Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 22.01.2025

ಧೈನಂದಿನ ಧ್ಯಾನ(Kannada) – 22.01.2025

 

ರಾಜ ಬರಬೇಕು.

 

"ಇಗೋ, ಬಾಗಿಲಲ್ಲಿ ನಿಂತುಕೊಂಡು ತಟ್ಟುತ್ತಾ ಇದ್ದೇನೆ; ಯಾವನಾದರೂ ನನ್ನ ಶಬ್ದವನ್ನು ಕೇಳಿ ಬಾಗಿಲನ್ನು ತೆರೆದರೆ ನಾನು ಒಳಗೆ ಬಂದು…" - ಪ್ರಕಟಣೆ. 3:20

 

ಒಂದು ದಿನ, ಅರಮನೆಯನ್ನು ವರ್ಣರಂಜಿತ ಹೂವುಗಳು ಮತ್ತು ವರ್ಣರಂಜಿತ ದೀಪಗಳಿಂದ ಅಲಂಕರಿಸಲಾಗಿತ್ತು. ಏಕೆಂದರೆ ಆ ದಿನ ರಾಜನ ಹುಟ್ಟುಹಬ್ಬವಾಗಿತ್ತು. ಅರಮನೆಯಲ್ಲಿದ್ದ ಜನರು ಸಂತೋಷವಾಗಿದ್ದರು. ರಾಜನು ಸಂತೋಷದಿಂದ ಸಿಂಹಾಸನದ ಮೇಲೆ ಕುಳಿತಾಗ, ಅರಮನೆಯಲ್ಲಿರುವ ಎಲ್ಲಾ ಮಂತ್ರಿಗಳು ಮತ್ತು ಸೇವಕರು ತನ್ನ ಮುಂದೆ ಸೇರಲು ಆದೇಶಿಸಿದರು ಮತ್ತು ಪ್ರತಿಯೊಬ್ಬರೂ ತಮಗೆ ಬೇಕಾದುದನ್ನು ಕೇಳಬಹುದು, ಅವರು ಕೇಳಿಕೊಂಡದ್ದನ್ನು ನೀಡಲಾಗುವುದು ಎಂದು ಹೇಳಿದರು. ತಕ್ಷಣವೇ, ಮಂತ್ರಿಗಳು ಮತ್ತು ಸೇವಕರು ಸಾಲಿನಲ್ಲಿ ನಿಂತು, ಅವರು ಕೇಳಿದ್ದನ್ನೆಲ್ಲಾ ಪಡೆದುಕೊಂಡು, ಸಂತೋಷದಿಂದ ಹಿಂತಿರುಗಿದರು. ಆದರೆ ಒಬ್ಬ ಪುಟ್ಟ ಹುಡುಗ ಸದ್ದಿಲ್ಲದೆ ನಿಂತಿದ್ದ. ರಾಜ ಅವನನ್ನು ನೋಡಿ, "ನಿನಗೆ ಏನೂ ಬೇಡವೇ?" ಎಂದರು. ಅದಕ್ಕೆ ಅವನು ಹೆದರಿ, "ರಾಜ ನಮ್ಮ ಮನೆಗೆ ಒಮ್ಮೆ ಬರಬೇಕು" ಅಂದನು. ರಾಜನು ತಕ್ಷಣ ಸಂತೋಷದಿಂದ ಬರುತ್ತೇನೆ ಎಂದು ಹೇಳಿದರು. ಅವರು ಆ ಕಾರ್ಯದ ಸಿದ್ಧತೆ ಮಾಡಲು ಒಬ್ಬ ಮಂತ್ರಿಯನ್ನು ನೇಮಿಸಿದರು. ರಾಜನು ಹುಡುಗನ ಮನೆಗೆ ಹೋಗಲು ಮಂತ್ರಿ ದಾರಿಯನ್ನು ಸಿದ್ಧಪಡಿಸಿದರು. ನಂತರ ಹುಡುಗನ ಮನೆ ಬದಲಾಯಿಸಿದರು. ರಾಜನು ಬರುವ ದಿನವನ್ನು ಮುಂತಿಳಿಸಿ ಮನೆಯಲ್ಲಿರುವ ಪಾತ್ರೆಗಳು ಮತ್ತು ವಸ್ತುಗಳನ್ನು ನವೀಕರಿಸಿದರು. ರಾಜ ಬಂದು ಆ ಹುಡುಗನ ಆಸೆಯನ್ನು ಪೂರೈಸಿದರು ನೋಡುದ್ರಾ? ಅವನು ಒಂದೇ ಒಂದು ವಿಷಯ ಕೇಳಿದನು. ಆದರೆ ಅದರಿಂದ ದೊರೆತಿದ್ದು ಅನೇಕ ಪ್ರಯೋಜನಗಳು.

 

ಮುಖ್ಯ ತೆರಿಗೆ ವಸೂಲಿಗಾರನಾದ ಜಕ್ಕಾಯನನ್ನು ಜನರು ಪಾಪಿ ಎಂದು ತಿರಸ್ಕರಿಸಿದರು. ಆದರೆ ಅವನು ಯೇಸುವನ್ನು ನೋಡಲು ಬಯಸಿದನು. ಯೇಸು ಬಂದು ಅವನನ್ನು ನೋಡಿ, "ನಾನು ನಿನ್ನ ಮನೆಯಲ್ಲಿ ತಂಗಬೇಕು" ಎಂದು ಹೇಳಿದರು. ಅವರು ತಕ್ಷಣ ಒಪ್ಪಿಕೊಂಡು ಕರೆದುಕೊಂಡು ಹೋದರು. ಅವರ ಜೀವನ ಬದಲಾಯಿತು. ಪಾಪಿಯಾಗಿದ್ದವನು ಅಬ್ರಹಾಮನ ಮಗನಾದನು, ಪರಲೋಕ ರಾಜ್ಯಕ್ಕೆ ಬಾಧ್ಯರಾದರು. ನಾವು ಯೇಸುವನ್ನು ಸ್ವೀಕರಿಸಿದಾಗ, ನಮ್ಮ ಪರಿಸ್ಥಿತಿ ಏನೇ ಇರಲಿ, ಆತನು ನಮ್ಮನ್ನು ತನ್ನ ಸ್ವಂತ ಮಗ ಅಥವಾ ಮಗಳಾಗಿ ಸ್ವೀಕರಿಸುತ್ತಾರೆ. ಅದಕ್ಕೆ ತಕ್ಕಂತೆ ಜೀವನವನ್ನು ನವೀಕರಿಸುತ್ತಾರೆ. ಕಿರಿಯ ಮಗ ಆಸ್ತಿಯನ್ನು ಹಾಳುಮಾಡಿ ಬಂದರೂ, ಅವನನ್ನು ತನ್ನ ಮಗನಾಗಿ ಸ್ವೀಕರಿಸಿ, ಅವನಿಗೆ ಹೊಸ ಬಟ್ಟೆ, ಉಂಗುರ ಮತ್ತು ಚಪ್ಪಲಿಯನ್ನು ಕೊಟ್ಟು ಹೆಚ್ಚಿಸಿದರು. ಕಿರಿಯ ಮಗನು ಸೇವಕರಲ್ಲಿ ಒಬ್ಬನನ್ನಾಗಿ ನನ್ನನ್ನು ಸ್ವೀಕರಿಸು ಎಂದು ಹೇಳುತ್ತಾನೆ. ಆದರೆ ತಂದೆ ತನ್ನ ಪ್ರೀತಿಯ ನಿಮಿತ್ತವಾಗಿ ಅವನನ್ನು ಮಗನಾಗಿಯೇ ಸ್ವೀಕರಿಸುತ್ತಾರೆ.

 

ಪ್ರಿಯರೇ, ಯೇಸು ಕ್ರಿಸ್ತನ ಮೂಲಕ ಎಲ್ಲವೂ ಸಾಧ್ಯ. ಅವರಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಅವರು ನಿಮ್ಮ ಹೃದಯದ ಬಾಗಿಲನ್ನು ತಟ್ಟುತ್ತಿದ್ದಾರೆ, ನೀವು ಅದನ್ನು ತೆರೆಯಲು ಕಾಯುತ್ತಿದ್ದಾರೆ. ಅವರು ಒಳಗೆ ಬಂದರೆ ನಿಮ್ಮ ಹೃದಯ ಶುದ್ಧವಾಗುತ್ತದೆ. ನಿಮ್ಮ ಜೀವನ ಸುಂದರವಾಗುತ್ತದೆ. ಸಂತೋಷ ಮತ್ತು ಸಮಾಧಾನ ಉಂಟಾಗುತ್ತದೆ. ಅಷ್ಟೇ ಅಲ್ಲ, ಸಕಲವನ್ನೂ ಉಂಟುಮಾಡಿದ ದೇವಾಧಿ ದೇವನ ಸ್ವಂತ ಮಕ್ಕಳಾಗುತ್ತೀರಿ. ಅವರು ಕೊಡುವ ಸಂತೋಷ ಮತ್ತು ಆಶೀರ್ವಾದಗಳನ್ನು ಮಾತ್ರ ನಿರೀಕ್ಷಿಸುತ್ತಾ ಇರದೇ, ಆ ಚಿಕ್ಕ ಹುಡುಗನಂತೆ ನೀವೇ ಬೇಕು. ನೀವು ನನ್ನ ಹೃದಯದೊಳಗೆ ಬನ್ನಿ ಎಂದು ಅಂಗೀಕರಿಸುವಾಗ, ಎಲ್ಲಾ ಆಶೀರ್ವಾದಗಳು ಮತ್ತು ಸಂತೋಷವು ನಿಮಗೆ ದೊರೆಯುತ್ತದೆ. ನಿಮ್ಮ ಅಗತ್ಯಗಳು ಪೂರೈಸಲ್ಪಡುತ್ತವೆ.

- J. ಎಬಿನೇಸರ್

 

ಪ್ರಾರ್ಥನಾ ಅಂಶ:

ಆಮೆನ್ ವಿಲೇಜ್ ಟಿವಿಯು ಒಂದು ಮಿಷನರಿಯಾಗಿ ಅನೇಕ ಮನೆಗಳನ್ನು ಹುಡುಕಿ ಹೋಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)