ಧೈನಂದಿನ ಧ್ಯಾನ(Kannada) – 17.01.2025
ಧೈನಂದಿನ ಧ್ಯಾನ(Kannada) – 17.01.2025
ತಿದ್ದಿಕೋ
"…ನಿಮ್ಮ ನಡತೆಯನ್ನೂ ಕೃತ್ಯಗಳನ್ನೂ ತಿದ್ದಿಕೊಳ್ಳಿರಿ" - ಯೆರೆಮಿಯ 7:3
ನಿಯೂ ಹೈಬ್ರಿಡ್ಜ್ ದ್ವೀಪಗಳಲ್ಲಿ ವಾಸಿಸುತ್ತಿದ್ದ ಜನರು 18 ನೇ ಶತಮಾನದವರೆಗೆ ಮನುಷ್ಯರ ಮಾಂಸವನ್ನು ತಿಂದು ಜೀವಿಸುತ್ತಿದ್ದ ಅಭ್ಯಾಸವುಳ್ಳವರು. ಆ ದ್ವೀಪ ಪ್ರದೇಶಕ್ಕೆ ಯಾರೂ ಹೋಗಿ ಸುವಾರ್ತೆಯನ್ನು ಸಾರಲು ಸಾಧ್ಯವಿರಲಿಲ್ಲ. ಅಂತಹ ಆ ದ್ವೀಪಕ್ಕೆ ದೇವರ ವಾಕ್ಯವನ್ನು ಹೊತ್ತುಕೊಂಡು ಜಾನ್ ಪ್ಯಾಟನ್ ಎಂಬ ಸ್ಕಾಟಿಷ್ ಯುವಕ ಹೋದನು. ಇದೊಂದು ಇಕ್ಕಟ್ಟಾದ ದಾರಿ. ಜೀವಕ್ಕೆ ಅಪಾಯ ಎಂದೆಲ್ಲಾ ಮತ್ತೊಬ್ಬರು ಹೇಳಿದರೂ, ಕರ್ತನಿಗಾಗಿ ಇಕ್ಕಟ್ಟಾದ ದ್ವಾರದ ಮೂಲಕ ಹೋಗಲು ಜಾನ್ ಪ್ಯಾಟನ್ ಸಿದ್ಧ ಎಂದು ತೀರ್ಮಾನಿಸಿ
1858 ನೇ ವರ್ಷದಲ್ಲಿ ನ್ಯೂಜಿಲೆಂಡ್‌ಗೆ ಪ್ರಯಾಣ ಬೆಳೆಸಿದರು. ಆ ಜನರು ಅವರನ್ನು ಹಲವು ವಿಧಗಳಲ್ಲಿ ಹಿಂಸಿಸಿದರು. ಆದರೂ ಅವರಿಗೆ ಯಾವ ಹಾನಿಯೂ ಆಗಲಿಲ್ಲ. ಆದ್ದರಿಂದ ಈ ಪ್ರದೇಶದ ಜನರು ಪ್ಯಾಟನ್ ಮೂಲಕ ಕ್ರಿಸ್ತನ ಬಗ್ಗೆ ತಿಳಿದುಕೊಂಡರು. ಪ್ಯಾಟನ್ ಇವರಿಗೆ ಶಿಕ್ಷಣ ನೀಡಿ, 1899 ರಲ್ಲಿ ಅನಿವಾ ಭಾಷೆಯಲ್ಲಿ ಹೊಸ ಒಡಂಬಡಿಕೆಯನ್ನು ಅನುವಾದಿಸಿ ಪ್ರಕಟಿಸಿದರು. ಅನೇಕ ಜನರು ಮಾನಸಾಂತರ ಹೊಂದಿ ಕ್ರಿಸ್ತನನ್ನು ಸ್ವೀಕರಿಸುವುದನ್ನು ತಮ್ಮ ಸ್ವಂತ ಕಣ್ಣುಗಳಿಂದ ನೋಡಿದ ನಂತರ ಪ್ಯಾಟನ್ 1909 ರಲ್ಲಿ ತಮ್ಮ 83 ನೇ ವಯಸ್ಸಿನಲ್ಲಿ ನಿಧನರಾದರು.
ಸತ್ಯವೇದದಲ್ಲಿ, ದೇವರು ಪ್ರವಾದಿಯಾದ ಯೋನನ ಮೂಲಕ ನಿನೆವೆ ಪಟ್ಟಣಕ್ಕೆ ರಕ್ಷಣೆಯನ್ನು ಆಜ್ಞಾಪಿಸಿದರು. ನಿನೆವೆಯ ಮಹಾ ನಗರದ ಜನರ ದುಷ್ಟತನವು ದೇವರ ದೃಷ್ಟಿಗೆ ತಲುಪಿತು. ದೇವರು ಪ್ರವಾದಿಯಾದ ಯೋನನ ಮೂಲಕ ಅವರ ಪಾಪಪೂರ್ಣ ಸ್ಥಿತಿಯನ್ನು ಬಹಿರಂಗಪಡಿಸಿ ಅವರ ಮಾರ್ಗಗಳು ಮತ್ತು ಕಾರ್ಯಗಳನ್ನು ತಿದ್ದಿ ಸರಿಮಾಡಿಕೊಳ್ಳಲು ಅವಕಾಶವನ್ನು ಕೊಟ್ಟರು. ಅವರು ತಮ್ಮ ಪಾಪಪೂರ್ಣ ಜೀವನವನ್ನು ಅರಿತುಕೊಂಡು ಅದಕ್ಕಾಗಿ ಪಶ್ಚಾತ್ತಾಪಪಟ್ಟು ಗೋಣಿತಟ್ಟು ಮತ್ತು ಬೂದಿಯಲ್ಲಿ ಕುಳಿತಿದ್ದಲ್ಲದೆ, ತಮ್ಮ ಮಾರ್ಗಗಳು ಮತ್ತು ಕಾರ್ಯಗಳನ್ನು ತಿದ್ದಿಕೊಂಡರು.
ಇದನ್ನು ಓದುತ್ತಿರುವ ಪ್ರಿಯರೇ! ಸಮಯ ಬೇಗನೆ ಕಳೆದುಹೋಗುತ್ತಿದೆ. ಮತ್ತೊಂದು ಹೊಸ ವರ್ಷ ಹುಟ್ಟಿದೆ. ದೇವರ ಆತ್ಮವು ನಮ್ಮೊಂದಿಗಿದ್ದು, ನಮ್ಮನ್ನು ತಿದ್ದಿ ಸರಿಮಾಡಲು ಅನೇಕ ಬಾರಿ ಹೋರಾಡುತ್ತಿದ್ದಾರೆ. ನಾವು ಅನೇಕ ಬಾರಿ ದೇವರ ಧ್ವನಿಯನ್ನು ಕೇಳಿಯೂ, ನಮ್ಮನ್ನು ನಾವು ಸರಿಪಡಿಸಿಕೊಳ್ಳದೆ ನಮ್ಮ ಸ್ವಂತ ಆಸೆಗಳ ಪ್ರಕಾರ ಬದುಕುತ್ತಿದ್ದರೆ, ಇಂದು ನಮ್ಮನ್ನು ನಾವು ಪರೀಕ್ಷಿಸಿಕೊಳ್ಳೋಣ. ನಾವು ನಮ್ಮ ಮಾರ್ಗಗಳನ್ನು ಮತ್ತು ಕಾರ್ಯಗಳನ್ನು ಕರ್ತನ ಮುಂದೆ ಒಪ್ಪಿಸಿ ಆತನಲ್ಲಿ ಭರವಸೆಯಿಟ್ಟರೆ, ನಮ್ಮ ಕಾರ್ಯಗಳು ಖಂಡಿತವಾಗಿಯೂ ಸರಿಹೋಗುತ್ತವೆ. ಆದ್ದರಿಂದ ನಮ್ಮ ಜೀವನದಲ್ಲಿ ತಿದ್ದಿಕೊಳ್ಳಬೇಕಾದ ವಿಷಯಗಳನ್ನು ತಿದ್ದಿಕೊಳ್ಳಲು ಕರ್ತನು ನಮಗೆ ಸಹಾಯ ಮಾಡಲಿ.
- Mrs. ರೂಬಿ ಅರುಣ್
ಪ್ರಾರ್ಥನಾ ಅಂಶ:
ನಮ್ಮ ಕ್ಯಾಂಪಸ್‌ನಲ್ಲಿರುವ ಟ್ಯೂಷನ್ ಸೆಂಟರ್‌ಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482