ಧೈನಂದಿನ ಧ್ಯಾನ(Kannada) – 25.03.2025
ಧೈನಂದಿನ ಧ್ಯಾನ(Kannada) – 25.03.2025
ತಗ್ಗಿಸಿಕೋ
"ಹೀಗಿರುವದರಿಂದ ದೇವರ ತ್ರಾಣವುಳ್ಳ ಹಸ್ತದ ಕೆಳಗೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ; ಆತನು ತಕ್ಕ ಕಾಲದಲ್ಲಿ ನಿಮ್ಮನ್ನು ಮೇಲಕ್ಕೆ ತರುವನು" - 1 ಪೇತ್ರ 5:6
ಒಬ್ಬ ಹುಡುಗ ತನ್ನ ತಂದೆಯೊಂದಿಗೆ ಒಂದು ಡಿಪಾರ್ಟ್‌ಮೆಂಟ್ ಸ್ಟೋರ್‌ಗೆ ಹೋಗಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿ ಹೊರಟರು. ಆಗ ಅಂಗಡಿ ಮಾಲೀಕರು ಆ ಸ್ಟಾರ್ಟ್ ಹುಡುಗನಿಗೆ ಕ್ಯಾಂಡಿ ಬಾಟಲಿಯನ್ನು ತೋರಿಸಿ, ನಿನಗೆ ಎಷ್ಟು ಬೇಕೋ ಅಷ್ಟು ಕ್ಯಾಂಡಿ ತೆಗೆದುಕೋ ಎಂದು ಹೇಳಿದರು. ಅವನು ತನ್ನ ತಂದೆಯನ್ನು ನೋಡಿದನು. ಅವರೂ ಕೂಡ ತೆಗೆದುಕೋ ಎಂದು ಹೇಳಿದರು. ಕೊನೆಗೆ, ಅವನ ತಂದೆಯೇ ಬಾಟಲಿಯಿಂದ ಕ್ಯಾಂಡಿಯನ್ನು ತೆಗೆದುಕೊಂಡು ಅವನಿಗೆ ಕೊಟ್ಟರು. ಇಬ್ಬರೂ ಅಂಗಡಿಯನ್ನು ದಾಟಿ ಮನೆಯ ಹತ್ತಿರ ಬಂದಾಗ, ತಂದೆ ಹುಡುಗನನ್ನು "ನೀನೇ ಏಕೆ ಕ್ಯಾಂಡಿ ತೆಗೆದುಕೊಳ್ಳಲಿಲ್ಲ?" ಎಂದು ಕೇಳಿದರು. ಆ ಹುಡುಗ "ಅಪ್ಪಾ, ನಿಮ್ಮ ಕೈ ದೊಡ್ಡದಿದೆ, ನೀವು ಅದನ್ನು ತೆಗೆದುಕೊಂಡರೆ ನನಗೆ ಇನ್ನೂ ಹೆಚ್ಚು ಸಿಗುತ್ತದೆ" ನಾನೇ ತೆಗೆದುಕೊಂಡರೆ, ನನಗೆ ಸ್ವಲ್ಪ ಮಾತ್ರ ಸಿಗುತ್ತದೆ. "ಅದಕ್ಕೇ ನೀವು ಅದನ್ನು ಎತ್ತಿಕೊಡುವವರೆಗೂ ನಾನು ಕಾಯುತ್ತಿದ್ದೆ" ಎಂದು ಹೇಳಿದನು.
ಸತ್ಯವೇದದಲ್ಲಿ, 1 ಪೂರ್ವಕಾಲವೃತ್ತಾಂತ 4:9,10 ರಲ್ಲಿ ಯಾಬೇಚ್ ಎಂಬ ಮನುಷ್ಯನನ್ನು ನಾವು ನೋಡುತ್ತೇವೆ. ಅವನ ತಾಯಿ ಅವನನ್ನು ಯಾವ ಸ್ಥಿತಿಯಲ್ಲಿ ಹೆತ್ತರೋ ಗೊತ್ತಿಲ್ಲ. ಆದರೆ ಅವಳು ತುಂಬಾ ಕಷ್ಟಕರವಾದ ಪರಿಸ್ಥಿತಿಯಲ್ಲಿ ಅವನಿಗೆ ಜನ್ಮ ನೀಡಿದರು ಎಂದು ಅರ್ಥವಾಗುತ್ತಿದೆ. "ಇವನನ್ನು ಬಹುವೇದನೆಯಿಂದ ಹೆತ್ತೆನೆಂದು ಹೇಳಿ ಇವನ ತಾಯಿ ಇವನಿಗೆ ಯಾಬೇಚೆಂದು ಹೆಸರಿಟ್ಟಳು" (1 ಪೂರ್ವಕಾಲವೃತ್ತಾಂತ 4:9) ಎಂದು ಹೇಳಲಾಗಿದೆ. ಇದು ಎಷ್ಟು ದುಃಖಕರವಾದ ಕಾರ್ಯ ನೋಡಿ. ಆದರೆ ಯಾಬೇಚನು ದೇವರನ್ನು ನೋಡಿ ಪ್ರಾರ್ಥಿಸಿದರು. ದೇವರು ಮಾತ್ರವೇ ತನ್ನನ್ನು ಮೇಲೆತ್ತಲು ಸಾಧ್ಯ ಎಂಬ ನಂಬಿಕೆಯಿಂದ ಕಾಯುತ್ತಿದ್ದರು. ದೇವರ ಬಲವಾದ ಕೈಗಳಲ್ಲಿ ತಗ್ಗಿಸಿಕೊಂಡು ಇದ್ದರು. ದೇವರು ಅವರನ್ನು ಅವರ ಸಹೋದರರಿಗಿಂತ ಹೆಚ್ಚಿನ ಘನತೆಯುಳ್ಳವನಾಗಿ ಆಶೀರ್ವದಿಸಿದರು. ಹೌದು, ಯಾಬೇಚನು ಕರ್ತನು ತನ್ನನ್ನು ಆಶೀರ್ವದಿಸುವವರೆಗೂ ಕಾದಿದ್ದನು.
ಕರ್ತನ ಪ್ರೀತಿಯ ಮಗುವೇ! ನಿಮ್ಮ ಜೀವನವು ಯಾಬೇಚನ ಜೀವನದಂತೆ ಇರಬಹುದು, ಅಥವಾ ನೀವು ತಪ್ಪು ಮಾಡಿ ಆದಾಮನಂತೆ ಕುಗ್ಗಿಹೋಗಿ ಅಡಗಿಕೊಂಡಿರಬಹುದು, ಪೂರ್ಣ ಹೃದಯದಿಂದ ಕರ್ತನಿಗೆ ನಿಮ್ಮನ್ನು ಒಪ್ಪಿಸಿ ಕೊಟ್ಟು ಪಾಪ ಕ್ಷಮಾಪಣೆಯನ್ನು ಹೊಂದಿಕೊಳ್ಳಿರಿ. ಸರ್ವಶಕ್ತನಾದ ದೇವರನ್ನು ನೋಡಿ ಕಣ್ಣೀರಿನಿಂದ ವಿಜ್ಞಾಪನೆ ಮಾಡಿ ಆತನು ತಕ್ಕ ಕಾಲದಲ್ಲಿ ನಮ್ಮನ್ನು ಮೇಲಕ್ಕೆತ್ತುವವರೆಗೂ ಸುಮ್ಮನಿದ್ದು ಆತನೇ ದೇವರು ಎಂದು ತಿಳಿದು ತಾಳ್ಮೆಯಿಂದ ಕಾಯುವಾಗ, ದೇವರು ನಮ್ಮನ್ನು ಮೇಲಕ್ಕೆತ್ತುತ್ತಾರೆ. ನಮ್ಮ ದೇವರು ಸರ್ವಶಕ್ತನು. ಆತನು ನಮಗಾಗಿ ಖಂಡಿತವಾಗಿಯೂ ಮಹಿಮೆಯುಳ್ಳ ಕೆಲಸಗಳನ್ನು ಮಾಡುವರು. "ಸರ್ವಶಕ್ತನ ಕಡೆಗೆ ನೀನು ತಿರುಗಿ ಕೊಂಡರೆ ಕಟ್ಟಲ್ಪಡುವಿ; ...." ಯೋಬ 22:23
- Mrs. ಶೀಲಾ ಜಾನ್
ಪ್ರಾರ್ಥನಾ ಅಂಶ:
ಇಂದು ತಿರುಚ್ಚಿಯಲ್ಲಿ ನಡೆಯಲಿರುವ ಗ್ರಾಮ ಸೇವಕರ ಸಮ್ಮೇಳನವನ್ನು ದೇವರು ಆಶೀರ್ವದಿಸುವಂತೆ; ಅನೇಕ ಸೇವಕರು ಭಾಗವಹಿಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482