ಧೈನಂದಿನ ಧ್ಯಾನ(Kannada) – 31.01.2025
ಧೈನಂದಿನ ಧ್ಯಾನ(Kannada) – 31.01.2025
NAVIGATORS
"ಇದಲ್ಲದೆ ಪರಲೋಕರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು;…" - ಮತ್ತಾಯ 24:14
ಡಾಸನ್ ಟ್ರಾಟ್ಮನ್ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದರು. ಅವರು ವೇದ ಶ್ಲೋಕಗಳನ್ನು ಚೆನ್ನಾಗಿ ಕಂಠಪಾಠ ಮಾಡಿ ಒಪ್ಪಿಸುತ್ತಿದ್ದರು. ಆದರೆ ದೈನಂದಿನ ಜೀವನದಲ್ಲಿ ಕಳ್ಳನಾಗಿ ಮತ್ತು ಕುಡುಕನಾಗಿ ಬದುಕುತ್ತಿದ್ದರು. ಒಂದು ದಿನ ಚರ್ಚ್‌ನಲ್ಲಿ, ದೇವರು ಅವರೊಂದಿಗೆ ಯೋಹಾನ 5:24 ರ ಮೂಲಕ ಮಾತನಾಡಿದರು. 1920 ರಲ್ಲಿ, ಲೆಸ್ ಬೆಂಜರ್ ಎಂಬ ನಾವಿಕನು ಡಾಸನ್‌ರನ್ನು ತನ್ನ ಸಾಕ್ಷಿಯನ್ನು ಮತ್ತು ಸುವಾರ್ತೆಯನ್ನು ತನ್ನ ಸಹ ನಾವಿಕರಿಗೆ ಪ್ರಸಂಗ ಮಾಡುವಂತೆ ಆಹ್ವಾನಿಸಿದರು. ಡಾಸನ್ ಒಪ್ಪಿಕೊಂಡು ಹೋದರು. ಅಲ್ಲಿ 12 ಜನರಿದ್ದರು. ಆ ಹನ್ನೆರಡು ಮಂದಿ ಕರ್ತನನ್ನು ಸ್ವೀಕರಿಸಿ ಇನ್ನೂ 24 ಜನರನ್ನು ಸಂಪಾದಿಸಿಕೊಂಡರು. ಈ ಸೇವೆಯು ಒಂದು ಸರಪಳಿಯಾಗಿ ಬೆಳೆಯಿತು. ಶೀಘ್ರದಲ್ಲೇ 125 ಜನರು ದೇವರನ್ನು ಸ್ವೀಕರಿಸಿದರು. ಅವರು ತಕ್ಷಣವೇ "ನ್ಯಾವಿಗೇಟರ್ಸ್ ಮಿನಿಸ್ಟ್ರಿ" ಎಂಬ ಚಳುವಳಿಯನ್ನು ಪ್ರಾರಂಭಿಸಿದರು. "ನಾವಿಕರು" ಎಂದರೆ ವಿಶ್ವದ ಸಾಗರದಲ್ಲಿ ಜೀವನದ ದೋಣಿಯನ್ನು ಮುನ್ನಡೆಸುವವರು. ಈ ಆಂದೋಲನದ ಮೂಲಕ, ಅನೇಕ ಕ್ರೈಸ್ತರನ್ನು ಪ್ರಪಂಚದ ಅನೇಕ ಭಾಗಗಳಿಗೆ ಮಿಷನರಿಗಳಾಗಿ ಕಳುಹಿಸಲಾಯಿತು. ಅನೇಕರು ಕರ್ತನನ್ನು ಸ್ವೀಕರಿಸಿದರು.
ಯೇಸು ಕ್ರಿಸ್ತನು ಹೇಳಿದ ಒಂದು ಸಾಮ್ಯದಲ್ಲಿ, ಪರಲೋಕ ರಾಜ್ಯವು ದೂರದ ದೇಶಕ್ಕೆ ಪ್ರಯಾಣಿಸುವಒಬ್ಬ ಮನುಷ್ಯ, ಅವನು ತನ್ನ ಸೇವಕರನ್ನು ಕರೆದು ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಐದು, ಎರಡು ಮತ್ತು ಒಂದು ತಲಾಂತನ್ನು ಕೊಟ್ಟು ಹೋದರು. ಅನೇಕ ದಿನಗಳ ನಂತರ ಅವರು ಹಿಂತಿರುಗಿದಾಗ, ಐದು ತಲಾಂತುಗಳನ್ನು ಪಡೆದವನು ಇನ್ನೂ ಐದು ಗಳಿಸಿದ್ದನು. ಎರಡು ತಲಾಂತುಗಳನ್ನು ಪಡೆದವನು ಸಹ ಎರಡು ತಲಾಂತುಗಳನ್ನು ಗಳಿಸಿದನು. ಆದರೆ ಒಂದು ತಲಾಂತು ಪಡೆದವನು ಅದನ್ನು ಬಚ್ಚಿಟ್ಟನು. ಯಜಮಾನನು ಉಳಿದವರನ್ನು ಹೊಗಳಿ, ಒಂದು ತಲಾಂತು ಉಳ್ಳವನ ಬಳಿ ಅದನ್ನು ತೆಗೆದುಕೊಂಡು, ಐದು ತಲಾಂತು ಇದ್ದವನ ಬಳಿ ಕೊಟ್ಟು ಬಿಟ್ಟು ಅವನನ್ನು ಹೊರಗೆ ಕತ್ತಲೆಗೆ ಹಾಕಿಬಿಡಿರಿ ಎಂದು ಹೇಳಿದನು. ಆತನ ಕೃಪೆಯಿಂದ ನಾವು ಉಚಿತವಾಗಿ ರಕ್ಷಿಸಲ್ಪಟ್ಟಿದ್ದೇವೆ. ಈ ರಕ್ಷಣೆಯನ್ನು ನಾವು ಇತರರಿಗೆ ಉಚಿತವಾಗಿ ಕೊಟ್ಟು ದೇವರ ರಾಜ್ಯವು ವಿಸ್ತಾರವಾಗುವಂತೆ ಕಾರ್ಯ ಮಾಡಬೇಕು. ಲೋಕವೆಂಬ ಸಾಗರದಲ್ಲಿ, ಹಲವು ಅಲೆಗಳ ನಡುವೆ ಜೀವನದ ಹಡಗನ್ನು ಸಾಗಿಸಲು ಅನೇಕ ಜನರು ಕಷ್ಟ ಪಡುತ್ತಿದ್ದಾರೆ. ನಾವು ಸುವಾರ್ತೆಯನ್ನು ಸಾರಿ ಅವರ ಹಡಗು ಧ್ವಂಸವಾಗದೆ ದಡ ತಲುಪಲು ಸಹಾಯ ಮಾಡೋಣ. ಆಗ ಆ ಹಡಗು ಪರಲೋಕದ ತೀರವನ್ನು ತಲುಪುತ್ತದೆ.
ಪ್ರಿಯರೇ! ಅನೇಕ ದೇವರ ಮಕ್ಕಳು ಬಂದು ಸುವಾರ್ತೆಯನ್ನು ಸಾರಿದರಿಂದಲೇ, ನಮ್ಮ ಹಡಗು ಲೌಕಿಕ ಚಿಂತೆಗಳು ಮತ್ತು ಕಷ್ಟಗಳ ಅಲೆಗಳಿಂದ ಸಿಲುಕಿಕೊಂಡಾಗ, ಹಾನಿಗೊಳಗಾಗದೇ, ಬದಲಾಗಿ "ನಂಬಿಕೆ"ಯ ಲಂಗರದಲ್ಲಿ ಸುರಕ್ಷಿತವಾಗಿದೆ. ಈ ಲೋಕದಲ್ಲಿ ಅನೇಕ ಜನರು ತಮ್ಮ ಜೀವನದ ಹಡಗನ್ನು ದಾಟಲು ಇನ್ನೂ ಹೆಣಗಾಡುತ್ತಿದ್ದಾರೆ. ಅವರಿಗೆ ತಮ್ಮ ಲಂಗರುಗಳನ್ನು ಎಲ್ಲಿ ಹಾಕಬೇಕೆಂದು ಕಲಿಸಿ ಮತ್ತು ನೀವೇ "ನ್ಯಾವಿಗೇಟರ್" ಆಗಬೇಕು. ಡಾಸನ್ ಟ್ರಾಟ್ಮನ್ ಅವರ "ನ್ಯಾವಿಗೇಟರ್ಸ್ ಮಿನಿಸ್ಟ್ರಿ" ಯೊಂದಿಗೆ ಮುಂದುವರಿಯೋಣವೇ?
- ಶ್ರೀಮತಿ. ಅನ್ಬುಜ್ಯೋತಿ ಸ್ಟಾಲಿನ್
ಪ್ರಾರ್ಥನೆ ಟಿಪ್ಪಣಿ
ನಮ್ಮ ಕ್ಯಾಂಪಸ್‌ನಲ್ಲಿ ನಡೆಯುವ ಆಸ್ಪತ್ರೆ ಸೇವೆಗಳಿಂದ ಪ್ರಯೋಜನ ಪಡೆಯುವವರು ಕ್ರಿಸ್ತನನ್ನು ರಕ್ಷಕನೆಂದು ತಿಳಿದುಕೊಳ್ಳಲಿ ಎಂದು ಪ್ರಾರ್ಥಿಸಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482