Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 14.06.2025

ಧೈನಂದಿನ ಧ್ಯಾನ(Kannada) – 14.06.2025

 

ಸತ್ಯವೇದವನ್ನು ಧ್ಯಾನಿಸುವುದು 

 

"ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದ ಪಡುವವನಾಗಿ ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವನೋ ಅವನು ಎಷ್ಟೋ ಧನ್ಯನು" - ಕೀರ್ತನೆ 1:2

 

ಒಬ್ಬ ರೈತ ತನ್ನ ತೋಟದಲ್ಲಿ ಹಲಸಿನ ಮರವನ್ನು ನೆಟ್ಟರು. ಅವರು ಅದಕ್ಕೆ ಪ್ರತಿದಿನ ನೀರು ಹಾಕುತ್ತಾ ಕಾಲಕಾಲಕ್ಕೆ ಗೊಬ್ಬರ ಹಾಕುತ್ತಾ ಇದ್ದರು. ಆಡುಗಳು ಮತ್ತು ಹಸುಗಳಿಂದ ರಕ್ಷಿಸಲು ಅದಕ್ಕೆ ಬೇಲಿ ಹಾಕಿದರು. ದಿನಕ್ಕೆ ಒಮ್ಮೆಯಾದರೂ ಹಲಸಿನ ಮರವನ್ನು ನೋಡುತ್ತಿದ್ದರು ಮತ್ತು ಅದರ ಬೆಳವಣಿಗೆಯನ್ನು ನೋಡಿ ಸಂತೋಷಪಡುತ್ತಿದ್ದರು. ಮರವು ಚೆನ್ನಾಗಿ ಬೆಳೆಯುವುದನ್ನು ನೋಡಿ ರೈತನಿಗೆ ತುಂಬಾ ಸಂತೋಷವಾಗುತ್ತಿತ್ತು. ಶೀಘ್ರದಲ್ಲೇ ಹಲಸಿನ ಹಣ್ಣು ತಿನ್ನಲಿದ್ದೇವೆ. ಈ ಮರವು ಅರಳಿ, ಹಣ್ಣಾಗಿ ಫಲ ನೀಡಲಿದೆ ಎಂದು ದಿನಗಳನ್ನು ಎಣಿಸುತ್ತಿದ್ದ ರೈತನಿಗೆ ನಿರಾಶೆಯಾಯಿತು. ಸುಮಾರು ಐದು ವರ್ಷಗಳ ಕಾಲ ಮರವನ್ನು ಬೆಳೆಸಿದ ಅವರು ಮರವನ್ನು ದ್ವೇಷಿಸಿ ಅದನ್ನು ಕಡಿದು ಬೀಳಿಸಬೇಕೆಂದು ಮನದಲ್ಲಿ ನಿರ್ಧರಿಸಿದರು. 

 

ತನ್ನ ಆತಂಕವನ್ನು ಸ್ನೇಹಿತನಿಗೆ ಹೇಳಿ, ಮರುದಿನವೇ ಮರವನ್ನು ಕಡಿಯಲು ಆಳುಗಳು ಬೇಕಾಗಿದ್ದಾರೆ ಎಂದು ಅವರ ಸಹಾಯ ಕೇಳಿದರು. ಸ್ನೇಹಿತ ಆತನ ಬಳಿ ಸ್ವಲ್ಪ ತಾಳ್ಮೆಯಿಂದಿರಲು ಹೇಳಿ ಅವರಿಗೆ ಕೆಲವು ಸಲಹೆಗಳನ್ನು ನೀಡಿದರು. ಸ್ನೇಹಿತನ ಸಲಹೆಯ ಪ್ರಕಾರ, ಅವರು ಸ್ವಲ್ಪ ದೂರದಲ್ಲಿರುವ ಕಾಲುವೆಯನ್ನು ಮರದ ಕಡೆಗೆ ತಿರುಗಿಸಿದರು. ಒಂದು ದಿನ, ಆ ಮರದಿಂದ ಹೂವರಳಿ, ಫಲ ನೀಡಿತು. ಕೆಲವು ದಿನಗಳ ನಂತರ, ಹಣ್ಣು ಹಣ್ಣಾಗಿ ನೇತಾಡಿತು. ರೈತ ತನ್ನ ಸ್ನೇಹಿತನನ್ನು ಭೇಟಿಯಾಗಿ ಮರವು ಫಲ ನೀಡಿದೆ ಅದನ್ನು ಇನ್ನು ಮುಂದೆ ಕಡಿಯುವುದಿಲ್ಲ ಎಂದು ಹೇಳಿದರು. ಆದರೆ ಅವರು ತನ್ನ ಸ್ನೇಹಿತನನ್ನು ಮರದ ಬಳಿ ಕಾಲುವೆಯನ್ನು ಕೊಂಡೊಯ್ಯಲು ಏಕೆ ಹೇಳಿದೆ ಎಂದು ಕೇಳಿದಾಗ, ಸ್ನೇಹಿತ ಹೇಳಿದನು, "ಮರವು ಚಿಕ್ಕದಾಗಿದ್ದಾಗ, ಅದಕ್ಕೆ ಸ್ವಲ್ಪ ನೀರು ಸಾಕಾಗಿತ್ತು. ಆದರೆ ಅದು ದೊಡ್ಡ ಮರವಾಗಿ ಬೆಳೆದ ನಂತರವೂ, ಮರಕ್ಕೆ ಅದೇ ಪ್ರಮಾಣದ ನೀರನ್ನು ಮಾತ್ರ ನೀಡುತ್ತಿದ್ದೀಯ ಎಂದು ತಿಳಿದುಕೊಂಡೆ, ಆದ್ದರಿಂದ ಕಾಲುವೆಯನ್ನು ನೇರವಾಗಿ ಮರದ ಕಡೆಗೆ ಸರಿಸಲು ಹೇಳಿದೆ" ಎಂದರು. ರೈತನಿಗೆ ತನ್ನ ತಪ್ಪಿನ ಅರಿವಾಯಿತು. ಇಬ್ಬರೂ ಹಲಸಿನ ಮರದಿಂದ ಹಲಸಿನ ಹಣ್ಣನ್ನು ಕಿತ್ತು ತಿಂದರು.

 

ಹೌದು, ಪ್ರಿಯ ಸ್ನೇಹಿತರೇ! ನಾನು ನನ್ನ ಎಲ್ಲಾ ಪ್ರಯತ್ನಗಳನ್ನು ಮಾಡಿ ಬಿಟ್ಟಿದ್ದೇನೆ, ಏನು ಜೀವನ ಇದು? ಯಾವ ಫಲವೂ ಇಲ್ಲ ಎಂದು ಹತಾಶೆಯಲ್ಲಿದ್ದರೆ, ಇಂದು ದೇವರು ನಿಮಗೆ ಹೇಳುತ್ತಿರುವ ಮಾತು ಏನು ಗೊತ್ತಾ? ನೀವು ನನ್ನ ಧರ್ಮಶಾಸ್ತ್ರದಲ್ಲಿ ಆನಂದಿಸುವುದಾದರೆ, ನೀರಿನ ಕಾಲುವೆಗಳ ಬಳಿಯಲ್ಲಿ ಬೆಳೆದಿರುವ ಮರದ ಹಾಗೆ ಫಲಕೊಡುತ್ತೀರ ಎಂಬುದೇ. ನಿಜವೇ, ದೇವರು ನಿಮ್ಮ ಮರುಭೂಮಿ ಜೀವನವನ್ನು ಫಲವತ್ತಾಗಿ ಪರಿವರ್ತಿಸಲು ಸಿದ್ಧರಾಗಿದ್ದಾರೆ. ನೀವು ಸಹ ಸತ್ಯವೇದವನ್ನು ಧ್ಯಾನಿಸಲು ಸಮಯವನ್ನು ಕಳೆಯಿರಿ. ನೀರಿನ ಕಾಲುವೆ ನಿಮ್ಮ ಕಡೆಗೆ ಬರುತ್ತಲೇ ಇರುತ್ತದೆ. ನಿಮ್ಮ ಜೀವನವು ಖಂಡಿತವಾಗಿಯೂ ಫಲಭರಿತವಾದ ಜೀವನವಾಗಿ ಮಾರ್ಪಡುತ್ತದೆ. ದೇವರು ನಿಮ್ಮನ್ನು ಆಶೀರ್ವದಿಸಲಿ ಆಮೆನ್.

- Bro. ಅನೀಸ್ ರಾಜಾ

 

ಪ್ರಾರ್ಥನಾ ಅಂಶ:

ಉತ್ತರ ರಾಜ್ಯದಲ್ಲಿ ಆಲಯವಿಲ್ಲದ ಪ್ರದೇಶಗಳಲ್ಲಿ ಆಲಯ ನಿರ್ಮಾಣಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)