Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 15.05.2025

ಧೈನಂದಿನ ಧ್ಯಾನ(Kannada) – 15.05.2025

 

ಹೆಮ್ಮೆ ಬೇಡ

 

"...ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ, ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ..." - ಯಾಕೋಬ 4:6

 

ಮೂವರು ಒಳ್ಳೆಯ ಮನುಷ್ಯರು ಸತ್ತು ಪರಲೋಕಕ್ಕೆ ಹೋದರು. ಅಲ್ಲಿ ದೇವರ ಪಕ್ಕದಲ್ಲಿ ಒಂದೇ ಒಂದು ಕುರ್ಚಿ ಮಾತ್ರ ಖಾಲಿ ಇತ್ತು, ಈಗ "ಆ ಕುರ್ಚಿಯಲ್ಲಿ ಯಾರು ಕುಳಿತುಕೊಳ್ಳೋದು? ಎಂಬ ಪ್ರಶ್ನೆ ಅವರೊಳಗೆ ಉದ್ಭವಿಸಿತು. ಮೊದಲ ವ್ಯಕ್ತಿ ದೇವರ ಮುಂದೆ ತನ್ನ ವಾದವನ್ನು ಮಂಡಿಸಿದನು. ದೇವರೇ, ನಾನು ನಿನಗೆ ಆಲಯ ಕಟ್ಟಲು ಬಹಳಷ್ಟು ಸಾಮಗ್ರಿಗಳನ್ನು ತೆಗೆದುಕೊಟ್ಟಿದ್ದೇನೆ, ಆದ್ದರಿಂದ ಆ ಕುರ್ಚಿಯ ಮೇಲೆ ಕುಳಿತುಕೊಳ್ಳಲು ನಾನೊಬ್ಬನೇ ಅರ್ಹನು ಎಂದನು. ಎರಡನೆಯ ವ್ಯಕ್ತಿ, ಓ ದೇವರೇ, ಆ ಆಲಯವನ್ನು ನಿರ್ವಹಿಸುತ್ತಿದ್ದವನು ನಾನೇ, ಆದ್ದರಿಂದ ಆ ಕುರ್ಚಿ ನನ್ನದೇ ಎಂದನು. ಮೂರನೆಯ ವ್ಯಕ್ತಿ ತುಂಬಾ ಮೌನವಾಗಿ ನಿಂತುಕೊಂಡಿದ್ದನು. ದೇವರು ಅವನ ಬಳಿ ಕೇಳಿದರು, ನಿನಗೆ ಈ ಕುರ್ಚಿ ಬೇಡವೇ?" ಎಂದು. ಅದಕ್ಕೆ ಅವನು ಕರ್ತನೇ, ಲೋಕದಲ್ಲಿ ನಿನ್ನ ಬಗ್ಗೆ ಹೆಚ್ಚಾಗಿ ನಾನು ಮಾತನಾಡಿಲ್ಲ. ನನ್ನಿಂದ ಸಾಧ್ಯವಾದಷ್ಟು

ಜನರಿಗೆ ಸಣ್ಣಪುಟ್ಟ ಸಹಾಯವನ್ನು ಮಾಡಿದ್ದೇನೆ. ಆದ್ದರಿಂದ, ನಾನು ಅವರೊಂದಿಗೆ ಸ್ಪರ್ಧಿಸಲು ಅರ್ಹನಲ್ಲ ಎಂದು ಹೇಳಿದನು. ಆದರೆ ದೇವರು ಆ ಕುರ್ಚಿಯನ್ನು ಮೂರನೆಯವನಿಗೆ ಕೊಟ್ಟರು. ಮೊದಲ ವ್ಯಕ್ತಿ ತನ್ನ ಸೌಕರ್ಯಗಳ ಬಗ್ಗೆ ಮಾತನಾಡುತ್ತಾನೆ. ಎರಡನೆಯ ವ್ಯಕ್ತಿ ತನ್ನ ಕೌಶಲ್ಯದ ಬಗ್ಗೆ ಮಾತನಾಡುತ್ತಾನೆ. ಮೂರನೆಯ ವ್ಯಕ್ತಿಗೆ ಎರಡೂ ಇದ್ದವು. ಆದರೆ ನಾನು ದೊಡ್ಡದಾಗಿ ಏನೂ ಮಾಡಲಿಲ್ಲ, ನನ್ನಿಂದ ಸಾಧ್ಯವಾದಷ್ಟು ಮಾಡಿದೆ ಎಂದು ತಾಳ್ಮೆಯಿಂದ ಹೇಳಿದನು.

 

ಕ್ರಿಸ್ತನಲ್ಲಿ ಪ್ರೀತಿಯ ದೇವರ ಮಕ್ಕಳೇ! ನೀವು ಏನೇ ಮಾಡಿದರೂ, ಅದನ್ನು ದೇವರಿಗಾಗಿ ಎಂದು ಪೂರ್ಣ ಹೃದಯದಿಂದ ಮಾಡಿ. ನೀವು ಮನುಷ್ಯರನ್ನು ಮೆಚ್ಚಿಸಲು ಕೆಲಸಗಳನ್ನು ಮಾಡಬಾರದು, ಬದಲಾಗಿ ಕರ್ತನನ್ನು ಮೆಚ್ಚಿಸಲು ಮಾಡಬೇಕು. ಇಂದು, ಇತರರ ಹೊಗಳಿಕೆ ಗಳಿಸುವುದಕ್ಕಾಗಿಯೇ ಕೆಲಸಗಳನ್ನು ಮಾಡುವ ಅನೇಕ ಜನರಿದ್ದಾರೆ. ನೀವು ಇಂದು ಅನೇಕ ಚರ್ಚುಗಳಿಗೆ ಹೋದರೆ, ದೀಪಗಳು ಮತ್ತು ಫ್ಯಾನ್‌ಗಳ ಮೇಲೆ ಹೆಸರುಗಳನ್ನು ಬರೆದಿರುವುದನ್ನು ನೀವು ನೋಡುತ್ತೀರಿ. ಇದರ ಅರ್ಥ ಏನು? ಇತರರು ತಮ್ಮ ಚಟುವಟಿಕೆಗಳ ಬಗ್ಗೆ ತಿಳಿದುಕೊಳ್ಳಲಿ ಎಂಬ ಉದ್ದೇಶದಿಂದ! ಮೊದಲ ಇಬ್ಬರು ವ್ಯಕ್ತಿಗಳು ತಮ್ಮ ಪ್ರತಿಭೆಯ ಬಗ್ಗೆ ಮಾತನಾಡುತ್ತಾರೆ, 

 

"ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ, ಆದರೆ ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ" ಎಂದು ಸತ್ಯವೇದವು ಹೇಳುತ್ತಿದೆ. ನಾವು ಸೋತು ಹೋಗದೆ ದೇವರಿಗಾಗಿ ಒಳ್ಳೆಯ ಕೆಲಸಗಳನ್ನು ಮಾಡುವುದನ್ನು ಮುಂದುವರಿಸೋಣ. ನಾವು ದೇವರಿಗಾಗಿ ಮಾಡುವ ಎಲ್ಲದರ ಪ್ರತಿಫಲಗಳು ಸರಿಯಾದ ಸಮಯದಲ್ಲಿ ನಮಗೆ ಸಿಗುತ್ತವೆ. ಯೇಸು ತನ್ನ ಪರ್ವತ ಪ್ರಸಂಗದಲ್ಲಿ, ಮನುಷ್ಯರು ನೋಡುವ ಹಾಗೆ ಕಾಣಿಕೆಗಳನ್ನೋ, ಉಪವಾಸವನ್ನೋ, ಪ್ರಾರ್ಥನೆಯನ್ನೋ ಮಾಡಬಾರದು ಎಂದು ಹೇಳಿದ್ದಾರೆ. ಪೌಲನು ಹೇಳುವಾಗ, ತಾನು ಕರ್ತನಿಗಾಗಿ ದೊಡ್ಡದೇನನ್ನೂ ಮಾಡಿಲ್ಲ ಎಂದು ಹೇಳುತ್ತಾರೆ. ಅವರು ತನ್ನ ಸೇವೆಯಲ್ಲಿ ದೇವರಿಗಾಗಿ ದೊಡ್ಡ ದೊಡ್ಡ ಕಾರ್ಯಗಳನ್ನು ಮಾಡಿದವರು. ಅವರೋ ತನ್ನನ್ನು ತಾನು ತಗ್ಗಿಸಿಕೊಳ್ಳುವುದನ್ನು ನೋಡುತ್ತೇವೆ. ನಾವು ಏನೇ ಮಾಡಿದರೂ, ದೇವರ ಸಹಾಯದಿಂದಲೇ ಮಾಡುತ್ತೇವೆ. ನಾವು ಅದರಲ್ಲಿ ಹೆಮ್ಮೆ ಪಡಬಾರದು. ಆಮೆನ್! ಹಲ್ಲೇಲೂಯಾ!

- Pr. S.A. ಇಮ್ಮಾನುವೇಲ್

 

ಪ್ರಾರ್ಥನಾ ಅಂಶ:

ಅನೇಕ ಹೊಸ ಹಳ್ಳಿಗಳಲ್ಲಿ VBS ಸೇವೆಯ ಮೂಲಕ ಮಕ್ಕಳೆಲ್ಲರೂ ದೇವರ ಪ್ರೀತಿಯನ್ನು ತಿಳಿದುಕೊಳ್ಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)