ಧೈನಂದಿನ ಧ್ಯಾನ(Kannada) – 25.01.2025
ಧೈನಂದಿನ ಧ್ಯಾನ(Kannada) – 25.01.2025
ವಾಕ್ಯವು ಬದುಕಿಸುತ್ತದೆ
"ನಿನ್ನ ಧರ್ಮಶಾಸ್ತ್ರವು ನನಗೆ ಆನಂದಕರವಾಗದಿದ್ದರೆ ನನಗೊದಗಿದ ಆಪತ್ತಿನಲ್ಲಿ ಹಾಳಾಗಿ ಹೋಗುತ್ತಿದ್ದೆನು" - ಕೀರ್ತನೆ 119:92
ಒಬ್ಬ ಮಹಿಳೆ ತಾನು ಹಾದು ಬಂದ ಹಾದಿಗಳನ್ನು ಹೀಗೆ ವಿವರಿಸುತ್ತಾಳೆ. "ನಾನು ಚಿಕ್ಕ ವಯಸ್ಸಿನಲ್ಲಿಯೇ ನನ್ನ ತಂದೆಯನ್ನು ಕಳೆದುಕೊಂಡೆ. ಕಷ್ಟಗಳ ನಡುವೆಯೇ ಓದಿದೆ ಮತ್ತು ದೇವರ ದಯೆಯಿಂದ ಕೆಲಸಕ್ಕೆ ಹೋದೆ. ಕೆಲವು ವರ್ಷಗಳ ನಂತರ ನಾನು ಮದುವೆಯಾದೆ. ಇನ್ನು ಕಷ್ಟವಿರುವುದಿಲ್ಲ. ನನ್ನ ಎಲ್ಲಾ ಅಗತ್ಯಗಳು ಈಡೇರುತ್ತವೆ ಎಂದು ನಾನು ಭಾವಿಸಿದೆ. ಆದರೆ ನಡೆದದ್ದು ಸತ್ತವನ ಹಾಗೆ ಎಲ್ಲರಿಂದಲೂ ಮರೆಯಲ್ಪಟ್ಟೆ ಎಂದು ಸತ್ಯವೇದದಲ್ಲಿ ಹೇಳಲ್ಪಟ್ಟ ಹಾಗೆ ಎಲ್ಲರಿಂದಲೂ ಮರೆಯಲ್ಪಟ್ಟೆ. ಮುಳ್ಳಿನ ಪೊದೆಯಂತಹ ಅನುಭವವಾಗಿತ್ತು." ನನಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ನಾನು ಬದುಕುವುದೇ ವ್ಯರ್ಥ ಎಂದು ಅನಿಸಿತು. ಅಷ್ಟರಲ್ಲಿ, ಒಬ್ಬ ಸಹೋದರಿಯಿಂದ ಒಂದು ಪತ್ರ ಬಂದಿತು. ಅದರಲ್ಲಿ, "ಯೆಹೋವನು ನಿನ್ನಲ್ಲಿ ಉಲ್ಲಾಸಗೊಳ್ಳುತ್ತಾನೆ" (ಯೆಶಾಯ 62:4) ಈ ವಾಕ್ಯಕ್ಕೆ ಅಡಿಗೆರೆ ಹಾಕಲಾಗಿತ್ತು. ಅದರಲ್ಲಿ ಪ್ರತಿದಿನ ಬೈಬಲ್ ಓದು ಎಂದೂ ಹೇಳಲಾಗಿತ್ತು. ತಕ್ಷಣ, ನಾನು ಪ್ರತಿದಿನ ಬೈಬಲ್ ಓದಲು ಪ್ರಾರಂಭಿಸಿದೆ. ನಾನು ಯೇಸುವಿನ ಪ್ರೀತಿಯನ್ನು ಅರ್ಥಮಾಡಿಕೊಂಡೆ. ಅನೇಕ ವಾಕ್ಯಗಳು ನನಗೆ ಸಾಂತ್ವನ ನೀಡಿತು. ಮುಳ್ಳಿನ ಪೊದೆ ಬೆಳೆದ ಸ್ಥಳದಲ್ಲಿ ದೇವದಾರು ಮರ ಬೆಳೆಯಿತು. ವಾಕ್ಯವು ನನ್ನಲ್ಲಿ ಸತ್ತುಹೋಗಿದ್ದ ಸಂತೋಷ ಮತ್ತು ಶಾಂತಿಯನ್ನು ಮೊಳಕೆಯೊಡೆಯುವಂತೆ ಮಾಡಿತು.
ಹೌದು, ವಾಕ್ಯವು ದೇವರ ಜೀವವುಳ್ಳ ಮಾತಾಗಿದೆ! ನಾವು ಅದನ್ನು ಓದುವಾಗ, ಆ ವಚನಗಳು ನಮ್ಮ ಜೀವನದಲ್ಲಿ ನೆರವೇರಿವೆ ಎಂದು ನಮಗೆ ಅರಿವಾಗುತ್ತದೆ. ನಮಗೆ ನಂಬಿಕೆಯ ಕೊರತೆಯಿರುವಾಗ, ವಾಕ್ಯಗಳನ್ನು ಪುನಃ ಪುನಃ ಓದುವುದರಿಂದ ನಮ್ಮಲ್ಲಿ ನಂಬಿಕೆಯನ್ನು ಹುಟ್ಟುಹಾಕುತ್ತದೆ. ಹೌದು, ಇದು ಜೀವವುಳ್ಳ ವಾಕ್ಯ. ಇಂದಿಗೂ ನಮ್ಮ ಜೀವನದಲ್ಲಿ ಹಾಗೆಯೇ ನೆರವೇರುವಂತಹ ಮಾತುಗಳು. ನಮ್ಮ ಮುರಿದ ಮತ್ತು ಛಿದ್ರಗೊಂಡ ಆತ್ಮಗಳನ್ನು ಪುನರುಜ್ಜೀವನಗೊಳಿಸುವ ವಾಕ್ಯಗಳು. ನಮ್ಮನ್ನು ತೋರಿಸುವ ಕನ್ನಡಿ. ಈ ಮೂಲಕ ನಮ್ಮನ್ನು ನಾವು ಸರಿಮಾಡಿಕೊಳ್ಳಬಹುದು. ಆದ್ದರಿಂದ, ದಾವೀದನು ದೇವರ ವಾಕ್ಯದ ಬಗ್ಗೆ ಮಾತನಾಡುವಾಗ, "ಅವು ಬಂಗಾರಕ್ಕಿಂತಲೂ ಅಪರಂಜಿರಾಶಿಗಿಂತಲೂ ಅಪೇಕ್ಷಿಸತಕ್ಕವುಗಳು. ಅವು ಜೇನಿಗಿಂತಲೂ ಶೋಧಿಸಿದ ಜೇನು ತುಪ್ಪಕ್ಕಿಂತಲೂ ಸಿಹಿಯಾಗಿವೆ. (ಕೀರ್ತನೆ 19:10) ಎಂದು ಹೇಳುತ್ತಾರೆ. ನಿನ್ನ ವಾಕ್ಯವು ನನ್ನ ಕಾಲಿಗೆ ದೀಪವೂ ನನ್ನ ದಾರಿಗೆ ಬೆಳಕೂ ಆಗಿದೆ (ಕೀರ್ತನೆ 119:105) ಎಂದೂ ಹೇಳುತ್ತಾರೆ.
ಪ್ರಿಯರೇ, ಒಟ್ಟಾರೆಯಾಗಿ ಸತ್ಯವೇದ ವಾಕ್ಯಗಳು ನಮ್ಮನ್ನು ಪುನರುಜ್ಜೀವನಗೊಳಿಸಿ ನಡೆಸುವಂಥದ್ದಾಗಿದೆ. ನೀವು ಮುರಿದು ಚೂರುಚೂರಾಗಿದ್ದೀರಾ? ನಿಮಗೆ ಸಾಂತ್ವನ ಹೇಳಲು ಯಾರೂ ಇಲ್ಲವೇ? ನಿಮ್ಮ ಬಳಿ ಮಾತನಾಡಲು ಯಾರೂ ಇಲ್ಲವೇ? ಇಂದೇ ಬೈಬಲ್ ಓದಿ. ಆ ಸಹೋದರಿಯ ಜೀವನವನ್ನು ಪುನರುಜ್ಜೀವನಗೊಳಿಸಿ, ಅವಳು ಸಂತೋಷವನ್ನು ಕಂಡುಕೊಳ್ಳುವಂತೆ ಮಾಡಿದ ಕರ್ತನು ನಿಮ್ಮ ಜೀವನವನ್ನು ಸಹ ಪುನರುಜ್ಜೀವನಗೊಳಿಸುತ್ತಾರೆ. ಅವರು ನಿಮ್ಮನ್ನು ಸಹ ಸಂತೋಷಪಡಿಸುತ್ತಾರೆ. ಸತ್ಯವೇದವು ನಮಗೆ ದೊರೆತ ಅನುಪಮ ನಿಧಿ.
- Mrs. ಮುತ್ತುಲಕ್ಷ್ಮಿ ವೇದ
ಪ್ರಾರ್ಥನಾ ಅಂಶ:
ವೇಲೂರಿನಲ್ಲಿ ನಡೆಯುವಂತಹ ಯುವ ಶಿಬಿರದಲ್ಲಿ ಅನೇಕ ಯೌವನಸ್ಥರು ಭಾಗವಹಿಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482