Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 08.06.2025 (Kids Special)

ಧೈನಂದಿನ ಧ್ಯಾನ(Kannada) – 08.06.2025 (Kids Special)

 

Happy Birthday 

 

"ನೀವು ಭೂವಿುಗೆ ಉಪ್ಪಾಗಿದ್ದೀರಿ...." - ಮತ್ತಾಯ 5:13

 

ಮುದ್ದು ಪುಟಾಣಿಗಳೇ! ಮುಂದಿನ ತರಗತಿಗೆ ಹೋಗಿಬಿಟ್ರಾ? ನಿಮಗೆ ಹೊಸ ಶಿಕ್ಷಕರು, ಹೊಸ ತರಗತಿ ಕೊಠಡಿ ಮತ್ತು ಹೊಸ ಸ್ನೇಹಿತರು ಸಿಕ್ಕಿರಬೇಕು ಅಲ್ವಾ, ತುಂಬಾ ಖುಷಿ. ಈ ಹೊಸ ಶೈಕ್ಷಣಿಕ ವರ್ಷದಲ್ಲಿ, ನಾವು ಮೊದಲಿನಿಂದಲೂ ಚೆನ್ನಾಗಿ ಅಧ್ಯಯನ ಮಾಡಬೇಕು. ಸರಿ ಬನ್ನಿ ಪುಟ್ಟ ಮಕ್ಕಳೇ. ಈಗ ನಾವು ಈ ಜಗತ್ತಿನ ಪ್ರತಿಯೊಂದು ಮನೆಯಲ್ಲೂ ಸಿಗಲಿರುವ ಒಂದರ ಕುರಿತು ನೋಡಲಿದ್ದೇವೆ. ಅದು ಇಲ್ಲದೆ, ನಾವು ತಿನ್ನಲು ಸಾಧ್ಯವೇ ಇಲ್ಲ, ಅದು ಏನು ಎಂದು ತಾನೇ ಯೋಚಿಸುತ್ತಿದ್ದೀರ. ಏನದು ಕ್ಲೂ... ಕೊಡ್ಲಾ... ಸರಿ, ಕಥೆಯನ್ನು ಪ್ರಾರಂಭಿಸಿಬಿಡುತ್ತೇನೆ.

 

ಒಂದು ಊರಿನಲ್ಲಿ ಒಬ್ಬ ಶ್ರೀಮಂತ ವ್ಯಕ್ತಿ ಇದ್ದರು. ಅವರನ್ನು ತಿಳಿದಿಲ್ಲದವರು ಯಾರೂ ಇರಲಿಲ್ಲ. ಅವರು ಎಲ್ಲರಿಗೂ ಸಹಾಯ ಮಾಡುತ್ತಿದ್ದರು. ಆ ಮನೆಯಲ್ಲಿ ಅಡುಗೆ ಮಾಡುವ ಒಬ್ಬ ಆಂಟಿ ಇದ್ದರು, ರುಚಿಕರವಾಗಿ ಅಡುಗೆ ಮಾಡುತ್ತಿದ್ದರು. ಆ ಶ್ರೀಮಂತನ ಹುಟ್ಟುಹಬ್ಬ ಬಂತು. ಸಂಬಂಧಿಕರು ಮತ್ತು ಸ್ನೇಹಿತರು ಅವರಿಗೆ ಚಿನ್ನ, ಬೆಳ್ಳಿ ಮತ್ತು ವಜ್ರಗಳಲ್ಲಿ ವಿಭಿನ್ನ ಉಡುಗೊರೆಗಳನ್ನು ನೀಡಿದರು. ನೌಕರರು ಬಂದು ಅವರ ಮಾಲೀಕರನ್ನು ಅಭಿನಂದಿಸಿ ಹಬ್ಬದ ಊಟವನ್ನು ತಿಂದು ಹೊರಟುಹೋದರು. ಮರುದಿನ ಅವರೆಲ್ಲರೂ ಕೊಟ್ಟ ಉಡುಗೊರೆಗಳನ್ನು ಬಿಚ್ಚಿ ನೋಡಿದರು. ಅಲ್ಲಿ ಒಂದು ವಜ್ರದ ಉಂಗುರ, ಚಿನ್ನದ ಗಡಿಯಾರ ಮತ್ತು ಇತರ ಹಲವು ಸೂಪರ್ ಕಚ್ಚಾ ವಸ್ತುಗಳು ಇದ್ದವು. ಒಂದೇ ಒಂದು ಉಡುಗೊರೆ ಮಾತ್ರ ಭಾರವಾಗಿತ್ತು. ಅದನ್ನು ಬಿಚ್ಚಿ ನೋಡಿದಾಗ ಉಪ್ಪಿನ ಪ್ಯಾಕೆಟ್, ಓಹ್, ಇದನ್ನು ಯಾರು ಕೊಟ್ಟಿದ್ದು... ಅದರಲ್ಲಿ ಅಡುಗೆ ಕೆಲಸ ಮಾಡುವ ಆಂಟಿಯ ಹೆಸರು ಬರೆಯಲಾಗಿತ್ತು. ಆ ಸಾಹುಕಾರನಿಗೆ ತುಂಬಾ ಕೋಪ ಬಂತು.

 

ನಿನಗೆ ಏನಾದರೂ ಬುದ್ಧಿ ಇದೆಯಾ? ಹೋಗಿ ಹೋಗಿ ಯಾರಾದರೂ ಉಪ್ಪನ್ನು ಕೊಡುತ್ತಾರಾ? "ತೆಗೆದುಕೊಂಡು ಹೋಗು" ಎಂದು ಬೈದರು. ಯೇಸು ಕೂಡ ನೀನು ಭೂಮಿಗೆ ಉಪ್ಪಾಗಿದ್ದೀರ ಎಂದು ತಾನೇ ಹೇಳಿದ್ದಾರೆ. ಇದನ್ನು ಯೋಚಿಸಿಯೇ, ನಾವು ಉಪ್ಪು ಕೊಟ್ಟೆವು, ಆದರೆ ಸಾಹುಕಾರರು ತುಂಬಾ ಕೋಪಗೊಂಡರಲ್ಲಾ ಎಂದು ಯೋಚಿಸುತ್ತಲೇ, ಆ ದಿನ ಮಾಡಿದ ಆಹಾರದಲ್ಲಿ ಉಪ್ಪು ಹಾಕಲು ಮರೆತುಬಿಟ್ಟರು. ಆ ಸಾಹುಕಾರನ ಮನೆಯಲ್ಲಿ ಎಲ್ಲರೂ ಊಟ ಮಾಡಲು ಕುಳಿತು ಊಟ ಬೇಡ, ಊಟದಲ್ಲಿ ರುಚಿಯೇ ಇಲ್ಲ ಎಂದು ಹೇಳಿಬಿಟ್ಟು ಎದ್ದು ಹೊರಟುಹೋದರು. ಆಗ ಸಾಹುಕಾರರು ಉಪ್ಪು ಎಷ್ಟು ಮುಖ್ಯ ಎಂದು ತಿಳಿದುಕೊಂಡರು. ನನಗೆ ಸಿಕ್ಕ ಚಿನ್ನ ಮತ್ತು ಬೆಳ್ಳಿಯಂತಹ ಎಲ್ಲಾ ದುಬಾರಿ ಉಡುಗೊರೆಗಳನ್ನು ನಾನು ತಿನ್ನಲು ಸಾಧ್ಯವಿಲ್ಲ. ನನಗೆ ಈಗ ಬೇಕಾಗಿರುವುದು ಆ ಉಪ್ಪು ಎಂದು ಅವರು ಹೇಳಿದರು. ಅಡುಗೆಯವರಾಗಿ ಕೆಲಸ ಮಾಡುವ ಆಂಟಿ ಬೇಗನೆ ಹೋಗಿ ಅಗತ್ಯವಿರುವಷ್ಟು ಉಪ್ಪನ್ನು ತಂದು ಎಲ್ಲರ ಆಹಾರದಲ್ಲಿ ಬೆರೆಸಿದರು. ಎಲ್ಲರೂ ಸಂತೋಷವಾಗಿ ಹೊಟ್ಟೆತುಂಬ ಊಟ ಮಾಡುತ್ತಲೇ ಉಪ್ಪಿನ ಅವಶ್ಯಕತೆಯನ್ನು ತಿಳಿದುಕೊಂಡರು.

 

ಏನು ಮುದ್ದು ಮಕ್ಕಳೇ! "ಉಪ್ಪಿಲ್ಲದ ಆಹಾರ ಕಸಕ್ಕೆ" ಎಂಬ ನಾಣ್ಣುಡಿ ಸರಿಯಾಗಿದೆ ಅಲ್ವಾ. ನೀವು ಕೂಡ ಉಪ್ಪಿನಷ್ಟೇ ರುಚಿಕರವಾದ ಜೀವನವನ್ನು ನಡೆಸಬೇಕು. ಯೇಸು ನಿಮ್ಮೊಂದಿಗಿದ್ದರೆ, ನೀವು ಎಲ್ಲರಿಗೂ ಆಶೀರ್ವಾದಕರವಾಗಿ ಮಾರ್ಪಡುತ್ತೀರ. ಸರಿ ಅಲ್ವಾ ಪುಟಾಣಿಗಳೇ!

- Sis. ದೆಬೋರಾಳ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)