Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 25.11.2022

ಧೈನಂದಿನ ಧ್ಯಾನ(Kannada) – 25.11.2022

 

ಎದ್ದು ಪ್ರಕಾಶಿಸು

 

"ಆದಕಾರಣ ನಾನು ನಿನ್ನ ತಲೆಯ ಮೇಲೆ ಹಸ್ತವನ್ನಿಟ್ಟದರ ಮೂಲಕ ನಿನಗೆ ದೊರಕಿದ ದೇವರ ಕೃಪಾವರವು ಪ್ರಜ್ವಲಿಸುವಂತೆ ಮಾಡಬೇಕೆಂದು ನಿನಗೆ ಜ್ಞಾಪಕಕೊಡುತ್ತೇನೆ." - 2 ತಿಮೊಥೆಯ 1:6

 

ಒಮ್ಮೆ ಗಣ್ಯರೊಬ್ಬರು ಒಂದು ಶಾಲೆಗೆ ಭೇಟಿ ನೀಡಿದ್ದರು. ಮುಖ್ಯೋಪಾಧ್ಯಾಯರು ವಿದ್ಯಾರ್ಥಿಯೊಬ್ಬನನ್ನು ತೋರಿಸಿ "ನಮ್ಮ ಶಾಲೆಯಲ್ಲಿ ಇವನೊಬ್ಬನೇ ಮೂರ್ಖ" ಎಂದು ಹೇಳುತ್ತಿದ್ದಂತೆ ಇತರ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ನಕ್ಕರು. ಸ್ವಲ್ಪ ಸಮಯದ ನಂತರ ಆ ಪ್ರಮುಖರು ಮನೆಗೆ ಹಿಂದಿರುಗುವಾಗ ಅವರು ಆ ಮೂರ್ಖ ವಿದ್ಯಾರ್ಥಿಯನ್ನು ಶಾಲೆಯ ಕಾಂಪೌಂಡ್‌ವರೆಗೂ ಕರೆದೊಯ್ಯಲು ಮುಖ್ಯೋಪಾಧ್ಯಾಯರಿಂದ ಅನುಮತಿ ಕೇಳಿದರು. ಹುಡುಗನ ಭುಜದ ಮೇಲೆ ಕೈ ಹಾಕಿಕೊಂಡು ಅವನನ್ನು ಕರೆದುಕೊಂಡು ಹೋದರು. ಹೋಗುವಾಗ, "ತಮ್ಮ! ಬೇರೆಯವರು ಏನು ಹೇಳಿದರೂ ತಲೆಕೆಡಿಸಿಕೊಳ್ಳಬೇಡ, ನೀನು ಜಗತ್ಪ್ರಸಿದ್ಧ ವ್ಯಕ್ತಿಯಾಗಬಹುದು, ಚೆನ್ನಾಗಿ ಓದು,'' ಎಂದು ಹೇಳಿ ಅವನ ಬೆನ್ನು ತಟ್ಟಿ ಹುರಿದುಂಬಿಸಿದರು. ಆ ಮಾತುಗಳು ಅವನಲ್ಲಿ ವಿದ್ಯುಚ್ಛಕ್ತಿಯಂತೆ ಚಿಮ್ಮಿದವು. ಅವನು ಚೆನ್ನಾಗಿ ಓದಿ ಪ್ರಸಿದ್ಧ ವೇದ ವಿದ್ವಾಂಸನಾದನು. ಅವರೇ "ಜಾರ್ಜ್ ಆಡಮ್ ಸ್ಮಿತ್" ಎಂಬ ವೇದ ವಿದ್ವಾಂಸರು. ಆ ಪ್ರಮುಖರ ಸ್ಪೂರ್ತಿದಾಯಕ ಮಾತುಗಳೇ ಅಲ್ವಾ ಅವರನ್ನು ವೇದಶಾಸ್ತ್ರಿಯನ್ನಾಗಿ ಮಾಡಿದ್ದು. 

 

ಅಪೊಸ್ತಲನಾದ ಪೌಲನ ಪ್ರೋತ್ಸಾಹದಾಯಕ ಮಾತುಗಳು ಬಲಹೀನನಾಗಿ ಭಯಭೀತ ಸ್ವಭಾವವುಳ್ಳ ತಿಮೊಥೆಯನನ್ನು ಸಭೆಗಳನ್ನು ನೋಡಿಕೊಳ್ಳುವ ನಾಯಕನನ್ನಾಗಿ ಮಾಡಿತು. "ನಾನು ನನ್ನ ಪ್ರಾರ್ಥನೆಯಲ್ಲಿ ಪ್ರತಿದಿನ ನಿನ್ನನ್ನು ನೆನೆಪಿಸಿಕೊಳ್ಳುತ್ತಾ, ನಿನ್ನ ಅಚಲವಾದ ನಂಬಿಕೆಗಾಗಿ ಕರ್ತನನ್ನು ಸ್ತುತಿಸುತ್ತೇನೆ" ಎಂದು ಹೇಳುತ್ತಾರೆ. “ನೀನು ಆ ನಂಬಿಕೆಯನ್ನು ನಿನ್ನ ಅಜ್ಜಿ ಮತ್ತು ನಿನ್ನ ತಾಯಿಯಿಂದ ಕಲಿತದ್ದು. ಅದರಲ್ಲಿ ಸ್ಥಿರವಾಗಿರು'' ಎಂದು ಹೇಳುತ್ತಾರೆ. ತಿಮೊಥೆಯನಿಗೆ ಇರುವ ದೇವರ ವರ, ನಾಯಕತ್ವದ ಗುಣ, ಸುವಾರ್ತೆ ಸಾರಲು ಇರುವಂತಹ ವೈರಾಗ್ಯ ಇವುಗಳನ್ನು ಅಲಕ್ಷ್ಯಮಾಡಬೇಡ, ಬೆಂಕಿ ಹೊತ್ತಿಸಿ ಪ್ರಜ್ವಲಿಸುವಂತೆ ಮಾಡು. ದೇವರ ವಾಕ್ಯವನ್ನು ಪ್ರತಿದಿನ ಓದು (1 ತಿಮೊಥೆ. 4:14) ಎಂದು ನೆನೆಪಿಸುತ್ತಾರೆ. ಈ ರೀತಿಯಾಗಿ ಸ್ಪೂರ್ತಿ ನೀಡಿ ತಿಮೊಥೆಯನನ್ನು ನಾಯಕನನ್ನಾಗಿ ಮಾಡುತ್ತಾರೆ.

 

ಹೌದು ಪ್ರಿಯರೇ! ನಮ್ಮನ್ನೂ ಸಹ ಇನ್ನಷ್ಟು ಉತ್ತಮಗೊಳಿಸುವುದು ಯಾವುದು? ನಮ್ಮಲ್ಲಿರುವ ಅಪಾರವಾದ ನಂಬಿಕೆ ನಮ್ಮ ತಾಯಿಯ ಬಳಿ, ಅಜ್ಜಿಯ ಬಳಿ ಕಲಿತದ್ದು ಅಥವಾ ಶುದ್ಧ ಹೃದಯದಿಂದ ಕರ್ತನನ್ನು ಆರಾಧಿಸುವವರಿಂದ ಕಲಿತದ್ದು. ಆ ನಂಬಿಕೆ ನಮ್ಮಲ್ಲಿ ನೆಲೆಗೊಂಡಿದೆಯಾ? ನಮ್ಮ ವರಗಳನ್ನು ಬೆಂಕಿ ಹೊತ್ತಿಸಿ ಪ್ರಜ್ವಲಿಸುವಂತೆ ಮಾಡುತ್ತಿದ್ದೇವೆಯೇ? ಸುವಾರ್ತೆ ಪ್ರಚಾರಕ್ಕಾಗಿ ದಿನಕ್ಕೆ ಕನಿಷ್ಠ ಒಂದು ಗಂಟೆಯನ್ನಾದರೂ ಮೀಸಲಿಟ್ಟು ಯಾವುದೋ ಒಂದು ರೀತಿಯಲ್ಲಿ ಯೇಸುವನ್ನು ಪ್ರಕಟಿಸಬಹುದಲ್ಲವೇ. ವಿದ್ಯಾವಂತರಾಗಿದ್ದರೆ ಟ್ಯೂಷನ್ ಹೇಳಿ ಕೊಡುವ ಮೂಲಕ ಮಕ್ಕಳಿಗೆ ತಿಳಿಸಬಹುದು ಅಥವಾ ಹಸ್ತಪ್ರತಿಗಳನ್ನು ಕೊಡಬಹುದು. ಎದ್ದು ಪ್ರಕಾಶಿಸಿರಿ.

- A. ಬ್ಯೂಲ

 

ಪ್ರಾರ್ಥನಾ ಅಂಶ:

ಯೌವನಸ್ಥರ ಉಜ್ಜೀವನ ಕೂಟದಲ್ಲಿ ದೇವರು ಮೊದಲೇ ಗುರುತಿಸಲ್ಪಟ್ಟಿರುವ ಯೌವನಸ್ಥರು ಬಂದು ಭಾಗವಹಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)