Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 07.02.2025

ಧೈನಂದಿನ ಧ್ಯಾನ(Kannada) – 07.02.2025

 

ನರಿಗಳು

 

"ತೋಟಗಳನ್ನು ಹಾಳುಮಾಡುವ ನರಿಗಳನ್ನು, ನರಿಮರಿಗಳನ್ನು, ಹಿಡಿಯಿರಿ;..." - ಪರಮಗೀತ 2:15

 

ನರಿಗಳು ಮತ್ತು ನರಿಮರಿಗಳು ದ್ರಾಕ್ಷೆತೋಟಕ್ಕೆ ನುಗ್ಗಿ ಹೂವುಗಳು ಮತ್ತು ಎಳೆಯ ಚಿಗುರುಗಳನ್ನು ನಾಶಮಾಡುತ್ತವೆ. ಇವು ದ್ರಾಕ್ಷೆಯ ಇಳುವರಿಯನ್ನು ಸಂಪೂರ್ಣವಾಗಿ ಹಾಳುಮಾಡುತ್ತವೆ. ಪ್ರತಿಯೊಬ್ಬ ವಿಶ್ವಾಸಿಯ ವೈಯಕ್ತಿಕ ಜೀವನ, ಕುಟುಂಬ ಮತ್ತು ಸಭೆ ಒಂದು ದ್ರಾಕ್ಷೆತೋಟವಾಗಿದೆ. ಇದಕ್ಕೆ ಮಾಲೀಕರು ಯೇಸುಕ್ರಿಸ್ತನು. ಪ್ರತಿಯೊಬ್ಬ ವ್ಯಕ್ತಿಯು ತನಗೆ ಸೂಕ್ತವಾದ ಫಲವನ್ನು ಕೊಡಬೇಕೆಂದು ಅವರು ನಿರೀಕ್ಷಿಸುತ್ತಿದ್ದಾರೆ. ವ್ಯಕ್ತಿಯ ಜೀವನ, ಕುಟುಂಬ ಅಥವಾ ಚರ್ಚ್‌ನಲ್ಲಿ ಕಂಡುಬರುವ ಸಣ್ಣ ತಪ್ಪುಗಳು, ದೋಷಗಳು, ಹೆಮ್ಮೆ, ಅಸೂಯೆ, ಕೋಪ ಮತ್ತು ಕ್ಷುಲ್ಲಕ ಮೂರ್ಖತನಗಳಂತಹ ನರಿಗಳು ದೊಡ್ಡ ಸಮಸ್ಯೆಗಳು ಗೊಂದಲಗಳಿಗೆ ಕಾರಣವಾಗಬಹುದು. ಇದು ದೇವರೊಂದಿಗಿನ ಸಂಬಂಧವನ್ನೂ ಮುರಿದುಬಿಡುತ್ತದೆ. ಹೂವು ಮತ್ತು ಸಣ್ಣ ಚಿಗುರುಗಳಾಗಿದ್ದ ಆಧ್ಯಾತ್ಮಿಕ ಜೀವನದಲ್ಲಿ ಫಲ ಉಂಟಾಗದೆ ಹೋಗಿಬಿಡುತ್ತದೆ. ಫಲಕೊಡದ ಜೀವನವು ಕ್ರೈಸ್ತ ಸಮುದಾಯವನ್ನೇ ಕೆಡಿಸಿ ಸಾಕ್ಷಿಯನ್ನು ನಾಶಪಡಿಸುತ್ತದೆ.  

  

ಸಭೆಗಳಲ್ಲಿ ಮತ್ತು ಸೇವೆಯ ನಿರ್ವಹಣೆಗಳಲ್ಲೂ ವಿಭಜನೆಗಳು, ಎಡವಟ್ಟುಗಳು ಮತ್ತು ಕಲಹಗಳನ್ನು ಉಂಟುಮಾಡಲು ಸೈತಾನನು ಬಳಸುವ ನರಿಗಳಂತೆ ವಿಶ್ವಾಸಿಗಳು ವರ್ತಿಸಬಾರದು. ಇದು ಆತ್ಮಗಳ ಕೊಯ್ಲು ಮತ್ತು ಚರ್ಚ್‌ನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ನರಿಗಳು ತಂತ್ರವುಳ್ಳ, ಕದಿಯುವ, ವಿಧೇಯತೆ ಇಲ್ಲದ ಸ್ವಭಾವವುಳ್ಳವು ಆದ್ದರಿಂದ ನರಿಗಳನ್ನು ಪಳಗಿಸಲು ಸಾಧ್ಯವಿಲ್ಲ. ಅವು ಇತರ ಜೀವಿಗಳನ್ನು ಕೊಂದು ತಿನ್ನುತ್ತವೆ. ರಾಜ ಹೆರೋದನ ಬಳಿ ಕದಿಯುವುದು (ಸಹೋದರನ ಹೆಂಡತಿಯನ್ನು), ಅವಿಧೇಯತೆ (ಸ್ನಾನಿಕನಾದ ಯೋಹಾನನ ಸಲಹೆಗೆ) ಕೊಲೆಪಾತಕಗಳಂತಹ ಸ್ವಭಾವಗಳು ಇದ್ದವು. ಅದಕ್ಕಾಗಿಯೇ ಯೇಸು ಅವನನ್ನು ನರಿ ಎಂದು ಹೇಳಿದರು. ಇಂತಹ ನರಿ ಸ್ವಭಾವಗಳಿಂದ ಪರಲೋಕ ರಾಜ್ಯವನ್ನು ಪಡೆಯಲು ಸಾಧ್ಯವಿಲ್ಲ. "ತನ್ನ ಸಹೋದರನನ್ನು ದ್ವೇಷಿಸುವವನು ಕೊಲೆಗಾರನಾಗಿದ್ದಾನೆ" (1 ಯೋಹಾನ 3:15).

 

"ಮಲಗುವವನು ತನ್ನ ತೊಡೆಯ ಸುತ್ತಲೂ ಹಗ್ಗವನ್ನು ಸುತ್ತಿದರೆ, ನಿದ್ರಿಸುವುದಿಲ್ಲ ತಿರುಗುವ ನರಿಯ ಗುಂಪು" ಎಂಬುದು ಒಂದು ತಮಿಳು ಹಾಡಿನ ಸಾಲುಗಳು. ಆದ್ದರಿಂದ ಪ್ರಿಯರೇ, ನಮ್ಮ ಫಲಪ್ರದ ಜೀವನವನ್ನು ಹಾಳುಮಾಡುವ ಮತ್ತು ಪರಲೋಕ ರಾಜ್ಯವನ್ನು ಸ್ವಾಸ್ಥ್ಯವಾಗಿ ಪಡೆಯುವುದನ್ನು ತಡೆಯುವ ಸಣ್ಣ ನರಿಗಳನ್ನು ನಾವು ಗುರುತಿಸಿ ಹಿಡಿಯಬೇಕು. ಬೈಬಲ್ ಇದನ್ನು ತೋರಿಸುವ ಏಕೈಕ ಮಾರ್ಗವೆಂದರೆ ಎಡೆಬಿಡದೆ ಪ್ರಾರ್ಥಿಸುವುದು, ಎಚ್ಚರವಾಗಿದ್ದು ಪ್ರಾರ್ಥಿಸುವುದು ಎಂಬುದೇ. ವಿಧೇಯರಾಗೋಣವಾ? ಕರ್ತನು ನಿಮಗೆ ಕೃಪೆ ತೋರಿಸಲಿ! 

- Mrs. ಗೀತಾ ರಿಚರ್ಡ್

 

ಪ್ರಾರ್ಥನಾ ಅಂಶ:

ಆಮೆನ್ ವಿಲೇಜ್ ಟಿವಿಯನ್ನು ಸ್ಪಾಟ್ಲೈಟ್ ಟಿವಿಯಾಗಿ ಮಾರ್ಪಡಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)