Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 05.10.2022

ಧೈನಂದಿನ ಧ್ಯಾನ(Kannada) – 05.10.2022

 

ಆಶೀರ್ವಾದದ ಹಾದಿ

 

"ಹೀಗೆ ಆತನು ಆಕಾರದಲ್ಲಿ ಮನುಷ್ಯನಾಗಿ ಕಾಣಿಸಿಕೊಂಡಿದ್ದಾಗ ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ ಶಿಲುಬೆಯ ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು" - ಫಿಲಿಪ್ಪಿ 2:8

 

ಒಂದು ಸುಂದರವಾದ ಉದ್ಯಾನವನದಲ್ಲಿ ಅನೇಕ ಬಿದಿರಿನ ಮರಗಳಿದ್ದವು. ಇವೆಲ್ಲವನ್ನೂ ಅದರ ಯಜಮಾನನು ಚೆನ್ನಾಗಿ ನೀರು ಹಾಕುತ್ತಾ ನೋಡಿಕೊಳ್ಳುತ್ತಿದ್ದನು. ಪ್ರತಿನಿತ್ಯ ತನ್ನ ನೆಚ್ಚಿನ ಬಿದಿರು ಮರದ ಬಳಿ ಕೆಲವು ನಿಮಿಷಗಳ ಕಾಲ ಮಾತನಾಡುತ್ತಿದ್ದನು. ಒಂದು ದಿನ ಆ ಯಜಮಾನನು ಬಿದಿರಿನ ಮರಕ್ಕೆ, "ನಾನು ನಿನ್ನನ್ನು ಬಳಸಿಕೊಳ್ಳುವ ಸಮಯ ಬಂದಿದೆ" ಎಂದು ಹೇಳಿದರು. ಅದು ಬಹಳ ಸಂತೋಷದಿಂದ, "ನೀವು ನನ್ನನ್ನು ಹೇಗೆ ಬಳಸಿಕೊಳ್ಳಲಿದ್ದೀರಿ?" ಎಂದು ಕೇಳಿತು. ಅದಕ್ಕೆ ಆ ಯಜಮಾನನು "ನಾನು ನಿನ್ನನ್ನು ಆ ಸ್ಥಳದಿಂದ ಕತ್ತರಿಸುತ್ತೇನೆ, ನಂತರ ನಿನ್ನ ಎಲ್ಲಾ ಕೊಂಬೆಗಳನ್ನು ಕತ್ತರಿಸುತ್ತೇನೆ, ನಂತರ ನಾನು ನಿನ್ನನ್ನು ಎರಡು ಭಾಗವಾಗಿ ಬಳಸುತ್ತೇನೆ" ಎಂದರು. ಬಿದಿರು ಬಹಳ ದುಃಖದಿಂದ ಹೇಳಿತು, “ಇಷ್ಟು ಗಾಯಗಳನ್ನು ಉಂಟುಮಾಡಿ ಬಳಸುತ್ತೀರಾ? ಬೇಡ" ಎಂದು ಹೇಳಿತು. ಕೆಲವು ಗಂಟೆಗಳ ಕಾಲ ಯೋಚಿಸಿದ ನಂತರ, ಅದು "ನನ್ನನ್ನು ಬಳಸಿಕೊಳ್ಳಿ" ಎಂದು ಸ್ವತಃ ಶರಣಾಯಿತು. ಯಜಮಾನನು ಬಿದಿರನ್ನು ಕತ್ತರಿಸಿ ಅದರ ಕೊಂಬೆಗಳನ್ನು ಕತ್ತರಿಸಿ ಎರಡಾಗಿ ಸೀಳಿ ಒಂದು ಬುಗ್ಗೆಯಲ್ಲಿಟ್ಟರು. ಅದರ ಇನ್ನೊಂದು ತುದಿಯನ್ನು ಒಣ ಮೈದಾನದ ಕಡೆಗೆ ಇಟ್ಟರು. ಒಣ ನೆಲವು ತೇವವಾಗಿ ಹದಕ್ಕೆ ಬಂದಿತು. ಕೆಲವೇ ದಿನಗಳಲ್ಲಿ ಉಳುಮೆ ಮಾಡಿ ಭೂಮಿ ಬಿತ್ತಿದರು. ಅದರಲ್ಲಿ ಭತ್ತದ ಬೆಳೆಗಳು ಮೊಳಕೆಯೊಡೆದ ನಂತರ ಅದನ್ನು ಕೊಯ್ಲು ಮಾಡಿದರು. ಬಿದಿರಿನ ವಿಧೇಯತೆಯಿಂದ ಯಜಮಾನನಿಗೂ ಬಹಳ ಸಂತೋಷವಾಯಿತು.

 

ಸತ್ಯವೇದದಲ್ಲಿ, ಕರ್ತನು ಸಮುವೇಲನ ಮೂಲಕ ಸೌಲನಿಗೆ, "ಅಮಾಲೇಕ್ಯರನ್ನು ಹೊಡೆದು ಅವನಲ್ಲಿರುವ ಎಲ್ಲವನ್ನೂ ನಾಶಮಾಡು" ಎಂದು ಹೇಳಿದರು. ಆದರೆ ಸೌಲನು ಕರ್ತನ ಮಾತಿಗೆ ಅವಿಧೇಯನಾಗಿ ಅಮಾಲೇಕ್ಯರ ಅರಸನಾದ ಅಗಾಗನನ್ನು ಜೀವಂತವಾಗಿ ಉಳಿಸಿದನು ಕುರಿ ಮತ್ತು ಮೇಕೆಗಳನ್ನು ತಪ್ಪಿಸಿದನು. ಸೌಲನ ಅವಿಧೇಯತೆಯು ಅಂತಿಮವಾಗಿ ಅವನ ರಾಜ್ಯವನ್ನು ಕಳೆದುಕೊಳ್ಳಲು ಕಾರಣವಾಯಿತು. ನಮ್ಮ ಆಧ್ಯಾತ್ಮಿಕ ಜೀವನದಲ್ಲಿ ದೇವರಿಗೆ ವಿಧೇಯತೆ ತೋರದೇ ಮಾಂಸವು ಗೆಲ್ಲುತ್ತಿದೆಯಾ? ಯೋಚಿಸಿ. (2 ಸಮುವೇಲ 15:21,22,23)

 

ಪ್ರಿಯರೇ! ಕರ್ತನಾದ ಯೇಸು ಕ್ರಿಸ್ತನು ದೇವರ ಪ್ರತಿರೂಪವಾಗಿದ್ದರೂ, ಅವರು ತನ್ನನ್ನು ತಾನು ಬರಿದುಮಾಡಿಕೊಂಡು ಗುಲಾಮನ ರೂಪವನ್ನು ಧರಿಸಿದರು ಮತ್ತು ದೇವರಿಗೆ ಸಮಾನ ಎಂದು ಪರಿಗಣಿಸದೆ ಮನುಷ್ಯರಂತೆ ಆದನು. ಶಿಲುಬೆಯಲ್ಲಿ ಸಾಯುವವರೆಗೂ ವಿಧೇಯನಾಗುವ ಮೂಲಕ ಅವರು ತನ್ನನ್ನು ತಗ್ಗಿಸಿಕೊಂಡರು. ಆದುದರಿಂದ ದೇವರು ಅವರನ್ನು ಎಲ್ಲಕ್ಕಿಂತ ಹೆಚ್ಚಾಗಿ ಉನ್ನತೀಕರಿಸಿದರು. ಕರ್ತನಾದ ಯೇಸು ಕ್ರಿಸ್ತನ ವಿಧೇಯತೆಯು ಇಡೀ ಮಾನವ ಜನಾಂಗಕ್ಕೆ ಮೋಕ್ಷವನ್ನು ತರಲಿಲ್ಲವೇ? ಎಂಥಹಾ ಪರಿಸ್ಥಿತಿಯಾಗಿದ್ದರೂ ದೇವರ ನಿಯಮಗಳನ್ನು ಮತ್ತು ಆಜ್ಞೆಗಳನ್ನು ಪಾಲಿಸುವ ಮೂಲಕ ಇತರರಿಗೆ ಆಶೀರ್ವಾದವಾಗಿ ಬದುಕಲು ನಮ್ಮನ್ನು ಅರ್ಪಿಸಿಕೊಳ್ಳುವುದು ಎಷ್ಟು ದೊಡ್ಡ ಸಂತೋಷವಾಗಿದೆ!

- Mrs. ನಿರೋಶಾ ಆಲ್ವಿನ್

 

ಪ್ರಾರ್ಥನಾ ಅಂಶ:

Peace center - ಗೆ ಬಂದು ಅಲ್ಲೇ ಉಳಿದು ಪ್ರಾರ್ಥಿಸುವ ಜನರು ಸಂಪೂರ್ಣವಾಗಿ ಬಿಡುಗಡೆ ಹೊಂದುವಂತೆ ಮತ್ತು ದೇವರಿಗೆ ಸಾಕ್ಷಿಯಾಗಿ ಜೀವಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)