Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 14.05.2025

ಧೈನಂದಿನ ಧ್ಯಾನ(Kannada) – 14.05.2025

 

ಮಾನಸಾಂತರಕ್ಕೆ ಕಾರಣ

   

"...ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಹೀಗಾದರೆ ಅವರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು" - ಮತ್ತಾಯ 5:16

  

ದಕ್ಷಿಣ ಆಫ್ರಿಕಾದಲ್ಲಿ ಅಟೆನ್‌ಬರ್ಟ್ ಎಂಬ ಹಳ್ಳಿಯಲ್ಲಿ ಒಬ್ಬ ಕ್ರೂರ ವ್ಯಕ್ತಿ ವಾಸಿಸುತ್ತಿದ್ದ. ಅವನು ಒಬ್ಬ ಕೊಲೆಗಾರ. ಅವನನ್ನು ಕೊಂದು ಅವನ ತಲೆಯನ್ನು ತಂದವರಿಗೆ ಬಹುಮಾನ ನೀಡುವುದಾಗಿ ಸರ್ಕಾರ ಹೇಳಿಕೆ ನೀಡಿತು. ಅವನನ್ನು ಹಿಡಿದು ಕೊಲ್ಲಲು ಎಷ್ಟೋ ಜನರು ಹೋದರು. ಆ ಕ್ರೂರಿ ಮನುಷ್ಯ ಅವರೆಲ್ಲರನ್ನೂ ಕೊಂದನು. ಈ ಅವಧಿಯಲ್ಲಿ, ರಾಬರ್ಟ್ ಮೊಬೆಟ್ ಎಂಬ ವ್ಯಕ್ತಿ ಆ ಹಳ್ಳಿಗೆ ಸೇವೆಗೆ ಹೋದರು. ಆ ಹಳ್ಳಿಯಲ್ಲಿ ಒಂದು ಗುಡಿಸಲು ಕಟ್ಟಿಕೊಂಡು, ಅಲ್ಲಿಯೇ ಉಳಿದು, ಚಿಕ್ಕ ಮಕ್ಕಳಿಗೆ ಕಥೆಗಳನ್ನು ಕಲಿಸುತ್ತಿದ್ದರು. ಕಥೆ ಕೇಳಲು ಬಂದ ಮಕ್ಕಳು ತುರಿಕೆ ಮತ್ತು ಹುಣ್ಣುಗಳೊಂದಿಗೆ ಬಂದರು. ಅವರು ಅವರಿಗೆ ಸ್ನಾನ ಮಾಡಿಸಿ, ಸ್ವಚ್ಛಗೊಳಿಸಿ, ಬಟ್ಟೆ ಒಗೆದುಕೊಟ್ಟರು. ಇದನ್ನು ಕಂಡ ಕ್ರೂರಿಯೂ ಕೊಲೆಗಾರನೂ ಆಗಿದ್ದ ಆ ಮನುಷ್ಯನು ಮಾನಸಾಂತರ ಹೊಂದಿದನು. ಸತ್ಯವೇದವನ್ನು ಓದಿ ಅವನು ತನ್ನ ಮನಸ್ಸನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡು ಸರ್ಕಾರದಿಂದ ಕ್ಷಮೆಯನ್ನು ಪಡೆದು ಹೊಸ ಮನುಷ್ಯನಾಗಿ ಮಾರ್ಪಟ್ಟನು.

 

ಪ್ರೀತಿಯ ದೇವಜನರೇ, ಮೇಲಿನ ವಚನವು ಮತ್ತಾ. 5:16 ಏನು ಹೇಳುತ್ತದೆ? ಜನರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು ಎಂದು. ಮೇಲೆ ಕಂಡ ದೇವಮನುಷ್ಯನು ಆ ಕ್ರೂರಿ ಕೊಲೆಗಾರನಿಗೆ ಸತ್ಯವೇದ ಪಾಠ ಕಲಿಸಿದರಾ? ಅವರು ಅವನನ್ನು ಭೇಟಿಯಾಗಲಿಲ್ಲ, ಬದಲಿಗೆ ಆ ದೇವಮನುಷ್ಯನ ಪ್ರತಿಯೊಂದು ಚಟುವಟಿಕೆಯನ್ನು ಗಮನಿಸಿ, ತಾನೇ ಮುಂದೆ ಬಂದು, ಸತ್ಯವೇದವನ್ನು ತೆಗೆದುಕೊಂಡು ಓದಿ, ತನ್ನ ಹಳೆಯ ಜೀವನವನ್ನು ಬಿಟ್ಟು ಸಂಪೂರ್ಣವಾಗಿ ಬದಲಾದನು.  

 

ನನಗೆ ಪ್ರಿಯವಾದ ದೇವರ ಮಕ್ಕಳೇ, ನಮ್ಮ ಸುತ್ತಲೂ ಅನೇಕ ಜನರು ವಾಸಿಸುತ್ತಿದ್ದಾರೆ. ಅವರು ಪ್ರತಿದಿನ ನಮ್ಮನ್ನು ಗಮನಿಸುತ್ತಿದ್ದಾರೆ. ನಾವು ವಾಸಿಸುವ ಸ್ಥಳವೋ, ಓದುತ್ತಿರುವ ಸ್ಥಳವೋ, ಕೆಲಸ ಮಾಡುತ್ತಿರುವ ಸ್ಥಳವೋ ಯಾವ ಸ್ಥಳವಾಗಿದ್ದರೂ ನಾವು ದೇವರ ಪ್ರೀತಿಯನ್ನು ಹೇಗೆ ಪ್ರದರ್ಶಿಸುತ್ತಿದ್ದೇವೆ? ನಮ್ಮ ಕ್ರಿಯೆಗಳು ಎಂಥದ್ದಾಗಿವೆ? ನಮ್ಮ ಕಾರ್ಯಗಳು ಆ ದೇವ ಮನುಷ್ಯ ರಾಬರ್ಟ್ ಮೊಬೆಟ್‌ನಂತಿದ್ದರೆ, ಇತರರು ಖಂಡಿತವಾಗಿಯೂ ನಮ್ಮ ದೇವರನ್ನು ಸ್ವೀಕರಿಸುತ್ತಾರೆ. ಬೋಧನೆಗಿಂತ ಒಳ್ಳೆಯ ಕಾರ್ಯಗಳು ಹೆಚ್ಚಿನ ಬದಲಾವಣೆಯನ್ನು ತರುತ್ತವೆ. ಇಂದಿನ ನಮ್ಮ ಎಲ್ಲಾ ಕಾರ್ಯಗಳು ಒಳ್ಳೆಯ ಕಾರ್ಯಗಳಾಗಿ ಮಾರ್ಪಡಲಿ. ದೇವರು ನಿಮ್ಮನ್ನು ಆಶೀರ್ವದಿಸಲಿ. ಆಮೆನ್.

- Mrs. ಹೆಪ್ಸಿಬಾ ಇಮ್ಮಾನುವೇಲ್ 

 

ಪ್ರಾರ್ಥನಾ ಅಂಶ:

VBS ಹಾಡುಗಳು ಅನೇಕ ಮಕ್ಕಳ ಹೃದಯಗಳಲ್ಲಿ ಬೇರೂರಲು, ಅವರು ಹಾಡುವುದನ್ನು ಕೇಳುವ ಪೋಷಕರು ಕ್ರಿಸ್ತನ ಪ್ರೀತಿಯನ್ನು ತಿಳಿದುಕೊಳ್ಳಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)