Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 18.08.2022

ಧೈನಂದಿನ ಧ್ಯಾನ(Kannada) – 18.08.2022

 

ನಾವು ಕಳ್ಳರಾ?

 

"ಈ ದಿನಗಳು ಕೆಟ್ಟವುಗಳಾಗಿವೆ; ಆದದರಿಂದ ಕಾಲವನ್ನು ಸುಮ್ಮನೆ ಕಳಕೊಳ್ಳದೆ ಅದನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿಕೊಳ್ಳಿರಿ" - ಎಫೆಸ 5:16

 

ಈಗಿನ ಕಾಲದಲ್ಲಿ ನಾವು ಹೋಗುವ ಸ್ಥಳಗಳಲ್ಲಿರುವ ನೈಸರ್ಗಿಕ ದೃಶ್ಯಗಳನ್ನು ಚಿತ್ರೀಕರಿಸಿ ಅದನ್ನು ತಮ್ಮ You Tub, Facebook, Whats App - ನಲ್ಲಿ ಹಂಚಿಕೊಳ್ಳುವುದು ಅಭ್ಯಾಸವಾಗಿಬಿಟ್ಟಿದೆ. ಒಂದು ದಿನ 80 ವರ್ಷದ ವ್ಯಕ್ತಿಯೊಬ್ಬ ತನ್ನ ಸ್ನೇಹಿತರೊಂದಿಗೆ ಶಿಮ್ಲಾಗೆ ಟಿಕೆಟ್ ಕಾಯ್ದಿರಿಸುತ್ತಿರುವಾಗ ಇದ್ದಕ್ಕಿದ್ದಂತೆ ಎದೆಯನ್ನು ಹಿಡಿದುಕೊಂಡು ಕೆಳಗೆ ಬಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಹೃದಯ ಶಸ್ತ್ರ ಚಿಕಿತ್ಸೆ ಮಾಡಿ ಮುಗಿಸಲಾಯಿತು. ನಂತರ ಅದರ ಶುಲ್ಕ 8 ಲಕ್ಷ ಎಂದು ಆತನಿಗೆ ಹೇಳಿದಾಗ ಅವರ ಕಣ್ಣಲ್ಲಿ ನೀರು ಬಂತು! ಯಾಕೆ ಎಂದು ಕೇಳಿದರೆ "80 ವರ್ಷಗಳ ಕಾಲ ಒಂದು ರೂಪಾಯಿ ಕೂಡಾ ತೆಗೆದುಕೊಳ್ಳದೇ ದುಡಿಯಲು ಬಲ ಕೊಟ್ಟು ಇಲ್ಲಿಯವರೆಗೆ ನಡೆಸಿದ ಕರ್ತನಿಗೆ ಕೃತಜ್ಞತೆಯಾಗಲಿ, ಕಾಣಿಕೆಯಾಗಲಿ ಸಲ್ಲಿಸದ ಕಳ್ಳ ನಾನು." ಎಂದರು. 

 

ಸತ್ಯವೇದದಲ್ಲಿ ಫಿಲಿಪ್ಪಿ 2:4 ರಲ್ಲಿ "ನಿಮ್ಮಲ್ಲಿ ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡಲಿ" ಎಂದು ಹೇಳಿರುವಂತೆ, ನಾವು ನಮ್ಮ ಸಮಯವನ್ನು ಅಥವಾ ಹಣವನ್ನು ಇತರರಿಗಾಗಿ ಖರ್ಚು ಮಾಡುವಾಗ, ಯಾವುದೋ ಒಂದು ರೀತಿಯಲ್ಲಿ ನಾವು ಮತ್ತೊಬ್ಬರಿಗೆ ಸೇವೆ ಮಾಡುತ್ತೇವೆ. ಮಾರ್ಕ 10:45 ರಲ್ಲಿ "ಮನುಷ್ಯಕುಮಾರನು ಸಹ ಸೇವೆಮಾಡಿಸಿಕೊಳ್ಳುವದಕ್ಕೆ ಬರಲಿಲ್ಲ, ಸೇವೆಮಾಡುವದಕ್ಕೂ ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡುಕೊಡುವದಕ್ಕೂ ಬಂದರು" ಎಂದು ಓದಿದ ನಾವು, ಕರ್ತನಿಗಾಗಿ ಸೇವೆ ಮಾಡಲು, ಅನೇಕರನ್ನು ಅವರ ವಿಮೋಚನೆಯ ಕಡೆಗೆ ನೇರವಾಗಿ ಮುನ್ನಡೆಸಲು ನಮ್ಮನ್ನೂ ನಮ್ಮ ಬಳಿ ಇರುವುದನ್ನೂ ಖರ್ಚು ಮಾಡಲು ಸಿದ್ಧರಿದ್ದೇವಾ? ಹಾಗಿಲ್ಲದಿದ್ದರೆ ನಾವು ದೇವರಿಗೆ ಸೇರಿದುದನ್ನು ಕದಿಯುವವರಂತೆ ಕಾಣುತ್ತೇವೆ.

 

ಪ್ರಿಯರೇ, ಸಮಯವು ಚಿನ್ನದಂತೆ ಎಂದು ಹೇಳುತ್ತಾರೆ. ನೆಪಮಾತಿನ ಮಾತು ನಮ್ಮ ಸಮಯವನ್ನು ಕದಿಯುತ್ತದೆ, ಟಿವಿ ನೋಡಿದರೆ ನಮ್ಮ ಸಮಯವನ್ನು ಕದಿಯುತ್ತದೆ, ಸೆಲ್ ಫೋನ್ ತೆರೆದರೆ ನಮಗೆ ಅರಿವಿಲ್ಲದೆ ಸಮಯವನ್ನು ಕದಿಯುತ್ತದೆ. ಯೋಹಾನ 10:10 ರಲ್ಲಿ ಕಳ್ಳನು ಕದ್ದುಕೊಳ್ಳುವದಕ್ಕೂ ಕೊಯ್ಯುವದಕ್ಕೂ ಹಾಳುಮಾಡುವದಕ್ಕೂ ಬರುತ್ತಾನೆ ಹೊರತು ಮತ್ತಾವದಕ್ಕೂ ಬರುವದಿಲ್ಲ ಎಂದು ಓದುತ್ತೇವೆ. ಯಾರೋ ಕಳ್ಳರು ನಮ್ಮ ಮನೆಗೆ ಬಂದು ನಮ್ಮ ಸಾಮಾನುಗಳನ್ನು ಕದ್ದರೆ ನಮಗೆ ಭಯವಾಗುತ್ತದೆ. ಆದರೆ ನಮಗೆ ಗೊತ್ತಿಲ್ಲದೆ ನಮ್ಮ ಸಮಯ ಕಳ್ಳತನವಾಗುವುದರ ಬಗ್ಗೆ ಎಚ್ಚರವಾಗಿದ್ದು, ಸಮಯವನ್ನು ಉಪಯೋಗಿಸಿಕೊಳ್ಳೋಣ. ಸಮಾಜದಲ್ಲಿ ಅನೇಕ ಜನರಿಗೆ ಸಹಾಯ ಮಾಡೋಣ ಮತ್ತು ಕರ್ತನಾದ ಯೇಸು ಕ್ರಿಸ್ತನ ಪ್ರೀತಿಯನ್ನು ಸಾರೋಣ!

- Mrs. ಅನ್ಬುಜ್ಯೋತಿ ಸ್ಟಾಲಿನ್

 

ಪ್ರಾರ್ಥನಾ ಅಂಶ:

ಲೋಕವನ್ನೇ ಕಲಕುವ 120 ಮಿಷನರಿಗಳನ್ನು ರೂಪಿಸಲು ಯೋಜಿಸಿದಂತೆ 60 ಮಿಷಿನರಿಗಳ ಮನೆಗಳನ್ನು ಕಟ್ಟಿ ಮುಗಿಸುವಂತೆ, ಅಗತ್ಯಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)