Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 29.01.2023 (Kids Special)

ಧೈನಂದಿನ ಧ್ಯಾನ(Kannada) – 29.01.2023 (Kids Special)

 

ಶಾಲಾ ಸೇವೆ

 

“ನಿನ್ನ ನಿಬಂಧನೆಗಳಲ್ಲಿ ಉಲ್ಲಾಸಪಡುವೆನು; ನಿನ್ನ ವಾಕ್ಯವನ್ನು ಮರೆಯುವದಿಲ್ಲ” - ಕೀರ್ತನೆ 119:16

 

"ನೋಟ್ ತೆಗೆದುಕೊಂಡು ಪರೀಕ್ಷೆ ಬರೆಯಿರಿ" ಎಂದು ಹೇಳಿಕೊಂಡೆ ತರಗತಿಯೊಳಗೆ ಪ್ರವೇಶಿಸಿದರು English sir. Please sir ನಾಳೆ test ಇಡಿ ಸರ್ ಎಂದು ವಿದ್ಯಾರ್ಥಿಗಳೆಲ್ಲರು ಒಂದಾಗಿ ಹೇಳುವುದನ್ನು ಕೇಳಿದಾಗ Ok..Ok..Book ತೆಗೆದು ಓದಲು ಪ್ರಾರಂಭಿಸಿ. ಇನ್ನು ಮುಂದೆ No Excuse ಎಂದು Sir ಹೇಳಿದರು. ಅಬ್ಬಾ ಹೇಗೋ ತಪ್ಪಿಸಿಕೊಂಡೋ ಅಂದುಕೊಂಡು ಓದದಿದ್ದ ವಿದ್ಯಾರ್ಥಿಗಳು ಓದಲು ಪ್ರಾರಂಭಿಸಿದರು. ಏನು ಪುಟಾಣಿಗಳೇ test-ಅಂದ್ರೆ ನಿಮ್ಗೂ ಭಯಾನಾ? Daily Home work ಬರೆದು ಬಿಟ್ಟರೆ ಭಯಪಡಬೇಕಾದ ಅವಶ್ಯವೇ ಇಲ್ಲ. ಹೌದಲ್ವಾ ಪುಟಾಣಿಗಳೇ. 

 

ಆ ಶಾಲೆಯಲ್ಲಿ ಮಧ್ಯಾಹ್ನದ ಊಟದ ವೇಳೆಗೆ ಸೆಲ್ವಿ ಅಕ್ಕ ಸತ್ಯವೇದ ತರಗತಿ ನಡೆಸಲು ಬಂದಿದ್ದರು. ಹಾಡು, ಕಥೆ, ಮ್ಯಾಜಿಕ್ ಮತ್ತು ವಾಕ್ಯ ಎಲ್ಲವನ್ನೂ ಸೂಪರ್-ಆಗಿ ಹೇಳಿಕೊಡುತ್ತಾರೆ. ಇದು ಧನಲಕ್ಷ್ಮಿ ಗೆ ಇಷ್ಟವಿಲ್ಲ. ಯೇಸು ಏನಾದ್ರು ದೊಡ್ಡ ವ್ಯಕ್ತೀನಾ ಅಂತಾ ಕಿಂಡಲ್ ಮಾಡುತ್ತಿದ್ದಳು, ಅಕ್ಕ ಹೇಳಿಕೊಡುವುದನ್ನು ಕೇಳದೇ ತುಂಬಾ ತೀಟೆ ಮಾಡುತ್ತಾಳೆ. ಪಕ್ಕದಲ್ಲಿರುವವರನ್ನು ಸಹ ಕೇಳಲು ಬಿಡೋದಿಲ್ಲ. ಪ್ರತಿಬಾರಿಯೂ ಹೀಗೆ ಮಾಡುತ್ತಾಳಲ್ಲ, ಎಂದು ಸೆಲ್ವಿ ಅಕ್ಕನಿಗೆ ತುಂಬಾ ಬೇಸರವಾಗಿದ್ದರೂ, ತುಂಬಾ ಸಹನೆಯಿಂದ ಮಾಡಿ ಮುಗಿಸಿದರು. ಅಕ್ಕ ಹೇಳಿಕೊಟ್ಟ ವಾಕ್ಯವನ್ನು ಯಾರು ಹೇಳುತ್ತೀರ ಎಂದು ಕೇಳಿದ ಕೂಡಲೇ ಅಕ್ಕ ನಾನು ಹೇಳುತ್ತೇನೆ...ನಾನು...ನಾನು... ಎಂದು ಸಾಲಾಗಿ ಹೇಳತೊಡಗಿದರು. ಅರುಣ್ ಎದ್ದು ನಿಂತು ವಾಕ್ಯ ಹೇಳಿದಾಗ ಎಲ್ಲರೂ ಜೋರಾಗೆ ಚಪ್ಪಾಳೆ ತಟ್ಟಿದರು. ಯಾಕೆ ಗೊತ್ತಾ? ಸದಾ ತೊದಲುತ್ತಾ ತೊದಲುತ್ತಾ ಮಾತನಾಡಲು ಕಷ್ಟ ಪಡುವ ಅರುಣ್ ಸರಳವಾಗಿ ವಾಕ್ಯ ಹೇಳಿದ್ದು ಎಲ್ಲರನ್ನೂ ಅಚ್ಚರಿಗೊಳಿಸಿದ್ದಲ್ಲದೇ ಎಲ್ಲರೂ ಆಸೆಯಿಂದ ವಾಕ್ಯ ಓದಲು ಸಹ ಪ್ರಯೋಜನವಾಗಿತ್ತು. ಸತ್ಯವೇದದ ವಾಕ್ಯಗಳು ಸಾಧಾರಣವಾದದ್ದಲ್ಲ ಅದರಲ್ಲಿ ಜೀವವಿದೆ. ಅದ್ಬುತಗಳನ್ನು ಮಾಡುವ ಯೇಸು ಕ್ರಿಸ್ತನು ವಾಕ್ಯವಾಗಿ ನಿಮ್ಮೊಳಗೆ ಕ್ರಿಯೆ ಮಾಡುತ್ತಾರೆ. ಇದಕ್ಕಾಗಿಯೇ ಎಲ್ಲರೂ ವಾಕ್ಯಗಳನ್ನು ಕಂಠಪಾಠ ಮಾಡಬೇಕು ಎಂದು ಸೆಲ್ವಿ ಅಕ್ಕ ಹೇಳಿದ ಕೂಡಲೇ, Ok ಅಕ್ಕಾ ಎಂದು ಜೋರಾಗಿ ಕೂಗಿದರು. ತೀಟೆ ಮಾಡುತ್ತಿದ್ದ ಧನಲಕ್ಷ್ಮಿ, ಅವಳು ಏನು ಮಾಡ್ತಿದ್ಳು ಅಂತ ತಾನೇ ಕೇಳ್ತಿದೀರ. ಅವಳು ಕೂಡ ಮೌನವಾಗಿ ತಲೆಯಾಡಿಸಿದಳು. ನಾನು ಸಹ ವಾಕ್ಯವನ್ನು ಬಾಯಿಪಾಠ ಮಾಡುತ್ತೇನೆ ಎಂಬತ್ತಿತ್ತು. ಧನಲಕ್ಷ್ಮಿಯ ಈ ಬದಲಾವಣೆ ಸೆಲ್ವಿ ಅಕ್ಕನಿಗೆ ಬಹಳ ಸಂತೋಷವನ್ನು ತಂದಿತು. ಆ ದಿನದ ಅತ್ಯುತ್ತಮ ಶಾಲಾ ಮಿಷನ್ ಸೇವೆಗಾಗಿ ಅವರು ಯೇಸುವಿಗೆ ಧನ್ಯವಾದ ಅರ್ಪಿಸಿದರು.

- Mrs. ಜೀವಾ ವಿಜಯ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)