ಧೈನಂದಿನ ಧ್ಯಾನ(Kannada) – 09.02.2025 (Kids Special)
ಧೈನಂದಿನ ಧ್ಯಾನ(Kannada) – 09.02.2025 (Kids Special)
ರಘುವಿನ ದುರಾಸೆ
"...ನಿಮಗಿರುವವುಗಳಲ್ಲಿ ತೃಪ್ತರಾಗಿರಿ;..." - ಇಬ್ರಿಯ 13:5
"ಅಮ್ಮಾ, ನನಗೆ ತುಂಬಾ ಹಸಿವಾಗ್ತಿದೆ, ದಯವಿಟ್ಟು ಬೇಗ ಊಟ ತಂದುಕೊಡಿ" ಎಂದು ಕೇಳಿದನು ಜಗನ್. ಅಮ್ಮ ನಿರಾಳವಾದ ಧ್ವನಿಯಲ್ಲಿ, "ಇಗೋ ತರುತ್ತಿದ್ದೇನೆ" ಎಂದು ಹೇಳಿ, ಹಳೆಯ ಅನ್ನ ಮತ್ತು ಉಪ್ಪಿನಕಾಯಿ ಕೊಟ್ಟರು. ಜಗನ್ ಅಮ್ಮನನ್ನು ಬೇರೆ ಏನೂ ಇಲ್ವಾ ಅಮ್ಮ ಎಂದು ಕೇಳಿದಾಗ, ಕಣ್ಣೀರು ತುಂಬಿದ ಕಣ್ಣುಗಳಿಂದ ಅಮ್ಮ ಇಲ್ಲಪ್ಪಾ ಎಂದಳು. ಜಗನ್ ಕೂಡ ಊಟ ಮಾಡಿ ಆಟವಾಡಲು ಹೊರಟು ಹೋದ. ಅವನ ತಂದೆ ತಾಯಿ ಕೆಲಸಕ್ಕೆ ಎಲ್ಲಿಗೆ ಹೋಗಬೇಕೆಂದು ಯೋಚಿಸುತ್ತಿದ್ದರು. ಏಕೆಂದರೆ ಆ ಹಳ್ಳಿ ತುಂಬಾ ಬರದಲ್ಲಿತ್ತು. ಆ ಊರಿನ ಎಲ್ಲಾ ಗಂಡಸರು ಜೀವನೋಪಾಯ ಹುಡುಕಿಕೊಂಡು ಬೇರೆ ಊರಿಗೆ ಹೋಗುತ್ತಿದ್ದರು.
ಜಗನ್ ನ ತಂದೆ ರಘು ಕೂಡ ಕೆಲಸ ಹುಡುಕಿಕೊಂಡು ಒಂದು ಪಟ್ಟಣಕ್ಕೆ ಹೋದರು. ಅಲ್ಲಿನ ನಾಯಕನ ಬಳಿಗೆ ಹೋಗಿ ಕೆಲಸ ಕೇಳಿದರು. ಅವರು ಸರಿ ಅಂತ ಹೇಳಿ, ಮರುದಿನ ಬೆಳಿಗ್ಗೆ ಕೆಲವು ಜನರನ್ನು ಮತ್ತು ರಘುವನ್ನು ಕರೆದುಕೊಂಡು ಹೋಗಿ ಈ ದಿನ ಸಂಜೆ ಸೂರ್ಯ ಮುಳುಗುವುದರೊಳಗೆ ಎಷ್ಟು ದೂರ ನಡೆದು ಅಲೆದಾಡುತ್ತೀರೋ ಆ ಸ್ಥಳವನ್ನೆಲ್ಲಾ ನೀವು ನಿಮಗೇ ಸ್ವಂತವಾಗಿ ಇಟ್ಟುಕೊಳ್ಳಬಹುದು. ಅದರಲ್ಲಿ ಕೃಷಿ ಮಾಡಿ ಕುಟುಂಬವಾಗಿ ಸಂತೋಷವಾಗಿರಬಹುದು. ಇದು ಈ ಊರಿನ ನಿಬಂಧನೆ. ಇಲ್ಲಿ ಜೀವನ ಸಾಗಿಸಲು ಬರುವ ಪ್ರತಿಯೊಬ್ಬರಿಗೂ ನಾವು ಅದೇ ರೀತಿ ಮಾಡುತ್ತೇವೆ. ಆದರೆ ಒಂದು ನಿಬಂಧನೆ ಏನಂದ್ರೆ ಸೂರ್ಯನು ಮರೆಯಾಗುವುದರೊಳಗೆ ಇಲ್ಲಿಗೆ ಬಂದುಬಿಡಬೇಕು. ನಾನು ಇಲ್ಲೇ ಇರುತ್ತೇನೆ. ಹಾಗೆ ಬರದಿದ್ದರೆ ಏನೂ ಸಿಗುವುದಿಲ್ಲ ಎಂದು ಹೇಳಿದರು.
ರಘು ಕೂಡ ಸರಿ ಅಂತ ಹೇಳಿ ನಡೆಯಲು ಶುರು ಮಾಡಿದರು. ಸ್ವಲ್ಪ ದೂರದಲ್ಲಿ, ಉದ್ದನೆಯ ಮೇಲಾವರಣದಂತೆ ಹರಡಿಕೊಂಡಿದ್ದ ತೆಂಗಿನ ತೋಟವೊಂದು ಕಾಣಿಸಿಕೊಂಡಿತು ಅದರ ಮೇಲೆ ಆಸೆಪಟ್ಟು ಅಲ್ಲಿಗೆ ಓಡಿದನು. ಅದರಾಚೆಗೆ ಸುಂದರವಾದ ಹಚ್ಚ ಹಸಿರಿನ ಹೊಲ, ಹತ್ತಿರದಲ್ಲಿ ಝರಿ ಝರಿ ಹರಿಯುವ ಹೊಳೆ! ಅವನು ಅಲ್ಲಿಗೂ ಸಹ ಓಡಿದನು. ಅಲ್ಲಿಗೆ ಹೋಗುವಾಗಲೇ ಕತ್ತಲಾಯಿತು. ಸೂರ್ಯ ಕೂಡ ಕಣ್ಮರೆಯಾಗಿದ್ದಾನೆ. ಈಗ ನಾಯಕನು ಇರುವ ಸ್ಥಳವನ್ನು ತಲುಪಲು ವೇಗವಾಗಿ ಬರುವ ಹೊತ್ತಿನಲ್ಲಿ ಮೂರ್ಛೆ ಹೋಗಿ ಬಿದ್ದು ಬಿಟ್ಟನು. ನಾಯಕ ಹೇಳಿದ, ನಿನ್ನ ದುರಾಸೆಯಿಂದಾಗಿ, ನೀನು ಹೋಗಿದ್ದನ್ನೆಲ್ಲ ಕಳೆದುಕೊಂಡಿದ್ದೀಯ ಇನ್ನು ಇಲ್ಲಿ ನಿನಗೆ ಏನೂ ಇಲ್ಲ, ಓಡಿಹೋಗು ಎಂದು ಹೇಳಿದರು.
ತಮ್ಮ ತಂಗಿ ನೋಡುದ್ರಾ, ಆ ರಘು ಅಂಕಲ್ ತೆಂಗಿನ ತೋಟ ಮತ್ತು ಮಾವಿನ ತೋಟದಿಂದ ಚೆನ್ನಾಗಿ ಬದುಕಬಹುದಿತ್ತು. ಆದರೆ ಈಗ ದುರಾಸೆಯಿಂದ ಎಲ್ಲವನ್ನೂ ಕಳೆದುಕೊಂಡಿದ್ದಾರೆ. ನೀವು ಸಹ ಯೇಸಪ್ಪ ನಿಮಗೆ ಕೊಟ್ಟಿರುವುದನ್ನು ಇಟ್ಟುಕೊಂಡು ಸಂತೋಷದಿಂದ ಬದುಕಲು ಕಲಿಯಬೇಕು. ನೀವು ನೋಡುವುದನ್ನೆಲ್ಲಾ ತೆಗೆದುಕೊಳ್ಳಬೇಕು ಎಂದು ಯೋಚಿಸಬಾರದು. O. K ನಾ.
- Mrs. ಸಾರಾ ಸುಭಾಷ್
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482