ಧೈನಂದಿನ ಧ್ಯಾನ(Kannada) – 27.02.2024
ಧೈನಂದಿನ ಧ್ಯಾನ(Kannada) – 27.02.2024
ಉಪವಾಸ
"ಉಪವಾಸ ದಿನವನ್ನು ಏರ್ಪಡಿಸಿರಿ;…" - ಯೋವೇಲ 1:14
ಕ್ರೈಸ್ತ ಜೀವನಕ್ಕೆ ಉಪವಾಸ ಬಹಳ ಪ್ರಾಮುಖ್ಯವಾದದ್ದು. ಉಪವಾಸವು ಉನ್ನತ ದೇವರನ್ನು ಕದಲಿಸಬಲ್ಲದು. ಆದರೆ ಈ ದಿನಗಳಲ್ಲಿ ಅದು ಮರೆಯಾಗುತ್ತಿದೆ. ಅದರ ಪ್ರಯೋಜನವನ್ನು ಅರಿಯದಿರುವುದೇ ಇದಕ್ಕೆ ಕಾರಣ. ಇದರ ಪ್ರಯೋಜನಗಳನ್ನು ಸಂಕ್ಷಿಪ್ತವಾಗಿ ನೋಡೋಣ?
ದೇವರ ಕರುಣೆಯನ್ನು ಪಡೆಯಬಹುದು:
ನಿನೆವೆಯ ಜನರನ್ನು ಅವರ ಪಾಪದ ಕಾರಣದಿಂದ ದೇವರು ನಾಶಮಾಡಲು ಹೊರಟಿದ್ದಾನೆ ಎಂಬುದನ್ನು ಯೋನನ ಮೂಲಕ ಕೇಳಿದಾಗ, ಮಕ್ಕಳಿಂದ ದೊಡ್ಡವರವರೆಗೆ ಉಪವಾಸವಿದ್ದು ಪ್ರಾರ್ಥನೆ ಮಾಡಿದರು. (ಯೋನ 3:5-8) ದೇವರು ಇದನ್ನು ಕಂಡು ಮನಮರುಗಿ ನಿನೆವೆಯನ್ನು ನಾಶಮಾಡದೆ ಕರುಣೆಯನ್ನು ತೋರಿಸಿದರು.
ಶತ್ರುಗಳ ಮುಂದೆ ಔತಣ:
ಹಾಮಾನನು ತನ್ನನ್ನು ಆರಾಧಿಸದ ಮೊರ್ದೆಕೈಯನ್ನು ಮಾತ್ರವಲ್ಲದೆ ಅವನ ಸಂಪೂರ್ಣ ಯೆಹೂದ್ಯ ಕುಲವನ್ನು ನಾಶಮಾಡಲು ಯೋಜಿಸುತ್ತಾನೆ. ಆಗ ಅವರು ಮೂರು ದಿನಗಳ ಕಾಲ ಉಪವಾಸವಿದ್ದು ಪ್ರಾರ್ಥಿಸಿದರು. ಅದರ ನಂತರ, ಮೊರ್ದೆಕೈ ಎಂದೋ ಮಾಡಿದ್ದ ಒಳ್ಳೆಯ ಕಾರ್ಯಗಳು ರಾಜನಿಗೆ ತಿಳಿಯಬರುತ್ತವೆ. ಹಾಮಾನನ ಮೂಲಕ ಮೊರ್ದೆಕೈನನ್ನು ಸನ್ಮಾನಿಸುವಂತೆ ರಾಜ ಆಜ್ಞೆಯು ಹುಟ್ಟಿತು. ಅಷ್ಟೇ ಅಲ್ಲ, ಯೆಹೂದ್ಯ ಕುಲವು ಸಂರಕ್ಷಿಸಲ್ಪಟ್ಟಿತು.
ಸೈತಾನನನ್ನು ಸೋಲಿಸಬಹುದು:
ಯೇಸು ಕ್ರಿಸ್ತನು ಭೂಮಿಯಲ್ಲಿ ಸಂಚರಿಸಿದ ದಿನಗಳಲ್ಲಿ ಮೊಟ್ಟ ಮೊದಲು ಸೇವೆಯನ್ನು ಪ್ರಾರಂಭಿಸುವುದಕ್ಕಿಂತ ಮುಂಚೆ ನಲವತ್ತು ದಿನಗಳ ಕಾಲ ಉಪವಾಸ ಮಾಡಿ ಪ್ರಾರ್ಥಿಸಿದರು. ನಂತರ ಅವರು ತನ್ನನ್ನು ವಿರೋಧಿಸಿದ ಸೈತಾನನನ್ನು ಸೋಲಿಸಿದರು. ಶಿಷ್ಯರ ಬಳಿ ಸ್ವಸ್ಥತೆಯನ್ನು ಪಡೆಯಲು ಬಂದ ಒಬ್ಬರಿಗೆ ಶಿಷ್ಯರು ಪ್ರಾರ್ಥಿಸಿ ಜಯಹೊಂದಲು ಸಾಧ್ಯವಾಗದಿದ್ದಾಗ “ಈ ಜಾತಿಯು ದೇವರ ಪ್ರಾರ್ಥನೆ ಮತ್ತು ಉಪವಾಸದಿಂದಲೇ ಹೊರತು ಬೇರೆ ಯಾತರಿಂದಲೂ ಬಿಟ್ಟು ಹೋಗುವದಿಲ್ಲವೆಂದು" ಅವರಿಗೆ ಹೇಳಿದನು.
(ಮಾರ್ಕನು 9:29)
ಭದ್ರತೆ ದೊರೆಯುತ್ತದೆ:
ನೆಬೂಕದ್ನೆಚ್ಚರನು ಯೆರೂಸಲೇಮಿನ ದೇವಾಲಯದಿಂದ ತೆಗೆದುಕೊಂಡು ಬಂದಿದ್ದ ಹೇರಳವಾದ ಚಿನ್ನ, ಬೆಳ್ಳಿ ಮತ್ತು ಸಕಲ ವಿಧವಾದ ಉಪಕರಣಗಳನ್ನು ಯೆರೂಸಲೇಮಿನ ದೇವಾಲಯಕ್ಕೆ ಪುನಃ ತೆಗೆದುಕೊಂಡು ಬರುವಾಗ ದರೋಡೆಕೋರರಿಂದ ವಿರೋಧಿಗಳಿಂದ ಸುರಕ್ಷಿತವಾಗಿ ಬರಲು ಉಪವಾಸವಿದ್ದು ಪ್ರಾರ್ಥಿಸಿದರು. ಬಹಳ ದೂರದಲ್ಲಿ ಸಂರಕ್ಷಿಸಲ್ಪಟ್ಟು ಸುರಕ್ಷಿತವಾಗಿ ಯೆರೂಸಲೇಮ್ ದೇವಾಲಯಕ್ಕೆ ತಲುಪಿಸಿದರು. ಅಂದರೆ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.
ಇದನ್ನು ಓದುತ್ತಿರುವ ಪ್ರಿಯರೇ, ನೀವು ದೇವರಿಂದ ಕರುಣೆಯನ್ನು ಪಡೆಯಲು ಬಯಸುತ್ತೀರಾ? ಅವಮಾನದ ಸ್ಥಳಗಳಲ್ಲಿ ಗೆಲುವು ಮತ್ತು ಗೌರವ ಬೇಕೇ? ಉಪವಾಸವಿದ್ದು ಅವರ ಪಾದಗಳಲ್ಲಿ ಕಾದಿರಿ. ಅವರು ಬಲಕೊಟ್ಟು ಜೊತೆಯಿದ್ದು ನಡೆಸುತ್ತಾರೆ. ನೀವು ಉಪವಾಸದ ರುಚಿ ಮತ್ತು ಅದರ ಪ್ರಯೋಜನಗಳನ್ನು ಅನುಭವಿಸಿದರೆ, ನೀವು ಉಪವಾಸ ಮಾಡದೇ ಸುಮ್ಮನಿರಲು ಸಾಧ್ಯವೇ ಇಲ್ಲ. ಈ ವರ್ಷ ಇದನ್ನು ಪ್ರಯತ್ನಿಸಿ ನೋಡಿ! ಆಶೀರ್ವಾದವನ್ನು, ಸಂತೋಷವನ್ನು ಮತ್ತು ಸಮಾಧಾನವನ್ನು ಕಾಣುತ್ತೀರ.
- Mrs. ಜಾಸ್ಮಿನ್ ಪಾಲ್
ಪ್ರಾರ್ಥನಾ ಅಂಶ:
ಉತ್ತರ ಭಾರತದ ಮಿಷನರಿಗಳ ಕುಟುಂಬಗಳು ಆಶೀರ್ವದಿಸಲ್ಪಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482