Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 23.03.2023

ಧೈನಂದಿನ ಧ್ಯಾನ(Kannada) – 23.03.2023

 

ನಿಮ್ಮ ಕೈಲಾದಷ್ಟು ಮಾಡಿ

 

"ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಪೂರ್ಣ ಶಕ್ತಿಯಿಂದ ಮಾಡು;..." - ಪ್ರಸಂಗಿ 9:10

 

ಆಫ್ರಿಕಾಕ್ಕೆ ಮಿಷನರಿಯಾಗಿ ಹೋಗಿದ್ದ ಸೇವಕರು, ತಾನು ಮಾರ್ಗದರ್ಶನ ನೀಡಿದ್ದ ಒಂದು ವಯಸ್ಸಾದ ಮಹಿಳೆ ಹೇಗೆ ರಕ್ಷಣೆ ಹೊಂದಿದರೆಂದು ಮತ್ತು ಹೇಗೆ ಸೇವೆ ಮಾಡಿದರು ಎಂಬುದರ ಕುರಿತು ಬರೆದಿರುವ ಸಾಕ್ಷಿ ನನ್ನನ್ನು ಕದಲಿಸಿತು. 

 

ಆ ಮಹಿಳೆಗೆ ಕಣ್ಣುಕಾಣೋದಿಲ್ಲ, ಆದ್ದರಿಂದ ಓದಲು ಸಹ ಗೊತ್ತಿಲ್ಲ. ಆದಾಗ್ಯೂ, ತಾನು ತಿಳಿದುಕೊಂಡ ಯೇಸುವನ್ನು ಎಲ್ಲರೂ ತಿಳಿದುಕೊಳ್ಳಬೇಕೆಂದು ಅವಳು ಬಯಸಿದ್ದಳು. ಆದ್ದರಿಂದ ಅವಳು ತನ್ನನ್ನು ಯೇಸುವಿನ ಬಳಿಗೆ ಮುನ್ನಡೆಸಿದ ಮಿಷನರಿ ಬಳಿಗೆ ಹೋದಳು ಮತ್ತು ಫ್ರೆಂಚ್ ಬೈಬಲ್ ಕೇಳಿ ಪಡೆದಳು. ಅವಳು ಅದನ್ನು ಸ್ವೀಕರಿಸುವಾಗ ಅವಳು ಕೆಂಪು ಶಾಯಿಯಲ್ಲಿ ಯೋಹಾನ 3:16 ಅನ್ನು ಅಂಡರ್ಲೈನ್ ಮಾಡಿ ಕೊಡಲು ಹೇಳಿದಳು. ನಂತರ ಆ ಪುಟವನ್ನು ಸುಲಭವಾಗಿ ತೆರೆಯಲು ಅವಳು ಒಂದು ಗುರುತನ್ನು ಇಟ್ಟು ಕೊಂಡಳು. ಓದಲು ಮತ್ತು ಬರೆಯಲು ತಿಳಿಯದ, ಕಣ್ಣು ಕಾಣದ ವಯಸ್ಸಾದ ಮಹಿಳೆ ಫ್ರೆಂಚ್ ಸತ್ಯವೇದವನ್ನು ತೆಗೆದುಕೊಂಡು ಏನು ಮಾಡಲಿದ್ದಾಳೆಂದು ತಿಳಿದುಕೊಳ್ಳಲು ಅವಳ ಹಿಂದೆಯೇ ಹೋದರು ಆ ಮಿಷನರಿ. ಆ ಊರಿನ ಶಾಲೆಯ ಮುಂದೆ 

ಮಕ್ಕಳು ಮನೆಗೆ ಮರಳುವ ಸಮಯಕ್ಕೆ ಸರಿಯಾಗಿ ಆ ಮಹಿಳೆ ನಿಲ್ಲುತ್ತಿದ್ದಳು. ನಂತರ ಅವಳು ಸಹಾಯಕ್ಕಾಗಿ ವಿದ್ಯಾರ್ಥಿಯೊಬ್ಬನನ್ನು ಕರೆದು, "ನಿನಗೆ ಫ್ರೆಂಚ್ ಓದಲು ಗೊತ್ತಾ" ಎಂದು ಕೇಳುತ್ತಾಳೆ. ಆ ವಿದ್ಯಾರ್ಥಿಯು "ನನಗೆ ಗೊತ್ತು" ಎಂದು ಹೇಳಿದರೆ, ಅವಳು ಕೆಂಪು ಅಂಡರ್ಲೈನ್ಡ್ ಮಾಡಿರುವ ವಾಕ್ಯವನ್ನು ಓದಿ ತೋರಿಸಲು ಕೇಳುತ್ತಾಳೆ. ನಂತರ ಆ ವಾಕ್ಯದ ಅರ್ಥವನ್ನು ಹೇಳಿಕೊಡುತ್ತಾಳೆ. ಈ ರೀತಿ ಅವಳು ದಣಿವರಿಯಿಲ್ಲದೆ ಇದನ್ನು ಮುಂದುವರಿಸಿ 25 ಬೋಧಕರನ್ನು ರೂಪಿಸಿದ್ದಾಳೆ. ಇದ್ದದ್ದನ್ನು ಹೂತು ಹಾಕಿ, ಇಲ್ಲದಿರುವುಗಳಿಗಾಗಿ ದೇವರ ಮೇಲೆ ಕೊರತೆ ಹೇಳುವ ಜನರ ನಡುವೆ ಈ ಉತ್ತಮ ಮಹಿಳೆಯ ಜೀವನ ನಮಗೊಂದು ಚಾಟಿಯೇಟು.

 

ನಾವು ಅನೇಕ ಬಾರಿ ಈ ರೀತಿ ಯೋಚಿಸುವುದುಂಟು, “ನನಗೆ ಅವರಂತೆ ಸೇವೆ ಮಾಡಲು ಗೊತ್ತಿಲ್ಲ. ಇವರಂತೆ ಬೋಧಿಸಲು ಸಾಧ್ಯವಾಗುತ್ತಿಲ್ಲ ಎಂದು ಭಾವಿಸುತ್ತೇವೆ. ಸತ್ಯವೇದದಲ್ಲಿ ಒಂದು ಸುಂದರವಾದ ವಾಕ್ಯವಿದೆ. "ಈಕೆಯು ತನ್ನ ಕೈಲಾಗುವಷ್ಟು ಮಾಡಿದ್ದಾಳೆ" ಎಂದು. ನಮ್ಮಲ್ಲಿ ಪ್ರತಿಯೊಬ್ಬರೂ ನಮ್ಮಿಂದ ಏನು ಸಾಧ್ಯವೋ ಅದನ್ನು ಮಾಡುವುದಕ್ಕಾಗಿಯೇ ಕರೆಯಲ್ಪಡುತ್ತೇವೆ. ಮೇಲ್ಕಂಡ ನೈಜ ಘಟನೆಯಲ್ಲಿ ಕಣ್ಣು ಕಾಣದಿದ್ದರೂ ತನ್ನ ಸತತವಾದ ಪ್ರಾರ್ಥನಾ ಪ್ರಯತ್ನದಿಂದ ಎಲ್ಲರನ್ನೂ ಕರ್ತನಿಗಾಗಿ ಆದಾಯ ಮಾಡಿದ ಘಟನೆಯನ್ನು ಕಾಣುತ್ತೇವೆ. ನೀವು ಕೂಡ ನಂಬಿಕೆಯಿಂದ ನಿಮ್ಮ ಕೈಲಾದಷ್ಟು ಮಾಡಲು ಪ್ರಾರಂಭಿಸಿ. ಆ ಸಣ್ಣ ಆರಂಭವು ದೊಡ್ಡ ಪರಿಣಾಮವನ್ನು ಬೀರಬಹುದು.

- S. ಭಾಸ್ಕರ್ ರೂಬನ್

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್ ನಲ್ಲಿರುವ ಆಸ್ಪತ್ರೆಗೆ ಬೇಕಾದ ಸಲಕರಣೆಗಳನ್ನು ಖರೀದಿಸಲು ಅಗತ್ಯತೆಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)