ಧೈನಂದಿನ ಧ್ಯಾನ(Kannada) – 03.07.2025
ಧೈನಂದಿನ ಧ್ಯಾನ(Kannada) – 03.07.2025
ಆರಿಸಿಕೊಂಡರು
"...ನೀನು ಉದರದಿಂದ ಬರುವದಕ್ಕೆ ಮೊದಲೇ ನಿನ್ನನ್ನು ಪ್ರತಿಷ್ಠಿಸಿದ್ದೆನು; ಜನಾಂಗಗಳಿಗೆ ಪ್ರವಾದಿಯನ್ನಾಗಿ ನಿನ್ನನ್ನು ನೇಮಿಸಿದ್ದೇನೆ" - ಯೆರೆಮಿಯ 1:5
ನನ್ನ ಹೆಸರು ಅಳಗರಸ್ವಾಮಿ. ನನ್ನ ತಂದೆ ಯೇಸು ಕ್ರಿಸ್ತನನ್ನು ಅರಿಯದ ಕುಟುಂಬದಿಂದ ಬಂದವರು. ನನ್ನ ತಾಯಿ ರೋಮನ್ ಕ್ಯಾಥೊಲಿಕ್. ನಾವು ಪಾಪಪೂರ್ಣ ರೀತಿಯಲ್ಲಿ ಬದುಕುತ್ತಿದ್ದೆವು ಮತ್ತು ಯೇಸು ಕ್ರಿಸ್ತನ ಬಗ್ಗೆ ಯಾವುದೇ ಜ್ಞಾನವಿಲ್ಲದೆ ಇತರ ದೇವರುಗಳನ್ನು ಪೂಜಿಸುತ್ತಿದ್ದೆವು. ನಾನು ಒಂಬತ್ತನೇ ತರಗತಿಯಲ್ಲಿದ್ದಾಗ, ಸಹೋದರ ಡೇವಿಡ್ ಗಣೇಶನ್ ರವರು ನಮ್ಮ ಹಳ್ಳಿಗೆ ಬಂದು ಯೇಸುವಿನ ಬಗ್ಗೆ ಬೋಧಿಸಿದರು. ಅವರು ಭಾನುವಾರ ಶಾಲೆಯನ್ನು ನಡೆಸುತ್ತಿದ್ದರು, ಮತ್ತು ಕರ್ತನು ಅದಕ್ಕೆ ಹಾಜರಾಗಲು ನನಗೆ ಕೃಪೆಯನ್ನು ಕೊಟ್ಟರು. ಸಹೋದರನ ಮೂಲಕ ಯೇಸುವನ್ನು ಸ್ವೀಕರಿಸಿ ದೀಕ್ಷಾಸ್ನಾನ ಪಡೆದೆ. ಕರ್ತನು ನನಗೆ ಡಿಪ್ಲೊಮಾ ಅಧ್ಯಯನ ಮಾಡಲು ಕೃಪೆಯನ್ನು ಕೊಟ್ಟರು. ನೀವು ನನ್ನನ್ನು ಹುಡುಕುವಿರಿ, ಮನಃಪೂರ್ವಕವಾಗಿ ಹುಡುಕಿದಾಗ ನನ್ನನ್ನು ಕಂಡುಕೊಳ್ಳುವಿರಿ. ಯೆರೆಮಿಯ 29:13 ಎಂಬ ವಚನದ ಪ್ರಕಾರ ಕರ್ತನನ್ನು ಹುಡುಕಲು ಅವರು ನನಗೆ ಸಹಾಯ ಮಾಡಿದರು.
ನನಗೆ ಒಳ್ಳೆಯ ಕೆಲಸ ಸಿಕ್ಕಿತು. ರಜಾದಿನಗಳಲ್ಲಿ ಸಹೋದರನೊಂದಿಗೆ ಸೇವೆಗೆ ಹೋಗುತ್ತಿದ್ದೆ. ಅಂತಹ ಸಮಯದಲ್ಲಿ ಒಂದು ದಿನ ಕರ್ತನು ನನ್ನನ್ನು, "ನೀನು ನಿನಗಾಗಿಯೇ ಬದುಕುತ್ತೀಯಾ ಅಥವಾ ನನ್ನ ಸೇವೆ ಮಾಡುತ್ತೀಯಾ?" ಎಂದು ಕೇಳಿದರು. ಆ ಸಮಯದಲ್ಲಿ, ನಾನು ನನ್ನ ಜೀವನವನ್ನು ಯೇಸುವಿನ ಪೂರ್ಣ ಸಮಯದ ಸೇವೆಗೆ ಅರ್ಪಿಸಿದೆ. ನಾನು ಎರಡು ವರ್ಷಗಳ ಕಾಲ ತಮಿಳುನಾಡಿನಲ್ಲಿ ಸೇವೆ ಸಲ್ಲಿಸಿದೆ. ಒಂದು ದಿನ ಬೆಳಿಗ್ಗೆ 8 ಗಂಟೆಗೆ, ಸಹೋದರನು ನನಗೆ, "ನೀನು ಆಂಧ್ರಪ್ರದೇಶಕ್ಕೆ ಹೋಗಬೇಕು" ರೈಲು ಹತ್ತು ಗಂಟೆಗೆ ಹೊರಡುತ್ತದೆ ಎಂದು ಹೇಳಿದರು. ನಾನು ತಕ್ಷಣ ವಿಧೇಯನಾಗಿ ಹೊರಟೆ. ಅಲ್ಲಿನ ಭಾಷೆಯನ್ನು ಕಲಿಯಲು ಮತ್ತು ಅಲ್ಲಿ ಸೇವೆ ಮಾಡಲು ಕರ್ತನು ನನಗೆ ಕೃಪೆಯನ್ನು ಕೊಟ್ಟರು. ನಾನು ಕಳೆದ 20 ವರ್ಷಗಳಿಂದ ಆಂಧ್ರಪ್ರದೇಶದಲ್ಲಿ ಕರ್ತನ ಸೇವೆಯನ್ನು ಮಾಡುತ್ತಿದ್ದೇನೆ. ಅಲ್ಲಿ ಪೂರ್ಣ ಸಮಯದ ಮಿಷನರಿಗಳು ಮತ್ತು ಟ್ಯೂಷನ್ ಮಿಷನರಿಗಳು ಒಟ್ಟು 86 ಸೇವಕರು ಇದ್ದಾರೆ. ಇಂದಿನವರೆಗೂ, ಕರ್ತನು ನೀಡಿದ ದರ್ಶನದಲ್ಲಿ ಒಟ್ಟಿಗೆ ಓಡಲು ಕೃಪೆಯನ್ನು ಕೊಟ್ಟಿದ್ದಾರೆ. ನನಗಾಗಿ, ನನ್ನ ಕುಟುಂಬಕ್ಕಾಗಿ ಮತ್ತು ಸೇವೆಗಾಗಿ ಪ್ರಾರ್ಥಿಸಿಕೊಳ್ಳಿರಿ.
ಪ್ರಿಯರೇ! ನೀವು ದೇವರಿಂದ ಆರಿಸಲ್ಪಟ್ಟಿದ್ದೀರಾ? ಕರ್ತನು ನನ್ನೊಂದಿಗೆ ಮಾತನಾಡಿ ಸೇವೆ ಮಾಡಲು ನನ್ನನ್ನು ಕರೆದಂತೆ ನಿಮ್ಮೊಂದಿಗೂ ಮಾತನಾಡುತ್ತಿದ್ದಾರೆಯೇ? ಆತನ ಮಾತಿಗೆ ವಿಧೇಯರಾಗಿರಿ. ನಾವು ವಿಧೇಯರಾದಾಗ ಮಾತ್ರವೇ ನಾವು ಇತರರಿಗೆ ಆಶೀರ್ವಾದವಾಗಿ ಮಾರ್ಪಡಲು ಸಾಧ್ಯ. ಕರ್ತನು ಅಬ್ರಹಾಮನಿಗೆ ನಾನು ತೋರಿಸುವ ದೇಶಕ್ಕೆ ಹೋಗಬೇಕೆಂದು ಹೇಳಿದಾಗ, ಅವನು ವಿಧೇಯನಾದನು. To Adress ಅಂದರೆ, ಹೋಗಬೇಕಾದ ಸ್ಥಳ ಯಾವುದು ಎಂದು ತಿಳಿಯದೆಯೇ, ಕರ್ತನ ಮಾತಿಗೆ ವಿಧೇಯರಾದರು. ಪರಿಣಾಮವಾಗಿ, ಭೂಮಿಯಲ್ಲಿರುವ ಎಲ್ಲಾ ಜನರು ಅವರಲ್ಲಿ ಆಶೀರ್ವಾದ ಹೊಂದಿಕೊಳ್ಳುತ್ತಲೇ ಇದ್ದಾರೆ. ವಿಧೇಯರಾಗಿರಿ ಅತ್ಯುನ್ನತ ಆಶೀರ್ವಾದವನ್ನು ಪಡೆದುಕೊಳ್ಳಿರಿ.
- Bro. ಅಳಗರಸ್ವಾಮಿ
ಪ್ರಾರ್ಥನಾ ಅಂಶ:
ಡೇ ಕೇರ್ ಸೆಂಟರ್‌ನಲ್ಲಿರುವ ಮಕ್ಕಳು ಯೇಸುವಿನ ಸಂತತಿಗಳಾಗಿ ಎದ್ದೇಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482