ಧೈನಂದಿನ ಧ್ಯಾನ(Kannada) – 29.01.2025
ಧೈನಂದಿನ ಧ್ಯಾನ(Kannada) – 29.01.2025
ಬರಿದುಮಾಡಿದ ಹೆಮ್ಮೆ
"ಆದಿಯಲ್ಲಿ ದೇವರು ಆಕಾಶವನ್ನೂ ಭೂವಿುಯನ್ನೂ ಉಂಟುಮಾಡಿದನು. ಭೂವಿುಯು ಕ್ರಮವಿಲ್ಲದೆಯೂ ಬರಿದಾಗಿಯೂ ಇತ್ತು;..." - ಆದಿ. 1:1,2
ಇವು ಸತ್ಯವೇದದ ಮೊದಲ ಎರಡು ವಚನಗಳು. ದೇವರು ಆಕಾಶ ಮತ್ತು ಭೂಮಿಯನ್ನು ಸೃಷ್ಟಿಸಿದರು. ದೇವರು ಖಂಡಿತವಾಗಿಯೂ ತನ್ನ ಸೃಷ್ಟಿಯನ್ನು ಸುಂದರವಾಗಿ ಸೃಷ್ಟಿಸಿದ್ದಾರೆ. ಆದರೆ ಮುಂದಿನ ವಚನ ಭೂವಿುಯು ಕ್ರಮವಿಲ್ಲದೆಯೂ ಬರಿದಾಗಿಯೂ ಇತ್ತು ಎಂದು ಹೇಳುತ್ತದೆ. ದೇವರು ಸೃಷ್ಟಿಸಿದ ಆ ಸುಂದರ ಲೋಕಕ್ಕೆ ಏನಾಯಿತು? ಮೊದಲ ವಾಕ್ಯಕ್ಕೂ ಎರಡನೇ ವಾಕ್ಯಕ್ಕೂ ಸಾವಿರಾರು ವರ್ಷಗಳ ಅಂತರ ಇದ್ದಿರಬೇಕು ಎಂದು ದೇವಶಾಸ್ತ್ರಜ್ಞರು ಹೇಳುತ್ತಾರೆ. ಈ ಮಧ್ಯಂತರದಲ್ಲಿಯೇ ಸೈತಾನನು ತನ್ನ ಅಹಂಕಾರದಿಂದಾಗಿ ಭೂಮಿಗೆ ಎಸೆಯಲ್ಪಟ್ಟಿರಬೇಕು. ಈ ಸುಂದರ ಲೋಕಕ್ಕೆ ಬಿದ್ದ ಶತ್ರು, ಈ ಭೂಮಿಯ ಮೇಲೆ ತನ್ನ ಕೋಪ ಮತ್ತು ಕ್ರೋಧವನ್ನು ವ್ಯಕ್ತಪಡಿಸಿ, ಅದನ್ನು ಅಸ್ತವ್ಯಸ್ತ ಮತ್ತು ಖಾಲಿ ಸ್ಥಳವನ್ನಾಗಿ ಪರಿವರ್ತಿಸಿದನು ಎಂದು ಅವರು ಹೇಳುತ್ತಾರೆ. ಆದ್ದರಿಂದ ದೇವರು ಈ ಲೋಕವನ್ನು ಮತ್ತೆ ಪುನಃಸ್ಥಾಪಿಸುತ್ತಿದ್ದಾರೆ. ಸೂರ್ಯ, ಚಂದ್ರ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಒಳಗೊಂಡಂತೆ ಎಲ್ಲವನ್ನೂ ಸರಿಮಾಡಿ, ಮಾನವಕುಲಕ್ಕೆ ಆಶೀರ್ವಾದದ ಭೂಮಿಯಾಗಿ ಒದಗಿಸಿದರು. ನೋಡಿ, ಶಿಕ್ಷೆಗೊಳಗಾದ ಸೈತಾನನು ತನ್ನ ಅಹಂಕಾರದಿಂದ ದೇವರು ಸೃಷ್ಟಿಸಿದ ಲೋಕವನ್ನು ನಾಶಮಾಡಲು ಸಾಧ್ಯವಾದರೆ, ನಮ್ಮ ಜೀವನವೂ ಹೆಮ್ಮೆಯಿಂದ ಹಾಳಾಗಬಹುದು. ಹೆಮ್ಮೆ ಬರುವಾಗ, ನೈತಿಕತೆ ಹದಗೆಡುತ್ತದೆ ಮತ್ತು ಅವ್ಯವಸ್ಥೆ ನೆಲೆಸುತ್ತದೆ. ಎಲ್ಲಿ ಶಿಸ್ತು ಇಲ್ಲವೋ ಅಲ್ಲಿ ಶೂನ್ಯತೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಪ್ರಿಯ ಮಿತ್ರರೇ! ದೇವರು ನಮ್ಮನ್ನು ಈ ರೀತಿಯ ಜೀವನವನ್ನು ನಡೆಸಲು ಕರೆದಿಲ್ಲ. ನಾವು ಸುಧಾರಣೆ ಹೊಂದಬೇಕೆಂದು, ಪವಿತ್ರ ಜೀವನವನ್ನು ನಡೆಸಬೇಕೆಂದು ಮತ್ತು ನಮ್ಮ ಜೀವನವನ್ನು ಸರಿಪಡಿಸಿಕೊಳ್ಳಬೇಕೆಂದು ದೇವರು ಬಯಸುತ್ತಾರೆ. ಡೇವಿಡ್ ಬೆನ್-ಗುರಿಯನ್ ಇಸ್ರೇಲ್‌ನ ಪ್ರಧಾನ ಮಂತ್ರಿಯಾಗಿದ್ದರು. ಅವರ ಕೈಯಲ್ಲಿ ಯಾವಾಗಲೂ ಬೀಗ ಹಾಕಿದ ಪೆಟ್ಟಿಗೆ ಇರುತ್ತಿತ್ತು. ಡೇವಿಡ್ ಪೆನ್ ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ಪೆಟ್ಟಿಗೆಯಲ್ಲಿ ಹಣ ಇಡುತ್ತಿದ್ದಾರೆ ಎಂದು ಅವರ ಮೇಲೆ ಆರೋಪ ಹೊರಿಸುತ್ತಿದ್ದರು. ಸಂಸತ್ತಿನ ಅಧಿವೇಶನದ ಸಮಯದಲ್ಲಿ ಪೆಟ್ಟಿಗೆಯನ್ನು ತೆರೆದು ಪ್ರದರ್ಶಿಸಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸಿದವು. ತಾಳ್ಮೆಯಿಂದ, ಡೇವಿಡ್ ಪೆನ್ ಪೆಟ್ಟಿಗೆಯನ್ನು ತೆರೆದರು. ಅದರಲ್ಲಿ ಒಂದು ಕೋಟು ಮತ್ತು ಟೋಪಿ ಮಾತ್ರ ಇತ್ತು. ತಾನು ಚಿಕ್ಕನಾಗಿದ್ದಾಗ ಕುರಿಗಳನ್ನು ಮೇಯಿಸುವಾಗ, ಇವು ತನಗೆ ಉಪಯುಕ್ತವಾಗಿದ್ದವು ಎಂದು, ತನ್ನ ಸ್ಥಾನದ ಬಗ್ಗೆ ಎಂದಿಗೂ ಹೆಮ್ಮೆಯ ಭಾವನೆ ಬಂದು ಬಿಡಬಾರದು ಎಂದೂ, ಅಂತಹ ಆಲೋಚನೆಗಳು ತನಗೆ ಬಂದಾಗ, ಆ ಪೆಟ್ಟಿಗೆಯನ್ನು ತೆರೆದು ನೋಡಿ ತನ್ನ ಹಳೆಯ ಜೀವನವನ್ನು ಮರೆತು ಹೋಗಲೇಬಾರದು ಎಂಬುದಕ್ಕಾಗಿ ಇವುಗಳನ್ನು ಜೊತೆಯಲ್ಲೇ ಇಟ್ಟುಕೊಂಡಿರುವುದಾಗಿ ಹೇಳಿದರು. ಅವರ ಬಗ್ಗೆ ಮಾತನಾಡಿದವರು ನಾಚಿಕೆಪಟ್ಟರು.
ಹೌದು, ದೇವರ ಮಕ್ಕಳೇ, ಇಂದಿಗೂ ಸಹ ದೇವರ ಮಕ್ಕಳಾಗಿರುವ ನಾವು, ತಾಳ್ಮೆಯನ್ನು ಧರಿಸಿಕೊಂಡು ಬದುಕೋಣ. ತಾಳ್ಮೆಯುಳ್ಳವರಿಗೆ ಕೃಪೆಯನ್ನು ನೀಡುವ ಕರ್ತನು ನಮ್ಮ ಜೀವನವನ್ನು ಪುನಃಸ್ಥಾಪಿಸಿ ಉನ್ನತೀಕರಿಸುವರು. ಉನ್ನತಿಗೆ ಮೊದಲು ಬೇಕಾದದ್ದು ತಾಳ್ಮೆ. ನಮ್ಮ ದೇವರು ಶಾಂತಿಯೂ, ಮನತಾಳ್ಮೆಯೂ ಉಳ್ಳವರು. ಇಂದು, ದೇವರ ಸಮ್ಮುಖದಲ್ಲಿ ನಮ್ಮನ್ನು ತಗ್ಗಿಸಿಕೊಂಡು ಆತನ ಕೃಪೆ ಮತ್ತು ಆಶೀರ್ವಾದಗಳನ್ನು ಪಡೆಯೋಣ.
- Rev. ಎಲಿಜಬೆತ್
ಪ್ರಾರ್ಥನಾ ಅಂಶ:
ನಮ್ಮ ಕ್ಯಾಂಪಸ್ ಮತ್ತು ಸೇವಾಕ್ಷೇತ್ರಗಳಲ್ಲಿ ಹಸಿದವರಿಗೆ ಆಹಾರ ನೀಡುವ ಯೋಜನೆಯಲ್ಲಿ ಪ್ರಯೋಜನ ಪಡೆಯುವವರು ದೇವರ ಪ್ರೀತಿಯನ್ನು ತಿಳಿದುಕೊಳ್ಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482