Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 21.11.2024 (Gospel Special)

ಧೈನಂದಿನ ಧ್ಯಾನ(Kannada) – 21.11.2024 (Gospel Special)

 

ವಿಳಂಬ

 

"…ಇದೇ ಆ ರಕ್ಷಣೆಯ ದಿನ" - 2 ಕೊರಿಂಥ 6:2

  

ಇಂದು ಸುವಾರ್ತೆಗೆ ತೆರೆದ ಬಾಗಿಲು ಇದೆ. ಈ ಅಂತ್ಯಕಾಲದಲ್ಲಿ ತೀವ್ರವಾಗಿ ಸೇವೆ ಮಾಡಿದರೆ ದೇಶವನ್ನು ಸ್ವತಂತ್ರಿಸಿಕೊಳ್ಳಬಹುದು. ಆದರೆ ಕ್ರೈಸ್ತರು ಸುವಾರ್ತೆ ಹೇಳುವಂತಹ ಬಾಗಿಲು ಮುಚ್ಚಲಾಗಿದೆ ಎಂದು ಹೇಳುತ್ತಾರೆ. ಆ ದಿನ ಕಾನಾನ್ ದೇಶವನ್ನು ಸುತ್ತಿ ನೋಡಿಬಂದವರು ಹೇಳಿದಂತೆ ಅನೇಕರು ಹೇಳುತ್ತಾರೆ. ಯೆಹೋಶುವಾ ಮತ್ತು ಕಾಲೇಬ್‌ನಂತಹ ಕೆಲವು ಸೇವಕರು ಭಾರತದ ವಿಶಾಲ ಭೂಮಿಯಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ.

      

ಇಂದಿನ ಜನರ ಸ್ಥಿತಿ ಏನೆಂದರೆ, ಅವರು ಸುವಾರ್ತೆಯನ್ನು ಕೇಳಿ ಅದನ್ನು ನಿಜವೆಂದು ಭಾವಿಸುತ್ತಾರೆ. ನಂತರ ಸ್ವಲ್ಪ ಕಾಲ ಅಂತರಂಗ ಕ್ರೈಸ್ತರಾಗಿರಲು ನಿರ್ಧರಿಸುತ್ತಾರೆ ಮತ್ತು ದೀಕ್ಷಾಸ್ನಾನ ತೆಗೆದುಕೊಳ್ಳುವುದನ್ನು ವಿಳಂಬಗೊಳಿಸುತ್ತಾರೆ. ಚರ್ಚ್ ಸೇವೆಗಳಲ್ಲಿ ಭಾಗವಹಿಸಲು ಅವರು ಹೆದರುತ್ತಾರೆ. ಇಂತಹ ಪರಿಸ್ಥಿತಿಯಿಂದ ಆತ್ಮರಕ್ಷಣೆ ಇಲ್ಲದೇ ಹಿಂಜಾರಿಹೋಗುತ್ತಿರುವವರ ಗುಂಪು ಹೇರಳವಾಗುತ್ತಿದೆ. ಹೌದು, ಜನರ ಮಧ್ಯೆ ಕಾಣುತ್ತಿರುವ ಆಲಸ್ಯ ಮತ್ತು ಸೇವಕರ ಬಳಿ ಕಾಣುತ್ತಿರುವ ಮಂದಗತಿಯು ಉಜ್ಜೀವನಕ್ಕೆ ತಡೆಯಾಗಿಯೇ ಇದೆ.

 

ಐಷಾರಾಮಿ ಹೋಟೆಲ್‌ನಲ್ಲಿ ನೃತ್ಯ ಮಾಡುವ ಹುಡುಗಿಯೊಬ್ಬಳು ತನ್ನ ಜೀವನದಲ್ಲಿ ಶಾಂತಿಯಿಲ್ಲದೆ ಕ್ರೈಸ್ತ ಕೂಟವೊಂದರಲ್ಲಿ ಪಾಲ್ಗೊಳ್ಳಲು ಹೋದಳು. ಅಲ್ಲಿ ಆಕೆ ಸಂಪೂರ್ಣ ಶಾಂತಿಯನ್ನು ಕಂಡುಕೊಂಡಳು. ಆದರೆ ಅವಳು ನೃತ್ಯವಾಡಿದಾಗ ಬರುವ ಹಣ ಮತ್ತು ಸೌಕರ್ಯದ ಅವಕಾಶವನ್ನು ಕಳೆದುಕೊಳ್ಳಲು ಇಷ್ಟವಿಲ್ಲದೆ, ಸ್ವಲ್ಪ ಮಟ್ಟಿಗೆ ಹಣ ಮತ್ತು ಸೌಕರ್ಯ ಹೆಚ್ಚಿಸಿಕೊಂಡು ನಂತರ ಯೇಸುವಿಗೆ ಸೇವೆ ಮಾಡಲು ಹೋಗುವುದಾಗಿ ತನ್ನ ಡೈರಿಯಲ್ಲಿ ಬರೆದಳು. ಬಹಳ ದಿನಗಳ ನಂತರ ಅವಳು ತನ್ನ ಡೈರಿಯಲ್ಲಿ ಬರೆದದ್ದು ನೆನಪಾಯಿತು. ಆದರೆ ಲೌಕಿಕ ಆಸೆ ಅವಳನ್ನು ಬಿಡಲಿಲ್ಲ. ದಿನಗಳು ಕಳೆದಂತೆ, ಅವಳ ಮನಸ್ಸಿನ ಹೋರಾಟದಿಂದಾಗಿ, ಅವಳು ಪ್ರತಿದಿನ "ನಾಳೆ ನಾನು ನನ್ನನ್ನು ಸಂಪೂರ್ಣವಾಗಿ ಯೇಸುವಿಗೆ ಒಪ್ಪಿಸುತ್ತೇನೆ" ಎಂದು ಬರೆದಳು. ಅನಿರೀಕ್ಷಿತವಾಗಿ ಒಂದು ದಿನ ಅವಳು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಸಾವನ್ನಪ್ಪಿದಳು. ಡೈರಿ ತಿರುವಿ ಹಾಕಿದಾಗ ಹಲವರು ಬೆಚ್ಚಿಬಿದ್ದರು. ಇದು ಅಮೆರಿಕದ ಕ್ರೈಸ್ತರಲ್ಲಿ ಕೋಲಾಹಲಕ್ಕೆ ಕಾರಣವಾಯಿತು.

 

ಇಂದಿನ ಕ್ರೈಸ್ತರು ತಾವು ಶಿಷ್ಯರು ಎಂದು ಗ್ರಹಿಸದೆ, ಕ್ರಿಸ್ತನ ಸೇವೆಯನ್ನು ಮಾಡದೆ, ಸಮಯವನ್ನು ಮುಂದೂಡುತ್ತಲೇ ಇದ್ದಾರೆ. "ಶಿಷ್ಯರೇ ಕ್ರೈಸ್ತರು" (ಅಪೊಸ್ತಲ. 11:26) ಸುವಾರ್ತೆ ಸಾರುವುದು ಅವರ ಮೇಲೆ ಬಿದ್ದ ಕರ್ತವ್ಯ. ಅಪೊಸ್ತಲನಾದ ಪೌಲನು ನಾನು ಸುವಾರ್ತೆಯನ್ನು ಸಾರದಿದ್ದರೆ ನನಗೆ ಅಯ್ಯೋ ಎಂದು ಹೇಳುತ್ತಾರೆ. (1ಕೊರಿಂಥ. 9:16). ಅನೇಕ ಮಹಿಳೆಯರು ತಮ್ಮ ಆಸ್ತಿಯಿಂದ ಕ್ರಿಸ್ತನಿಗೆ ಸೇವೆ ಸಲ್ಲಿಸಿದರು. (ಲೂಕ 8:3) ಇಂದು, ಕ್ರಿಸ್ತನು ನಮಗಾಗಿ ಮಾಡಿದ ಒಳ್ಳೆಯದಕ್ಕಾಗಿ ಕೃತಜ್ಞತೆಯ ಋಣಭಾರವಾಗಿ, ಆತನ ಸೇವೆ ಮಾಡುವುದು ನಮ್ಮ ಕರ್ತವ್ಯವಲ್ಲವೇ? ತಡಮಾಡದೆ ಕಾರ್ಯಪ್ರವೃತ್ತರಾಗೋಣ. ದೇಶವು ದೇವರನ್ನು ತಿಳಿದುಕೊಳ್ಳಲಿ.

- Mrs. ಫಾತಿಮಾ ಸೆಲ್ವರಾಜ್

 

ಪ್ರಾರ್ಥನಾ ಅಂಶ:

Children's club ಎಲ್ಲಾ ತಾಲೂಕುಗಳಲ್ಲಿ ಆರಂಭಿಸಲ್ಪಡಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)