ಧೈನಂದಿನ ಧ್ಯಾನ(Kannada) – 14.03.2025
ಧೈನಂದಿನ ಧ್ಯಾನ(Kannada) – 14.03.2025
ಆಮೆ
"...ನೀವು ಎಷ್ಟರವರೆಗೆ ಎರಡು ಮನಸ್ಸುಳ್ಳವರಾಗಿರುವಿರಿ?...." - 1 ಅರಸು. 18:21
ಆಮೆ ಎಂದಕೂಡಲೇ, ಅದರ ಚಿಪ್ಪು ಮತ್ತು ಅದರ ನಿಧಾನ ಚಲನೆಯ ಬಗ್ಗೆ ಯೋಚಿಸುತ್ತೇವೆ. ಮತ್ತು ಅದರ ಮೇಲಿನ ಚಿಪ್ಪು ತುಂಬಾ ಬಲವಾದದ್ದು. ಅದಕ್ಕೆ ಅಪಾಯ ಸಂಭವಿಸುತ್ತದೆ ಎಂದು ಭಾವಿಸಿದರೆ, ಅದು ತನ್ನ ಚಿಪ್ಪಿನೊಳಗೆ ಅಡಗಿಕೊಳ್ಳುತ್ತದೆ. ಇದು ನೀರಿನಲ್ಲಿ ಮತ್ತು ಭೂಮಿಯಲ್ಲಿ ಬದುಕಬಲ್ಲದು. ಅದೇ ರೀತಿ, ನಾವು ಅಪಾಯದಲ್ಲಿದ್ದಾಗ, ಈ ಆಮೆಯಂತೆ, ನಮ್ಮ ಸ್ವಂತ ಶಕ್ತಿಯನ್ನು ಹುಡುಕುತ್ತೇವೆ. ಕರ್ತನೊಂದಿಗೆ ಇರುವ ಹಾಗೆ ಇದ್ದುಕೊಂಡು, ಲೋಕದ ವಿಷಯಗಳಿಗೂ ಅಂಟಿಕೊಂಡಿರುವ ಅನೇಕರಿದ್ದಾರೆ.
ಸತ್ಯವೇದದಲ್ಲಿಯೂ ಅನನೀಯ ಮತ್ತು ಸಫೈರಳ ಕುಟುಂಬವು ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಅಪೊಸ್ತಲರ ಕಾಲದಲ್ಲಿ ಎಲ್ಲರೂ ಒಟ್ಟಿಗೆ ವಾಸಿಸುತ್ತಿದ್ದರು. ನಂತರ ವಿಶ್ವಾಸಿಗಳು ತಮ್ಮ ಜಮೀನುಗಳನ್ನು ಮತ್ತು ಮನೆಗಳನ್ನು ಮಾರಿ ಅಪೊಸ್ತಲರ ಪಾದಗಳ ಬಳಿ ಇಟ್ಟರು. ಅನನೀಯ ಮತ್ತು ಸಫೈರಳ ಕುಟುಂಬವು ಸಹ ತಮ್ಮ ಭೂಮಿಯನ್ನು ಮಾರಿ ಪೇತ್ರನಿಗೆ ಕೊಡಲು ಅವರ ಬಳಿಗೆ ಬಂದರು. ಆದರೆ ಅನನೀಯನು ಕ್ರಯದ ಒಂದು ಭಾಗವನ್ನು ತಮಗಾಗಿ ಇಟ್ಟುಕೊಂಡು ಉಳಿದದ್ದನ್ನು ಪೇತ್ರನ ಪಾದಗಳ ಬಳಿ ಇಟ್ಟನು. ಆಗ ಪೇತ್ರನು ಅವನಿಗೆ, “ಪವಿತ್ರಾತ್ಮನಿಗೆ ಸುಳ್ಳು ಹೇಳಲು ಸೈತಾನನು ನಿನ್ನ ಹೃದಯವನ್ನು ತುಂಬಿದ್ದೇನು?” ಎಂದು ಕೇಳಿದನು. "ನೀನು ಸುಳ್ಳು ಹೇಳಿದ್ದು ಮನುಷ್ಯರಿಗಲ್ಲ, ದೇವರಿಗೆ" ಎಂದು ಹೇಳಿದರು. ಈ ಮಾತುಗಳನ್ನು ಕೇಳಿದ ಕೂಡಲೇ ಅನನೀಯನು ಬಿದ್ದು ಸತ್ತನು. ಇದನ್ನು ತಿಳಿಯದೆ ಒಳಗೆ ಬಂದ ಸಫೈರಳಿಗೂ ಇದೇ ಸ್ಥಿತಿ ಬಂತು. ಇತರ ವಿಶ್ವಾಸಿಗಳಂತೆ ತಾನು ಸಹ ವಿಧೇಯತೆಯುಳ್ಳವನು ಮತ್ತು ಪರಿಶುದ್ಧನು ಎಂದು ತೋರಿಸಿಕೊಳ್ಳಲು ಅನನೀಯನು ಭೂಮಿಯನ್ನು ಮಾರಿದನು. ಆದರೆ ನಾವು ನಮಗಿರುವುದೆಲ್ಲವನ್ನೂ ಕೊಟ್ಟು ಬಿಟ್ಟರೆ, ನಮ್ಮ ಅಗತ್ಯಗಳಿಗೆ ಏನು ಮಾಡುವುದು? ನಮಗೆ ಸ್ವಲ್ಪ ಇರಲಿ ಎಂದು ಅನನೀಯ, ಸಪ್ಫೈರ ಇಬ್ಬರೂ ಎತ್ತಿಟ್ಟುಕೊಂಡರು.
ಹೌದು, ಇದನ್ನು ಓದುತ್ತಿರುವ ಪ್ರಿಯರೇ! ನಾವು, ಆಮೆಯಂತೆ, ನಮ್ಮಲ್ಲಿರುವ ವಿಶ್ವಾಸಾರ್ಹ ಕಾರ್ಯಗಳ ಮೇಲೆ ಅವಲಂಬಿತರಾಗಿ ದೇವರನ್ನು ಅನುಸರಿಸುವಂತೆ ನಟಿಸುತ್ತಿದ್ದೇವೆ. ಇಸ್ರಾಯೇಲ್ ಜನರು ಅನ್ಯ ದೇವರುಗಳನ್ನು ಅನುಸರಿಸುತ್ತಿದ್ದಾಗ ಮತ್ತು ಕರ್ತನು ತಮ್ಮ ದೇವರಾಗಿದ್ದಾಗ, ಎಲೀಯನು ನೀವು ಎರಡು ಅಭಿಪ್ರಾಯಗಳ ಮಧ್ಯದಲ್ಲಿ ಎಷ್ಟರ ವರೆಗೂ ನಿಂತವರಾಗಿ ಇರುವಿರಿ ಎಂದರು. ಯೇಸು ಕ್ರಿಸ್ತನು ಸಹ ಯಾವನೂ ಇಬ್ಬರು ಯಜಮಾನರಿಗೆ ಸೇವೆಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. (ಮತ್ತಾಯ 6:24) ನಾವು ಇಂದು ಒಂದು ನಿರ್ಧಾರ ತೆಗೆದುಕೊಳ್ಳೋಣ. ನಾವು ಆಮೆಯಂತೆ ಇರಬಾರದು, ಬದಲಾಗಿ ದೇವರನ್ನು ಮಾತ್ರ ಹಿಡಿದುಕೊಂಡು ಕರ್ತನ ಮಾರ್ಗಗಳಲ್ಲಿ ನಡೆಯೋಣ. ನಮ್ಮ ಸ್ವಂತ ಬಲದ ಕಡೆಗೆ ಅಲ್ಲ, ಆತನ ಕಡೆಗೆ ನೋಡೋಣ. ಆಶೀರ್ವಾದಗಳನ್ನು ಪಡೆಯೋಣ.
- Mrs. ಗ್ರೇಸ್ ಜೀವಮಣಿ
ಪ್ರಾರ್ಥನಾ ಅಂಶ:
ನಮ್ಮ ಟ್ಯೂಷನ್ ಸೆಂಟರ್ ನಲ್ಲಿ ಕಲಿಸುವ ಶಿಕ್ಷಕರ ಕುಟುಂಬಗಳು ಆಶೀರ್ವದಿಸಲ್ಪಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482