ಧೈನಂದಿನ ಧ್ಯಾನ(Kannada) – 28.01.2025
ಧೈನಂದಿನ ಧ್ಯಾನ(Kannada) – 28.01.2025
ಚಿಕ್ಕದಾದ ವೃತ್ತ ಬೇಡ
"...ನನ್ನ ಸಂಕಲ್ಪವನ್ನು ನೆರವೇರಿಸತಕ್ಕವನು ದೂರದೇಶದಿಂದ ಬರಲಿ ಎಂದು ಕೂಗಿದ್ದೇನೆ; ನಾನು ನುಡಿದಿದ್ದೇನೆ, ಈಡೇರಿಸುವೆನು; ಆಲೋಚಿಸಿದ್ದೇನೆ, ಸಾಧಿಸುವೆನು" - ಯೆಶಾಯ 46:11
ಒಬ್ಬ ಪುಟ್ಟ ಹುಡುಗಿ ತಾನು ಸಾಕುತ್ತಿದ್ದ ಚಿನ್ನದ ಬಣ್ಣದ ಮೀನುಗಳನ್ನು ನೋಡಿ ಆನಂದಿಸುತ್ತಿದ್ದಳು. ಆ ಮೀನಿನ ತೊಟ್ಟಿಯನ್ನು ಸ್ವಚ್ಛಗೊಳಿಸಿ ಬಹಳ ದಿನಗಳಾಗಿತ್ತು. ಆದ್ದರಿಂದ ಚಿಕ್ಕ ಹುಡುಗಿ ಅದನ್ನು ಸ್ವಚ್ಛಗೊಳಿಸಲು ನಿರ್ಧರಿಸಿ ಎರಡು ಮೀನುಗಳನ್ನು ಒಂದು ದೊಡ್ಡ ನೀರಿನ ತೊಟ್ಟಿಯಲ್ಲಿ ಹಾಕಿದಳು. ನಂತರ ಅವಳು ಮೀನಿನ ತೊಟ್ಟಿ ತೊಳೆಯಲು ಹೋದಳು. ಅವಳು ಮೀನಿನ ತೊಟ್ಟಿಯನ್ನು ತೊಳೆದ ನಂತರ, ಪುನಃ ಆ ಮೀನುಗಳನ್ನು ಎತ್ತಲು ದೊಡ್ಡ ತೊಟ್ಟಿಯ ಬಳಿಗೆ ಹಿಂತಿರುಗಿದಳು. ಆ ಮೀನುಗಳು ಈಗ ದೊಡ್ಡ ತೊಟ್ಟಿಯಲ್ಲಿದ್ದರೂ, ಅವು ಮೊದಲಿದ್ದ ಚಿಕ್ಕ ಮೀನಿನ ತೊಟ್ಟಿಯಲ್ಲಿ ಚಲಿಸುತ್ತಿದ್ದ ಹಾಗೆಯೇ ಒಂದು ಸಣ್ಣ ಭಾಗದಲ್ಲಿ ಮಾತ್ರ ಚಲಿಸುತ್ತಿದ್ದವು.
ನಾವು ಕೂಡ ಅನೇಕ ಸಂದರ್ಭಗಳಲ್ಲಿ ನಮಗಾಗಿ ಒಂದು ಕಿರಿದಾದ ವೃತ್ತವನ್ನು ಸೃಷ್ಟಿಸಿಕೊಂಡು ಅದರೊಳಗೆ ವಾಸಿಸುತ್ತಿದ್ದೇವೆ. ನನ್ನಿಂದ ಏನು ಮಾಡಲು ಸಾಧ್ಯ, ನನ್ನಿಂದ ಇಷ್ಟೇ ಸಾಧ್ಯ ಎಂಬುದನ್ನು ನಾವೇ ನಿರ್ಧಾರ ಮಾಡಿಬಿಡುತ್ತೇವೆ. ಆದರೆ ನಮಗಾಗಿ ದೇವರು ಹಾಕಿರುವ ಯೋಜನೆ ದೊಡ್ಡದು. ನಾವು ಯೋಚಿಸುವ ರೀತಿಯಲ್ಲಿ ಅವರು ಯೋಚಿಸುವುದಿಲ್ಲ. ಅವರು ನಮ್ಮ ಬಗ್ಗೆ ದೊಡ್ಡ ವೃತ್ತವನ್ನು ಬರೆದಿದ್ದಾರೆ. ಆದರೆ ನಾವು ಈಗ ನೋಡುತ್ತಿರುವುದು ಆ ವೃತ್ತದ ಒಂದು ಸಣ್ಣ ಭಾಗ ಮಾತ್ರ. ಆದರೆ ಅವರೋ ಆ ವೃತ್ತದ ಸಂಪೂರ್ಣ ಭಾಗವನ್ನೂ ನೋಡುತ್ತಾರೆ.
ಬೈಬಲ್‌ನಲ್ಲಿ, ಮಿದ್ಯಾನ್ಯರಿಗೆ ಹೆದರಿ ಭಯಭೀತನಾಗಿ ಹಿಮ್ಮೆಟ್ಟುತ್ತಿದ್ದ ಗಿದ್ಯೋನನನ್ನು ನೋಡಿ ಕರ್ತನು, ಪರಾಕ್ರಮಶಾಲಿಯೇ ಎಂದು ಕರೆದು ಅವನಿಗೆ ಒಂದು ದೊಡ್ಡ ಕೆಲಸವನ್ನು ಕೊಟ್ಟರು. ಅವನು ಮಿದ್ಯಾನ್ಯರೆಂಬ ದೊಡ್ಡ ಸೈನ್ಯವನ್ನು ಗಿದ್ಯೋನನ ಕೈಗೆ ಒಪ್ಪಿಸಿದರು. ಹೆಸರು ಹೇಳಲು ಮಕ್ಕಳಿಲ್ಲದ ಅಬ್ರಾಮನನ್ನು ನೋಡಿ, ಜನಾಂಗಗಳಿಗೆ ತಂದೆ ಎಂದು ಕರೆಯಲ್ಪಡುವ ಅಬ್ರಹಾಮನೆಂದು ಹೆಸರಿಟ್ಟು ಕರೆದರು. ಭೂಮಿಯಲ್ಲಿರುವ ವಂಶಗಳೆಲ್ಲಾ ನಿನ್ನೊಳಗೆ ಆಶೀರ್ವದಿಸಲ್ಪಡುತ್ತದೆ ಎಂಬ ಒಂದು ದೊಡ್ಡ ವೃತ್ತವನ್ನು ತೋರಿಸಿ ಅವರನ್ನು ಆಶೀರ್ವದಿಸಿದರು. ಹೌದು, ಕರ್ತನ ಮಾತಿನ ಪ್ರಕಾರವೇ ಸಂಭವಿಸಿತು. ಅದೇ ರೀತಿ, ನಮಗಾಗಿ ಕರ್ತನು ಇಟ್ಟಿರುವ ಯೋಜನೆಗಳು ದೊಡ್ಡದಾಗಿವೆ. ನನ್ನಿಂದ ಸಾಧ್ಯವಿಲ್ಲ ಎಂದು ಹೇಳಿದ ದಿನಗಳು ಸಾಕು. ನಮ್ಮ ಸುತ್ತಲೂ ಒಂದು ಸಣ್ಣ ವೃತ್ತವನ್ನು ಹಾಕಿಕೊಂಡು ಬದುಕಿದ್ದು ಸಾಕು. ದೇವರು ನಮಗಾಗಿ ಯೋಜನೆ ಹಾಕಿ ಇಟ್ಟಿರುವ ದೊಡ್ಡ ಕೇಂದ್ರಕ್ಕೆ ನಮ್ಮನ್ನು ಅರ್ಪಿಸಿಕೊಳ್ಳೋಣ. ಆತನು ಬಯಸುವ ಪಾತ್ರೆಯಾಗಿ ಬದುಕಿ ಕರ್ತನಿಗಾಗಿ ನಮ್ಮಿಂದ ಸಾಧ್ಯವಾದದ್ದನ್ನು ಮಾಡೋಣ. ಕರ್ತನು ಬೇಗನೆ ಬರುತ್ತಾರೆ. ಆಮೆನ್. ಹಲ್ಲೇಲೂಯಾ!
- Mrs. ಎಸ್ತೇರ್ ಮನೋಜ್‌ಕುಮಾರ್
ಪ್ರಾರ್ಥನಾ ಅಂಶ:
ಪ್ರತಿಯೊಂದು ಜಿಲ್ಲೆಯಲ್ಲಿ 300 ಗಿದ್ಯೋನ್‌ಗಳು ಎದ್ದೇಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482