Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 22.10.2024

ಧೈನಂದಿನ ಧ್ಯಾನ(Kannada) – 22.10.2024

 

ಒಂದು ತಪ್ಪು ಸಂಕೇತ

 

"ನಿನ್ನನ್ನು ಕೈಬಿಡುವದಿಲ್ಲ, ತೊರೆಯುವದಿಲ್ಲ…" - ಯೆಹೋಶುವಾ 1: 6

 

ಫೆಬ್ರವರಿ 20, 1962 ರಂದು ನಿಖರವಾಗಿ 9:47 ಗಂಟೆಗೆ, ಬಾಹ್ಯಾಕಾಶ ನೌಕೆಯು ಹೊತ್ತಿ ಉರಿಯುತ್ತಿದ್ದ ಜ್ವಾಲೆಯ ನಡುವೆ ಹೊಗೆಯನ್ನು ಕಕ್ಕುತ್ತಾ ಜಾನ್ ಗಿಲ್ಲನ್ ಎಂಬ ಬಾಹ್ಯಾಕಾಶದ ಸಂಶೋಧಕರನ್ನು ಹೊತ್ತುಕೊಂಡು ಹೊರಟಿತು. ಅವರನ್ನು ಹೊತ್ತ ಹೊಗೆಯ ಆ ವಾಹನದಲ್ಲಿ ಅವರು ಮಾತ್ರವೇ ಒಂಟಿಯಾಗಿ ಪ್ರಯಾಣ ಮಾಡಿದರು.

  

ಆ ಬಾಹ್ಯಾಕಾಶ ನೌಕೆ ಭೂಮಿಯನ್ನು ಮೂರು ಬಾರಿ ಸುತ್ತಿ, ನಾಲ್ಕು ಗಂಟೆಗಳಲ್ಲಿ 80,000 ಮೈಲುಗಳನ್ನು ಕ್ರಮಿಸಿ, ಚಿತ್ರಗಳನ್ನು ತೆಗೆದುಕೊಂಡು ಭೂಮಿಗೆ ಮರಳಿತು. ವಾಹನ ಕೆಳಗಿಳಿಯುತ್ತಿದ್ದಂತೆ ಅದನ್ನು ನಿಯಂತ್ರಿಸುತ್ತಿದ್ದ ಸಂಶೋಧಕರಿಗೆ ಅಲರ್ಟ್ ಬಂದಿದೆ. ಅದರಂತೆ, "ಅಗ್ನಿ ಕವಚವು ಬಾಹ್ಯಾಕಾಶ ನೌಕೆಯಿಂದ ತಾನಾಗಿಯೇ ಹೊರಬರುತ್ತಿದೆ"! ನಿಮಿಷಗಳು ವೇಗವಾಗಿ ಸಾಗುತ್ತಿದ್ದವು. ನಾಸಾ ವಿಜ್ಞಾನಿಗಳು ಏನು ಮಾಡಬೇಕೆಂದು ತೋಚಲಿಲ್ಲ. ಐದು ನಿಮಿಷಗಳ ನಂತರ, ಜಾನ್ ಅವರ ಧ್ವನಿ ಅವರ ರೇಡಿಯೊದಲ್ಲಿ ಬಂದಿತು. ಜಾನ್ ಸುರಕ್ಷಿತವಾಗಿ ಭೂಮಿಗೆ ಬರುತ್ತಿದ್ದರು. ಅಲ್ಲಿದ್ದವರ ಸಂತೋಷವು ಅಪರಿಮಿತವಾಗಿತ್ತು. ಆಗ ಅದು ತಪ್ಪು ಸಂಕೇತ (ಕಪ್ಪು ರಂಧ್ರ) ಎಂದು ತಿಳಿಯಿತು. ಜಾನ್ ಸುರಕ್ಷಿತವಾಗಿ ಕೆಳಗಿಳಿದರು. 

  

ಸತ್ಯವೇದದಲ್ಲಿ ಯೋಸೇಫನ ಬಗ್ಗೆ ಸಹೋದರರು ಈ ರೀತಿ ಯೋಚಿಸಿದ್ದಾರೆ. ಅವನ ಕಥೆ ಮುಗಿಯಿತು ಎಂದು! ಯೋಸೇಫನು ಕೂಡ ಇದೇ ಪರಿಸ್ಥಿತಿಯಲ್ಲಿದ್ದರು. ಅವನ ಸಹೋದರರು ಅವನನ್ನು ಎತ್ತಿಕೊಂಡು ಒಂದು ಹಳ್ಳದಲ್ಲಿ ಎಸೆದರು. ಅವರಿಗೆ ಯಾರೊಂದಿಗೂ ಸಂಪರ್ಕವಿಲ್ಲದೇ ಹೋಯಿತು. ನಂತರ ಅವರು ಅಪರಿಚಿತ ವ್ಯಾಪಾರಿಗಳಿಗೆ ಮಾರಾಟ ಮಾಡಿದರು. ಅವರು ಅನೇಕ ಕಷ್ಟಗಳನ್ನು ಅನುಭವಿಸಿದರು.

 

ಆದರೆ ಒಂದು ದಿನ ಬಂದಿತು. ಕರ್ತನು ಅವರನ್ನು ಎಲ್ಲಕ್ಕಿಂತ ಹೆಚ್ಚಾಗಿ ಉನ್ನತೀಕರಿಸಿದರು. ಯೋಸೇಫನಿಗೆ ತನ್ನ ಜೀವನದಲ್ಲಿ ಊಹಿಸಿರದ ಉನ್ನತಿಯು ಸಿಕ್ಕಿತು . ಬಹುಶಃ ನೀವು ಕೂಡ ಬಹು ಕಠಿಣವಾದ ಮಾರ್ಗದಲ್ಲಿ ನಡೆದು ಹೋಗುತ್ತಿದ್ದೀರಾ? ನಿಮ್ಮ ನೋವು ಬಲ್ಲವರು ಯಾರೂ ಇಲ್ಲವೇ? ನೀವು ಕೂಗುವ ಶಬ್ದವು ದೇವರಿಗೂ ಕೇಳಲಿಲ್ಲ ಎಂದು ಭಾವಿಸುತ್ತಿದ್ದೀರಾ? ನಿಮ್ಮ ಜೀವನವು ನಿಮ್ಮನ್ನೂ ಮೀರಿ ಹಾದುಹೋಗುತ್ತಿದೆ ಎಂದು ಭಾವಿಸುತ್ತಿದ್ದೀರಾ? ದೇವರು ನನ್ನನ್ನು ಕೈಬಿಟ್ಟಿದ್ದಾರೆ ಎಂದು ಯೋಚಿಸುತ್ತಿದ್ದೀರಾ? ನಮ್ಮ ಒಂಟಿತನ ಮತ್ತು ದುಃಖದ ಸಮಯದಲ್ಲಿ ದೇವರು ನಮ್ಮಿಂದ ದೂರವಾಗಿದ್ದಾರೆ ಎಂದು ನಾವು ಭಾವಿಸಿದರೂ, "ನಿನ್ನನ್ನು ಕೈಬಿಡುವದಿಲ್ಲ, ತೊರೆಯುವದಿಲ್ಲ" ಎಂದು ಹೇಳಿದ ದೇವರು ನಮ್ಮನ್ನು ಬಿಟ್ಟು ಹೋಗದೆ ಇನ್ನೂ ನಮ್ಮೊಂದಿಗೇ ಇದ್ದಾರೆ. ಆಮೆನ್ 

- C. ಪಾಲ್ ಜೆಬಸ್ಟಿನ್ ರಾಜ್

 

ಪ್ರಾರ್ಥನಾ ಅಂಶ:

ನಮ್ಮ ಯೌವನಸ್ಥರ ಕೂಟದಲ್ಲಿ ಭಾಗವಹಿಸಿದ ಯುವಕರು ತೆಗೆದುಕೊಂಡ ನಿರ್ಧಾರದಲ್ಲಿ ದೃಢವಾಗಿರುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)