Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 08.10.2024

ಧೈನಂದಿನ ಧ್ಯಾನ(Kannada) – 08.10.2024

 

ಬದಲಾವಣೆಯನ್ನು ತರುವ ಪ್ರೀತಿ

 

"ಪ್ರೀತಿಯಿಲ್ಲದವನು ದೇವರನ್ನು ಬಲ್ಲವನಲ್ಲ; ಯಾಕಂದರೆ ದೇವರು ಪ್ರೀತಿಸ್ವರೂಪಿಯು." - 1 ಯೋಹಾನ 4:8

  

ರಾಬರ್ಟ್ ಮೊಫಾಟ್ ಎಂಬ ದೇವರ ಸೇವಕರು ಆಫ್ರಿಕಾದ ಆಟೆನ್‌ಬರ್ಟ್‌ ಎಂಬ ಸ್ಥಳಕ್ಕೆ ಮಿಷನರಿಯಾಗಿ ಹೋದರು. ಆಟೆನ್‌ಬರ್ಟ್‌ನಲ್ಲಿ, ಆಫ್ರಿಕೆನರ್ ಎಂಬ ದೊಡ್ಡ ರೌಡಿ ಇದ್ದನು. ಅವನು ಹಲವು ಕೊಲೆಗಳನ್ನು ಮಾಡಿದ್ದನು ಸರ್ಕಾರಕ್ಕೇ ಸವಾಲಾಗಿದ್ದನು. ಈತನ ತಲೆ ತಂದು ಕೊಡುವವರಿಗೆ ಒಂದು ಸಾವಿರ ಡಾಲರ್ ಬಹುಮಾನ ನೀಡುವುದಾಗಿ ಸರ್ಕಾರದಿಂದ ಘೋಷಣೆ ಮಾಡಲಾಗಿದ್ದು, ಬಹುಮಾನ ಮೊತ್ತವನ್ನು ಸರ್ಕಾರ ಘೋಷಿಸಿದ್ದರಿಂದ ಅನೇಕರು ಒಂಟಿಯಾಗಿ, ಗುಂಪು ಗುಂಪಾಗಿ ತೆರಳಿದ್ದರು. ಆದರೆ ಆಫ್ರಿಕೆನ್ನರೆಯನ್ನು ಕೊಲ್ಲಲು ಸಾಧ್ಯವಾಗದೆ ಹೋದವರಲ್ಲಿ ಹಲವರು ಸತ್ತರು.

  

ರಾಬರ್ಟ್ ಮೊಫಾಟ್ ಆಫ್ರಿಕೆನೆರಿಗೆ ಕ್ರಿಸ್ತನ ಪ್ರೀತಿಯನ್ನು ಹೇಗಾದರೂ ತಿಳಿಸಿ ಅವನನ್ನು ಕ್ರಿಸ್ತನ ಬಳಿಗೆ ಮುನ್ನಡೆಸಲು ಯೋಜನೆ ಹಾಕಿದ್ದರು. ಅವರು ಆಫ್ರಿಕೆನ್ನರ್ ಇರುವ ಸ್ಥಳದ ಬಳಿ 100 ಮಕ್ಕಳನ್ನು ಗುರುತಿಸಿದರು ಮತ್ತು ಅವರಿಗೆ ಒಂದು ಸ್ಥಳವನ್ನು ಸಿದ್ಧಪಡಿಸಿದರು. ದದ್ದು, ತುರಿಕೆ, ಅಶುಚಿತ್ವ ಇದ್ದ ಮಕ್ಕಳನ್ನು ಶುಚಿಗೊಳಿಸಿ ಸುಂದರಗೊಳಿಸಿ ಅವರಿಗೆ ಬೇಕಾದ ಎಲ್ಲವನ್ನೂ ನೀಡಿದರು. ಈತನ ನಡೆಗಳನ್ನು ನೋಡಿದ ಆಫ್ರಿಕೆನ್ನರು ನಮ್ಮ ಜನಾಂಗದ ಮಕ್ಕಳ ಮೇಲಿನ ಅವರ ಪ್ರೀತಿ ಅಪಾರ ಎಂದು ಗ್ರಹಿಸಿದರು. ಇವರು ಆರಾಧಿಸುವ ದೇವರನ್ನು ನಾನು ಸಹ ಆರಾಧಿಸುತ್ತೇನೆ ಎಂದು ಯೇಸುವನ್ನು ಸ್ವೀಕರಿಸಿದರು. ಯಾರಿಂದಲೂ ಹಿಡಿಯಲು ಸಾಧ್ಯವಾಗದ ಆಫ್ರಿಕೆನ್ ನ ಹೃದಯದ ಬದಲಾವಣೆಯ ಬಗ್ಗೆ ತಿಳಿದ ಸರ್ಕಾರವು ಅವನಿಗೆ ಕ್ಷಮಾದಾನ ನೀಡಿತು.

 

ಮೊಫಾಟ್ ಅವರ ಆರಂಭಿಕ ಸೇವೆಯೇ ಚಿಕ್ಕ ಮಕ್ಕಳ ನಡುವೆ. ಯೇಸು ಸೀಮೋನ ಪೇತ್ರನ ಬಳಿ ನನ್ನ ಕುರಿಮರಿಗಳನ್ನು ಮೇಯಿಸು ಎಂದೇ ಹೇಳಿದರು. ರಾಬರ್ಟ್ ಮೊಫಾಟ್ ಚಿಕ್ಕ ಮೀನನ್ನು ಹಾಕಿ ದೊಡ್ಡ ಮೀನು ಹಿಡಿಯುವ ಹಾಗೆ, ಚಿಕ್ಕ ಮಕ್ಕಳ ಸೇವೆಯ ಮೂಲಕ ಆಫ್ರಿಕೆನ್ ಅನ್ನು ಹಿಡಿದರು ರಾಬರ್ಟ್ ಮೊಫಾಟ್. ನಾವು ಸಹ ಸೇವೆಯ ಹಾದಿಯಲ್ಲಿ ಚಿಕ್ಕಮಕ್ಕಳನ್ನು ಕೇಂದ್ರವಾಗಿಟ್ಟುಕೊಂಡು ಮಾಡುವಾಗ ಉತ್ತಮ ಫಲಿತಾಂಶವನ್ನು ನೋಡುತ್ತೇವೆ ಎಂಬುದು ಹೆಚ್ಚು ಖಚಿತವಲ್ಲವೇ?

  

ನನಗೆ ಪ್ರಿಯವಾದವರೇ, ನಾವು ಕೂಡ ಯೇಸುವಿನ ಪ್ರೀತಿಯನ್ನು ಹೇಗಾದರೂ ಜಗತ್ತಿಗೆ ಕೊಂಡೊಯ್ಯೋಣ. ನಮ್ಮ ಹೃದಯವು ದೇವರ ಪ್ರೀತಿಯಿಂದ ತುಂಬಿದ್ದರೆ, ನಾವು ಅದನ್ನು ಇತರರಿಗೆ ನೀಡಬಹುದು. ಪ್ರೀತಿಯ ಮೂಲಕ ಜಗತ್ತನ್ನು ಗೆದ್ದವರಾಗಿ ನಾವು ಆತನಿಗೆ ಸಾಕ್ಷಿಯಾಗೋಣ. ದೇವರ ಆಶೀರ್ವಾದವನ್ನು ಪಡೆಯೋಣ. ಹಲ್ಲೇಲೂಯಾ ಆಮೆನ್.

- Mr. ಸೆಲ್ವರಾಜ್

 

ಪ್ರಾರ್ಥನಾ ಅಂಶ:

ನಮ್ಮ ಟ್ಯೂಷನ್ ಸೆಂಟರ್ ಗೆ ಬರುವ ಮಕ್ಕಳು ದೇವರನ್ನು ತಿಳಿದುಕೊಳ್ಳಲಿ ಎಂದು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)