Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 30.01.2023

ಧೈನಂದಿನ ಧ್ಯಾನ(Kannada) – 30.01.2023

 

ಎರಡು ಕಾಸು

 

“ಹೇಗೆಂದರೆ ಎಲ್ಲರು ತಮಗೆ ಸಾಕಾಗಿ ವಿುಕ್ಕದ್ದರಲ್ಲಿ ಹಾಕಿದರು; ಈಕೆಯೋ ತನ್ನ ಬಡತನದಲ್ಲಿಯೂ ತನಗಿದ್ದದ್ದನ್ನೆಲ್ಲಾ ಹಾಕಿದಳು, ತನ್ನ ಜೀವನವನ್ನೇ ಕೊಟ್ಟುಬಿಟ್ಟಳು ಅಂದನು" - ಮಾರ್ಕನು 12:44

 

ದೇವರಿಗೆ ಕೊಡುವುದು ಎಂಬುದು ಬಹು ಶ್ರೇಷ್ಠವಾದ ಕಾರ್ಯ. ಅವರು ಭೂಮಿಯನ್ನು ಮತ್ತು ಅದರಲ್ಲಿರುವ ಎಲ್ಲವನ್ನೂ ಸೃಷ್ಟಿಸಿ ಅದನ್ನೆಲ್ಲಾ ಆಳಲು ಮನುಷ್ಯನಿಗೆ ಸಂತೋಷವಾಗಿ ಕೊಟ್ಟರು. ಅದರಿಂದ ನಾವು ಅವರಿಗೆ ಕೊಡುವ ಕಾಣಿಕೆಯನ್ನು ಕಂಡು ಸಂತೋಷಪಡುತ್ತಾರೆ.

 

ಇಂದು ನಾವು ಧ್ಯಾನಿಸುವ ಮಹಿಳೆ ವಯಸ್ಸಾದ ಬಡ ವಿಧವೆ. ಆ ದಿನಗಳಲ್ಲಿ ಆಲಯವು ಅಂತಹವರನ್ನು ನೋಡಿಕೊಳ್ಳುತ್ತಿತ್ತು. ಈ ಬಡ ವಿಧವೆಯು ಆಲಯದಲ್ಲಿ ಕೊಡುವ ಸ್ವಲ್ಪ ಹಣದಲ್ಲೇ ಜೀವನ ನಡೆಸುತ್ತಿದ್ದಳು. ಇಂತಹ ಪರಿಸ್ಥಿತಿಯಲ್ಲಿ, ಈ ಮಹಿಳೆ ಮಾಡಿದ ಅರ್ಪಣೆಯನ್ನು ಯೇಸು ಗಮನಿಸಿದರು. ಅವಳು ಹಾಕಿದ ಎರಡು ಕಾಸು ಆ ದಿನಗಳಲ್ಲಿ ಬಹಳ ಕಡಿಮೆ ಮೊತ್ತವಾಗಿದ್ದರೂ, ಅವಳು ಅದನ್ನು ತುಂಬಾ ಸಂತೋಷದಿಂದ ಕೊಟ್ಟಳು. ಅವಳು ತನ್ನಲ್ಲಿರುವ ಎಲ್ಲವನ್ನೂ ದೇವರಿಗೆ ಅರ್ಪಿಸಿ ಬಿಟ್ಟಳು. ಯಾಕೆಂದರೆ ಆಕೆಗೆ ದೇವರಲ್ಲಿ ಸಂಪೂರ್ಣ ನಂಬಿಕೆ ಇತ್ತು. ದೇವರು ಇದುವರೆಗೂ ತನ್ನನ್ನು ಕೃಪೆಯಿಂದ ಪೋಷಿಸುತ್ತಾ ಬರುವುದನ್ನು ಅನುಭವಪೂರ್ವಕವಾಗಿ ತಿಳಿದಿದ್ದಳು.

 

ಅವಳು ಎಷ್ಟು ಹಾಕಿದಳು ಎಂದು ಯೇಸು ನೋಡಲಿಲ್ಲ. ಅವರು ಅವಳ ಆಂತರಿಕ ಸ್ಥಿತಿಯನ್ನು ನೋಡಿದರು. ಅನೇಕ ಶ್ರೀಮಂತರು ಇದಕ್ಕಿಂತ ಹೆಚ್ಚಾಗಿ ಹಾಕಿದ್ದನ್ನು ಯೇಸು ಗಮನಿಸುತ್ತಿದ್ದರು. ಅವರು ತಮ್ಮ ಪರಿಪೂರ್ಣತೆಯಿಂದ ನೀಡಿದರು. ಆದರೆ ಅವಳು ತನ್ನ ಜೀವನವನ್ನೇ ಕೊಟ್ಟು ಬಿಟ್ಟಳು ಎಂದು ಯೇಸು ಹೇಳಿದರು. ತನ್ನನ್ನು ಬೆಂಬಲಿಸುವ ದೇವಾಲಯವನ್ನು ಆಕೆಯೂ ಬೆಂಬಲಿಸಲು ಬಯಸಿದ್ದಳು. ಎಷ್ಟು ನಿಸ್ವಾರ್ಥವಾದ ಕಾರ್ಯ ನೋಡುದ್ರಾ? ನಮ್ಮಲ್ಲಿರುವ ಚಿಕ್ಕ ಚಿಕ್ಕ ವಸ್ತುಗಳಿಂದ ನಾವು ದೇವರನ್ನು ಮಹಿಮೆಪಡಿಸಬಹುದು ಎಂಬುದಕ್ಕೆ ಇದು ಒಂದು ಉದಾಹರಣೆಯಾಗಿದೆ!

 

ಪ್ರಿಯರೇ! ಇದು ನನ್ನದು, ಇದು ನನ್ನ ಜೀವನಕ್ಕೆ ಸಹಾಯ ಮಾಡುತ್ತದೆ, ನನಗೆ ಇದು ಬೇಕು! ಹಾಗೆ ಯೋಚಿಸುವುದರಲ್ಲಿ ತಪ್ಪೇನಿಲ್ಲ. ಆದರೆ ಅವಳು ತನಗಾಗಿ ಏನನ್ನೂ ಇಟ್ಟುಕೊಳ್ಳದೆ, ನಾಳೆಗೆ ಏನು ಮಾಡೋಣ ಎಂದು ಕೂಡ ಯೋಚಿಸದೆ ಕೊಟ್ಟು ಬಿಟ್ಟಳು. ದೇವರ ದೃಷ್ಟಿಯಲ್ಲಿ ಆ ಸಣ್ಣ ಕಾಣಿಕೆ ಎಷ್ಟು ದೊಡ್ಡದಾಗಿತ್ತು. ತನಗೆ ಕೊಟ್ಟ ಯಾರನ್ನೂ ಕರ್ತನು ಕಷ್ಟಪಡಲು ಬಿಡುವುದಿಲ್ಲ ಮತ್ತು ದರಿದ್ರರಾಗಿಯೂ ಬಿಡುವುದಿಲ್ಲ. ಬಡ ವಿಧವೆ ತನಗಿದ್ದದ್ದನ್ನು ಕರ್ತನಿಗಾಗಿ ಕೊಟ್ಟಂತೆ, ನಮ್ಮಲ್ಲಿರುವದನ್ನು ಕರ್ತನಿಗಾಗಿ ಕೊಡೋಣ! ನನಗೆ ಒಬ್ಬ ತಾಯಿ ಗೊತ್ತು ಇವರು ದೇವರಿಗೆ ಕೊಡಲು ತುಂಬಾ ಬಯಸುತ್ತಾರೆ. ಇವರು ಗಂಡನಿಗೆ ತಿಳಿಯದೆಯೇ ಕೊಡಲು ಸಾಧ್ಯ. ಚಿಕಿತ್ಸಾ ವೆಚ್ಚಕ್ಕೆ ಗಂಡ ಕೊಡುವ ಹಣವನ್ನು ಸೇವೆಗೆ ಕೊಟ್ಟು ಬಿಟ್ಟು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೇ ಅವರಿಂದ ಸಾಧ್ಯವಾದದ್ದು.

- K. M. ಪ್ರಸಾದ್

 

ಪ್ರಾರ್ಥನಾ ಅಂಶ:

ಹೊಸದಾಗಿ ನಿರ್ಮಿಸುತ್ತಿರುವ ಆಸ್ಪತ್ರೆಗೆ ಅನುಭವಿ ಮತ್ತು ಸಮರ್ಪಿತ ವೈದ್ಯರು ಸಿಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)