Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 01.03.2024

ಧೈನಂದಿನ ಧ್ಯಾನ(Kannada) – 01.03.2024

 

ಸುಪ್ಪಾಂಡಿ ಸಾಹಸ

 

"…ಪವಿತ್ರಾತ್ಮ ನಿಮ್ಮ ಮೇಲೆ ಬರಲು ನೀವು ಬಲವನ್ನು ಹೊಂದಿ… ನನಗೆ ಸಾಕ್ಷಿಗಳಾಗಿರಬೇಕು…" - ಅಪೊಸ್ತಲ. 1:8

 

ನಾನು ನನ್ನ ಬಾಲ್ಯದಲ್ಲಿ "ಸುಪ್ಪಾಂಡಿ ಸಾಹಸ" ಎಂಬ ತಮಾಷೆಯ ಕಥೆಗಳನ್ನು ಓದಿದ್ದೇನೆ. ಈ ಸುಪ್ಪಾಂಡಿ ಏನು ಮಾಡಿದರೂ ತಲೆಕೆಳಗಾಗಿ ತಪ್ಪು ತಪ್ಪಾಗಿಯೇ ಮಾಡುತ್ತಾನೆ. ಒಮ್ಮೆ ಹಳ್ಳಿಯ ಗೆಳೆಯನೊಬ್ಬ ಸುಪ್ಪಾಂಡಿಯ ಬಳಿ, "ನಿಮ್ಮ ಮನೆಯಲ್ಲಿ ಎತ್ತು ಇದೆಯೇ?" ಎಂದು ಕೇಳಿದರು. ಸುಪ್ಪಾಂಡಿ ಇಲ್ಲ ಎಂದ ಕೂಡಲೇ ಆ ಗೆಳೆಯ ಆ ಎತ್ತು ಎಷ್ಟು ಪ್ರಾಮುಖ್ಯವಾದದ್ದೆಂದೂ, ನಮ್ಮ ಊರಿನಲ್ಲಿ ಎತ್ತು ಇಲ್ಲದ ಮನೆಯೇ ಇಲ್ಲ ಎಂದೂ ಹೇಳಿದರು. ಇದನ್ನು ಕೇಳಿದ ಸುಪ್ಪಾಂಡಿ ತಕ್ಷಣವೇ ಒಂದು ಎತ್ತನ್ನು ಖರೀದಿಸಿದನು. ಬಹಳ ದಿನಗಳ ನಂತರ ಸುಪ್ಪಾಂಡಿ ಮನೆಯಲ್ಲಿ ಎತ್ತನ್ನು ಕಟ್ಟಿರುವುದನ್ನು ನೋಡಿದ ಸ್ನೇಹಿತ ಈ ಎತ್ತನ್ನು ಹೇಗೆಲ್ಲಾ ಬಳಸುತ್ತಿದ್ದೀಯ ಎಂದು ಕೇಳಿದನು. ಅದಕ್ಕೆ ಸುಪ್ಪಾಂಡಿ ಇದು ಬಹಳ ದುಬಾರಿಯಾಗಿರುವುದರಿಂದ ಬಿಸಿಲಿಗೆ ತಾಗದಂತೆ ಮನೆಯಲ್ಲೇ ಕಟ್ಟಿ ಅತ್ಯಂತ ಸುರಕ್ಷಿತವಾಗಿ ನೋಡಿಕೊಳ್ಳುತ್ತಿರುವದಾಗಿ ಹೇಳಿದನು. ಇದನ್ನು ಕೇಳಿದ ಸ್ನೇಹಿತ ತನ್ನ ತಲೆಗೆ ಹೊಡೆದುಕೊಂಡು, ಎತ್ತು ತೆಗೆದುಕೊಳ್ಳುವುದು ಹೊಲವನ್ನು ಉಳುಮೆ ಮಾಡಿ ಎತ್ತಿನಗಾಡಿ ಎಳೆಯಲು ತಾನೇ ಎಂದು ಹೇಳಿದನು.

 

ಮೇಲಿನ ಸುಪ್ಪಾಂಡಿ ಕಥೆಗೂ ಮತ್ತು ಇಂದಿನ ಸಭೆಗಳಲ್ಲಿ ಅನ್ಯಭಾಷೆಯ ಮಾತುಗಳನ್ನು ಉಪಯೋಗಿಸುವ ವಿಧಾನಕ್ಕೂ ಒಂದು ಸಂಬಂಧವಿರುವುದನ್ನು ಕಾಣಬಹುದು. ಅಪೊಸ್ತಲರ ಕೃತ್ಯಗಳು 2ನೇ ಅಧ್ಯಾಯದಲ್ಲಿ ಪವಿತ್ರಾತ್ಮನು ಮೊಟ್ಟ ಮೊದಲು ಶಿಷ್ಯರ ಮೇಲೆ ಸುರಿಸಲ್ಪಟ್ಟಾಗ ಎಲ್ಲರೂ ಅನ್ಯಭಾಷೆಗಳಲ್ಲಿ ಮಾತನಾಡಿದರು ಎಂದು ನೋಡುತ್ತೇವೆ. ಅದರ ನಂತರ ಕೂಡಲೇ ಅವರು ಸುವಾರ್ತೆಯನ್ನು ಸಾರಲು ಪ್ರಾರಂಭಿಸಿದರು ಎಂದು ನೋಡುತ್ತೇವೆ. ಪೇತ್ರನು ಹನ್ನೊಂದು ಮಂದಿಯೊಂದಿಗೆ ಎದ್ದುನಿಂತು ಸುತ್ತಲೂ ನಿಂತಿರುವವರಿಗೆ ಸುವಾರ್ತೆಯನ್ನು ಸಾರಲು ಪ್ರಾರಂಭಿಸಿಬಿಟ್ಟರು ಎಂದು ಇಂದಿನ ಸತ್ಯವೇದ ಭಾಗದಲ್ಲಿ ಓದುತ್ತೇವೆ. ಆದರೆ ಈ ದಿನಗಳಲ್ಲಿ ಅನೇಕ ಸಭೆಗಳಲ್ಲಿ ಅನ್ಯಭಾಷೆಗಳಲ್ಲಿ ಮಾತನಾಡುವುದನ್ನು ಒತ್ತಿಹೇಳಲಾಗುತ್ತಿದೆ. ಅದು ಒಳ್ಳೆಯದೇ! ಆದರೆ ಅದೇ ಪ್ರಾಮುಖ್ಯತೆಯನ್ನು ಸುವಾರ್ತೆಯನ್ನು ಸಾರಲು ತೋರಿಸುತ್ತಿಲ್ಲ. ಹೇಗೆ ಸುಪ್ಪಾಂಡಿ ಎತ್ತನ್ನು ಹೊಲದಲ್ಲಿ ಬಳಸದೆ ಮನೆಯಲ್ಲಿ ಸಾಕಿದ್ದನೋ ಹಾಗೆಯೇ ಇಂದು ನಾವು ಸಭೆಗಳಲ್ಲಿ ಅನ್ಯ ಭಾಷೆಗಳಲ್ಲಿ ಮಾತನಾಡುತ್ತೇವೆ. ಆದರೆ ಅದನ್ನು ಪಡೆದ ಉದ್ದೇಶವನ್ನು ಮರೆತುಬಿಡುತ್ತೇವೆ.

 

1 ಕೊರಿಂಥದವರಿಗೆ 14:4 ರಲ್ಲಿ, ವಾಣಿಯನ್ನಾಡುವವನು ತನಗೆ ಮಾತ್ರ ಭಕ್ತಿವೃದ್ಧಿಯನ್ನುಂಟುಮಾಡುತ್ತಾನೆ ಎಂದು ಓದುತ್ತೇವೆ. ಹೌದು, ನಾವು ಕರ್ತನಲ್ಲಿ ಬಲಗೊಳ್ಳಲು, ಆತ್ಮದಲ್ಲಿ ಬೆಂಕಿಯಾಗಿರಲು ದೇವರು ಕೊಟ್ಟಿರುವ ಅದ್ಭುತವಾದ ವರ ಅನ್ಯಭಾಷೆ. ಒಂದು ವೇಳೆ ಈ ಅನುಭವ ನಿಮಗಿಲ್ಲದಿದ್ದರೆ, ಪ್ರಾರ್ಥಿಸಿ, ಬಯಸಿ ಹೊಂದಿಕೊಳ್ಳಿರಿ. ಅದೇ ಸಮಯದಲ್ಲಿ ನಾವು ಭಕ್ತಿಯನ್ನು ಬೆಳೆಸಿಕೊಳ್ಳುವುದು ನಮಗಾಗಿ ಮಾತ್ರವಲ್ಲ; ಆ ಭಕ್ತಿವೃದ್ಧಿಯು ಲೋಕದಲ್ಲೆಲ್ಲಾ ಸುವಾರ್ತೆಯನ್ನು ಸಾರಿರಿ ಎಂಬ ದೇವರ ಆಜ್ಞೆಗೆ ನೇರವಾಗಿ ನಮ್ಮನ್ನು ಮುನ್ನಡೆಸಬೇಕು. ಅನ್ಯಭಾಷೆಯನ್ನು ಮಾತನಾಡೋಣ. ಅದೇ ಸಮಯದಲ್ಲಿ, ನರಕಕ್ಕೆ ಹೋಗುತ್ತಿರುವ ಜನರಿಗೆ ಸುವಾರ್ತೆ ಸಾರಲು ಹೊರಡೋಣ.

- J. ಸಂತೋಷ್

 

ಪ್ರಾರ್ಥನಾ ಅಂಶ:

ಈ ತಿಂಗಳು ನಡೆಯುವ ಸೇವೆಗಳಲ್ಲಿ ದೇವರ ಹಸ್ತವು ಜೊತೆಯಿದ್ದು ನಡೆಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)