Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 30.06.2025

ಧೈನಂದಿನ ಧ್ಯಾನ(Kannada) – 30.06.2025

 

ಬೆಳಕು

 

"...ಆ ಬೆಳಕೇ ಪ್ರತಿ ಮನುಷ್ಯನಿಗೂ ಬೆಳಕನ್ನು ಕೊಡುವಂಥದು" - ಯೋಹಾನ 1:9

 

ಹಳ್ಳಿಯಲ್ಲಿರುವ ಒಂದು ಮನೆಗೆ 40 ವರ್ಷಗಳಿಂದ ವಿದ್ಯುತ್ ಇರಲಿಲ್ಲ. ಅವರು ಎಷ್ಟೇ ಪ್ರಯತ್ನಿಸಿದರೂ ಆ ಮನೆಗೆ ವಿದ್ಯುತ್ ಸಿಗಲೇ ಇಲ್ಲ. ಆದ್ದರಿಂದ ಅವರು ತಮ್ಮ ಮನೆಗೆ ಬೆಳಕು ಸಿಗಬೇಕೆಂದು ಹೋರಾಡಿ ಪ್ರಾರ್ಥಿಸಲು ಪ್ರಾರಂಭಿಸಿದರು. ಅವರು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಆಲಯಕ್ಕೆ ಹೋಗಿ ಪ್ರಾರ್ಥಿಸಿದರು. ಪ್ರಾರ್ಥನೆಯೊಂದಿಗೆ, ಅವರು ಆ ಪ್ರದೇಶದಲ್ಲಿರುವ ಕಲೆಕ್ಟರರ ಕಚೇರಿಗೆ ಹೋಗಿ ಅರ್ಜಿಯನ್ನು ಸಲ್ಲಿಸಿದರು. ಈ ಅರ್ಜಿಯು ಹೇಗಾದರೂ ಕಲೆಕ್ಟರರ ಗಮನಕ್ಕೆ ಬರಬೇಕೆಂದು ಅವರು ಬಹಳಷ್ಟು ಪ್ರಾರ್ಥಿಸಿದರು. ಕಲೆಕ್ಟರರ ಆದೇಶದ ಮೇರೆಗೆ, ಕೆಲವೇ ದಿನಗಳಲ್ಲಿ ಆ ಪಟ್ಟಣಕ್ಕೆ ಒಬ್ಬ ಲೈನ್ ಮ್ಯಾನ್ ಅನ್ನು ನೇಮಿಸಲಾಯಿತು. ಅವರು ವಿಚಾರಿಸಿದಾಗ, ಸಹೋದರಿಯ ಮನೆಗೆ ವಿದ್ಯುತ್ ಇಲ್ಲ ಎಂದು ತಿಳಿದುಕೊಂಡರು ಮತ್ತು ಅವರು ಮೂರು ತಿಂಗಳಲ್ಲಿ ಮನೆಗೆ ವಿದ್ಯುತ್ ಸಿಗುವಂತೆ ವ್ಯವಸ್ಥೆ ಮಾಡಿದರು. 40 ವರ್ಷಗಳಿಂದ ಕತ್ತಲೆಯಲ್ಲಿ ವಾಸಿಸುತ್ತಿದ್ದ ಸಹೋದರಿಯ ಕುಟುಂಬವು ವಿದ್ಯುತ್ ಸಂಪರ್ಕದಿಂದಾಗಿ ಬೆಳಕನ್ನು ನೋಡಿ ತುಂಬಾ ಸಂತೋಷಪಟ್ಟರು.

 

ಸತ್ಯವೇದದಲ್ಲಿ, ಕೊರ್ನೇಲ್ಯ ಎಂಬ ಹೆಸರುಗೊಂಡ ವ್ಯಕ್ತಿ ಸಿಸೇರಿಯಾ ನಗರದಲ್ಲಿ ವಾಸಿಸುತ್ತಿದ್ದರು. ಅವರು ದೈವಭಕ್ತಿಯುಳ್ಳವರು, ತಮ್ಮ ಇಡೀ ಮನೆಯೊಂದಿಗೆ ದೇವರಿಗೆ ಭಯಪಡುವವರಾಗಿದ್ದು ಜನರಿಗೆ ಬಹಳವಾಗಿ ದಾನಧರ್ಮ ಮಾಡಿ, ಯಾವಾಗಲೂ ದೇವರನ್ನು ಪ್ರಾರ್ಥಿಸುತ್ತಿದ್ದರು. ಈ ಸಂದರ್ಭದಲ್ಲಿ ಕ್ರಿಸ್ತನ ಬೆಳಕು ಅವರ ಜೀವನದಲ್ಲಿ ಅವರನ್ನು ಭೇಟಿಯಾಯಿತು. ಕ್ರಿಸ್ತನೇ ನಿಜವಾದ ಬೆಳಕು ಎಂದು ಅವರು ಕಂಡುಕೊಂಡರು. ಕ್ರಿಸ್ತನ ಬೆಳಕು ನಮ್ಮಲ್ಲಿದ್ದರೆ ಮಾತ್ರ ನಾವು ಸರಿಯಾದ ಮಾರ್ಗವನ್ನು ಕಂಡುಕೊಳ್ಳುತ್ತೇವೆ. 

 

ನನ್ನ ಪ್ರಿಯರಾದ ದೇವರ ಮಕ್ಕಳೇ! ಸೂರ್ಯನ ಸುತ್ತ ಸುತ್ತುವ ಚಂದ್ರನು ಸೂರ್ಯನ ಬೆಳಕನ್ನು ಪಡೆದು ಇಡೀ ಜಗತ್ತಿಗೆ ಬೆಳಕನ್ನು ನೀಡುವಂತೆಯೇ, ನಾವು ಕೂಡ ಕ್ರಿಸ್ತನ ಬೆಳಕನ್ನು ಪಡೆದು ಇಡೀ ಜಗತ್ತಿಗೆ ಬೆಳಕನ್ನು ನೀಡೋಣ. ಚಂದ್ರನು ಸೂರ್ಯನಿಂದ ದೂರ ಹೋದರೆ, ನಾವು ಸೂರ್ಯನ ಬೆಳಕನ್ನು ಪಡೆಯಲು ಸಾಧ್ಯವಿಲ್ಲ. ಅದೇ ರೀತಿ, ನಮಗೆ ಕ್ರಿಸ್ತನ ಬೆಳಕು ಇಲ್ಲದಿದ್ದರೆ, ನಾವು ಇತರರಿಗೆ ಬೆಳಕನ್ನು ನೀಡಲು ಸಾಧ್ಯವಿಲ್ಲ. ನಾವು ಕತ್ತಲೆಯಲ್ಲಿರುವಾಗ, ನಮ್ಮ ಬಟ್ಟೆಗಳ ಮೇಲಿನ ಕೊಳೆ ನಮಗೆ ತಿಳಿಯುವುದಿಲ್ಲ. ಬೆಳಕು ಬೆಳಗಿದಾಗ ಮಾತ್ರವೇ, ಕೊಳೆ ಗೋಚರಿಸುತ್ತದೆ. ಕ್ರಿಸ್ತನ ಬೆಳಕು ನಮ್ಮಲ್ಲಿ ಬೀಳುವಾಗ ಮಾತ್ರವೇ, ನಾವು ಇತರರಿಗೆ ಬೆಳಕು ಕೊಡುವವರಾಗಿಯೂ ಮತ್ತು ಕತ್ತಲೆಯಲ್ಲಿರುವವರಿಗೆ ಬೆಳಕನ್ನು ತೋರಿಸುವವರಾಗಿಯೂ ನಾವು ಪ್ರಕಾಶಿಸಬಹುದು.

- S. ಸಿಂಧು

 

ಪ್ರಾರ್ಥನಾ ಅಂಶ:

ಶಾಖೆ ಕಚೇರಿಗಳಲ್ಲಿ ನಡೆಯುವ ಸೇವೆಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)