ಧೈನಂದಿನ ಧ್ಯಾನ(Kannada) – 07.12.2023
ಧೈನಂದಿನ ಧ್ಯಾನ(Kannada) – 07.12.2023
ಯೇಸುವನ್ನು ಮಾತಾಡಿರಿ
"ನಾವಂತೂ ಕಂಡು ಕೇಳಿದ್ದನ್ನು ಹೇಳದೆ ಇರಲಾರೆವು ಎಂದು ಉತ್ತರ ಕೊಟ್ಟರು" - ಅಪೊಸ್ತಲ. 4:20
"ಅಫೇಸಿಯಾ" ಎಂಬುದು ಮಾತನಾಡುವ ಸಾಮರ್ಥ್ಯವನ್ನು ಕಳೆದುಕೊಳ್ಳುವಂತಹ ಒಂದು ಕಾಯಿಲೆ. ಗಾಯ ಅಥವಾ ಕಾಯಿಲೆಯಿಂದ ಮೆದುಳಿನಿಂದ ನಾಲಿಗೆಗೆ ಕಳುಹಿಸಲ್ಪಡುವ ಸಂದೇಶವು ತಡೆಯಾದಾಗ ಈ ಕಾಯಿಲೆಯು ಉಂಟಾಗುತ್ತದೆ. ಆದರೆ ಈ ದಿನಗಳಲ್ಲಿ ಅನೇಕ ಕ್ರೈಸ್ತರು ಆಧ್ಯಾತ್ಮಿಕ "ಅಫೇಸಿಯಾ" ದಿಂದ ಬಳಲುತ್ತಿದ್ದಾರೆ. ಅವರು ಯೇಸುವನ್ನು ತಿಳಿದಿದ್ದಾರೆ, ಆದರೆ ಅವರು ಎಂದಿಗೂ ಆತನ ಬಗ್ಗೆ ಮಾತನಾಡುವುದಿಲ್ಲ. ಅವರಿಗೆ ದೇವರ ಪರಲೋಕದ ಯೋಜನೆ ತಿಳಿದಿದೆ ಆದರೆ ಅದನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ. "ನಾವು ನೋಡಿದ ಮತ್ತು ಕೇಳಿದ ವಿಷಯಗಳನ್ನು ಮಾತನಾಡದೇ ಇರಲು ಸಾಧ್ಯವೇ" ಎಂಬ ಆದಿಕ್ರೈಸ್ತರ ವೈರಾಗ್ಯವನ್ನು ಅನೇಕರು ಪ್ರದರ್ಶಿಸುವುದಿಲ್ಲ. ಜ್ಞಾನ ಮತ್ತು ಸಾಕ್ಷಿಯ ನಡುವಿನ ಸಂಪರ್ಕವು ಕಳೆದುಹೋಗಿರುತ್ತದೆ. ಈ ಕೊರತೆಯನ್ನು ಸರಿಪಡಿಸಬೇಕು. ಅನೇಕ ಬಾರಿ ಭಯ, ಮತ್ತು ಕೆಲವೊಮ್ಮೆ ಪಾಪ, ಕ್ರಿಸ್ತನನ್ನು ಸ್ವತಂತ್ರವಾಗಿ ಪ್ರಕಟಿಸಲು ತಡೆಯಾಗಿದೆ. ತಮ್ಮ ಪಾಪಗಳನ್ನು ಒಪ್ಪಿಕೊಂಡು ಪವಿತ್ರಾತ್ಮನ ಶಕ್ತಿಯನ್ನು ಅವಲಂಬಿಸಿರುವವರು ಮಾತ್ರವೇ ನಿರಂತರವಾಗಿ ಕ್ರಿಸ್ತನನ್ನು ಇತರರೊಂದಿಗೆ ಹಂಚಿಕೊಳ್ಳಲು ಸಾಧ್ಯ.
ಸುವಾರ್ತೆ ಸಾರಲು ಅನೇಕ ಕ್ರೈಸ್ತರು ಕ್ರಿಸ್ಮಸ್ ಸಂದರ್ಭವನ್ನು ಮಾತ್ರ ಬಳಸುತ್ತಾರೆ. ಯೇಸುವನ್ನು ಇತರರಿಗೆ ಪರಿಚಯಿಸುವಲ್ಲಿ ತೋರುವ ತೀವ್ರತೆ, ಉತ್ತಮ ತೊಡಗಿಸಿಕೊಳ್ಳುವಿಕೆ ಎಲ್ಲಾ ದಿನಗಳಲ್ಲಿಯೂ ಕಾಣಲ್ಪಟ್ಟರೆ ಎಷ್ಟು ಚೆನ್ನಾಗಿರುತ್ತದೆ! ಒಂದೆಡೆ, ಕ್ರಿಸ್‌ಮಸ್ ದಿನಗಳಲ್ಲಾದರೂ ಸುವಾರ್ತೆಯನ್ನು ಸಾರುತ್ತಿದ್ದಾರಲ್ಲಾ ಎಂಬ ಸಂತೋಷವನ್ನಾದರೂ ನೀಡುತ್ತಿದೆ. ಯೇಸುವನ್ನು ಇತರರಿಗೆ ಪರಿಚಯಿಸಲು ಯಾವುದೇ ಹಿಂಜರಿಕೆ ಅಥವಾ ಸಂಕೋಚ ಇರಬಾರದು. ಯಾವನು ಮನುಷ್ಯರ ಮುಂದೆ ನನ್ನನ್ನು ಅರಿಕೆ ಮಾಡುತ್ತಾನೋ ಅವನನ್ನು ನಾನು ಸಹ ಪರಲೋಕದಲ್ಲಿರುವ ನನ್ನ ತಂದೆಯ ಮುಂದೆ ಒಪ್ಪಿಕೊಳ್ಳುತ್ತೇನೆ ಎಂದು ಯೇಸು ಹೇಳುತ್ತಾರೆ. ಅಪೊಸ್ತಲರ ಕೃತ್ಯಗಳಲ್ಲಿ ಶಿಷ್ಯರು ಯೇಸುವಿನ ಬಗ್ಗೆ ಎಲ್ಲೆಲ್ಲೂ ಧೈರ್ಯದಿಂದ ಮಾತಾಡಿದರು ಎಂದು ಓದುತ್ತೇವೆ. ಪ್ರಿಯರೇ, ನಾವು ಧೈರ್ಯದಿಂದ ಯೇಸುವಿನ ಬಗ್ಗೆ ಇತರರೊಂದಿಗೆ ಮಾತನಾಡೋಣ ಮತ್ತು ಪ್ರತಿದಿನ ಯೇಸುವಿನಂತೆ ಬದುಕೋಣ. ನಾವು ಆಶೀರ್ವದಿಸಲ್ಪಡೋಣ.
- Bro. ಜೇಕಬ್ ಶಂಕರ್
ಪ್ರಾರ್ಥನಾ ಅಂಶ:
ನಮ್ಮ ಆಮೆನ್ VillageTV ಅನ್ನು ಸ್ಯಾಟಲೈಟ್ ಚಾನೆಲ್ ಆಗಿ ಪರಿವರ್ತಿಸಲು ಮತ್ತು ಕಿಡ್ಸ್ ಚಾನಲ್ ಅನ್ನು ಪ್ರಾರಂಭಿಸಲು ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482