Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 12.06.2025

ಧೈನಂದಿನ ಧ್ಯಾನ(Kannada) – 12.06.2025

 

ಸಾಕ್ಷಿ ಹೇಗೆ?

 

"...ನಾನು ಯೆಹೋವನಿಗೆ ನಡೆದುಕೊಳ್ಳುತ್ತೇನಲ್ಲಾ; ಆತನು ತನ್ನ ದೂತನನ್ನು ನಿನ್ನೊಂದಿಗೆ ಕಳುಹಿಸಿ ನೀನು... ನನ್ನ ಮಗನಿಗೆ ಹೆಣ್ಣು ತೆಗೆದುಕೊಳ್ಳುವಂತೆ ಅನುಕೂಲಮಾಡುವನು" - ಆದಿ. 24:40

 

ಪ್ರೀತಿಯ ದೇವರ ಮಕ್ಕಳೇ! ಒಬ್ಬ ಹಿರಿಯ ಸೇವಕರು ತನ್ನ ಸಹಾಯಕ ಸೇವಕರ ಬಳಿ ತಮ್ಮಾ! ಪಕ್ಕದ ಹಳ್ಳಿಗೆ ಹೋಗಿ ಮೇರಿ ಎಂಬ ಸಹೋದರಿಯ ಮನೆಯಲ್ಲಿ ಪ್ರಾರ್ಥನೆಯನ್ನು ನಡೆಸಿ ಬಿಟ್ಟು ಬಾ ಎಂದು ಹೇಳಿ ಕಳುಹಿಸಿದರು. ಆ ಹಳ್ಳಿಗೆ ಹೋದ ಸೇವಕರಿಗೋ ಸಹೋದರಿ ಮೇರಿ ಯಾರು ಎಂದೇ ತಿಳಿದಿರಲಿಲ್ಲ. ಆದ್ದರಿಂದ ಅವರು ನೀರಿನ ಪೈಪ್ ಬಳಿ ನಿಂತರು. ನೀರಿನ ಪೈಪ್ ಬಳಿ ಒಂದೇ ಮಾತಿನ ವಾದ ನಡೆಯಿತು. ಸ್ವಲ್ಪ ಸಮಯದ ನಂತರ, ಮೌನವಾದಾಗ, ಆ ಸಹಾಯಕ ಸೇವಕರು ನೀರು ಹಿಡಿಯಲು ಬಂದ ಒಂದು ಸಹೋದರಿಯ ಬಳಿ ಮೇರಿ ಸಿಸ್ಟರ್ ಮನೆ ಯಾವುದು ಎಂದು ಕೇಳಿದರು. ಸಹೋದರಿ ತಕ್ಷಣ ನೀವು ಇಲ್ಲಿಗೆ ಬಂದು ಎಷ್ಟು ಹೊತ್ತಾಯಿತು ಎಂದು ಕೇಳಿದರು. ಆ ಸೇವಕರು ಜಗಳ ಪ್ರಾರಂಭವಾದಾಗಲೇ ಬಂದುಬಿಟ್ಟೆ ಎಂದು ಹೇಳಿದಾಗ, ಇಷ್ಟು ಹೊತ್ತು ಜಗಳವಾಡುತ್ತಿದ್ದಳಲ್ಲಾ ಅವಳೇ ನೀವು ಕೇಳಿದ ಜಗಳಗಂಟಿ ಮೇರಿ ಎಂದು ಹೇಳಿದರು. ಎಂತಹ ಸಾಕ್ಷಿ ನೋಡಿ. 

 

ಅಬ್ರಹಾಮನೊಂದಿಗಿದ್ದ ಸೇವಕನಾದ ಎಲೀಯೆಜರನು ತನ್ನ ಯಜಮಾನನಾದ ಅಬ್ರಹಾಮನ ಬಗ್ಗೆ ಸಾಕ್ಷಿ ಹೇಳುತ್ತಾನೆ. ಕರ್ತನು ನನ್ನ ಯಜಮಾನನನ್ನು ಬಹಳವಾಗಿ ಆಶೀರ್ವದಿಸಿ ಶ್ರೀಮಂತನಾಗಿ ಮಾರ್ಪಡಿಸಿ, ಎಲ್ಲದರಲ್ಲಿಯೂ ಆಶೀರ್ವದಿಸಿದ್ದಾರೆ. ಯಾವುದೇ ಪರಿಸ್ಥಿತಿಯಲ್ಲೂ ಆ ಕಾನಾನ್ಯರ ಕುಮಾರ್ತೆಗಳಲ್ಲಿ ನನ್ನ ಮಗನಿಗೆ ಮದುವೆ ಮಾಡಿಬಿಡಬಾರದು. ದೇವರ ಮಕ್ಕಳೊಂದಿಗೆ ಮಾತ್ರವೇ ಬಾಂಧವ್ಯವನ್ನು ರೂಪಿಸಲು ಜಾಗರೂಕನಾಗಿದ್ದಾನೆಂದು ಸಾಕ್ಷಿಯಾಗಿ ಹೇಳಿದನು. ಒಂದು ವೇಳೆ ಹೆಣ್ಣು ನೋಡುವ ಕಾರ್ಯ ವಿಫಲವಾದರೆ ಎಂದು ಎಲೀಯೆಜರನು ಕೇಳಿದಾಗ, ಅಬ್ರಹಾಮನು ನಾನು ಸೇವಿಸುವ ನನ್ನ ದೇವರು ತನ್ನ ದೂತನನ್ನು ನಿನ್ನ ಸಂಗಡ ಕಳುಹಿಸಿ ಕಾರ್ಯವನ್ನು ಸಫಲಮಾಡುವನು ಎಂದನು.

 

ದೇವರ ಮಕ್ಕಳೇ, ನಮ್ಮ ಸುತ್ತಲಿನ ಜನರು ನಮ್ಮ ಬಗ್ಗೆ ಯಾವ ರೀತಿಯ ಸಾಕ್ಷ್ಯಗಳನ್ನು ನೀಡುತ್ತಾರೆ? ಆ ಜಗಳಗಂಟಿ ಮೇರಿ ಎಂದಾ? ಶಾಂತಸ್ವರೂಪಿ ಮೇರಿ ಎಂದಾ? ನಮ್ಮ ಪ್ರಾರ್ಥನಾ ಜೀವನ, ಸತ್ಯವೇದ ಧ್ಯಾನ, ದೇವರಿಗೆ ವಿಧೇಯರಾಗಿ ಕೆಟ್ಟದ್ದಕ್ಕೆ ದೂರ ಸರಿಯುವುದು ಇಂತವುಗಳಿಗೆ ಗಮನಕೊಟ್ಟು ಸಾಕ್ಷಿ ಹೇಳಬೇಕು. ಒಂದು ಕಾಲದಲ್ಲಿ ನಾನು ಯೇಸುವಿಲ್ಲದ ಜೀವನವನ್ನು ನಡೆಸುತ್ತಿದ್ದಾಗ, ನನ್ನ ಬಗ್ಗೆ ಸಾಕ್ಷ್ಯಗಳು ಅಸಮಂಜಸವಾಗಿದ್ದವು. ಆದರೆ ಯೇಸು ನನ್ನ ಜೀವನದಲ್ಲಿ ಬಂದ ನಂತರ, ನನ್ನ ಸಂಬಂಧಿಕರೊಬ್ಬರು ಹೇಳಿದ್ದು, "ಯೇಸುಸ್ವಾಮಿ ನಿಮ್ಮನ್ನೂ ನಿಮ್ಮ ಜೀವನವನ್ನೂ ಬದಲಾಯಿಸಿಬಿಟ್ಟರು" ಎಂದು. ನನ್ನಲ್ಲಿನ ಬದಲಾವಣೆಯನ್ನು ನೋಡಿದ ನಂತರ ಅವರು ಹಾಗೆ ಹೇಳಿದರು. ಎಲೀಯೆಜರ್ ತನ್ನ ಯಜಮಾನನಾದ ಅಬ್ರಹಾಮನ ಬಗ್ಗೆ ನೀಡಿದ ಸಾಕ್ಷ್ಯದಂತೆಯೇ ನಿಮ್ಮ ಸಾಕ್ಷ್ಯವಿದೆಯೇ? ಅಥವಾ ನೀರಿನ ಪೈಪ್ ಬಳಿ ನೀರು ಹಿಡಿಯಲು ಬಂದ ಸಹೋದರಿ ಮೇರಿ ಬಗ್ಗೆ ನೀಡಿದ ಸಾಕ್ಷ್ಯದಂತಿದೆಯೇ? ಅದರ ಬಗ್ಗೆ ಯೋಚಿಸೋಣ. ಇತರರು ನಮ್ಮ ಬಗ್ಗೆ ನೀಡುವ ಒಳ್ಳೆಯ ಸಾಕ್ಷ್ಯವು ಬಹಳ ಮುಖ್ಯ. ಕರ್ತನೇ ನಮ್ಮನ್ನು ಆಶೀರ್ವದಿಸಲಿ! ಆಮೆನ್.

- Mrs. ಹೆಪ್ಸಿಬಾ ಇಮ್ಮಾನುವೇಲ್

 

ಪ್ರಾರ್ಥನಾ ಅಂಶ:

ನಮ್ಮೊಂದಿಗೆ ಸೇರಿರುವ ಉತ್ತರ ಪ್ರಾಂತ್ಯದ ಸೇವಕರ ಸುರಕ್ಷತೆಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)