Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 14.01.2025

ಧೈನಂದಿನ ಧ್ಯಾನ(Kannada) – 14.01.2025

 

ಸರಿಮಾಡುವುದು

 

"ನೀನು ನಡೆಯುವ ದಾರಿಯನ್ನು ಸಮಮಾಡು; ನಿನ್ನ ಮಾರ್ಗಗಳೆಲ್ಲಾ ದೃಢವಾಗಿರಲಿ" - ಜ್ಞಾನೋಕ್ತಿ 4:26

 

ಲುವಾಲಸ್ ಅಮೆರಿಕಕ್ಕೆ ಸೇರಿದವರು. ಯೇಸುಕ್ರಿಸ್ತನು ಎಂಬ ಒಬ್ಬ ವ್ಯಕ್ತಿ ಜೀವಿಸಲೇ ಇಲ್ಲ ಎಂದು ಬರೆಯಲು ಆತುರದಿಂದಿದ್ದರು. ಅದಕ್ಕಾಗಿ ಸಾಕಷ್ಟು ಆಧಾರಗಳನ್ನು ಸಂಗ್ರಹಿಸಲು ತಮ್ಮ ಸಂಪತ್ತಿನ ಬಹುಭಾಗವನ್ನು ಖರ್ಚು ಮಾಡಿದರು. ಅದಕ್ಕಾಗಿ ಅವರು ಒಂದು ಪುಸ್ತಕ ಬರೆಯಲು ಪ್ರಾರಂಭಿಸಿದರು. ಆದರೆ ಅವರಿಗೆ ಕೆಲವು ಸಾಲುಗಳಿಗಿಂತ ಹೆಚ್ಚು ಬರೆಯಲು ಸಾಧ್ಯವಾಗಲಿಲ್ಲ. ಏಕೆಂದರೆ ಅವರಿಗೆ ದೊರೆತ ಎಲ್ಲಾ ಪುರಾವೆಗಳು ಯೇಸು ಕ್ರಿಸ್ತನು ಜನಿಸಿದ್ದು, ಜೀವಿಸಿದ್ದು, ಅದ್ಭುತಗಳನ್ನು ಮಾಡಿದ್ದು, ಶಿಲುಬೆಯಲ್ಲಿ ಪ್ರಾಣಬಿಟ್ಟದ್ದು ಮತ್ತು ಮೂರನೆಯ ದಿನದಲ್ಲಿ ಸತ್ತವರೊಳಗಿಂದ ಎದ್ದದ್ದು ಹೀಗೇ ಇತ್ತು ಆದ್ದರಿಂದ ನಂತರ ಇದೆಲ್ಲವೂ ಸತ್ಯವೆಂದು ಗ್ರಹಿಸಿದರು. ಇವರು ಮಾನಸಾಂತರ ಹೊಂದಿ, ಕರ್ತನಾದ ಯೇಸು ಕ್ರಿಸ್ತನು ಮಾನವಕುಲವನ್ನು ರಕ್ಷಿಸಲು ಮನುಷ್ಯನಾಗಿ ಜನಿಸಿದರು ಮತ್ತು ಪಾಪರಹಿತ ಪವಿತ್ರ ಜೀವನವನ್ನು ನಡೆಸಿದರು ಎಂದು ಜಗತ್ತಿಗೆ ತೋರಿಸಲು ಬೆನ್-ಹರ್ ಎಂಬ ಮಹಾನ್ ಪುಸ್ತಕವನ್ನು ಬರೆದರು. ಆ ಪುಸ್ತಕವನ್ನು ನಂತರದಲ್ಲಿ ನಾಲ್ಕು ಬಾರಿ ಚಲನಚಿತ್ರಗಳಾಗಿ ಮಾಡಲಾಯಿತು ಮತ್ತು ಪ್ರಸಿದ್ಧವಾಯಿತು. ಲುವಾಲಸ್ ಜೀವನದಲ್ಲಿ ಸರಿಪಡಿಸಬೇಕಾದ ವಿಷಯಗಳನ್ನು ದೇವರು ಸರಿಪಡಿಸಿದ ಪರಿಣಾಮವಾಗಿ ಒಂದು ದೊಡ್ಡ ಕಾರ್ಯ ನಡೆಯಿತು.

  

ಇದೇ ರೀತಿ, ಹೊಸ ಒಡಂಬಡಿಕೆಯು ಅಶುದ್ಧಾತ್ಮವುಳ್ಳ ಒಬ್ಬ ಮನುಷ್ಯನ ಕುರಿತು ಬರೆಯಲ್ಪಟ್ಟಿದೆ. ಆ ಮನುಷ್ಯನ ವಾಸವು ಸಮಾಧಿಗಳ ನಡುವೆ ಇತ್ತು. ಆದ್ದರಿಂದ ಆ ಮನುಷ್ಯನ ಜೀವನವು ಬೆಳಕಿಲ್ಲದೆ ಕತ್ತಲೆಯಾಗಿದ್ದಿರಬಹುದು. ಮತ್ತು ಅವನು ತನ್ನನ್ನು ತಾನೇ ಗಾಯಪಡಿಸಿಕೊಳ್ಳುತ್ತಿದ್ದನು. ಇಂತಹ ಪರಿಸ್ಥಿತಿಯಲ್ಲಿ ಅವನು ಯೇಸುವನ್ನು ನೋಡಿದಾಗ ದೂರದಿಂದ ಓಡಿಬಂದು ಆತನಿಗೆ ಅಡ್ಡಬಿದ್ದು ಬೇಡಿಕೊಂಡನು. ಯೇಸುಕ್ರಿಸ್ತನು ಈ ಮನುಷ್ಯನೊಳಗಿದ್ದ ಅಶುದ್ಧಾತ್ಮಗಳನ್ನು ತೊಲಸಿದರು. ಅವನು ಬಿಡುಗಡೆಯಾದ ನಂತರ, ಯೇಸು ತನಗಾಗಿ ಮಾಡಿದ್ದನ್ನೆಲ್ಲಾ ಪ್ರಸಿದ್ಧಪಡಿಸಲು ಪ್ರಾರಂಭಿಸಿದನು.

 

ಇದನ್ನು ಓದುತ್ತಿರುವ ಪ್ರೀತಿಯ ಓದುಗರೇ! ದೇವರಿಲ್ಲ ಎಂದು ಬರೆಯಲು ಧೈರ್ಯ ಮಾಡಿದವನ ಜೀವನವನ್ನು ದೇವರೇ ಸರಿಪಡಿಸಿದರು. ಶಿಲುಬೆಗೆ ದೂರವಾದ ದಂಡು ಎಂಬ ದೆವ್ವ ಹಿಡಿದಿದ್ದ ವ್ಯಕ್ತಿಯನ್ನು ಯೇಸು ಸರಿಮಾಡಿ, ಆತನನ್ನು ಪ್ರಸಿದ್ಧ ಪಡಿಸುವ ಹಾಗೆ ಮಾರ್ಪಡಿಸಿದರು. ನಮ್ಮ ಜೀವನವನ್ನು ಸರಿಪಡಿಸಿದ ಯೇಸುವಿಗಾಗಿ ನಾವು ಇಂದು ಏನು ಮಾಡುತ್ತಿದ್ದೇವೆ? ಅದರ ಬಗ್ಗೆ ಸ್ವಲ್ಪ ಯೋಚಿಸೋಣ! ಅವರು ತನ್ನ ಕೊನೆಯ ಹನಿ ರಕ್ತವನ್ನು ಸಹ ಸುರಿಸಿದ್ದು ಏಕೆ? ನಿಮ್ಮನ್ನೂ ನನ್ನನ್ನೂ ಸರಿಪಡಿಸಲು! ಯೇಸುವಿನ ರಕ್ತದಿಂದ ಸರಿ ಮಾಡಲ್ಪಟ್ಟಿರುವ ನಾವು ಯೇಸು ಇಲ್ಲದೇ, ಯೇಸುವಿಗೆ ದೂರವಾಗಿರುವ ಜನರಿಗೆ, ಯೇಸುವನ್ನು ಪ್ರಕಟಿಸಲು ಒಟ್ಟಾಗಿ ಸೇರಿ ಕೆಲಸ ಮಾಡೋಣ. ದೇವರು ನಮ್ಮ ಮೂಲಕ ಮಹತ್ಕಾರ್ಯಗಳನ್ನು ಮಾಡುತ್ತಾರೆ.

- Mrs. ಶಕ್ತಿ ಶಂಕರ್‌ರಾಜ್

 

ಪ್ರಾರ್ಥನಾ ಅಂಶ:

ಭಾರತದ 15 ರಾಜ್ಯಗಳಲ್ಲಿ ಮಿಷನರಿ ಕಾರ್ಯ ಕೇಂದ್ರಗಳು ಪ್ರಾರಂಭಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)