Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 16.08.2022

ಧೈನಂದಿನ ಧ್ಯಾನ(Kannada) – 16.08.2022

 

ಒಂದು ಹೊತ್ತಿನ ಊಟವನ್ನು...

 

 "ನೀನು ಹೊಟ್ಟೆ ಬಾಕನಾಗಿದ್ದರೆ ನಿನ್ನ ಕುತ್ತಿಗೆಗೆ ಕತ್ತಿಯನ್ನು ಇಟ್ಟುಕೋ" - ಜ್ಞಾನೋಕ್ತಿ 23:2

 

ಮಹಿಳೆಯೊಬ್ಬರು ಸೇವಕರಾದ ಬಿಲ್ಲಿ ಗ್ರಹಾಂ ಅವರಿಗೆ ದೂರವಾಣಿಯ ಮೂಲಕ ಈ ರೀತಿಯಾಗಿ ತಿಳಿಸಿದರು. "ಹಗಲು ರಾತ್ರಿ ನನ್ನನ್ನು ಬಾಧಿಸಿ ಹಿಂಸಿಸುತ್ತಿರುವ ಒಂದು ಭಯಾನಕ ಕಾರ್ಯ ನನ್ನನ್ನು ಗುಲಾಮಳನ್ನಾಗಿ ಮಾಡಿದೆ. ಅದರಿಂದ ಹೊರಬರಲು ಹರಸಾಹಸ ಪಡುತ್ತಿದ್ದೇನೆ. ನಾನು ಎಷ್ಟೋ ಬಾರಿ ಪ್ರಯಾಸಪಟ್ಟು ಪ್ರಯತ್ನಿಸಿದರೂ ನನಗೆ ಇದರ ಮೇಲೆ ಜಯಸಿಗಲಿಲ್ಲ. ಈ ರೀತಿಯಾಗಿ ನನ್ನನ್ನು ಹಿಂಸಿಸುತ್ತಿರುವ ವಿಷಯ ಯಾವುದೆಂದರೆ ಹೊಟ್ಟೆಬಾಕತನ. ಇದರಿಂದ ನನಗೆ ಮುಕ್ತಿ ಸಿಗಲು ಏನಾದರೂ ಮಾರ್ಗವಿದೆಯೇ?” ಎಂದಳು. ಅದಕ್ಕೆ ಬಿಲ್ಲಿ ಗ್ರಹಾಂ, ಇದಕ್ಕಿರುವ ಏಕೈಕ ಮಾರ್ಗವೆಂದರೆ ರಕ್ಷಕನಾದ ಯೇಸುವೇ! "ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ ಎಂದು ಹೇಳಿದ ಯೇಸುವೇ ನಿಮ್ಮನ್ನು ಬಿಡಿಸಲು ಸಾಧ್ಯ ಎಂದರು.

 

ಈ ಹೊಟ್ಟೆಬಾಕತನದ ಬಗ್ಗೆ ಬಿಲ್ಲಿ ಗ್ರಹಾಂ ಅವರು ಏನು ಹೇಳಿದ್ದಾರೆಂದು ನೋಡೋಣವಾ? ಜಗತ್ತಿನಲ್ಲಿ ಅಸಂಖ್ಯಾತ ಜನರು ಹಸಿವಿನಿಂದ ಸಾಯುತ್ತಿರುವಾಗ, ನಾವು ಮಾತ್ರ ಆಹಾರವನ್ನು ಮಿತವಾಗಿ ಬಳಸದೆ, ಅತಿಯಾಗಿ ಸೇವಿಸಿ ನಮ್ಮ ದೇಹವನ್ನು ಮತ್ತು ಇತರರನ್ನು ಕೊಲ್ಲುತ್ತಿರುವುದು ನ್ಯಾಯವೇನಾ? ಇತರರು ಹಸಿವಿನಿಂದ ಬಳಲುತ್ತಿದ್ದಾರೆ ಎಂದು ಚಿಂತಿಸದೆ ಆರಾಮವಾಗಿ ಬದುಕುವವರ ಬಗ್ಗೆ ಸತ್ಯವೇದವು ಏನು ಹೇಳುತ್ತಿದೆ? ಈ ಲೋಕದ ಸಂಪತ್ತುಳ್ಳ ಯಾವನಾದರೂ ಕೊರತೆಯಲ್ಲಿ ಬಿದ್ದಿರುವ ತನ್ನ ಸಹೋದರನನ್ನು ನೋಡಿ ಕರುಣಿಸದೆ ಬಿಟ್ಟರೆ ದೇವರ ಪ್ರೀತಿಯು ಅವನಲ್ಲಿ ನೆಲೆಗೊಂಡಿರುವದುಂಟೇ? (1ಯೋಹಾನ 3:17).

 

ಇತ್ತೀಚಿನ ದಿನಗಳಲ್ಲಿ ಹಸಿವಿನಿಂದ ಸಾಯುವುದಕ್ಕಿಂತ ಅತಿಭೋಜನದಿಂದ ಸಾಯುವವರೇ ಹೆಚ್ಚು. ಇಂದು ಜಗತ್ತನ್ನು ಕಾಡುತ್ತಿರುವ ಬಹುತೇಕ ಭಯಾನಕ ಕಾಯಿಲೆಗಳಿಗೆ ಹೊಟ್ಟೆಬಾಕತನವೇ ಕಾರಣ. ಹೊಟ್ಟೆಬಾಕತನವು ಮನುಷ್ಯನನ್ನು ಕೊಲ್ಲುತ್ತದೆ. ಇದರ ಬಗ್ಗೆ ಸತ್ಯವೇದವು, "ಹೊಟ್ಟೆಬಾಕರ ಅಂತ್ಯವು ನಾಶವೇ, ಅವರ ದೇವರು ಹೊಟ್ಟೆಯೇ" ಎಂದು ಹೇಳುತ್ತಿದೆ. ನಮ್ಮಲ್ಲಿ ಅನೇಕರು ಹೊಟ್ಟೆಬಾಕತನವನ್ನು ಪಾಪವೆಂದು ಪರಿಗಣಿಸುವುದಿಲ್ಲ. ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂದು ಯೋಚಿಸುವುದಿಲ್ಲ. ಕ್ರೈಸ್ತರಲ್ಲಿ ಅತಿರೇಕದ ಹೊಟ್ಟೆಬಾಕತನವನ್ನು ತಡೆಗಟ್ಟಲು ದೇಶದಲ್ಲಿ ಯಾವುದೇ ಕಾನೂನು ಇಲ್ಲದಿದ್ದರೂ, ಅದನ್ನು ವಿರೋಧಿಸಿ ಎಚ್ಚರಿಸುವುದಕ್ಕೆ ಸತ್ಯವೇದದಲ್ಲಿ ವಾಕ್ಯಗಳಿವೆ.

 

ಪ್ರಿಯರೇ! ದೇವರು ನಮಗೆ ಕೊಡುವ ಆಹಾರವನ್ನು ಸ್ತೋತ್ರ ಮಾಡಿ ಸವಿದು, ಬೇಕಾದಷ್ಟು ತಿಂದು ಬಲಹೊಂದಿ ಆರೋಗ್ಯವಂತರಾಗಿ ಜೀವಿಸೋಣ. ಆಹಾರ ತಿನ್ನುವಾಗಲೆಲ್ಲಾ, ನಿಮ್ಮ ಸುತ್ತಲೂ ಹಸಿವಿನಿಂದ ಬಳಲುತ್ತಿರುವ ಜನರನ್ನು ನೆನಪಿಸಿಕೊಳ್ಳಿರಿ. ನಿಮಗೆ ಸಾಧ್ಯವಾದಾಗಲೆಲ್ಲಾ ಅವರಿಗೆ ಸಹಾಯ ಮಾಡಿರಿ. ನಾವು ಹೆಚ್ಚಾಗಿ ತಿನ್ನುವ ಆಹಾರವನ್ನು ಮಾತ್ರ ಇತರರೊಂದಿಗೆ ಹಂಚಿಕೊಂಡರೆ ಅದು ನಮಗೆ ಸಂತೋಷವನ್ನು ನೀಡುತ್ತದೆ ಮತ್ತು ನಾವು ಏನಾದರೂ ಸ್ವಲ್ಪ ಒಳ್ಳೆಯದನ್ನೂ ಮಾಡುತ್ತಿದ್ದೇವೆ ಎಂಬ ಭಾವನೆಯೂ ಮೂಡುತ್ತದೆ. ಈ ಚಿಂತನೆಯೇ ಮುಂದಿನ ದಿನಗಳಲ್ಲಿ ದೊಡ್ಡ ಸಹಾಯಕ ಹಸ್ತಗಳಾಗಿ ಮಾರ್ಪಡುತ್ತದೆ. ನಮ್ಮ ಹಸಿದ ಸಮಾಜಕ್ಕೆ ಅನ್ನ ನೀಡೋಣ. ಹಲ್ಲೇಲೂಯ!

- T. ಸಾಮುವೇಲ್

 

ಪ್ರಾರ್ಥನಾ ಅಂಶ:

"ರಾಕ್ಲ್ಯಾಂಡ್ ಮಿಷನರಿ ತರಬೇತಿ ಕೇಂದ್ರ" ಪ್ರತಿಷ್ಟೆ ಆರಾಧನೆಯನ್ನು ಕರ್ತನು ಆಶೀರ್ವದಿಸಿ ಕೊಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)