Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 03.10.2022 (Youth Special)

ಧೈನಂದಿನ ಧ್ಯಾನ(Kannada) – 03.10.2022 (Youth Special)

 

ಗಾಂಧಿ ಮತ್ತು ಕ್ರೈಸ್ತ ಧರ್ಮ

 

"...ತೊಡಕುಗಳು ಬಾರದೆ ಇರಲಾರವು; ಆದರೂ ಅವು ಯಾವನಿಂದ ಬರುತ್ತವೆಯೋ ಅವನ ಗತಿಯನ್ನು ಏನು ಹೇಳಲಿ?" - ಲೂಕ 17:1

 

ಅಕ್ಟೋಬರ್ 2 ರಂದು ನಾವು ನಮ್ಮ ಭಾರತದ ಪಿತಾಮಹ ಮಹಾತ್ಮ ಗಾಂಧೀಜಿ ಅವರನ್ನು ಸ್ಮರಿಸುತ್ತೇವೆ. ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕರು ಹೋರಾಡಿದ್ದರೂ, ನಾವು ಅವರನ್ನು ಮಾತ್ರ ಮಹಾತ್ಮ ಎಂದು ಕರೆಯಲು ಕಾರಣ ಅವರ ಅಹಿಂಸಾ ಮಾರ್ಗವೇ. ಈ ರೀತಿ ಅಹಿಂಸೆಯ ಮಾರ್ಗವನ್ನು ಅರಿಯಲು ಅಡಿಪಾಯವಾಗಿದ್ದದ್ದು ಪರಿಶುದ್ಧ ಗ್ರಂಥವೇ ಎಂಬುದು ನಮ್ಮಲ್ಲಿ ಎಷ್ಟು ಜನಕ್ಕೆ ಗೊತ್ತು!.

 

ಗಾಂಧೀಜಿ ಬೈಬಲ್ ಅನ್ನು ಪವಿತ್ರ ಪುಸ್ತಕವೆಂದು ಸ್ವೀಕರಿಸಿದರು ಮತ್ತು ಅದನ್ನು ಎಚ್ಚರಿಕೆಯಿಂದ ಓದಿದರು ಮತ್ತು ಅವರು ಪರ್ವತದ ಮೇಲಿನ ಪ್ರಸಂಗವನ್ನು ಓದಿದಾಗ, "ಒಬ್ಬನು ನಿನ್ನ ಬಲಗೆನ್ನೆಯ ಮೇಲೆ ಹೊಡೆದರೆ ಅವನಿಗೆ ಮತ್ತೊಂದು ಕೆನ್ನೆಯನ್ನೂ ಒಡ್ಡು" (ಮತ್ತಾಯ 5:39) ಎಂಬ ವಾಕ್ಯವು ಅಹಿಂಸೆ ಅಥವಾ ಸತ್ಯಾಗ್ರಹದ ಮೂಲಕ ಶತ್ರುಗಳ ವಿರುದ್ಧ ಹೋರಾಡಬೇಕು ಎಂಬ ಆಲೋಚನೆಯನ್ನು ಅವರೊಳಗೆ ಪ್ರೇರೇಪಿಸಿತು. ಅವರು ಬೈಬಲನ್ನು ಓದಿದರು ಮತ್ತು ಅದನ್ನು ತನ್ನ ಜೀವನದ ಎಲ್ಲಾ ವಿಷಯಗಳಲ್ಲಿ ಅನ್ವಯಿಸಲು ಬಯಸಿದರು ಮತ್ತು ಅದನ್ನು ಕ್ರಿಯೆಯಲ್ಲಿ ತೋರಿಸಿದರು. ಯೇಸು ಮಾನವಕುಲದ ಅತ್ಯುತ್ತಮ ಶಿಕ್ಷಕ ಎಂದು ಮತ್ತು ಹೊಸ ಒಡಂಬಡಿಕೆಯು ನನಗೆ ಸಂತೋಷ ಮತ್ತು ಸಾಂತ್ವನವನ್ನು ನೀಡಿದೆ ಎಂದು ಅವರು ಹೇಳಿದ್ದಾರೆ. ಇಷ್ಟು ಅದ್ಭುತವಾಗಿ ಕ್ರಿಸ್ತನನ್ನು ತಿಳಿದುಕೊಂಡಿದ್ದರೂ ಸತ್ಯವೇದವನ್ನೇ ಜೀವನವಾಗಿ ಮಾರ್ಪಡಿಸಿದರೂ ಇವರು ರಕ್ಷಣೆ ಹೊಂದಲಿಲ್ಲ! ಏಕೆಂದರೆ “ಕ್ರೈಸ್ತರು ಹಿಂದೂ ಜನರನ್ನು ಮತ್ತು ಅವರ ದೇವರುಗಳನ್ನು ಶಪಿಸುವುದನ್ನು ನಾನು ನೋಡಿದೆ. ಇದನ್ನು ನಾನು ಒಪ್ಪಿಕೊಳ್ಳಲಾರೆ. ಹಾಗಾಗಿ ನಾನು ಕ್ರೈಸ್ತರನ್ನು ದ್ವೇಷಿಸಿದೆ. "ನಾನು ಕ್ರೈಸ್ತನಾಗಲಿಲ್ಲ" ಎಂದು ಹೇಳಿದರು. ಹೌದು, ಕ್ರೈಸ್ತರಾದ ನಾವು ಇದರ ಬಗ್ಗೆ ಯೋಚಿಸಬೇಕು.

 

ಪ್ರಿಯರೇ! ದೇವರು ನಮಗೆ ಕೊಟ್ಟಿರುವ ದೊಡ್ಡ ಸಂಪತ್ತು ಬೈಬಲ್. ಇದನ್ನು ಓದಿ ಧ್ಯಾನಿಸಿದರೆ ಹಲವು ಸಲಹೆಗಳನ್ನು ಪಡೆದು ಉತ್ತಮವಾಗಿ ಬದುಕಬಹುದು. ಇದರಲ್ಲಿ ಬರೆಯಲ್ಪಟ್ಟಿರುವ ವಾಕ್ಯಗಳನ್ನು ಅನುಸರಿಸಬೇಕೇ ಹೊರತು ಅದನ್ನು ಅನುಸರಿಸುವವರನ್ನು ನೋಡಿ ಅವರು ಸರಿಯಿಲ್ಲ ಎಂಬ ಕಾರಣಕ್ಕೆ ಇದು ನನಗೆ ಬೇಕಾಗಿಲ್ಲ ಎಂದು ಹೇಳುವುದಾದರೆ ನಮಗೇ ನಷ್ಟ. ಅದೇ ಸಮಯದಲ್ಲಿ ನಾವು ಅದರ ಇನ್ನೊಂದು ಬದಿಯನ್ನೂ ನೋಡಬೇಕು. ದೇವರ ಅನುಯಾಯಿಗಳಾಗಿ, ನಮ್ಮ ಕ್ರಿಯೆಗಳು ಅಥವಾ ಮಾತುಗಳು ನಮ್ಮ ಸುತ್ತಲಿರುವವರು ಕ್ರಿಸ್ತನ ಬಳಿಗೆ ಬರಲು ಅಥವಾ ಬಂದವರು ಹಿಂಜಾರಿಹೋಗಲು ಕಾರಣವಾಗಿವೆಯೇ ಎಂದು ಯೋಚಿಸೋಣ. ಹೀಗಾದರೆ ಎಡವುವವರು ನಾವೇ. ಅಂಥವರನ್ನು ನೋಡಿ ಯೇಸುಕ್ರಿಸ್ತನು “ಅಯ್ಯೋ” ಎಂದು ಹೇಳುತ್ತಿದ್ದಾರೆ. ಅವರ ಕುತ್ತಿಗೆಗೆ ಕಲ್ಲು ಕಟ್ಟಿ ಸಮುದ್ರದ ಆಳದಲ್ಲಿ ಎಸೆಯುವುದು ಉತ್ತಮ ಎನ್ನುತ್ತಾರೆ. ಮತ್ತು ಇಂದಿನ ಧ್ಯಾನವು ನಮಗೆ ಇನ್ನೊಂದು ವಿಷಯವನ್ನು ನೆನಪಿಸುತ್ತಿದೆ. ಏನದು? ಸತ್ಯವೇದದ ಕೆಲವು ಭಾಗಗಳನ್ನು ಮಾತ್ರ ಓದಿ ಅನ್ವಯಿಸಿದ ಮಹಾತ್ಮ ಯಶಸ್ವಿಯಾದರೆ, ಸತ್ಯವೇದವನ್ನು ಅನೇಕ ಬಾರಿ ಓದಿದ ನಾವು ವಾಕ್ಯವನ್ನು ನಂಬಿ ಗೆದ್ದಿದ್ದೇವೆಯೇ ಎಂದು ಯೋಚಿಸೋಣ. ವಾಕ್ಯದ ಶ್ರೇಷ್ಠತೆಯನ್ನು ಅನುಭವಿಸೋಣ. ಸತ್ಯವೇದವೇ ನಮ್ಮ ಜೀವನವಾಗಲಿ.

- Sis. ಏಂಜಲೀನ್

 

ಪ್ರಾರ್ಥನಾ ಅಂಶ:

Philip Gospel Team ಮೂಲಕ ಪ್ರತಿ ಶನಿವಾರ ಭೇಟಿಯಾಗುವ ಹಳ್ಳಿಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)