Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 13.04.2025 (Kids Special)

ಧೈನಂದಿನ ಧ್ಯಾನ(Kannada) – 13.04.2025 (Kids Special)

 

ಸೋಲಿಲ್ಲ

 

"ನನ್ನ ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಪ್ರಭಾವದ ಐಶ್ವರ್ಯಕ್ಕೆ ತಕ್ಕ ಹಾಗೆ ನಿಮ್ಮ ಪ್ರತಿಯೊಂದು ಕೊರತೆಯನ್ನು ನೀಗಿಸುವನು." - ಫಿಲಿಪ್ಪಿ 4:19 

 

ಹಾಯ್ ಪುಟಾಣಿಗಳೇ! ನಿಮಗೆ Sports ಅಂದ್ರೆ ತುಂಬಾ ಇಷ್ಟಾನಾ? Sports ನಲ್ಲಿ ಆಸಕ್ತಿ ಬೆಳೆಸಿಕೊಂಡು ಯಶಸ್ವಿಯಾದ ವ್ಯಕ್ತಿಯ ಬಗ್ಗೆ ನಾವು ಒಂದು ಕಥೆಯನ್ನು ಕೇಳಲಿದ್ದೇವೆ. ಸರಿ ಬನ್ನಿ ಕಥೆಯೊಳಗೆ ಹೋಗೋಣ್ವಾ? 

 

ಅರುಣ್‌ಗೆ ಒಬ್ಬ ತಮ್ಮನಿದ್ದ. ಅವನಿಗೆ ಕ್ರೀಡೆಗಳಲ್ಲಿ ತುಂಬಾ ಆಸಕ್ತಿ. ಅದರಲ್ಲೂ ಬಾಕ್ಸಿಂಗ್ (ಜೂಡೋ) ಅಂದ್ರೆ 

ತುಂಬಾ ಇಷ್ಟ. ಅದನ್ನು ತುಂಬಾ ನೋಡುತ್ತಿದ್ದನು ಮತ್ತು ಮನೆಯಲ್ಲಿ ಅದರ ಬಗ್ಗೆ ಮಾತನಾಡುತ್ತಲೇ ಇದ್ದನು. ತಕ್ಷಣವೇ, ಅವನ ಆಸೆಯನ್ನು ಪೂರೈಸಲು ದೃಢನಿಶ್ಚಯ ಮಾಡಿದ ಅವನ ತಾಯಿ, ಅವನನ್ನು ತರಬೇತುದಾರರ ಬಳಿ ಬಾಕ್ಸಿಂಗ್ ತರಬೇತಿ ಕೋರ್ಸ್‌ಗೆ ಸೇರಿಸಿದರು. ಅವನು ಕೂಡ ತುಂಬಾ ಸಂತೋಷದಿಂದ ತರಬೇತಿಗೆ ಹೋದನು. ಒಂದು ತಿಂಗಳ ನಂತರ, ತರಬೇತುದಾರನು ಇಂದಿನಿಂದ ಪ್ರತಿಯೊಂದು ತಂತ್ರವನ್ನು ಕಲಿಸುವುದಾಗಿ ಹೇಳಿದರು. ಮರುದಿನ ಅವನು ಉತ್ಸಾಹದಿಂದ ತರಬೇತಿಗೆ ಹೊರಟನು. ಕಾರಿನಲ್ಲಿ ಬರುವಾಗ ಅಪಘಾತದಲ್ಲಿ ತನ್ನ ಎಡಗೈಯನ್ನು ಕಳೆದುಕೊಂಡನು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಅರುಣ್ ಮನೆಗೆ ಮರಳಿದನು. ಇನ್ನು ಮುಂದೆ ನನ್ನಿಂದ ಬಾಕ್ಸಿಂಗ್ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಾ ಅಳುತ್ತಲೇ ಇದ್ದನು. ಅವನು ಅಭ್ಯಾಸಕ್ಕೆ ಹೋಗಲಿಲ್ಲ, ತಕ್ಷಣ ತರಬೇತುದಾರ ಅಭ್ಯಾಸಕ್ಕೆ ಏಕೆ ಬಂದಿಲ್ಲ ಎಂದು ವಿಚಾರಿಸಿ, ಅರುಣ್ ಮನೆಗೆ ಬಂದರು. ತರಬೇತುದಾರನನ್ನು ನೋಡಿದಾಗ ಅರುಣ್ ತೀವ್ರವಾಗಿ ಅಳಲು ಪ್ರಾರಂಭಿಸಿದನು. ನಂತರ, ಅಳುತ್ತಾ, ನನಗೆ ಒಂದೇ ಕೈ ಇದೆ, ನಾನು ಹೇಗೆ ಬಾಕ್ಸಿಂಗ್ ಕಲಿಯಲು ಸಾಧ್ಯ ಎಂದನು. ತಕ್ಷಣವೇ, ಯೇಸುಕ್ರಿಸ್ತನನ್ನು ಅರಿತುಕೊಂಡಿದ್ದ ತರುಬೇತುದಾರರು, ನಮ್ಮ ಎಲ್ಲಾ ಅಗತ್ಯಗಳನ್ನು ಪೂರೈಸುವ ಕರ್ತನು ನಮ್ಮೊಂದಿಗಿದ್ದಾರೆ. ಪ್ರಾರ್ಥನೆ ಮಾಡಿ ತರಬೇತಿಗೆ ಬಾ, ನೀನು ಇಷ್ಟಪಟ್ಟಂತೆ ನಿನ್ನನ್ನು ಉತ್ತಮ ಯೋಧನನ್ನಾಗಿ ಮಾಡುತ್ತೇನೆ ಎಂದು ಹೇಳಿದರು. ನನ್ನನ್ನು ನಂಬದಿದ್ದರೂ, ದೇವರನ್ನು ನಂಬಿ ಬಾ ಎಂದು ಹೇಳಿದರು.   

 

ಅರುಣ್: ಹಾಗಾದರೆ ನಾನು ಬಾಕ್ಸಿಂಗ್ ಆಡಬಹುದಾ? ಎಂದು ಕಣ್ಣೀರು ಒರೆಸಿಕೊಳ್ಳುತ್ತಾ ಕೇಳಿದನು. ನಾಳೆಯಿಂದ ತರಬೇತಿಗೆ ಬಾ, ಪೂರೈಸುವ ದೇವರಿಂದ ಎಲ್ಲವೂ ಸಾಧ್ಯ ಎಂದು ಹೇಳಿದರು. ಅರುಣ್ ತಾಯಿ ತಕ್ಷಣ, ಅರುಣ್ ನಾಳೆ ಖಂಡಿತ ಪ್ರಾಕ್ಟೀಸ್ ಗೆ ಬರುತ್ತಾನೆ ಅಂದರು. ತರಬೇತುದಾರರು ಹೊರಟುಹೋದರು. ಮರುದಿನ, ಅರುಣ್ ಸಂಕೋಚದಿಂದ ತರಬೇತಿಗೆ ಬಂದನು. ಎಲ್ಲಾ ವಿದ್ಯಾರ್ಥಿಗಳು ಆಶ್ಚರ್ಯಚಕಿತರಾದರು. ತರಬೇತುದಾರ ಅವನನ್ನು ಪ್ರತ್ಯೇಕ ಸ್ಥಳದಲ್ಲಿ ಇರಿಸಿ ತರಬೇತಿ ನೀಡಿದರು. ದಿನಗಳು ಕಳೆದಂತೆ, ಅರುಣ್ ಉತ್ಸಾಹದಿಂದ ತರಬೇತಿ ಪಡೆದನು. ತರಬೇತುದಾರ ತನಗೆ ಬಾಕ್ಸಿಂಗ್ ತಂತ್ರವನ್ನು ಕಲಿಸಿದರು. ಅರುಣ್ ಕೂಡ ಕಲಿತನು. ನಂತರ ಒಂದು ದಿನ ಅವರು ಅರುಣ್ ಅನ್ನು ಸ್ಪರ್ಧೆಗೆ ಕಳುಹಿಸುವುದಾಗಿ ಹೇಳಿದರು. ಅರುಣ್, ನಾನು ಒಂದೇ ಒಂದು ಪಂಚ್ ಕಲಿತಿದ್ದೇನೆ, ನಾನು ಹೇಗೆ ಸ್ಪರ್ಧಿಸಲಿ? ಎಂದನು. ಅದೆಲ್ಲಾ ಏನಿಲ್ಲ, ಧೈರ್ಯವಾಗಿ ಹೋಗು ಎಂದರು. ಅರುಣ್ ಒಪ್ಪಿಕೊಂಡು, ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದನು. ಅರುಣ್ ಗುರುಗಳನ್ನು ಹೇಗೆ ಎಂದು ಕೇಳಿದನು. ಗುರುಗಳು, ಇದು (ಜೂಡೋ) ಬಾಕ್ಸಿಂಗ್ ನಲ್ಲಿಯೇ ಅತ್ಯಂತ ಕಠಿಣವಾದ ತರಬೇತಿ ಇದನ್ನು ನಿವಾರಿಸಲು, ನೀನು ನಿನ್ನ ಎಡಗೈಯನ್ನು ಬಗ್ಗಿಸಬೇಕು. ನಿನ್ನ ಬಳಿ ಅದು ಇಲ್ಲ. ಅದಕ್ಕಾಗಿಯೇ ನಿನ್ನೊಂದಿಗೆ ವ್ಯವಹರಿಸಲು ಸಾಧ್ಯವಾಗದೆ ಸೋಲುತ್ತಾರೆ ಎಂದು ಹೇಳಿದರು. ಮತ್ತು ದೇವರನ್ನು ನಂಬಿ ಅವರನ್ನು ಅಂಟಿಕೊಂಡಿದ್ದದರಿಂದ, ಕೊರತೆಯನ್ನು ಪರಿಪೂರ್ಣತೆಯಾಗಿ ಪರಿವರ್ತಿಸಿದರು. ನಿನ್ನ ಕೊರತೆಯೇ ನಿನಗೆ ಯಶಸ್ಸನ್ನು ತಂದುಕೊಟ್ಟಿತು ಎಂದು ಹೇಳಿದರು. 

 

ಪುಟಾಣಿಗಳೇ! ನೀವು ಸಹ ಯಶಸ್ವಿಯಾಗಲು ಬೇಕಾದ ಬುದ್ಧಿವಂತಿಕೆ ಅಥವಾ ಪ್ರತಿಭೆ ನನಗಿಲ್ಲ ಎಂದು ಭಾವಿಸುತ್ತಿದ್ದೀರಾ? ಕೊರತೆಯುಳ್ಳ ಬುದ್ಧಿವಂತಿಕೆ ಮತ್ತು ಪ್ರತಿಭೆಯನ್ನು ಆತನನ್ನು ನಂಬಿ, ಅವರ ಬಳಿ ಕೊಟ್ಟುಬಿಟ್ಟು ಸತತವಾಗಿ ಪ್ರಯತ್ನಿಸುತ್ತಲೇ ಇರಿ. ಗೆಲುವು ನಿಶ್ಚಯ.

- Mrs. ಅನ್ಬುಜ್ಯೋತಿ ಸ್ಟಾಲಿನ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)