ಧೈನಂದಿನ ಧ್ಯಾನ(Kannada) – 06.02.2025
ಧೈನಂದಿನ ಧ್ಯಾನ(Kannada) – 06.02.2025
ಪಾರಿವಾಳ
"...ಪಾರಿವಾಳಗಳಂತೆ ನಿಷ್ಕಪಟಿಗಳೂ ಆಗಿರ್ರಿ." - ಮತ್ತಾಯ 10:16
ಪಾರಿವಾಳವು ಸೌಮ್ಯವಾದ ಒಂದು ಸುಂದರ ಪಕ್ಷಿಯಾಗಿದೆ. ಪಾರಿವಾಳಗಳನ್ನು ಇಷ್ಟಪಡದವರು ಯಾರಾದರೂ ಇದ್ದೀರಾ? ಪಾರಿವಾಳವು ಶಾಂತಿ, ಸಂತೋಷ, ಹೊಸ ಆರಂಭ ಮತ್ತು ಭರವಸೆಯ ಸಂಕೇತವಾಗಿದೆ. ಪಾರಿವಾಳವು ನಿರ್ದಯ, ಶುದ್ಧ ಪಕ್ಷಿ. ಭಾರೀ ಮಳೆ ನಿಂತ ನಂತರ, ನೋಹನು ನಾವೆಯ ಕಿಟಕಿಯನ್ನು ತೆರೆದು, ನೀರು ಬತ್ತಿಹೋಗಿದೆಯೇ ಎಂದು ನೋಡಲು ಒಂದು ಪಾರಿವಾಳವನ್ನು ಹೊರಬಿಟ್ಟನು. ಅದು ತನ್ನ ಪಾದಗಳನ್ನಿಟ್ಟು ನಿಲ್ಲಲು ಸಹ ಸ್ಥಳವಿಲ್ಲದೆ ಹಿಂತಿರುಗಿ ಬಂದುಬಿಟ್ಟಿತು. ಎರಡನೇ ಬಾರಿ ಪಾರಿವಾಳವನ್ನು ಹೊರಬಿಟ್ಟಾಗ ಅದು ಹಿಂತಿರುಗಿ ಬರುವಾಗ, ಅದರ ಬಾಯಲ್ಲಿ ಒಂದು ಆಲಿವ್ ಎಲೆಯ ಚಿಗುರನ್ನು ತಂದಿತು. ಇದು ಹೊಸ ಆರಂಭ ಮತ್ತು ಭರವಸೆಯ ಸಂಕೇತವಾಗಿದೆ. ಯೇಸು ಕ್ರಿಸ್ತನು ಯೊರ್ದಾನ್ ನದಿಯಲ್ಲಿ ಸ್ನಾನಿಕನಾದ ಯೋಹಾನನಿಂದ ದೀಕ್ಷಾಸ್ನಾನ ಪಡೆದು ದಡಕ್ಕೆ ಬಂದಾಗ, ಪವಿತ್ರಾತ್ಮನು ಪಾರಿವಾಳದ ರೂಪದಲ್ಲಿ ಆತನ ಮೇಲೆ ಇಳಿಯಿತು ಎಂದು ನಾವು ಸತ್ಯವೇದದಲ್ಲಿ ನೋಡುತ್ತೇವಲ್ಲವೇ? ಪವಿತ್ರಾತ್ಮದ ಸಂಕೇತ ಪಾರಿವಾಳ.
ಯೇಸು ಕ್ರಿಸ್ತನು ತನ್ನ ಶಿಷ್ಯರನ್ನು ಸೇವೆಗೆ ಕಳುಹಿಸುವಾಗ ಅವರು ತಮ್ಮ ಶಿಷ್ಯರಿಗೆ ಹೇಳಿದ ಮಾತು "ನೋಡಿ, ತೋಳಗಳ ನಡುವೆ ಕುರಿಗಳಂತೆ ನಾನು ನಿಮ್ಮನ್ನು ಕಳುಹಿಸುತ್ತೇನೆ; ಆದ್ದರಿಂದ ಸರ್ಪಗಳಂತೆ ಬುದ್ಧಿವಂತರಾಗಿರಿ ಮತ್ತು ಪಾರಿವಾಳಗಳಂತೆ ನಿಷ್ಕಪಟಿಗಳಾಗಿರಿ" ಎಂದು. ಬೇರೆ ಪಕ್ಷಿಗಳು ತಾವು ಗೂಡು ಕಟ್ಟುವ ಸ್ಥಳದಲ್ಲಿ ತಮ್ಮ ಮರಿಗಳಿಗೆ ಹಾವುಗಳು ಮತ್ತು ಹದ್ದುಗಳಿಂದ ಅಪಾಯವಾಗಬಹುದು ಎಂದು ಭಾವಿಸಿದರೆ ಅವು ತಮ್ಮ ಗೂಡುಗಳನ್ನು ಸ್ಥಳಾಂತರಿಸುತ್ತವೆ. ಆದರೆ, ಪಾರಿವಾಳವು ಗೂಡು ಕಟ್ಟಿ, ಮೊಟ್ಟೆಗಳನ್ನು ಇಟ್ಟು, ಅವುಗಳಿಗೆ ಕಾವು ಕೊಟ್ಟು, ಮರಿಗಳಾದ ಮೇಲೆ ಅವುಗಳಿಗೆ ಆಹಾರ ಹುಡುಕಲು ಹೊರಗೆ ಹೋಗಿ ಹಿಂತಿರುಗಿ ಬರುವಾಗ ಕೆಲವು ಮರಿಗಳು ಹಾವುಗಳು ಅಥವಾ ಹದ್ದುಗಳಿಂದ ದಾಳಿಗೊಳಗಾಗಿ ಸಾವನ್ನಪ್ಪಿರಬಹುದು ಅಥವಾ ಹದ್ದುಗಳಿಂದ ಕಿತ್ತುತಿಂದು ಸಾವನ್ನಪ್ಪಿರಬಹುದು. ಇದನ್ನು ನೋಡಿದ ಕೂಡಲೇ ಆ ಪಾರಿವಾಳ ಒಂದು ಮನುಷ್ಯನಂತೆ ಆ ಸ್ಥಳದಲ್ಲಿ ಕಣ್ಣೀರು ಸುರಿಸಿ ಅಳುತ್ತದಂತೆ. ಆದರೆ ಎಂದಿಗೂ ಧೈರ್ಯ ಕಳೆದುಕೊಳ್ಳದೇ ತನ್ನ ಗೂಡನ್ನು ಸ್ಥಳಾಂತರಿಸುವುದಿಲ್ಲವಂತೆ. ಅದೇ ರೀತಿ, ಕರ್ತನು ನಮ್ಮನ್ನು ತನ್ನ ಸೇವೆಗಾಗಿ ಕಳುಹಿಸುವಾಗ, ನಾವು ಅವಮಾನಿಸಲ್ಪಡಬಹುದು, ನೋಯಿಸಲ್ಪಡಬಹುದು, ಕೊಲ್ಲಲ್ಪಡಬಹುದು ಮತ್ತು ಕೋಲುಗಳಿಂದ ಹೊಡೆಯಲ್ಪಡಬಹುದು. ನೀವು ಜೈಲಿನಲ್ಲಿರಲೂಬಹುದು. ಆದರೆ ಇವುಗಳಲ್ಲಿ ಯಾವುದೂ ನಮ್ಮನ್ನು ಕ್ರಿಸ್ತನ ಪ್ರೀತಿಯಿಂದ ಅಗಲಿಸಲು ಸಾಧ್ಯವಿಲ್ಲ. ಅದನ್ನೇ ಪೌಲನು ರೋಮಾಪುರದವರಿಗೆ ಬರೆಯುವಾಗ "ಕ್ರಿಸ್ತನ ಪ್ರೀತಿಯಿಂದ ನಮ್ಮನ್ನು ಅಗಲಿಸುವವರಾರು? ಉಪದ್ರವವೋ, ಸಂಕಟವೋ ಹಿಂಸೆಯೋ ಕ್ಷಾಮವೋ ಬೆತ್ತಲೆತನವೋ ಅಪಾಯವೋ ಕತ್ತಿಯೋ?" (ರೋಮಾ 8: 36 - 39) ಎಂದು ಹೇಳುತ್ತಾರೆ. ನಾವು ನಿರುತ್ಸಾಹಗೊಳ್ಳಬಾರದು ಮತ್ತು ನಮಗಾಗಿ ನಿಗದಿಪಡಿಸಿದ ಮಾರ್ಗದಿಂದ ದೂರ ಸರಿಯಬಾರದು, ಬದಲಾಗಿ ನಮಗಾಗಿ ನಿಗದಿಪಡಿಸಿದ ಮಾರ್ಗದಲ್ಲೇ ಮುಂದುವರಿಯಬೇಕು.
"...ಅತಿ ಶೀಘ್ರದಲ್ಲಿ ನೀಗುವ ಈ ಹಗುರವಾದ ಸಂಕಟವು ನಮಗಾಗಿ ಅತ್ಯಧಿಕವಾದ ನಿತ್ಯ ಘನ ಮಾನಮಹಿಮೆಯನ್ನು ಉಂಟುಮಾಡುತ್ತದೆ."
- Mrs. ಶೀಬಾ ಜಾನ್
ಪ್ರಾರ್ಥನಾ ಅಂಶ:
ಸಾಮಾಜಿಕ ಮಾಧ್ಯಮದ ಮೂಲಕ ನಡೆಯುತ್ತಿರುವ ಎಲ್ಲಾ ಸೇವೆಗಳಿಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482