Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 14.04.2024 (Kids Special)

ಧೈನಂದಿನ ಧ್ಯಾನ(Kannada) – 14.04.2024 (Kids Special)

 

ಯೇಸುವಿನೊಂದಿಗೆ ಮಾತನಾಡು 

 

"ನಿನ್ನ ಆಜ್ಞೆಗಳಲ್ಲಿ ಆನಂದಪಡುತ್ತೇನೆ; ಅವು ನನಗೆ ಇಷ್ಟವಾಗಿವೆ" - ಕೀರ್ತನೆ 119:47

 

ಮುದ್ದು ಪುಟಾಣಿಗಳೇ, ಪರೀಕ್ಷೆ ಚೆನ್ನಾಗಿ ಬರೆದ್ರಾ? ಕೆಲವರಿಗೆ leave ಬಿಟ್ಟಿರಬಹುದು. ಕೆಲವರು ಪರೀಕ್ಷೆ ಬರೆಯುತ್ತಾ ಇರಬಹುದು. ಸರಿ, ನೀವು ರಜೆ ಕೊಟ್ಟ ತಕ್ಷಣ ಏನು ಮಾಡ್ತೀರಾ? Jolly -ಯಾಗಿ ಆಟ ಆಡಬಹುದು. ಮಾವನ ಮನೆ, ದೊಡ್ಡಪ್ಪನ ಮನೆ ಹೀಗೆ ಬೇರೆ ಊರಿಗೆ ಹೋಗಬಹುದು. ಪ್ರವಾಸಕ್ಕೆ ಹೋಗಬಹುದು. ನೀವು ಕೂಡ plan ಮಾಡಿದ್ದೀರಾ? Very good. ಕಾಳಜಿ ವಹಿಸಿ Enjoy ಮಾಡಿ.

 

ಜಗನ್‌ ಎಂಬ ಪುಟ್ಟ ತಮ್ಮನಿಗೆ aeroplane ಮೂಲಕ ಇಂಗ್ಲೆಂಡ್‌ನಲ್ಲಿರುವ ತನ್ನ ಚಿಕ್ಕಪ್ಪನ ಮನೆ ಹೋಗಿ ಹತ್ತಿರದ ಅರಮನೆಗೆ ಭೇಟಿ ನೀಡಲು ಆಸೆ. ಕುಟುಂಬವಾಗಿ ಇಂಗ್ಲೆಂಡ್ ಗೆ ಹೋದ ಕೂಡಲೇ, ರಾಜನನ್ನು ನೋಡಬೇಕು ಎಂದು ಪ್ರಾರ್ಥಿಸಿದನು. ನಿಮ್ಮ ಆಸೆ ಈಡೇರಲು ನೀವು ಸಹ ಪ್ರಾರ್ಥಿಸಬೇಕು ಸರೀನಾ!

 

ಜಗನ್ ಅರಮನೆಯ ದ್ವಾರದಲ್ಲಿದ್ದ ಕಾವಲುಗಾರನಿಗೆ ನಾನು ರಾಜನನ್ನು ನೋಡಬೇಕು ಎಂದು ಹೇಳಿದ ಕೂಡಲೇ, ಕಾವಲುಗಾರನಿಗೆ ನಗು ಬಂದುಬಿಟ್ಟಿತು. ನೀನು ಚಿಕ್ಕ ಹುಡುಗ ರಾಜನನ್ನು ನೋಡಲು ಹೋಗುತ್ತೀಯಾ? ನಿನ್ನನ್ನು ಹೇಗೆ ಕಳುಹಿಸುವುದು ರಾಜನು ನಿನ್ನನ್ನು ನೋಡಲು ಇಷ್ಟಪಡುವುದಿಲ್ಲ ಎಂದು ಹೇಳಿದನು. ಜಗನ್ ಬಾಗಿಲಲ್ಲೇ ಕಾಯುತ್ತಿದ್ದನು. ನಾನು ರಾಜನನ್ನು ಹೇಗಾದರೂ ನೋಡಬೇಕಲ್ಲಾ! ಯೇಸಪ್ಪಾ, ನೀವೇ ನನಗೆ ಸಹಾಯ ಮಾಡಬೇಕು. ನನ್ನ ಆಸೆಯನ್ನು ನೆರವೇರಿಸಿ ಅಪ್ಪಾ ಎಂದು ಸಣ್ಣ ಪ್ರಾರ್ಥನೆಯನ್ನು ಮಾಡಿ ಮುಗಿಸಿ, ತಾಳ್ಮೆಯಿಂದ ಕಾಯುತ್ತಿದ್ದನು. ಒಬ್ಬ ವ್ಯಕ್ತಿ ಬಂದರು. ಜಗನ್ ತನ್ನ ಆಸೆಯನ್ನು ತಿಳಿಸಿದಾಗ ಅವರು ಅವನನ್ನು ಅರಮನೆಯೊಳಕ್ಕೆ ಕರೆದುಕೊಂಡು ಹೋದರು. ಪ್ರತಿ ಬಾಗಿಲು ತೆರೆಯಲ್ಪಟ್ಟು ಎಲ್ಲರೂ ಇವರಿಗೆ ನಮಸ್ಕರಿಸಿದರು. ಜಗನ್ ಅರಮನೆಯಲ್ಲಿ ಇವರು ಪ್ರಮುಖ ವ್ಯಕ್ತಿಯಾಗಿರಬಹುದು ಎಂದು ತಿಳಿದುಕೊಂಡ. ರಾಜನನ್ನು ಕಂಡ ಜಗನ್‌ಗೆ ಇದು ಕನಸಾ? ಅಥವಾ ನಿಜಾನಾ? ಎಂದು ಗೊತ್ತಾಗಲಿಲ್ಲ. ರಾಜನೂ ಜಗನ್ ನನ್ನು ಪ್ರೀತಿಯಿಂದ ಕರೆದು ಮಾತಾಡಿಸಿದರು. ಇಂಗ್ಲೆಂಡಿನ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಲು Free pass ಕೂಡ ನೀಡಿದರು. ಜಗನ್ ಸಂತೋಷದಿಂದ ಮನೆಗೆ ಹಿಂದಿರುಗಿದನು.

 

ಏನು ಪುಟಾಣಿಗಳೇ, ಜಗನ್ ಆಸೆ ಈಡೇರಿದ ಹಾಗೆ, ನಿಮ್ಮ ಆಸೆಯೂ ನೆರವೇರಬೇಕಾ? ರಾಜಾಧಿರಾಜ ಯೇಸುವಿನೊಂದಿಗೆ ಮಾತನಾಡಿ ನೋಡಿ. ಯೇಸುರಾಜನೊಂದಿಗೆ ನೀವು ಯಾವ ಸಮಯದಲ್ಲಿ ಬೇಕಾದರೂ ಮಾತನಾಡಬಹುದು. ಎಷ್ಟು ದೊಡ್ಡ ಭಾಗ್ಯ ಪುಟಾಣಿಗಳೇ ಇಂದೇ ಯೇಸಪ್ಪನೊಂದಿಗೆ ಮಾತನಾಡಿ. Ok. Super. bye!

- Sis. ದೆಬೋರಾಳ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)