Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 09.06.2025

ಧೈನಂದಿನ ಧ್ಯಾನ(Kannada) – 09.06.2025

 

ಯಾವುದೇ ವ್ಯತ್ಯಾಸವಿಲ್ಲ

 

"...ಯೆಹೂದ್ಯನಿಗೂ ಗ್ರೀಕನಿಗೂ ಹೆಚ್ಚು ಕಡಿಮೆ ಏನೂ ಇಲ್ಲ... ತನ್ನ ನಾಮವನ್ನು ಹೇಳಿಕೊಳ್ಳುವವರಿಗೆ ಹೇರಳವಾಗಿ ಕೊಡುವವನಾಗಿದ್ದಾನೆ." - ರೋಮಾ 10:12

 

ಒಮ್ಮೆ ಸುವಾರ್ತಾಬೋಧಕರ ಗುಂಪೊಂದು ಆಫ್ರಿಕನ್ ಬುಡಕಟ್ಟು ಜನಾಂಗದವರಿಗೆ ಸುವಾರ್ತೆಯನ್ನು ಸಾರಲು ಹೋದಾಗ ಜನರು ಅವರನ್ನು ಸ್ವಾಗತಿಸಿ ಹಸುವಿನ ಸಗಣಿಯಿಂದ ಲೇಪಿತ ನೆಲದ ಮೇಲೆ ಅವರನ್ನು ಕೂರಿಸಿದರು. ಅವರು ಅನಕ್ಷರಸ್ಥರಾಗಿದ್ದದರಿಂದ, ಸೇವೆಗೆ ಹೋದ ವಿದ್ಯಾವಂತ ಮತ್ತು ಉನ್ನತ ಹುದ್ದೆಯಲ್ಲಿದ್ದ ಇವರೋ, "ಈ ಜನರಿಗೆ ಸುವಾರ್ತೆಯನ್ನು ಹೇಗೆ ಸಾರುವುದು? ಹೇಳಿದರೆ ಅರ್ಥವಾಗುವುದಿಲ್ಲವಲ್ಲಾ. ಇವರಿಗೆ ಅರ್ಥವಾಗುವಂತೆ ಹೇಗೆ ಹೇಳುವುದು? ಹೇಳಿದರೆ ಏನಾದರೂ ಪ್ರಯೋಜನ ಇದೆಯಾ? ಅಥವಾ ಹೇಳದೆಯೇ ಸುಮ್ಮನೆ ಹೋಗಿಬಿಡೋಣವಾ?" ಎಂದು ಹಲವುಬಾರಿ ಯೋಚಿಸುತ್ತಿದ್ದರು. 

 

ಆಗ ಕರ್ತನು ಇವರೊಂದಿಗೆ ಮಾತನಾಡಲು ಪ್ರಾರಂಭಿಸಿದರು, "ನೀವು ನಗರಗಳಲ್ಲಿ ವಾಸಿಸುವ ವಿದ್ಯಾವಂತ ಜನರಿಗೆ ಪಾಪ ಕ್ಷಮಾಪಣೆ, ಪರಿಶುದ್ಧತೆ ಮತ್ತು ನಿತ್ಯಜೀವದ ಬಗ್ಗೆ ಬೋಧಿಸಿದ ಅದೇ ವಿಷಯಗಳನ್ನು ಸರಳ ಭಾಷೆಯಲ್ಲಿ ಮತ್ತು ಸರಳ ಪದಗಳಲ್ಲಿ ಅವರಿಗೆ ಕಲಿಸಿರಿ. ಇವರುಗಳಲ್ಲಿ ಕೆಲವರನ್ನು ನಾನು ಪರಲೋಕದ ಸಿಂಹಾಸನದ ಮೇಲೆ ಕೂರಿಸುವೆನು" ಎಂದು ಮಾತನಾಡಿದರು.

 

ನನಗೆ ಪ್ರಿಯರಾದ ದೇವರ ಮಕ್ಕಳೇ! ಕರ್ತನಾದ ಯೇಸುವಿಗೆ ಬಡವರು ಮತ್ತು ಶ್ರೀಮಂತರು, ವಿದ್ಯಾವಂತರು ಮತ್ತು ಅವಿದ್ಯಾವಂತರು, ಕ್ರೈಸ್ತರು ಮತ್ತು ಕ್ರೈಸ್ತರಲ್ಲದವರು ಎಂಬ ಭೇದಭಾವವೇ ಇಲ್ಲ. ಯೇಸು ಎಲ್ಲರನ್ನೂ ಸಮಾನವಾಗಿ ಪ್ರೀತಿಸುತ್ತಾರೆ. ಮಾನವನಾಗಿ ಹುಟ್ಟಿ ಪಾಪವಿಲ್ಲದೆ ಬದುಕಿದ ಯೇಸು ಕ್ರಿಸ್ತನು, ಮನುಷ್ಯರಾದ ನಾವು ತನ್ನಂತೆ ಬದುಕಬೇಕೆಂದು ಬಯಸುತ್ತಿದ್ದಾರೆ. ನಾವು ಎಷ್ಟೇ ಕೀಳರಿಮೆಯಲ್ಲಿದ್ದರೂ, ಯೇಸು ನಮ್ಮನ್ನು ಅರಸರು ಮತ್ತು ಪ್ರಭುಗಳೊಂದಿಗೆ ಕುಳ್ಳಿರಿಸಲು ಬಯಸುತ್ತಿದ್ದಾರೆ. ವಿದ್ಯೆಯಿಲ್ಲದ ಅವಿದ್ಯಾವಂತರಾಗಿದ್ದರೂ ಸಹ, ಪರಲೋಕದ ಸಿಂಹಾಸನದ ಮೇಲೆ ಕುಳ್ಳಿರಿಸಲು ಯೇಸು ಸಿದ್ಧನಾಗಿರುವಾಗ, ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಚಿಕ್ಕ ಮಗುವಿನಂತೆ ದೇವರ ರಾಜ್ಯವನ್ನು ಸ್ವೀಕರಿಸುವವರನ್ನು ತಡೆಯಬೇಡಿ ಎಂದು ಯೇಸು ಹೇಳಿದ್ದಾರಲ್ಲಾ. "ದೇವರ ರಾಜ್ಯವು ಇಂಥವರದೇ" ಎಂದು ಮಾರ್ಕ 10:14 ಹೇಳುತ್ತದೆ. 

 

ಆದ್ದರಿಂದ, ನಗರಗಳಿಗೆ ಮಾತ್ರ ಸುವಾರ್ತೆಯನ್ನು ಸಾರಲು ಹೋಗುವ ಸೇವಕರು ಹಳ್ಳಿಗಳಲ್ಲಿ, ಎಲ್ಲಾ ಮೂಲೆ ಗ್ರಾಮಗಳಲ್ಲೂ ಅವಿದ್ಯಾವಂತರಿಗೆ ಸುವಾರ್ತೆಯನ್ನು ಹೇಗೆ ಸಾರಬೇಕೆಂದು ತಿಳಿದಿರಬೇಕು. ಮಹಾ ದೊಡ್ಡ ವಿದ್ಯಾವಂತನಾದ ಪೌಲನನ್ನು ಸಹ ಸಾಮಾನ್ಯ ಜನರು ಮತ್ತು ಅನ್ಯಜನರ ಬಳಿಗೇ ಕಳುಹಿಸಲಾಯಿತು. ಅವರು ಸಾವಿರಾರು ಮತ್ತು ಲಕ್ಷಾಂತರ ಜನರನ್ನು ಕರ್ತನಿಗಾಗಿ ಸಂಪಾದಿಸಿದರು. ನಾವು ಎಲ್ಲರಿಗೂ ಯೇಸುವನ್ನು ಘೋಷಿಸೋಣ! 

- Mrs. ಪ್ರಿಸ್ಕಿಲ್ಲಾ ಥಿಯೋಫಿಲಸ್

 

ಪ್ರಾರ್ಥನಾ ಅಂಶ:

ನಮ್ಮೊಂದಿಗೆ ಸೇರಿರುವ ದೆಬೋರಾಳ್ ಗಳು ಮಾಡುವ ಸೇವೆಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)