Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 27.11.2022 (Kids Special)

ಧೈನಂದಿನ ಧ್ಯಾನ(Kannada) – 27.11.2022 (Kids Special)

 

ಪುಟಾಣಿ ಪಕ್ಷಿಗಳು

 

"ಜ್ಞಾನವು ವೃದ್ಧರಲ್ಲೇ ಅಡಗಿದೆಯೋ? ದೀರ್ಘಾಯುವೂ ವಿವೇಕವೂ ಒಂದೇನೋ?" - ಯೋಬ 12:12

 

ಒಂದು ದಟ್ಟವಾದ ಕಾಡಿನಲ್ಲಿ 10 ಪಕ್ಷಿಗಳು ಒಟ್ಟಿಗೆ ವಾಸಿಸುತ್ತಿದ್ದವು. ಅವುಗಳಲ್ಲಿ ಒಂದು ಮಾತ್ರ ವಯಸ್ಸಾದ ಪಕ್ಷಿ. ಉಳಿದೆಲ್ಲವೂ ಎಳೆಯ ಪಕ್ಷಿಗಳು. ಈ ಪಕ್ಷಿಗಳೆಲ್ಲಾ ಒಂದು ದಿನ, ನಾವೆಲ್ಲರೂ ವೀರ ಸಾಹಸಗಳನ್ನು ಮಾಡಿ ಬದುಕಬೇಕು ಎಂದು ಮಾತನಾಡಿಕೊಳ್ಳುತ್ತಿದ್ದವು. ಆಗ ವಯಸ್ಸಾದ ಪಕ್ಷಿ ಹೇಳಿತು, “ನಿಮ್ಮ ಶೌರ್ಯವನ್ನು ಬೇಡದ ಕಡೆ ತೋರಿಸಿದರೆ ಅದು ಕೆಟ್ಟದಾಗಿ ಕೊನೆಗೊಳ್ಳುತ್ತದೆ. ಆದ್ದರಿಂದ ಹುಷಾರಾಗಿರಿ” ತಕ್ಷಣ ಉಳಿದ ಪಕ್ಷಿಗಳೆಲ್ಲ ನಕ್ಕು, “ಅಜ್ಜಿಗೆ ಕೆಲಸವಿಲ್ಲ. ಸುಮ್ಮನೆ ಏನಾದರೂ ಹೇಳ್ತಾ ಇದ್ರೇನೆ ಟೈಂ ಪಾಸ್ ಆಗೋದು” ಎಂದವು.

 

ಒಂದು ದಿನ, ಅವರು ವಿಶಾಲವಾದ ಆಕಾಶದಲ್ಲಿ ಹಾರುತ್ತಿದ್ದರು. ಒಂದು ಪಕ್ಷಿ ಮಾತ್ರ ನೆಲದ ಮೇಲೆ ಬಲೆ ಹರಡಿರುವುದನ್ನು ಕಂಡಿತು. ತಕ್ಷಣವೇ ಆ ಪಕ್ಷಿಯು ಇತರ ಪಕ್ಷಿಗಳನ್ನು ಕರೆದು, “ಅಲ್ಲಿ ಕೆಳಗೆ ನೋಡಿ! ಬೇಟೆಗಾರ ತನ್ನ ಜಾಲವನ್ನು ಹರಡಿದ್ದಾನೆ. ನಾವೆಲ್ಲರೂ ಹೋಗಿ ಆ ಬಲೆಯನ್ನು ಎತ್ತಿಕೊಂಡು ಬರೋಣ" ಎಂದಿತು. ಕೂಡಲೇ ಇನ್ನೊಂದು ಪಕ್ಷಿ, “ಏನು ಬಲೆಯನ್ನು ಎತ್ತಿಕೊಂಡು ಬರೋದಾ" ಎಂದು ಕೇಳಿತು, ಇನ್ನೊಂದು ಪಕ್ಷಿ ಹೇಳಿತು, “ಇದು ಕೂಡ ಗೊತ್ತಿಲ್ವಾ. ಪ್ರಾಚೀನ ಕಾಲದಲ್ಲಿ, ಕೆಲವು ಪಕ್ಷಿಗಳು ಒಟ್ಟಾಗಿ ವಾಸಿಸುತ್ತಿದ್ದವು. ತಿಳಿಯದೆ ಒಂದು ದಿನ ಬೇಟೆಗಾರ ಹರಡಿದ ಬಲೆಗೆ ಸಿಕ್ಕಿ ಬಿದ್ದವು. ನಂತರ ಒಟ್ಟಿಗೆ ಬಲೆ ಎತ್ತಿಕೊಂಡು ಹಾರಿ ಹೋದವು" ಎಂದಿತು. ವಯಸ್ಸಾದ ಪಕ್ಷಿ, "ಬೇಡ ಸಮಸ್ಯೆಯನ್ನು ದುಡ್ಡು ಕೊಟ್ಟು ಕೊಂಡುಕೋ ಬೇಡಿ" ಎಂದು ಎಚ್ಚರಿಸಿತು. ತಕ್ಷಣ ಒಂದು ಎಳೆಯ ಪಕ್ಷಿ, “ಸುಮ್ನೆ ಬರ್ತೀರಾ, ನಿಮ್ಮ ಕಾಲ ಮುಗಿದೋಯ್ತು. ಇನ್ಮುಂದೆ ನಾವು ಹೇಳೋದನ್ನ ಕೇಳಿ. ಇಲ್ಲ ಅಂದ್ರೆ ಮನೇಲ್ಲೇ ಇರಿ" ಎಂದಿತು. ಪಕ್ಷಿಗಳೆಲ್ಲ ಒಟ್ಟಾಗಿ ಸೇರಿ ಬಲೆಯ ಕಡೆಗೆ ಹಾರಿಹೋಗಿ ಬಲೆಗೆ ಬಿದ್ದವು. ವಯಸ್ಸಾದ ಪಕ್ಷಿ ಇಷ್ಟವಿಲ್ಲದೆ ಬಲೆಗೆ ಬಿದ್ದಿತು. ಸ್ವಲ್ಪ ಸಮಯದ ನಂತರ ಒಂದು ಎಳೆಯ ಪಕ್ಷಿ 1, 2, 3 ಎಂದು ಹೇಳಲು ಇತರ ಪಕ್ಷಿಗಳು ಸಹ ಹಾರಲು ಪ್ರಯತ್ನಿಸಿದವು. ಆದರೆ ಬಲೆ ಬರಲಿಲ್ಲ, ಇವುಗಳಿಂದ ಹಾರಲೂ ಸಾಧ್ಯವಾಗಲಿಲ್ಲ. ಅಷ್ಟು ಹೊತ್ತಿಗೆ ಬೇಟೆಗಾರನು ಕೂಡ ಬಂದುಬಿಟ್ಟನು. ಪಕ್ಷಿಗಳನ್ನು ನೋಡಿ ಓಹೋ ಆವತ್ತು ಯಾಮಾರಿಹೋದ ಬೇಟೆಗಾರನಂತೆ ನನ್ನನ್ನು ನೆನೆಸಿಕೊಂಡಿದ್ದೀರಾ! ಎಲ್ಲರೂ ನನಗೆ ಆಹಾರವಾಗಲಿದ್ದೀರ ಎಂದು ಹೇಳಿ ಪ್ರತಿ ಪಕ್ಷಿಯನ್ನು ಕೊಂದನು. ಅದರಲ್ಲಿ ಒಂದು ಪಕ್ಷಿ ಮಾತ್ರ ಹೇಳಿತು, ಆ ಅಜ್ಜಿಯ ಮಾತನ್ನು ಪಾಲಿಸಿದ್ದರೆ ಇಷ್ಟೆಲ್ಲ ಆಗುತ್ತಿತ್ತಾ? ಎಂದಿತು.

 

ಪ್ರೀತಿಯ ತಮ್ಮ-ತಂಗಿ, ನೀನು ಸಹ ನಿನಗೆ ಒಳ್ಳೆಯ ಸಲಹೆ ನೀಡುವ ಹಿರಿಯರ ಮಾತನ್ನು ಪಾಲಿಸದಿದ್ದರೆ, ನೀವು ಯಾವುದಾದರೂ ಒಂದು ಬಲೆಯೊಳಗೆ ಸಿಲುಕಿಕೊಳ್ಳುತ್ತೀರ. ಹಾಗಾಗಿ ಮನೆಯಲ್ಲಿ ಅಜ್ಜಿ-ತಾತ, ಅಮ್ಮ-ಅಪ್ಪನ ಮಾತನ್ನು ನಿರ್ಲಕ್ಷಿಸಬೇಡಿರಿ. OK

- Mrs. ಜೀವಾ ವಿಜಯ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)