Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 07.10.2024

ಧೈನಂದಿನ ಧ್ಯಾನ(Kannada) – 07.10.2024

 

ಆಸಕ್ತಿಯುಳ್ಳ ಪ್ರಾರ್ಥನೆ

 

"…ಆತನಿಗೋಸ್ಕರ ಆಸಕ್ತಿಯಿಂದ ದೇವರಿಗೆ ಪ್ರಾರ್ಥನೆಮಾಡುತ್ತಿದ್ದರು" - ಅಪೊಸ್ತಲ 12:5

  

ನನಗೆ ತಿಳಿದ ಯುವತಿಯೊಬ್ಬಳಿಗೆ ಮದುವೆಯಾಯಿತು. ಉತ್ತರದಲ್ಲಿ ಮಿಷನರಿಯಾಗಿ ಕೆಲಸ ಮಾಡುತ್ತಿದ್ದ ತನ್ನ ಪತಿಯೊಂದಿಗೆ ಕೆಲವೇ ದಿನಗಳಲ್ಲಿ ಅಲ್ಲಿಗೆ ಹೋಗಿ ಬಿಡಬೇಕು. ಅವಳ ಮದುವೆಗೆ ಮೊದಲು ಅವಳು ವಾಸಿಸುತ್ತಿದ್ದ ಪಟ್ಟಣದಲ್ಲಿ ಒಂದು ದೊಡ್ಡ ಭಾನುವಾರ ಶಾಲೆಯ ತರಗತಿಯನ್ನು ನಡೆಸುತ್ತಿದ್ದಳು. ಇದು ಅನೇಕ ಮಕ್ಕಳಿಗೆ ಆಶೀರ್ವಾದವಾಗಿತ್ತು. ತನ್ನ ನಂತರ ತರಗತಿ ನಡೆಸುವವರು ಯಾರು ಎಂಬ ಚಿಂತೆ ಅವಳಿಗೆ ಇತ್ತು. ಆಕೆಗೆ ಒಬ್ಬ ಕಿರಿಯ ಸಹೋದರನಿದ್ದನು. ಆದರೆ ಅವನು ಕ್ರಿಸ್ತನನ್ನು ಸ್ವೀಕರಿಸಿರಲಿಲ್ಲ. ತನ್ನ ಸಹೋದರನು ಮಾನಸಾಂತರ ಹೊಂದಿ ತಾನು ಬಿಟ್ಟುಹೋಗುತ್ತಿರುವ ತರಗತಿಯನ್ನು ನಡೆಸಬೇಕೆಂದು ಅವಳು ಮನಃಪೂರ್ವಕವಾಗಿ ಪ್ರಾರ್ಥಿಸುತ್ತಿದ್ದಳು. ದಿನಗಳು ಕಳೆದಂತೆ ಅವಳು ಇನ್ನೂ ಹೆಚ್ಚು ಆಸಕ್ತಿಯಿಂದ ಪ್ರಾರ್ಥಿಸಿದಳು. ಕೊನೆಗೂ ಅವಳು ಹೊರಡುವ ದಿನ ಬಂದೇ ಬಿಟ್ಟಿತು. ಮನೆಯವರೆಲ್ಲರೂ ಅವಳನ್ನು ಕಣ್ಣೀರಿನೊಂದಿಗೆ ಕಳುಹಿಸಿಕೊಡುತ್ತಿದ್ದರು. ಅವಳ ಸಹೋದರನು ಓಡಿಬಂದು ಅವಳ ಕೈಗಳನ್ನು ಹಿಡಿದುಕೊಂಡನು. ಅಕ್ಕಾ, ನಾನು ಸಹ ನಿನ್ನ ರಕ್ಷಕನನ್ನು ಸ್ವೀಕರಿಸಿದ್ದೇನೆ. ನಿನ್ನ ಭಾನುವಾರದ ತರಗತಿಯನ್ನು ನಾನು ನಡೆಸುತ್ತೇನೆ ಎಂದು ಭರವಸೆ ನೀಡಿದರು. ಅವಳು ಬಹಳ ಸಂತೋಷದೊಂದಿಗೆ ತನ್ನ ಪ್ರಾರ್ಥನೆಗೆ ಉತ್ತರಿಸಿದ ದೇವರನ್ನು ಸ್ತುತಿಸಿ ಕೊಂಡಾಡಿದಳು.   

  

ಅಪೊಸ್ತಲನಾದ ಪೇತ್ರನನ್ನು ಸೆರೆಮನೆಗೆ ಹಾಕಲಾಯಿತು. ಪೇತ್ರನಿಗೆ ಸೆರೆಮನೆಯಲ್ಲಿ ಭದ್ರತೆಗಾಗಿ ಸೈನಿಕರನ್ನು ಕಾವಲಿಗಾಗಿ ನಿಲ್ಲಿಸಲಾಗಿತ್ತು. ಪೇತ್ರನನ್ನು ಸೆರೆಮನೆಯಲ್ಲಿ ಇರಿಸಿದಾಗ, ಸಭೆಯವರು ಅವನಿಗಾಗಿ ಆಸಕ್ತಿಯಿಂದ ದೇವರನ್ನು ನೋಡಿ ಪ್ರಾರ್ಥಿಸಿದರು. ಈ ಆಸಕ್ತಿಯ ಪ್ರಾರ್ಥನೆಯು ದೇವದೂತರ ಮೂಲಕ ಪೇತ್ರನನ್ನು ಸೆರೆಮನೆಯಿಂದ ಹೊರಗೆ ತಂದಿತು. 

  

ಇದನ್ನು ಓದುತ್ತಿರುವ ಪ್ರಿಯರೇ, ಒಬ್ಬರಿಗೊಬ್ಬರು ಪ್ರಾರ್ಥಿಸಿರಿ. "ನೀತಿವಂತನ ಅತ್ಯಾಸಕ್ತಿಯುಳ್ಳ ವಿಜ್ಞಾಪನೆಯು ಬಹು ಬಲವಾಗಿದೆ." (ಯಾಕೋಬ 5:16) ಎಂದು ಸತ್ಯವೇದವು ಸಹ ನಮಗೆ ಕಲಿಸುತ್ತಿದೆ. ಕರ್ತನು ನಮ್ಮ ಮನಃಪೂರ್ವಕ ಪ್ರಾರ್ಥನೆಗಳಿಗೆ ಖಂಡಿತವಾಗಿ ಉತ್ತರಿಸುತ್ತಾರೆ. ರಕ್ಷಣೆಹೊಂದದ ನಮ್ಮ ಸಂಬಂಧಿಕರಿಗೆ, ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಮತ್ತು ಪಾಪದ ಶಾಪದಿಂದ ಮುಕ್ತರಾಗಲು ಬಯಸುವ ಪ್ರತಿಯೊಬ್ಬರಿಗೂ ನಾವು ಮಾಡುವ ಆಸಕ್ತಿಯುಳ್ಳ ಪ್ರಾರ್ಥನೆಯು ಫಲಪ್ರದವಾಗುತ್ತದೆ. ನಾವು ಇಲ್ಲಿಯವರೆಗೆ ಪ್ರಾರ್ಥಿಸಿದ ಪ್ರಾರ್ಥನೆಗಳಿಗೆ ಉತ್ತರವಿಲ್ಲದಿದ್ದರೆ ಅಥವಾ ನಾವು ನಿಜವಾಗಿಯೂ ಪ್ರಾರ್ಥಿಸಿ ಪ್ರಾರ್ಥಿಸಿ ಸುಸ್ತಾಗಿದ್ದರೆ, ಇಂದು ಮತ್ತೆ ಪ್ರಾರಂಭಿಸೋಣ. ನಾವು ಮಾಡುವಂತಹ ಆಸಕ್ತಿಯುಳ್ಳ ಪ್ರಾರ್ಥನೆಯು ಮನನೊಂದ ಅನೇಕರನ್ನು ಬಿಡಿಸುತ್ತದೆ ಎಂಬುದು ಖಚಿತ.

- Mrs. ಶಕ್ತಿ ಶಂಕರ್

 

ಪ್ರಾರ್ಥನಾ ಅಂಶ:

ನಮ್ಮ ಟ್ಯೂಷನ್ ಸೆಂಟರ್‌ನಲ್ಲಿ ಓದುತ್ತಿರುವ ಮಕ್ಕಳ ಜ್ಞಾನಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)