ಧೈನಂದಿನ ಧ್ಯಾನ(Kannada) – 22.12.2024 (Kids Special)
ಧೈನಂದಿನ ಧ್ಯಾನ(Kannada) – 22.12.2024 (Kids Special)
HAPPY CHRISTMAS
"ಈ ದಿನ ದಾವೀದನ ನಗರದಲ್ಲಿ ನಿಮಗೆ ರಕ್ಷಕನು ಜನಿಸಿದನು, ಅವನು ಕರ್ತನಾದ ಕ್ರಿಸ್ತನು" - ಲೂಕ 2:11
ಮುದ್ದು ಪುಟಾಣಿಗಳೇ! ಇನ್ನು ಎರಡು ದಿನಗಳಲ್ಲಿ ಯಾವ ದಿನ ಬರುತ್ತೆ ಗೊತ್ತಾ? ಯೇಸಪ್ಪನ ಜನ್ಮದಿನ. ಅದೆಲ್ಲಾ ನಮಗೆ ಗೊತ್ತು. ಸುಂದರವಾದ ಡ್ರೆಸ್ ಹಾಕಿಕೊಂಡು, ಮೇಕಪ್ ಮಾಡಿಕೊಂಡು ಸ್ವೀಟ್ ನೊಂದಿಗೆ ಕ್ರಿಸ್‌ಮಸ್ ಆಚರಿಸಲಿದ್ದೇವೆ ಎಂದು ಹೇಳ್ತಾ ಇರೋದು ಚೆನ್ನಾಗಿ ಗೊತ್ತಾಗುತ್ತಿದೆ. ಇವತ್ತು ಕಥೆ ಕೇಳೋಕೆ ಆಸೆ ಇಲ್ವಾ? ಓಹ್... ತುಂಬಾ ಆಸೆಯಿಂದ ಇದ್ದೀರಾ? O.k.. O.k.. ಕಥೆ ಹೇಳುತ್ತೇನೆ ಕೇಳಿ.
ಚಳಿಯಲ್ಲಿ ನಡುಗುತ್ತಾ, ತುಂಬಾ ಕತ್ತಲಾದರೂ, ನಿದ್ದೆಯೂ ಬಾರದೆ, ಮೇ.. ಮೇ.. ಮೇ.. ಎಂಬ ಕುರಿಗಳ ಶಬ್ದದಲ್ಲಿ ಕುರುಬರು ಚಿಂತಾಕ್ರಾಂತರಾಗಿದ್ದರು. ಡಿಸೆಂಬರ್‌ನ ಚಳಿಯಲ್ಲಿ ಮನೆಯ ಒಳಗಡೆಯೇ ಮಲಗಲು ಆಗೋದಿಲ್ಲ, ನಿಜ ಅಲ್ವಾ ಪುಟಾಣಿಗಳೇ! ಆದರೆ ಕುರಿಗಳನ್ನು ಕಾಯುವ ಕುರುಬರು ದುಃಖವನ್ನು ಹೊರತುಪಡಿಸಿ ಸಂತೋಷವನ್ನು ಅನುಭವಿಸಿರುವುದಿಲ್ಲ. ಯಾರೂ ಮೆಚ್ಚಿಕೊಳ್ಳದ ಮತ್ತು ಯಾರೂ ಕಂಡುಕೊಳ್ಳದ ಕುರುಬರನ್ನು ಪರಲೋಕವು ಕಂಡುಕೊಂಡಿತು. ಕುರಿ ಕಾಯುವವನೇ, ಕುರಿಗಳನ್ನು ಚೆನ್ನಾಗಿ ನಡೆಸಿಕೊಂಡು ಹೋಗು... ನನ್ನ ಹೊಲದಲ್ಲಿ ಏನನ್ನೂ ಮೇಯಲು ಬಿಟ್ಟು ಬಿಡಬೇಡ ಎಂಬ ಎಚ್ಚರಿಕೆಯ ಮಾತುಗಳನ್ನು ಕೇಳಿದ ಕುರುಬರಿಗೆ ಆ ದಿನ ಏನಾಯಿತು ಗೊತ್ತಾ?
ನೀವು ಯಾರಾದರೂ ಏಂಜೆಲ್ ಅನ್ನು ನೋಡಿದ್ದೀರಾ? ವಾವ್... ನಿಜವಾಗ್ಲೂ.. ಕನಸಿನಲ್ಲಿ ನೋಡುದ್ರಾ? ಕೆಲವರು ಟಿವಿಯಲ್ಲಿ ಓಹ್... ಕ್ರಿಸ್‌ಮಸ್ ಕಾರ್ಯಕ್ರಮದಲ್ಲಿ ಸರಿ.. ಸರಿ.. ಯಾರೂ ನೇರವಾಗಿ ನೋಡಿಲ್ಲ ಹೌದು ತಾನೇ! ಆದರೆ ಕುರುಬರು ಹೊಲದಲ್ಲಿ ಮಲಗಿದ್ದಾಗ ಮೊಟ್ಟ ಮೊದಲು ದೇವದೂತನೇ ಅವರಿಗೆ ಯೇಸುವಿನ ಜನನದ ಸುದ್ದಿಯನ್ನು ಹೇಳಿದರು. ಎಂಥಾ ಆಶ್ಚರ್ಯ ನೋಡುದ್ರಾ? ನಿಮ್ಮ ಮನೆಯಲ್ಲಿ ಪುಟ್ಟ ಮಗು ಹುಟ್ಟಿದರೆ ಕುಟುಂಬದ ಪ್ರಮುಖರಿಗೆ ಮಾತ್ರ ಹೇಳುತ್ತೇವೆ. ಆದರೆ ದೇವರು ಕುರುಬರಿಗೆ ಪ್ರಪಂಚದ ರಕ್ಷಕನ ಜನನದ ಸುದ್ದಿಯನ್ನು ಹೇಳಲು ಆಜ್ಞಾಪಿಸಿದರು. ಎಲ್ಲರೂ ಅಲ್ಪವಾಗಿ ಎಣಿಸಲ್ಪಟ್ಟ ಕುರುಬರು ದೇವರ ದೃಷ್ಟಿಯಲ್ಲಿ ಎಷ್ಟು ಅಮೂಲ್ಯರಾಗಿ ಮಾರ್ಪಟ್ಟರು. ನೋಡುದ್ರಾ? ಯೇಸುವಿನ ಜನನದ ಸುದ್ದಿಯನ್ನು ಕೇಳಿದ ಕುರುಬರು, ಅಯ್ಯಯ್ಯೋ ನನಗೆ ದಾರಿ ಗೊತ್ತಿಲ್ಲವಲ್ಲಾ, ಬುದ್ಧಿ ಇಲ್ಲವಲ್ಲಾ, ಯೇಸುವನ್ನು ಹೇಗೆ ನೋಡುವುದು ಎಂದು ಸುಮ್ಮನಾಗದೇ ಕರ್ತನು ನಮಗೆ ತಿಳಿಸಿದ ಈ ಗ್ರಾಮವನ್ನು ನಾವು ನೋಡಬೇಕು ಎಂದು ಹೇಳಿ, ಬೆತ್ಲೆಹೇಮಿಗೆ ಹೋಗಿ ಬಾಲಕನಾದ ಯೇಸುವಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು. ದೇವದೂತರಿಂದ ತಿಳಿಸಲ್ಪಟ್ಟ ಶುಭಸಂದೇಶವನ್ನು ಎಲ್ಲರಿಗೂ ಸಾರಿದರು. ಅವರು ಹೇಳಿದಂತೆಯೇ ನೋಡಿದಾಗ ತುಂಬಾ ಆಶ್ಚರ್ಯಪಟ್ಟು ದೇವರನ್ನು ಸ್ತುತಿಸಿ ಮಹಿಮೆಪಡಿಸಿದರು. ಸಾಮಾನ್ಯ ಕುರುಬರಿಂದ ದೇವರು ಎಷ್ಟು ದೊಡ್ಡ ಯೋಜನೆಯನ್ನು ಬಹಿರಂಗಪಡಿಸಿದ್ದಾರೆ.
ಪ್ರೀತಿಯ ಮುದ್ದು ಮಕ್ಕಳೇ! ಇದು ಕಥೆಯಲ್ಲ, ಸತ್ಯವೇದದಲ್ಲಿ ಬರೆದಿರುವ ವಿಷಯಗಳು. ನೀವೂ ಸಹ ನೆನೆಸಬಹುದು. ನನ್ನನ್ನು ವಿಚಾರಿಸಲು ಯಾರೂ ಇಲ್ಲ. ನಾವು ಬಡವರು ಬಹಿಷ್ಕೃತರು ಎಂದು. ಯೇಸು ನಿಮಗಾಗಿಯೂ ಹುಟ್ಟಿದ್ದಾರೆ. ಪರಲೋಕದ ದೇವರ ಕಣ್ಣುಗಳು ಕುರುಬರ ಮೇಲೆ ಬಿದ್ದಂತೆಯೇ ಆತನು ನಿಮ್ಮ ಮೇಲೆಯೂ ದೃಷ್ಟಿ ಇಟ್ಟಿದ್ದಾರೆ. ಯೇಸು ನಿಮ್ಮ ಹೃದಯದಲ್ಲಿ ಹುಟ್ಟಲು ಆಸೆಯಿಂದ ಕಾಯುತ್ತಿದ್ದಾರೆ. ಸ್ಥಳ ಕೊಟ್ಟು ನೋಡಿ. ನೀವು ಸಂತೋಷದ ಜೀವನವನ್ನು ಅನುಭವಿಸುತ್ತೀರಿ. O.K ರೆಡಿ ತಾನೇ! Wish you a happy Christmas ಮಕ್ಕಳೇ!
- Mrs. ಜೀವಾ ವಿಜಯ್
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482