ಲಿ ಕಾಣುವ ಯಾವ ಹಸಿರು ಎಲೆಗಳನ್ನೂ ಬಿಡದೇ ಇಡೀ ಬೆಳೆಗಳನ್ನು ತಿಂದು ನಾಶಪಡಿಸುತ್ತದೆ. ಮಿಡತೆಗಳು ಒಟ್ಟಾಗಿ ಸೇರಿ ಕಾರ್ಯ ಮಾಡುವಂತಹ ಸ್ವಭಾವವುಳ್ಳವು. ದೇವರು ಐಗುಪ್ತದಲ್ಲಿ ತನ್ನ ಶಕ್ತಿಯನ್ನು ಪ್ರದರ್ಶಿಸಲು ಆಜ್ಞಾಪಿಸಿದ ಹತ್ತು ಬಾಧೆಗಳಲ್ಲಿ ಒಂದನ್ನು ಮಿಡತೆಗಳ ಮೂಲಕ ಮಾಡಿ ಮುಗಿಸಿದರು. ಭೂಮಿಯಲ್ಲಿ ಸಣ್ಣವುಗಳಾಗಿದ್ದರೂ, ಬಹಳ ಬುದ್ಧಿವಂತ ನಾಲ್ಕು ಜೀವಿಗಳಿವೆ ಎಂದು ಜ್ಞಾನೋಕ್ತಿಗಳಲ್ಲಿ ಆಗೂರ್ ಎಂಬ ಜ್ಞಾನಿ, ಮಿಡತೆಗಳ ಬಗ್ಗೆ ಹೀಗೆ ಹೇಳುತ್ತಾರೆ, "ರಾಜನಿಲ್ಲದಿದ್ದರೂ ಗುಂಪುಗುಂಪಾಗಿ ಹೊರಡುವ ಮಿಡತೆಗಳು"! ಅವು ಬಹಳ ಜ್ಞಾನವುಳ್ಳವು ಎಂದು ಉಲ್ಲೇಖಿಸಿದ್ದಾರೆ. ಅವು ಒಂಟಿಯಾಗಿ ಇರುವಾಗ ಮಾಡಲು ಸಾಧ್ಯವಾಗದ್ದನ್ನು, ಗುಂಪಾಗಿ ಇರುವಾಗ ಮಾಡಿ ಮುಗಿಸಿಬಿಡುತ್ತವೆ. ಇದರಿಂದ ನಾವು ಒಂದು ಆಧ್ಯಾತ್ಮಿಕ ಕಾರ್ಯವನ್ನು ಕಲಿತುಕೊಳ್ಳಬಹುದು.
ಹೊಸ ಒಡಂಬಡಿಕೆಯಲ್ಲಿ, ಅಪೊಸ್ತಲರ ದಿನಗಳಲ್ಲಿ ಪೇತ್ರನನ್ನು ಸೆರೆಮನೆಗೆ ಹಾಕಲಾಯಿತು. ಪೇತ್ರನನ್ನು ಕಾವಲು ಕಾಯಲು ಅವರು ಪ್ರತಿ ತರಗತಿಗೆ ನಾಲ್ಕು ಸೈನಿಕರನ್ನು ನಿಯೋಜಿಸಿದರು ಮತ್ತು ಅವರನ್ನು ನಾಲ್ಕು ತರಗತಿಗಳ ಆರೈಕೆಗೆ ಒಪ್ಪಿಸಿದರು. ಪೇತ್ರನು ಸೆರೆಮನೆಯಲ್ಲಿ ಬಂಧಿಸಲ್ಪಟ್ಟಾಗ ಸಭೆಯವರು ಒಟ್ಟಾಗಿ ಸೇರಿ ಅವನಿಗೋಸ್ಕರ ದೇವರ ಬಳಿ ಆಸಕ್ತಿಯಿಂದ ಪ್ರಾರ್ಥಿಸಿದರು. ಪೇತ್ರನು ಎರಡು ಸರಪಣಿಗಳಿಂದ ಬಂಧಿಸಲ್ಪಟ್ಟು ಸೆರೆಮನೆಯಲ್ಲಿ ಇಬ್ಬರು ಕಾವಲುಗಾರರ ನಡುವೆ ನಿದ್ರಿಸುತ್ತಿದ್ದರು. ಈ ಸಂದರ್ಭದಲ್ಲಿ, ದೇವದೂತನು ಪೇತ್ರನನ್ನು ಸೆರೆಮನೆಯಿಂದ ಹೊರಗೆ ತಂದರು. ಪೇತ್ರನು ಸೆರೆಮನೆಯಿಂದ ಬಿಡುಗಡೆಯಾಗಲು ಕಾರಣವಾಗಿದ್ದದ್ದು ಸಭೆಯವರ ಕಟ್ಟಾಸಕ್ತಿಯ ಪ್ರಾರ್ಥನೆಯೇ. ಸಭೆ ಎಂದು ಹೇಳುವಾಗ, ಒಂದು ಸಣ್ಣ ಗುಂಪಾಗಿಯೋ ಅಥವಾ ದೊಡ್ಡ ಗುಂಪಾಗಿಯೋ ಇರಬಹುದು. ಎಲ್ಲರೂ ಒಟ್ಟಾಗಿ ಗುಂಪಾಗಿ ಪ್ರಾರ್ಥಿಸಿದ್ದರಿಂದಲೇ ಬಿಡುಗಡೆ ಸಿಕ್ಕಿತು.
ಪ್ರಿಯರೇ! ಈ ಪುಟ್ಟ ಜೀವಿಗಳಾದ ಮಿಡತೆಗಳಿಂದ, ಗುಂಪಾಗಿ ಒಟ್ಟಾಗಿ ಪ್ರಾರ್ಥಿಸುವುದು ಎಷ್ಟು ದೊಡ್ಡ ಪರಿಣಾಮ ಬೀರುತ್ತದೆ ಎಂಬುದನ್ನು ನಾವು ಕಲಿತುಕೊಳ್ಳಬಹುದು. ಕ್ರೈಸ್ತ ವಿಶ್ವಾಸಿಗಳು ಮತ್ತು ಸೇವಕರು ತಾವು ಒಂಟಿಯಾಗಿರುವಾಗ ಮಾಡುವ ಕಾರ್ಯಗಳಿಗಿಂತ, ಒಂದು ಗುಂಪಾಗಿ ಒಂದೇ ಮನಸ್ಸಿನಿಂದ ಪ್ರಾರ್ಥಿಸಿ, ಕರ್ತನಿಗಾಗಿ ಒಟ್ಟಾಗಿ ಕೆಲಸ ಮಾಡುವಾಗ ಹೆಚ್ಚಿನದನ್ನು ಸಾಧಿಸಬಹುದು. ನಾವು ಒಂದು ದೊಡ್ಡ ಸೈನ್ಯವಾಗಿ ಎದ್ದು ನಿಂತು ನಮ್ಮ ಸಭೆಗಾಗಿ ಕರ್ತನು ಹೊಂದಿರುವ ಉದ್ದೇಶವನ್ನು ಪೂರೈಸಬಹುದು.
- Mrs. ಶಕ್ತಿ ಶಂಕರ್‌ರಾಜ್
ಪ್ರಾರ್ಥನಾ ಅಂಶ:
ಮನೆ ಪ್ರಾರ್ಥನಾ ಕೂಟಗಳನ್ನು ಆಯೋಜಿಸುವ ಕೊರ್ನೇಲ್ಯರು, ಪ್ರತಿ ತಾಲೂಕಿನಲ್ಲಿ ಎದ್ದೇಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482