Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 05.02.2025

ಧೈನಂದಿನ ಧ್ಯಾನ(Kannada) – 05.02.2025

 

ಒಂಟೆ

 

"ಉಷ್ಟ್ರಸಮೂಹವೂ ಮಿದ್ಯಾನಿನ ಮತ್ತು ಏಫದ ಪ್ರಾಯದ ಒಂಟೆಗಳೂ ನಿನ್ನಲ್ಲಿ ತುಂಬಿರುವವು;..." - ಯೆಶಾಯ 60:6

 

ಮರುಭೂಮಿಯ ಹಡಗು ಎಂದು ಕರೆಯಲ್ಪಡುವ ಒಂಟೆಯು ಬಿಸಿ ಮರಳಿನ ಮೇಲೆ ನಡೆಯಬಲ್ಲ ಬಲವಾದ, ಅಗಲವಾದ ಪಾದಗಳನ್ನು ಹೊಂದಿದೆ. ಮರುಭೂಮಿಯಲ್ಲಿ ಕಂಡುಬರುವ ಕಠಿಣ ಪರಿಸ್ಥಿತಿಗಳನ್ನು ತಡೆದುಕೊಳ್ಳುವಂತೆ ದೇವರು ಅದನ್ನು ಸೃಷ್ಟಿಸಿದ್ದಾರೆ. ಆಹಾರ ಸಿಗದ ದಿನಗಳಲ್ಲಿ, ಅದರ ಬೆನ್ನಿನ ಗೂನು ಭಾಗದಲ್ಲಿರುವ ಕೊಬ್ಬೆಲ್ಲಾ ಕರಗಿ ಒಂಟೆಗೆ ಶಕ್ತಿ ನೀಡುತ್ತದೆ. ನೀರು ಲಭ್ಯವಿರುವಲ್ಲಿ, ಅದು 10 ನಿಮಿಷಗಳಲ್ಲಿ 100 ಲೀಟರ್ ನೀರನ್ನು ಕುಡಿದು ಬಿಡುತ್ತದೆ. ಒಂದೇ ದಿನದಲ್ಲಿ ಎಂಟು ದಿನಗಳಷ್ಟು ನೀರು ಕುಡಿಯುತ್ತದೆ. ಮರುಭೂಮಿಯಲ್ಲಿ ಬೀಸುವ ಚಂಡಮಾರುತದ ಗಾಳಿಯಿಂದ ಕಣ್ಣುಗಳು ಮತ್ತು ಮೂಗಿನ ಹೊಳ್ಳೆಗಳನ್ನು ರಕ್ಷಿಸಲು ಇದು ವಿಶೇಷ ರಕ್ಷಣಾತ್ಮಕ ಚೆಕ್ಕೆಗಳನ್ನು ಹೊಂದಿದೆ. ಇಂದು ನಾವು ಒಂಟೆಗಳ ಬಗ್ಗೆ ಅತ್ಯಂತ ವಿಶೇಷವಾದ ವಿಷಯಗಳನ್ನು ನೋಡಲಿದ್ದೇವೆ.

          

ಒಂಟೆ ಮರಳಿನಲ್ಲಿ ಮಲಗಿದಾಗ ಅಥವಾ ನೆಲದಿಂದ ಮೇಲೇಳುವಾಗ, ಮುಂದಿನ ಸ್ಥಾನವನ್ನು ತಲುಪುವ ಮೊದಲು ಮೊಣಕಾಲುಗಳ ಮೇಲೆ ಮಾತ್ರ ನಿಲ್ಲುತ್ತದೆ. ದೇಹದ ಭಾರವನ್ನು ಹೊರುವ ಮೊಣಕಾಲುಗಳ ಅತಿಯಾದ ಬಳಕೆಯಿಂದಾಗಿ, ಮೊಣಕಾಲುಗಳು ದಪ್ಪವಾಗುತ್ತವೆ ಮತ್ತು ಸ್ವಲ್ಪ ವಿರೂಪಗೊಂಡಂತೆ ಕಾಣುತ್ತವೆ. ಈ ರೀತಿಯ ಮೊಣಕಾಲುಗಳಿರುವ ಒಬ್ಬ ವ್ಯಕ್ತಿಯಿದ್ದಾರೆ. ಇತಿಹಾಸವು ಅವರನ್ನು "ಒಂಟೆ ಮೊಣಕಾಲುಗಳ ಪ್ರಾರ್ಥನಾ ಯೋಧ" ಎಂದು ಕರೆಯುತ್ತದೆ. ಅವರೇ ಯಾಕೋಬ. ಯೇಸುಕ್ರಿಸ್ತನ ಸಹೋದರನೂ ಮತ್ತು ಅಪೊಸ್ತಲನೂ ಆದ ಯಾಕೋಬನ ಪ್ರಾರ್ಥನಾ ಜೀವನವು ಅವರ ಮೊಣಕಾಲುಗಳಿಂದ ತಿಳಿದುಬಂದಿದೆ. ಅವರು ಮೊಣಕಾಲುಗಳ ಮೇಲೆ ಪ್ರಾರ್ಥಿಸುತ್ತಿದ್ದಂತೆ, ಅವರ ಮೊಣಕಾಲುಗಳು ಒಂಟೆಯ ಗಟ್ಟಿಯಾದ ಹೊರ ಚರ್ಮದಂತೆ ಒರಟಾಗಿ ಮತ್ತು ಬಿರುಕು ಬಿಟ್ಟು, ಅವರ ನಿಜ ಸ್ಥಿತಿಗಿಂತಲೂ ಹೆಚ್ಚು ವಿಚಿತ್ರವಾಗಿ ಕಾಣುತ್ತಿತ್ತಂತೆ. ಈ ಕಾರ್ಯವು ನಮಗೆ ಏನು ಕಲಿಸುತ್ತಿದೆ? ನಮ್ಮ ಮೊಣಕಾಲಿನ ಅನುಭವ ಮತ್ತು ಪ್ರಾರ್ಥನಾ ಸಮಯ ಎಂಥದ್ದು?

 

ಇತ್ತೀಚಿನ ದಿನಗಳಲ್ಲಿ, ಅನೇಕ ಕ್ರೈಸ್ತರ ಜೀವನವು ಪ್ರಾರ್ಥನಾ ಜೀವನವಿಲ್ಲದ ಸ್ಥಿತಿಯಲ್ಲಿಯೇ ಕಾಲ್ಪಡುತ್ತಿದೆ. ಪ್ರಾರ್ಥಿಸಬೇಕೆಂಬ ಬಯಕೆಯು ಅಥವಾ ಪ್ರಾರ್ಥನೆಗಾಗಿ ಒಂದು ಸಮಯವನ್ನು ನಿಗದಿಪಡಿಸಬೇಕೆಂಬ ಬಯಕೆಯೂ ಇಲ್ಲದೆ, ಅವರು ತಮ್ಮ ಪ್ರಾರ್ಥನಾ ಅಂಶಗಳನ್ನು ಸೇವಕರಿಗೆ ಕಳುಹಿಸಿಬಿಡುವುದರಲ್ಲಿ ತೃಪ್ತರಾಗಿದ್ದಾರೆ. ಇಂದು, ಒಂಟೆಯ ಮೂಲಕ, ದೇವರು ನಮ್ಮ ಪ್ರಾರ್ಥನಾ ಜೀವನದ ಕುರಿತು ಚಿಂತಿಸಲು ಕರೆಯುತ್ತಿದ್ದಾರೆ.

      

ದೇವರ ಮುಂದೆ ಮಂಡಿಯೂರುವವರು ಮನುಷ್ಯನ ಮುಂದೆ ತಲೆ ಎತ್ತಿ ನಿಲ್ಲುತ್ತಾರೆ. ನೀವು ದೇವರ ಮುಂದೆ ಮಂಡಿಯೂರುವ ವ್ಯಕ್ತಿಗಳಾ ನೀವು? ಯೋಚಿಸಿ!!

- Mrs. ಫಾತಿಮಾ ಸೆಲ್ವರಾಜ್

 

ಪ್ರಾರ್ಥನಾ ಅಂಶ:

ನಮ್ಮೊಂದಿಗೆ ಸೇರಿರುವ ಬೈಬಲ್ ಅಮ್ಮಂದಿರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)