ಧೈನಂದಿನ ಧ್ಯಾನ(Kannada) – 16.04.2025
ಧೈನಂದಿನ ಧ್ಯಾನ(Kannada) – 16.04.2025
ಮುಳ್ಳಿನ ಗಿಡ ಏಕೆ?
"ಮುಳ್ಳಿಗೆ ಬದಲಾಗಿ ತುರಾಯಿಯೂ... ಬೆಳೆಯುವವು;..." - ಯೆಶಾಯ 55:13
ಜನನಿಬಿಡವಾದ ದೊಡ್ಡ ನಗರದಲ್ಲಿ ಒಬ್ಬ ಸಾಹುಕಾರರಿದ್ದರು. ಅವರ ಸ್ವಂತ ಭೂಮಿಯನ್ನು ಉತ್ತಮ ಉದ್ಯಾನವನವನ್ನಾಗಿ ಮಾಡಬೇಕೆಂದು ಯೋಚಿಸಿ ಅನೇಕ ಮರಗಳು ಮತ್ತು ಗಿಡಗಳನ್ನು ನೆಟ್ಟರು. ಅದು ಸುಂದರವಾಗಿ ಕಾಣುತ್ತಿತ್ತು. ಆದರೆ ಅವರು ತೋಟದ ಮಧ್ಯದಲ್ಲಿ ಒಂದು ಮುಳ್ಳಿನ ಗಿಡವನ್ನು ಇಟ್ಟರು. ಇದನ್ನು ನೋಡಿದ ಅನೇಕರಿಗೆ ಒಂದು ಪ್ರಶ್ನೆ, ಸುಂದರವಾದ ಹೂಬಿಡುವ ಸಸ್ಯಗಳು ಮತ್ತು ಹಣ್ಣಿನ ಮರಗಳು ಕಣ್ಣಿಗೆ ಕಟ್ಟುವಂತೆ ಇರುವಾಗ ಈ ಮುಳ್ಳು ಗಿಡ ಏಕೆ? ಎಂದು. ಇದನ್ನು ಕೇಳಿದ ತೋಟದ ಮಾಲೀಕರು ಹೇಳಿದರು, "ನಾನು ಅದನ್ನು ಒಂದು ಕಾರಣಕ್ಕಾಗಿಯೇ ಇಟ್ಟಿದ್ದೇನೆ" ಎಂದು! ಒಂದು ದಿನ ಬಂತು. ಅವರು ಯೇಸುವನ್ನು ಶಿಲುಬೆಗೇರಿಸಲಿದ್ದಾರೆ. ಅವರಿಗೆ ಒಂದು ಮುಳ್ಳಿನ ಕಿರೀಟವನ್ನು ಇಡಬೇಕು ಎಂದು ಹೇಳಿ ಒಂದು ಮುಳ್ಳನ್ನು ಹುಡುಕುತ್ತಾ ಬಂದರು. ಅದು ಸಾಮಾನ್ಯ ಮುಳ್ಳಾಗಿರಲಿಲ್ಲ, ಹಣೆಯೊಳಗೆ ನುಗ್ಗಿ ತಲೆಗೆ ಹರಿಯಬಲ್ಲ ಮುಳ್ಳು ಈ ಶ್ರೀಮಂತನ ತೋಟದಲ್ಲಿ ಇರುವುದನ್ನು ಕಂಡು ತೆಗೆದುಕೊಂಡು ಹೋದರು. ಇದನ್ನು ಕೇಳಿ ತೋಟಗಾರನಿಗೆ ನೋವಾಯಿತು. ನಾನು ಯಾವತ್ತೋ ಈ ಮುಳ್ಳು ಗಿಡವನ್ನು ಕಿತ್ತು ಬಿಸಾಡಬೇಕಿತ್ತು. ಅನೇಕ ಜನರು ಹೇಳಿದರೂ ನಾನು ಕೇಳಲಿಲ್ಲ. ಆದರೆ ಈಗ, "ಇದು ನನ್ನ ದೇವರನ್ನು ನೋಯಿಸುತ್ತಿದೆ" ಎಂದು ಅತ್ತರು.
ಯೇಸು 12 ಜನರನ್ನು ಆರಿಸಿಕೊಂಡ ಉದ್ದೇಶವೇನೆಂದರೆ, ಅವರು ತನ್ನೊಂದಿಗಿಯೇ ಇರುವುದಕ್ಕಾಗಿಯೂ ಮತ್ತು ಪ್ರಸಂಗ ಮಾಡುವುದಕ್ಕಾಗಿಯೇ. ಹನ್ನೆರಡು ಜನರಲ್ಲಿ ಒಬ್ಬನು ಅವರಿಗೆ ದ್ರೋಹ ಬಗೆದ ಇಸ್ಕರಿಯೋತ ಯೂದನಾಗಿದ್ದನು. ಈ ಯೂದನು ಹಣದ ದುರಾಸೆಯಿಂದ 30 ಬೆಳ್ಳಿ ನಾಣ್ಯಗಳಿಗಾಗಿ ಅವರನ್ನು ತೋರಿಸಿಕೊಟ್ಟನು. ಮೂರುವರೆ ವರ್ಷಗಳ ಕಾಲ ತನ್ನೊಂದಿಗಿದ್ದ ವ್ಯಕ್ತಿಯೇ ತನಗೆ ಕಂಟಕವಾಗಿ ಪರಿಣಮಿಸಿದ್ದ. ಅವರಿಗೆ ಹತ್ತಿರವಾಗಿದ್ದ ಪೇತ್ರನೇ ಅವರನ್ನು ನಿರಾಕರಿಸಿದನು.
ಇದನ್ನು ಓದುತ್ತಿರುವ ಪ್ರೀತಿಯ ಸಹೋದರನೇ ಸಹೋದರಿಯೇ, ಯೂದನು ಯೇಸುವಿಗೆ ಒಂದೇ ಬಾರಿ ದ್ರೋಹ ಮಾಡಿದನು. ಆದರೆ ನಾವು ಪ್ರತಿದಿನ ನಮ್ಮ ಕಾರ್ಯಗಳು ಮತ್ತು ಮಾತುಗಳಿಂದ ದೇವರನ್ನು ನಿರಾಕರಿಸುತ್ತಿದ್ದೇವೆಯೇ? ಆತನು ನಮ್ಮನ್ನು ಫಲಕೊಡಲು ಆರಿಸಿಕೊಂಡಿದ್ದಾರೆ. ನಮಗೂ ನಮ್ಮದೇ ಆದ ಒಂದು ಸ್ಥಾನ ಕೊಟ್ಟಿದ್ದಾರೆ. ಆದರೆ ನಾವು, ಪ್ರತಿ ಬಾರಿಯೂ ಯೇಸುವಿಗೆ ದ್ರೋಹ ಬಗೆದು, ನಮ್ಮ ಸ್ಥಾನವನ್ನು ಕಳೆದುಕೊಂಡು, ಮುಳ್ಳುಗಿಡಗಳಂತೆ ಬದುಕುತ್ತಿದ್ದೇವೆಯೇ? ನಮಗೆ ಕೊಡಲ್ಪಟ್ಟಿರುವುದು ಒಂದೇ ಒಂದು ಜೀವನ. ನಾವು ಆ ಒಂದು ಜೀವನವನ್ನು ಅವರಿಗೆ ಅರ್ಪಿಸಿ, ನಮ್ಮ ಮುಳ್ಳುಗಿಡದಂತಹ ಸ್ವಭಾವವನ್ನು ತ್ಯಜಿಸಿ, ದೇವದಾರು ಮರದಂತೆ ಬದುಕಲು ಶ್ರಮಿಸೋಣವಾ?
- Mrs. ಪೂವಿತಾ ಎಬೆನೇಜರ್
ಪ್ರಾರ್ಥನಾ ಅಂಶ:
ಕಣ್ಮಣಿ ಮಕ್ಕಳು ಎಂಬ ಪ್ರಾರ್ಥನಾ ಯೋಜನೆಯಲ್ಲಿ ಸೇರಿರುವ ಮಕ್ಕಳು ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆಯುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482