ಧೈನಂದಿನ ಧ್ಯಾನ(Kannada) – 09.11.2024 (Gospel Special)
ಧೈನಂದಿನ ಧ್ಯಾನ(Kannada) – 09.11.2024 (Gospel Special)
ಕರ್ತನಿಗೆ ಸೇವೆ ಮಾಡು
"ನೀನು..., ಸುವಾರ್ತಿಕನ ಕೆಲಸವನ್ನು ಮಾಡು, ನಿನ್ನ ಸೇವೆಯನ್ನು ಸಂಪೂರ್ಣ ಮಾಡು" - 2 ತಿಮೊಥೆಯ 4:5
ಯೇಸುಕ್ರಿಸ್ತನು, ಪರಲೋಕಕ್ಕೆ ಏರುವ ಮೊದಲು ಕೊಟ್ಟ ಕೊನೆಯ ಪ್ರಾಮುಖ್ಯವಾದ ಆಜ್ಞೆ, "ಲೋಕದ ಕಟ್ಟಕಡೆಗೆ ಹೋಗಿ ಸುವಾರ್ತೆಯನ್ನು ಸಾರಿರಿ" ಎಂಬುದೇ! ದೇವರು ದೇವದೂತರಿಗೂ ಕೊಡದಂತಹ ಕೆಲಸವನ್ನು ತನ್ನ ಮಕ್ಕಳಾದ ನಮಗೆ ಕೊಟ್ಟಿದ್ದಾರೆ. "ನಿನಗೆಲ್ಲಾ ಸೇವೆ ಮಾಡುವ ಅರ್ಹತೆ ಇಲ್ಲ, ಮಾಡಿದರೂ ಯಾವ ಪ್ರತಿಫಲವೂ ಇಲ್ಲ, ನಿನ್ನಿಂದ ಸಾಧ್ಯವಿಲ್ಲ" ಎಂದೆಲ್ಲಾ ಅನೇಕ ಸುಳ್ಳುಗಳನ್ನು ಹೆಣೆದು ಬಿಡುತ್ತಾನೆ ಸೈತಾನನು. ಪ್ರಿಯರೇ! ನಮ್ಮ ಅರ್ಹತೆಯು ದೇವರಿಂದ ಬಂದಿರುವುದು. ದೇವರ ಹೆಸರಿನಲ್ಲಿ ಆತ್ಮಗಳ ಮೇಲಿನ ಪ್ರೀತಿಯಲ್ಲಿ, ನಂಬಿಕೆಯಿಂದ ಪ್ರಾರ್ಥನೆಯೊಂದಿಗೆ ಸುವಾರ್ತೆ ಸೇವೆಯನ್ನು ಪ್ರಾರಂಭಿಸಿದರೆ, ನಾವಲ್ಲ, ನಮ್ಮೊಂದಿಗೆ ಪವಿತ್ರಾತ್ಮನೇ ಇದ್ದು ಕಾರ್ಯ ಮಾಡುತ್ತಾರೆ. ಖಚಿತವಾಗಿ ಪ್ರತಿಫಲವನ್ನು ಕಾಣುತ್ತೇವೆ!
ಒಂದು ಸಾಕ್ಷಿ. ಅನ್ಯ ಮಾರ್ಗದಲ್ಲಿ ತೀವ್ರವಾಗಿರುವ ಒಬ್ಬ ಒಳ್ಳೆಯ ಸೌಕರ್ಯವುಳ್ಳ ವ್ಯಾಪಾರಿ, ಈರೋಡಿನಿಂದ ನಮ್ಮ ಮನೆಗೆ ಬರುತ್ತಾರೆ. ಅವರು ಆಗಾಗ ನಮ್ಮೊಂದಿಗೆ ತಮ್ಮ ಸಮಸ್ಯೆಗಳನ್ನು ಮತ್ತು ಕಾಯಿಲೆಗಳನ್ನು ಹಂಚಿಕೊಳ್ಳುತ್ತಾರೆ. ಒಂದು ದಿನ ನಾನು ಹಸ್ತಪ್ರತಿ ಒಂದನ್ನು ಕೊಟ್ಟೆ. ನಂತರ ಪ್ರಾರ್ಥಿಸುತ್ತಾ ಇದ್ದೆ. ಎರಡು ವರ್ಷಗಳ ನಂತರ ಅವರು ನಮ್ಮ ಮನೆಗೆ ಬಂದು "ಹಸ್ತಪ್ರತಿಯನ್ನು ಓದಿದ ನಂತರ, ನಿಮ್ಮ ದೇವರೇ ನಿಜವಾದ ದೇವರು ಎಂದು ನನಗೆ ತಿಳಿಯಿತು, ನನ್ನ ಮನದಲ್ಲಿ ತುಂಬಾ ಸಮಾಧಾನ ಉಂಟಾಗಿದೆ, ನಾನು ನನ್ನ ದೇವಸ್ಥಾನಗಳಿಗೆ ಹೋಗುವುದನ್ನು ನಿಲ್ಲಿಸಿಬಿಟ್ಟೆ" ಎಂದು ಸಂತೋಷದಿಂದ ಹೇಳಿದರು. ಒಂದು ಆತ್ಮವು ಯೇಸುವನ್ನು ತಿಳಿದುಕೊಂಡಿತು! ಹಲ್ಲೇಲೂಯಾ!
ಇನ್ನೊಂದು ಸಾಕ್ಷಿ, ನಮ್ಮ ಮನೆಗೆ ಭಿಕ್ಷೆ ಬೇಡುವ ಅನ್ಯ ಮಾರ್ಗದ ವಯಸ್ಸಾದ ಮಹಿಳೆ ಒಬ್ಬರು ಬರುವಾಗೆಲ್ಲಾ, ಸುವಾರ್ತೆ ಹೇಳಿ, ಸಣ್ಣ ಪ್ರಾರ್ಥನೆಗಳನ್ನು ಮಾಡಲು ಕಲಿಸಿಕೊಟ್ಟೆ. ಕೆಲವೇ ವಾರಗಳಲ್ಲಿ, ಯೇಸುವನ್ನು ಸ್ವೀಕರಿಸಿದ ಆ ಮಹಿಳೆಯ ಜೀವನದಲ್ಲಿ ಅನೇಕ ಅದ್ಭುತಗಳು ನಡೆದವು, ಒಂದು ಕ್ರೈಸ್ತ ವೃದ್ಧಾಶ್ರಮದಲ್ಲಿ ಯಾರ ಮೂಲಕವೋ ಅಲ್ಲಿ ಉಳಿಯಲು ಸ್ಥಳ ದೊರೆಯಿತು. ದೇವರ ಕೃಪೆ ದೊಡ್ಡದು!
ಪ್ರಿಯರೇ! ಸ್ಥಿರಚಿತ್ತರಾಗಿಯೂ ನಿಶ್ಚಲರಾಗಿಯೂ ಇರ್ರಿ. ನೀವು ಕರ್ತನಲ್ಲಿ ಪಡುವ ಪ್ರಯಾಸವು ನಿಷ್ಪಲವಾಗುವದಿ ಲ್ಲವೆಂದು ತಿಳಿದು ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕ್ತಿಯಿಂದ ಮಾಡುವವರಾಗಿರ್ರಿ. (1 ಕೊರಿಂಥ 15 : 58) "ನಿಮಗೆ, ಸೇವೆ ಮಾಡಲು ನನ್ನನ್ನೇ ಕೊಟ್ಟುಬಿಟ್ಟೆ ನನ್ನನ್ನು ಅಂಗೀಕರಿಸಿ" ಎಂಬ ಹಾಡಿನ ಸಾಲುಗಳೊಂದಿಗೆ, ನೀವು ಇರುವ ಸ್ಥಳದಲ್ಲಿ ಸುವಾರ್ತೆಯನ್ನು ಸಾರಲು ಈಗಲೇ ನಿಮ್ಮನ್ನು ಸಮರ್ಪಿಸಿ ಬಿಡಿ.
- Mrs. ಗೀತಾ ರಿಚರ್ಡ್
ಪ್ರಾರ್ಥನಾ ಅಂಶ:
25000 ಗ್ರಾಮಗಳಲ್ಲಿ ಸುವಾರ್ತೆ ಸಾರುವ ಯೋಜನೆಗಾಗಿ ಸುಗಮ ಹವಾಮಾನಕ್ಕಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482