ಧೈನಂದಿನ ಧ್ಯಾನ(Kannada) – 14.04.2025
ಧೈನಂದಿನ ಧ್ಯಾನ(Kannada) – 14.04.2025
ನಂಬಿಕೆಯುಳ್ಳ ಪ್ರಾರ್ಥನೆ
"ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ರೋಗಿಯನ್ನು ರಕ್ಷಿಸುವದು; ಕರ್ತನು ಅವನನ್ನು ಎಬ್ಬಿಸುವನು; ಮತ್ತು ಪಾಪಮಾಡಿದವನಾಗಿದ್ದರೆ ಅದು ಪರಿಹಾರವಾಗುವದು." - ಯಾಕೋಬ 5:15
ಅಮೆರಿಕದಲ್ಲಿ ಮಾರ್ಕ್ ಎಂಬ ವೈದ್ಯರೊಬ್ಬರಿದ್ದರು. ಅವರು ಸೆಮಿನಾರ್‌ನಲ್ಲಿ ಮಾತನಾಡಲು ಬೇರೆ ಸ್ಥಳಕ್ಕೆ ಹೋಗಬೇಕಾಗಿತ್ತು. ಆ ದಿನ ಭಾರೀ ಹಿಮಪಾತದಿಂದಾಗಿ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಲಾಯಿತು. ಆದರೆ ಅವರು ಹೋಗಲೇಬೇಕಾದ ಪರಿಸ್ಥಿತಿ. ಒಂದು ಬಾಡಿಗೆ ಕಾರು ಮಾಡಿಕೊಂಡು ಹೊರಟರು. ಆದರೆ ಮಳೆಯಿಂದಾಗಿ, ವಾಹನವು ಒಂದು ನಿರ್ದಿಷ್ಟ ಪಟ್ಟಣವನ್ನು ಮೀರಿ ಮುಂದುವರಿಯಲು ಸಾಧ್ಯವಾಗಲಿಲ್ಲ. ಹಾಗಾಗಿ ವಾಹನದ ಚಾಲಕ, "ಅಯ್ಯಾ! ನಾವು ನಮ್ಮ ಪ್ರಯಾಣವನ್ನು ಮುಂದುವರಿಸುವುದು ಅಪಾಯಕಾರಿ. ಇಲ್ಲಿ ಎಲ್ಲಾದರೂ ಇರಲು ಸಾಧ್ಯವಾ? ಎಂದು ನೋಡೋಣ ಎಂದು ಹೇಳಿಬಿಟ್ಟು ವಾಹನವನ್ನು ನಿಲ್ಲಿಸಿದರು.
ದೂರದಲ್ಲಿ ಒಂದು ಬೆಳಕು ಕಾಣಿಸಿತು. ವೈದ್ಯರು ಕಾರಿನಿಂದ ಇಳಿದು ಆ ಮನೆಯ ಬಾಗಿಲು ತಟ್ಟಿದರು. ಒಬ್ಬ ತಾಯಿ ಬಂದು ಬಾಗಿಲು ತೆರೆದು, ಅವರನ್ನು ಒಳಗೆ ಆಹ್ವಾನಿಸಿ, ಅವರನ್ನು ಉಪಚರಿಸಿದರು. ನಂತರ, ಅವರನ್ನು ಹಾಲ್ ನಲ್ಲಿ ವಿಶ್ರಾಂತಿ ಪಡೆಯಲು ಹೇಳಿಬಿಟ್ಟು ಒಂದು ಸಣ್ಣ ಕೋಣೆಯೊಳಗೆ ಹೋಗಿ ಪ್ರಾರ್ಥಿಸಲು ಪ್ರಾರಂಭಿಸಿದರು. ವೈದ್ಯರು ಬೊಗ್ಗಿ ಆ ಕೋಣೆಯನ್ನು ನೋಡಿದರು. ಅಲ್ಲಿ ಒಬ್ಬ ಯುವಕ ತುಂಬಾ ಬಲಹೀನ ಸ್ಥಿತಿಯಲ್ಲಿ ಹಾಸಿಗೆಯ ಮೇಲೆ ಮಲಗಿದ್ದನು. ತಾಯಿ ಹತ್ತಿರದಲ್ಲಿ ಪ್ರಾರ್ಥಿಸುತ್ತಿದ್ದರು. ಅವರು ಹೊರಗೆ ಬಂದ ಕೂಡಲೇ ವೈದ್ಯರು, "ಆ ಹಾಸಿಗೆಯ ಮೇಲೆ ಇರುವವರು ಯಾರು?" ಎಂದು ಕೇಳಿದರು. ಅವನು ನನ್ನ ಮಗ ಹಲವು ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾನೆಂದು ತಾಯಿ ಹೇಳಿದರು. "ಚಿಕಿತ್ಸೆ ನೀಡಲಿಲ್ಲವಾ?" ಎಂದು ಕೇಳಿದರು. ಅಮೆರಿಕದಲ್ಲಿ ಒಬ್ಬ ಒಳ್ಳೆಯ ವೈದ್ಯರಿದ್ದಾರೆ, ಆದರೆ ಅವರ ಬಳಿಗೆ ಕರೆದೊಯ್ಯಲು ನನಗೆ ಸೌಕರ್ಯವಿಲ್ಲ. "ನಾನು ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ ಖಂಡಿತವಾಗಿಯೂ ದೇವರು ನನಗೆ ಸಹಾಯ ಮಾಡುತ್ತಾರೆ" ಎಂದು ಆ ತಾಯಿ ಕಣ್ಣೀರಿನಿಂದ ಹೇಳಿದರು. ವೈದ್ಯರು ತುಂಬಾ ಆಶ್ಚರ್ಯಚಕಿತರಾದರು, ನಾನೇ ಆ ವೈದ್ಯ ಎಂದು ಹೇಳಿ ಅವರನ್ನು ತಮ್ಮ ಸ್ವಂತ ಖರ್ಚಿನಲ್ಲಿ ಅಮೆರಿಕಕ್ಕೆ ಕರೆದೊಯ್ದು, ಯುವಕನಿಗೆ ಚಿಕಿತ್ಸೆ ನೀಡಿ, ಅವರನ್ನು ಗುಣಪಡಿಸಿದರು.
ಸತವೇದದಲ್ಲಿ, ಲೂಕ 13 ನೇ ಅಧ್ಯಾಯದಲ್ಲಿ, ಯೇಸು ಕ್ರಿಸ್ತನು ಸಬ್ಬತ್ ದಿನದಂದು ಸಭಾಮಂದಿರದಲ್ಲಿ ಬೋಧಿಸುತ್ತಿದ್ದರು. ಅಲ್ಲಿ 18 ವರ್ಷಗಳ ಕಾಲ ಎದ್ದು ನಿಲ್ಲಲು ಸಾಧ್ಯವಾಗದ ನಡು ಗೂನಿ ಇದ್ದಳು. ಯೇಸು ಕ್ರಿಸ್ತನು ಆಕೆಯ ಮೇಲೆ ತನ್ನ ಕೈಗಳನ್ನು ಇಟ್ಟರು, ತಕ್ಷಣವೇ ಆಕೆ ನೆಟ್ಟಗೆ ನಿಂತು ದೇವರನ್ನು ಮಹಿಮೆಪಡಿಸಿದಳು. ಅವಳು ಪ್ರತಿದಿನ ಚರ್ಚ್‌ಗೆ ಬಂದು ಪ್ರಾರ್ಥಿಸುತ್ತಿದ್ದಳು. 18 ವರ್ಷಗಳ ಕಾಲ ಪ್ರಾರ್ಥಿಸಿದ ನಂತರ, ದೇವರು ತನ್ನ ಶಕ್ತಿಯನ್ನು ವ್ಯಕ್ತಪಡಿಸಲು ನಿಗದಿಪಡಿಸಿದ ಆ ಸಬ್ಬತ್ ದಿನದಂದು ಅವಳು ಗುಣಮುಖಳಾದಳು.
ಹೌದು, ನಾವು ನಂಬಿಕೆಯಿಂದ ಪ್ರಾರ್ಥಿಸಿದಾಗ ಕರ್ತನು ನಮ್ಮ ಪ್ರಾರ್ಥನೆಗಳಿಗೆ ಖಂಡಿತವಾಗಿಯೂ ಉತ್ತರಿಸುತ್ತಾರೆ. ಪ್ರತಿಕ್ರಿಯಿಸುವಲ್ಲಿ ವಿಳಂಬವಾಗಬಹುದು. ಆದರೆ ಉತ್ತರ ಸಿಗದೇ ಇರುವುದಿಲ್ಲ. ನಾವು ನಂಬುವಾಗ, ಖಂಡಿತವಾಗಿಯೂ ದೇವರ ಮಹಿಮೆಯನ್ನು ನೋಡುತ್ತೇವೆ. ನಂಬಿಕೆಯಿಂದ ಪ್ರಾರ್ಥಿಸೋಣ, ಜಯವನ್ನು ಹೊಂದೋಣ.
- Mrs. ಶೀಲಾ ಜಾನ್
ಪ್ರಾರ್ಥನಾ ಅಂಶ:
ನಮ್ಮೊಂದಿಗೆ ಸೇರಿರುವ ಸಹ ಸೇವಕರ ಸೌಖ್ಯಕ್ಕಾಗಿ, ಅವರು ಮಾಡುವ ಸೇವೆಗಳಿಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482