ಧೈನಂದಿನ ಧ್ಯಾನ(Kannada) – 26.01.2025
ಧೈನಂದಿನ ಧ್ಯಾನ(Kannada) – 26.01.2025
"ಯೆಹೋವನ ಮಹೋಪಕಾರಕ್ಕಾಗಿ ಆತನಿಗೆ ಹಾಡುವೆನು." - ಕೀರ್ತನೆ 13:6
ಅಜ್ಜನ ಛತ್ರಿ
ಸಂಜೆ, ರಾಮು ಅಣ್ಣ ಶಾಲೆಯಲ್ಲಿ ಕುಳಿತು ಹೊರಗೆ ನೋಡುತ್ತಿದ್ದ. ತುಂಬಾ ಮಳೆ! ಓಹ್, ನಮ್ಮ ಹತ್ತಿರ ಛತ್ರಿ ಇಲ್ಲವಲ್ಲಾ ಎಂದು ಹೇಳಿ, ಸಣ್ಣಗೆ ಮಳೆ ಬರುವಾಗ ಬಂದನು. ಅರ್ಧದಾರಿಗೆ ಬರುವಾಗ, ಮಳೆ ಜೋರಾಗಿ ಬಂದು ಬಿಟ್ಟಿತು. ರಾಮು ಆಣ್ಣನ ಬಳಿ ಛತ್ರಿ ಇಲ್ಲದ ಕಾರಣ ಅವನು ನೆನೆದುಕೊಂಡು ಮನೆಗೆ ಹೋದನು. ಅಪ್ಪ ರಾಮು ಕಡೆ ನೋಡಿ, "ಬಾ, ನಾನು ಅಂಗಡಿಗೆ ಹೋಗಿ ನಿನಗೆ ಒಂದು ಛತ್ರಿ ತೆಗೆದುಕೊಡುತ್ತೇನೆ" ಅಂದರು. ತಕ್ಷಣವೇ, ಈ ರಾಮು ಅಣ್ಣನಿಗೆ ಸಂತೋಷ ಉಕ್ಕಿ ಬಂತು. ಏನು ಪುಟಾಣಿಗಳೇ! ನಮ್ಮ ಅಪ್ಪ ಅಮ್ಮ ನಮಗೆ ಇಷ್ಟವಾದದ್ದನ್ನು ತೆಗೆದುಕೊಟ್ಟರೆ ನಮಗೂ ಸಂತೋಷವಾಗಿ ತಾನೇ ಇರುತ್ತದೆ. ಈಗ ರಾಮು ಅಣ್ಣ ಮತ್ತು ಅವನ ತಂದೆ ಅಂಗಡಿಗೆ ಹೋದರು. ಅಪ್ಪ ರಾಮುಗಾಗಿ ಒಂದು ದೊಡ್ಡ ಕಪ್ಪು ಛತ್ರಿಯನ್ನು ತೆಗೆದುಕೊಟ್ಟರು. ಪಕ್ಕದಲ್ಲಿ ರಾಮು ಜೊತೆ ಓದುತ್ತಿದ್ದ ಗೆಳೆಯರು ಕೂಡ ಆ ಅಂಗಡಿಗೆ ಬಂದರು. ರಾಮುವಿನ ತಂದೆ ಅವನಿಗೆ ತೆಗೆದುಕೊಟ್ಟಿದ್ದ ಛತ್ರಿಯನ್ನು ನೋಡಿ ಅದು ಅಜ್ಜನ ಛತ್ರಿ ಎಂದು ಕರೆದು ಗೇಲಿ ಮಾಡಿದರು. ರಾಮುವಿನ ಸ್ನೇಹಿತರು ತೆಗೆದುಕೊಂಡ ಛತ್ರಿಯಲ್ಲಿ ಸುಂದರವಾದ ಆಟಿಕೆಗಳು ಮತ್ತು ಛೋಟಾ ಭೀಮ್ ಮತ್ತು ಡೋರಾ ಇವುಗಳ ಚಿತ್ರಗಳಿದ್ದವು. ಆದರೆ ರಾಮುವಿನ ಛತ್ರಿಯಲ್ಲಿ ಅದು ಇಲ್ಲ. ರಾಮು ಚಿಂತಿತನಾಗಿ ಮನೆಗೆ ಹಿಂದಿರುಗಿದನು. ಮರುದಿನ, ರಾಮು ಎಂದಿನಂತೆ ಶಾಲೆಗೆ ಬಂದನು. ಸಂಜೆ ಮಳೆ ಬಂತು. ರಾಮು ಅಣ್ಣನ ಸ್ನೇಹಿತರು ಅವರ ಛತ್ರಿಯಲ್ಲಿರುವ ಚಿತ್ರಗಳನ್ನು ತಮ್ಮ ಇತರ ಸ್ನೇಹಿತರಿಗೆ ತೋರಿಸುವುದರಲ್ಲಿ ಆನಂದಿಸಿದರು. ಅವರು ರಾಮುವಿನ ಛತ್ರಿಯನ್ನು ನೋಡಿದಾಗ "ಅಜ್ಜನ ಛತ್ರಿ" ಎಂದು ಮತ್ತೆ ಕರೆದು ಗೇಲಿ ಮಾಡಿದರು. ರಾಮುವಿಗೆ ಅದು ಕಷ್ಟಕರವಾಗಿತ್ತು. ಅವನ ಸ್ನೇಹಿತರು ಅವನನ್ನು ಈ ರೀತಿ ಗೇಲಿ ಮಾಡುತ್ತಿದ್ದಂತೆ ಬಲವಾದ ಗಾಳಿ ಬೀಸಿತು. ಆ ಸಮಯದಲ್ಲಿ, ರಾಮುವಿನ ಸ್ನೇಹಿತರ ಬಳಿ ಇದ್ದ ಎಲ್ಲಾ ಛತ್ರಿಗಳು ಮುರಿದುಹೋದವು. ಆದರೆ ನಮ್ಮ ರಾಮು ಅಣ್ಣನ ಛತ್ರಿ ಮಾತ್ರ ಮುರಿದುಹೋಗಲಿಲ್ಲ. ರಾಮುವಿಗೆ ಗೇಲಿ ಮಾಡಿದ ಸ್ನೇಹಿತರೆಲ್ಲರೂ "ಹೇ ರಾಮು, sorry ಕಣೋ ನಾವು ಮಳೆಯಲ್ಲಿ ಒದ್ದೆಯಾಗುತ್ತಿದ್ದೇವೆ ನಿನ್ನ ಛತ್ರಿಯ ಕೆಳಗೆ ಬರಬಹುದಾ ಎಂದು ಹೇಳಿ ರಾಮುವಿನ ಛತ್ರಿಯ ಬಳಿಗೆ ಹೋದರು. ಆಗ ರಾಮು "ನನ್ನ ಅಪ್ಪ ನನಗೆ ಒಂದು ಒಳ್ಳೆಯ ಛತ್ರಿ ತೆಗೆದುಕೊಟ್ಟಿದ್ದಾರೆ" ಎಂದು ಯೋಚಿಸಿ ಸಂತೋಷದಿಂದ ಮನೆಗೆ ಹೋದನು.
ಏನು ಪುಟಾಣಿಗಳೇ! ಹೀಗೆಯೇ, ಯೇಸಪ್ಪ ನಮ್ಮ ಜೀವನದಲ್ಲಿ ಏನೇ ಮಾಡಿದರೂ, ಅದು ಒಳ್ಳೆಯದಕ್ಕಾಗಿಯೇ ಮಾಡುತ್ತಾರೆ. ಸರೀನಾ, ಮುದ್ದು ಮಕ್ಕಳೇ. ರಾಮು ಅಣ್ಣನನ್ನು ಗೇಲಿ ಮಾಡಿದ ಗೆಳೆಯರು ಅದನ್ನು ಅರ್ಥಮಾಡಿಕೊಂಡಂತೆ, ನೀವೂ ಯೇಸಪ್ಪನನ್ನು ಅರ್ಥಮಾಡಿಕೊಳ್ಳಬೇಕು. ಕೆಟ್ಟದ್ದನ್ನು ಒಳ್ಳೆಯದನ್ನಾಗಿ ಪರಿವರ್ತಿಸುವ ದೇವರು ನಿಮ್ಮ ಅಗತ್ಯಗಳನ್ನು ಖಂಡಿತವಾಗಿಯೂ ಪೂರೈಸುತ್ತಾರೆ.
- Mrs. ಪೂವಿತಾ ಎಬೆನೇಜರ್
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482