Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 13.05.2025

ಧೈನಂದಿನ ಧ್ಯಾನ(Kannada) – 13.05.2025

 

ದೇವರ ಚಿತ್ತಕ್ಕೆ ಒಪ್ಪಿಸಿಕೊಡು 

 

"...ನಾನು ನುಡಿದಿದ್ದೇನೆ, ಅದನ್ನು ನಾನು ಈಡೇರಿಸುವೆನು; ನಾನು ನಿರ್ಣಯಿಸಿದ್ದೇನೆ, ಅದನ್ನು ನಾನು ಮಾಡುವೆನು" - ಯೆಶಾಯ 46:11

 

ನನ್ನ ಹಿರಿಯ ಮಗನ ಜೀವನದಲ್ಲಿ ದೇವರು ಮಾಡಿದ ಅದ್ಭುತವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಕಾಲೇಜಿನಲ್ಲಿ ಪದವಿಪೂರ್ವ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ಅದೇ ಕಾಲೇಜಿನಲ್ಲಿ ಸ್ನಾತಕೋತ್ತರ ಅಧ್ಯಯನವನ್ನು ಮುಂದುವರಿಸಲು ಅವನು ಯೋಜಿಸಿದ್ದನು. Entrance exam ಬರೆಯಬೇಕಿದ್ದ ದಿನದಲ್ಲಿ , ಕೆಲವು ಅಡೆತಡೆಗಳಿಂದಾಗಿ ಪರೀಕ್ಷಾ ಕೊಠಡಿಯನ್ನು ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗಲಿಲ್ಲ. ಬಹಳ ಸೋತುಹೋಗಿ ನಿರಾಶೆಯಿಂದ ಕಾಣಲ್ಪಟ್ಟ ಅವನ ಬಳಿ ಪರೀಕ್ಷೆ ಮುಗಿಸಿ ಹೊರಬಂದಿದ್ದ ಅವನ ಸ್ನೇಹಿತ "ಯೇಸಪ್ಪ, ನಿನಗೆ ಇದಕ್ಕಿಂತ ದೊಡ್ಡದಾಗಿ ಏನೋ ಮಾಡಲಿದ್ದಾರೆ" ಎಂದು ಹೇಳಿದನು. ಅವನೂ ಸಹ ಸದ್ದಿಲ್ಲದೆ ಬಂದುಬಿಟ್ಟು ಈ ವಿಷಯವನ್ನು ನನ್ನೊಂದಿಗೆ ಹಂಚಿಕೊಂಡನು. ನಂತರದ ದಿನಗಳಲ್ಲಿ, ಅವನು ತನ್ನ ನಿರೀಕ್ಷೆಗಳನ್ನು ಮೀರಿ ಉನ್ನತ ಶಿಕ್ಷಣವನ್ನು ಮುಂದುವರೆಸುವಂತೆ ಮಾಡಿ, ತನ್ನ ಜೀವನದಲ್ಲಿ ದೇವರು ಇಟ್ಟಿದ್ದ ಯೋಜನೆಯನ್ನು ಪೂರೈಸಿ ಆಶೀರ್ವದಿಸಿದ್ದಾರೆ.

 

ಹಲವು ಬಾರಿ ನಾವು ಎಲ್ಲವೂ ಯೋಜನೆಯಂತೆ, ನಮ್ಮ ಇಚ್ಛೆಯಂತೆ ನಡೆಯಬೇಕೆಂದು ಭಾವಿಸುತ್ತೇವೆ. ಅವು ಅಧಿಕವಾಗಿ ಒಳ್ಳೆಯ, ಪ್ರಾಮಾಣಿಕ ಮತ್ತು ಸರಿಯಾದ ವಿಷಯಗಳಾಗಿದ್ದರೂ, ಅವು ನಾವು ಬಯಸಿದ ರೀತಿಯಲ್ಲಿ ನಡೆಯದಿದ್ದಾಗ ನಾವು ತುಂಬಾ ನಿರಾಶೆಗೊಳ್ಳುತ್ತೇವೆ. ಆದರೆ ದೇವರ ಯೋಜನೆಯ ಪ್ರಕಾರ ವಿಷಯಗಳು ನಡೆದಾಗ, ನಮ್ಮ ಜೀವನವು ಅದ್ಭುತವಾಗಿರುತ್ತದೆ. 

  

ಆದಿಕಾಂಡ 39 ಮತ್ತು 40 ನೇ ಅಧ್ಯಾಯಗಳಲ್ಲಿ, ನಾವು ಯೋಸೇಫನ ಜೀವನದ ಬಗ್ಗೆ ಧ್ಯಾನಿಸುತ್ತೇವೆ. ತನ್ನ ತಂದೆಗೆ ಹತ್ತಿರವಾದ ಪ್ರೀತಿಯ ಮಗನಂತೆ ಬದುಕುತ್ತಿದ್ದ ಯೋಸೇಫನ ಜೀವನದಲ್ಲಿ ದೇವರ ಯೋಜನೆಯು ಇದ್ದುದರಿಂದ ಅನಿರೀಕ್ಷಿತ ಕಷ್ಟಕರ ಸನ್ನಿವೇಶಗಳನ್ನು ಎದುರಿಸಬೇಕಾಯಿತು. 11 ವರ್ಷಗಳ ಕಾಲ ಕಾರಣವಿಲ್ಲದೆ ಸೆರೆಮನೆಯಲ್ಲಿದ್ದಾಗ ಅಲ್ಲಿದ್ದ ಪಾನದಾಯಕನ ಕನಸಿಗೆ ಯೋಸೇಫನು ಅರ್ಥವನ್ನು ಹೇಳುತ್ತಾನೆ. ಅವನು ಬಿಡುಗಡೆಯಾಗಿ ಕೆಲಸಕ್ಕೆ ಮರಳಿದಾಗ, ಅವನು ಫರೋಹನಿಗೆ ತನ್ನ ಬಗ್ಗೆ ಹೇಳಿ ಬಿಡುಗಡೆ ಮಾಡುವಂತೆ ಕೇಳಿಕೊಳ್ಳುತ್ತಾನೆ. ಆದರೆ ಪಾನದಾಯಕನು ಎರಡು ವರ್ಷಗಳಿಂದ ಇದನ್ನು ಮರೆತುಹೋಗುತ್ತಾನೆ. ಫರೋಹನಿಗೆ ತಿಳಿಸಿದ್ದರೆ, ಅವನು ಯೋಸೇಫನನ್ನು ಕರೆಸಿ, ವಿಚಾರಣೆ ನಡೆಸಿ, ಇಸ್ರಾಯೇಲ್ ದೇಶಕ್ಕೆ ವಾಪಸ್ ಕಳುಹಿಸಿರಬಹುದು. ಆದರೆ ಅದು ದೇವರ ಯೋಜನೆಯಲ್ಲ. ದೇವರು ಯೋಸೇಫನನ್ನು ಇಡೀ ಐಗುಪ್ತ ದೇಶದ ಮೇಲೆ ಅಧಿಕಾರಿಯನ್ನಾಗಿ ಮಾಡಲು ಬಯಸಿದ್ದರು. ನಮ್ಮ ದೇವರು ನಾವು ಬಯಸುವುದಕ್ಕಿಂತ ಉನ್ನತ ಸ್ಥಾನದಲ್ಲಿ ಇಡಲು ಬಯಸುತ್ತಾರೆ. ಏಕೆಂದರೆ ಅವರ ಪ್ರೀತಿ ಅತ್ಯಂತ ಶ್ರೇಷ್ಠವಾದ ಪ್ರೀತಿ. 

 

ಪ್ರೀತಿಯ ದೇವರ ಮಕ್ಕಳೇ! ದೇವರು ನಮ್ಮ ಜೀವನದ ಕುರಿತು ಒಂದು ಸ್ಪಷ್ಟವಾದ ಯೋಜನೆಯನ್ನು ಹೊಂದಿದ್ದಾರೆ. ಆದ್ದರಿಂದ, ಸಂಭವಿಸುವ ವಿರೋಧಾತ್ಮಕ ಘಟನೆಗಳು ಮತ್ತು ಸನ್ನಿವೇಶಗಳಿಂದ ನಾವು ನಿರುತ್ಸಾಹಗೊಳ್ಳಬಾರದು. ನಾವು ನಮ್ಮ ಜೀವನವನ್ನು ಆತನ ಚಿತ್ತಕ್ಕೆ ಒಪ್ಪಿಸಿದಾಗ, ದೇವರು ನಮ್ಮಲ್ಲಿ ತನ್ನ ಯೋಜನೆಯನ್ನು ಕಾರ್ಯಗತಗೊಳಿಸಲು ಸಾಧ್ಯವಾಗುತ್ತದೆ.   

- Mrs. ಜೆಬಕನಿ ಶೇಖರ್

 

ಪ್ರಾರ್ಥನಾ ಅಂಶ:

VBS ಸೇವೆಯ ಮೂಲಕ ಅನೇಕ ಮಕ್ಕಳು ರಕ್ಷಣೆ ಹೊಂದುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)