Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 19.08.2022

ಧೈನಂದಿನ ಧ್ಯಾನ(Kannada) – 19.08.2022

 

ವ್ಯತ್ಯಾಸವಿಲ್ಲ

 

"ನೀವೆಲ್ಲರು ಕ್ರಿಸ್ತ ಯೇಸುವಿನಲ್ಲಿಟ್ಟಿರುವ ನಂಬಿಕೆಯ ಮೂಲಕ ದೇವರ ಪುತ್ರರಾಗಿದ್ದೀರಿ" - ಗಲಾತ್ಯ 3:26

 

ಜಾತಿ ಬೇಧದ ಬೇರ್ಪಾಡುಗಳನ್ನು ಪಾಲಿಸುವ ಒಂದು ಹಳ್ಳಿಯಲ್ಲಿರುವ ತನ್ನ ಸಂಬಂಧಿಕರ ಮನೆಗೆ ಹೊರ ಊರಿನಲ್ಲಿ ವಾಸಿಸುತ್ತಿದ್ದ ಚಿಕ್ಕ ಹುಡುಗಿಯೊಬ್ಬಳು ರಜೆಗೆ ಬಂದಳು. ಆಗ ಕೆಳಜಾತಿಯ ವ್ಯಕ್ತಿಯೊಬ್ಬರು ನೀರು ಕೇಳಿದರು ಹುಡುಗಿಯ ಸಂಬಂಧಿಯೊಬ್ಬರು "ನೀರನ್ನು ಕೈಯಲ್ಲಿ ಸುರಿದು ಬಾ" ಎಂದು ಹೇಳಿ ನೀರಿನ ಚೊಂಬು ಕೊಟ್ಟರು. ಅವಳಿಗೆ ಅದು ಹೊಸದಾಗಿತ್ತು. ಹಾಗೆ ಮಾಡಲು ಅವಳ ಮನಸ್ಸು ಒಪ್ಪಲಿಲ್ಲ. ಆದ್ದರಿಂದ ಅವಳು ಆ ವ್ಯಕ್ತಿಗೆ ಒಂದು ಲೋಟ ನೀರು ಕೊಟ್ಟು ಅದನ್ನು ಕುಡಿಯಲು ಹೇಳಿದಳು. ಅವರು ಅದನ್ನು ಕುಡಿಯುತ್ತಿದ್ದಾಗ, ಆ ಹುಡುಗಿಯ ಸಂಬಂಧಿ "ಯಾಕೆ ಹೀಗೆ ಮಾಡಿದೆ?" ಎಂದು ಕೇಳಿದರು. "ಅವರೂ ನಮ್ಮಂತೆ ಮನುಷ್ಯರೇ ತಾನೇ, ಅದಕ್ಕೇ ನಾನು ಹೀಗೆ ಮಾಡಿದೆ" ಎಂದಳು.

 

ಸತ್ಯವೇದದಲ್ಲಿಯೂ ಸಹ, ಅಪೊಸ್ತಲನಾದ ಪೌಲನು ಗಲಾತ್ಯದವರಿಗೆ ಬರೆಯುವಾಗ, "ಕ್ರಿಸ್ತ ಯೇಸುವಿನಲ್ಲಿ ನೀವೆಲ್ಲರೂ ಒಂದಾಗಿದ್ದೀರಿ" ಎಂದು ಬರೆಯುತ್ತಾರೆ. ಆದ್ದರಿಂದ ಕ್ರಿಸ್ತನ ಸ್ವರೂಪದಲ್ಲಿರುವ ನಾವೆಲ್ಲರೂ ಆತನಲ್ಲಿ ಒಂದೇ ಆಗಿದ್ದೇವೆ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇರಬಾರದು ಎಂದರ್ಥ. ಹಿಂದಿನ ಕಾಲದಲ್ಲಿ ಗ್ರೀಕ್, ರೋಮನ್, ಗಂಡು ಮತ್ತು ಹೆಣ್ಣು ಎಂದು ಇದ್ದಂತಹ ಎಲ್ಲಾ ವಿಭಾಗಗಳನ್ನು ಒಡೆಯುವ ಸಲುವಾಗಿ ಪೌಲನು ಹೀಗೆ ಹೇಳುತ್ತಾರೆ. ಯೇಸು ಕ್ರಿಸ್ತನು ನಮ್ಮ ಜೀವನದಲ್ಲಿ ಅನ್ಯಜನರೆಂದು ಪರಿಗಣಿಸಲ್ಪಟ್ಟ ಸಮಾರ್ಯದವರನ್ನು ಮತ್ತು ಬಹಿಷ್ಕೃತರೆಂದು ಪರಿಗಣಿಸಲ್ಪಟ್ಟವರನ್ನು ಪ್ರೀತಿ ಮತ್ತು ಕಾಳಜಿಯಿಂದ ನಡೆಸಿಕೊಂಡಿರುವುದನ್ನು ನಾವು ನೋಡಬಹುದು.

 

ಪ್ರಿಯರೇ! ನಮ್ಮಲ್ಲಿ ಎಷ್ಟು ಜನ ಈ ಪುಟ್ಟ ಹುಡುಗಿಯ ಹಾಗೆ ಮನುಷ್ಯರೆಲ್ಲರೂ ಸಮಾನರು, ಜಾತಿ, ಬಣ್ಣ, ಭಾಷೆಯ ಬೇಧವಿಲ್ಲದೆ ಪ್ರೀತಿ ಮಾಡಬೇಕು ಎಂಬ ವಿಶಾಲ ಮನೋಭಾವದಿಂದ ಇದ್ದೇವೆ. ಸತ್ಯವೇದದ ಮಾರ್ಗವನ್ನು ಅನುಸರಿಸುತ್ತೇವೆ ಎಂದು ಪ್ರತಿಪಾದಿಸುವ ನಾವು ಈ ಜಾತಿ ವ್ಯತ್ಯಾಸಗಳನ್ನು ಹೇಗೆ ಅನುಮತಿಸುತ್ತೇವೆ? ಇಂದು ಸಭೆಗಳಲ್ಲಿಯೂ ಜಾತಿ ಬೇಧಗಳು ಬೇರೂರಿವೆ. ಮದುವೆಯ ವಿಷಯಕ್ಕೆ ಬಂದಾಗ ಇದು ವಿಶೇಷವಾಗಿ ಸತ್ಯವಾಗಿದೆ. ಕ್ರೈಸ್ತರು ವರನು - ವಧುವನ್ನು ತಮ್ಮ ಮಕ್ಕಳಿಗೆ ಜೊತೆ ಹುಡುಕುವ ಪರಿಸ್ಥಿತಿ ಏರ್ಪಟ್ಟರೆ, ಸಭೆಯಲ್ಲಿ ಮರುಬೆಳವಣಿಗೆ ಉಂಟಾಗುತ್ತದೆ. ಖಂಡಿತವಾಗಿಯೂ ಚರ್ಚ್ ಸಮಾಜದ ಮೇಲೆ ಒಂದು ದಾಹವನ್ನು ಉಂಟು ಮಾಡುತ್ತದೆ. ಹೌದು, ದೇವರು ನಮ್ಮೆಲ್ಲರನ್ನು ತನ್ನ ಸ್ವರೂಪದಲ್ಲಿ ಸೃಷ್ಟಿಸಿದರು. ಅವರ ದೃಷ್ಟಿಯಲ್ಲಿ ಎಲ್ಲರೂ ಸಮಾನರೇ. ಆದ್ದರಿಂದ, ನಾವು ಕ್ರಿಸ್ತ ಯೇಸುವಿನಲ್ಲಿ ಎಲ್ಲರೂ ಒಂದೇ ಎಂದು ಭಾವಿಸುವಾಗ ದೇವರ ನಾಮ ಮಹಿಮೆ ಹೊಂದುತ್ತದೆ. ಮತ್ತು ದೇವರು ಕೂಡ ಸಂತೋಷಪಡುತ್ತಾರೆ ಎಂಬುದರಲ್ಲಿ ಸಂದೇಹವೇ ಇಲ್ಲ.

- Mrs. ಏಂಜಲೀನ್.

 

ಪ್ರಾರ್ಥನಾ ಅಂಶ:

"ಮೋಕ್ಷ ಪ್ರಯಾಣ" ಪತ್ರಿಕೆಯಲ್ಲಿ ಪ್ರಕಟವಾಗುವ ದೈನಂದಿನ ಧ್ಯಾನ ಸಂದೇಶಗಳು 8 ಭಾಷೆಗಳಿಗೆ ಅನುವಾದಿಸಲಾಗುತ್ತಿದೆ. You tube, Face Book ಮೂಲಕ ಅನೇಕರು ಓದಿ ಪ್ರಯೋಜನ ಪಡೆಯಲಿ ಎಂದು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)