Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 14.08.2022

ಧೈನಂದಿನ ಧ್ಯಾನ(Kannada) – 14.08.2022

 

ಜೆನಿಯ ನಂಬಿಕೆ

 

"ನೀವು ನಂಬಿಕೊಂಡು ಪ್ರಾರ್ಥನೆಯಲ್ಲಿ ಏನೇನು ಬೇಡಿಕೊಳ್ಳುವಿರೋ ಅದನ್ನೆಲ್ಲಾ ಹೊಂದುವಿರಿ ಅಂದನು” - ಮತ್ತಾಯ 21:22

 

ರಜೆ ದಿನ ಬಂದುಬಿಟ್ರೆ ಜೆನಿ ಚೆನ್ನಾಗಿ ನಿದ್ದೆ ಮಾಡುತ್ತಿದ್ದಳು. ರಜೆಯ ದಿನಗಳಲ್ಲಿ ನೀವು ಕೂಡ ಹಗಲಲ್ಲಿ ಮಲಗುತ್ತೀರಾ? ಇಲ್ವಾ? ಓ... ನಿದ್ದೇನೇ ಬರಲ್ವಾ? ಸರಿ... ಸರಿ... ಮಲಗಿದ್ದ ಜೆನಿಯನ್ನು ಅಪ್ಪ ಎಬ್ಬಿಸಿದರು. "ಇವತ್ತು ನಮ್ಮ ಊರಿನಲ್ಲಿ ಸುವಾರ್ತಾ ಕೂಟದ 2ನೇ ದಿನ, ನಡಿ ಹೋಗೋಣ" ಎಂದು ಹೇಳಿದ ಕೂಡಲೇ ಬೇಗ ಹೊರಟಳು. ಅದು ಬೇಸಿಗೆಯಾಗಿದ್ದದರಿಂದ ತುಂಬಾ ಬಿಸಿಲಿತ್ತು. ಇಡೀ ಗ್ರಾಮವೇ ಬರಗಾಲಕ್ಕೆ ತುತ್ತಾಗಿತ್ತು. ನಿನ್ನೆಯ ಕೂಟದಲ್ಲಿ "ಮಳೆಗಾಗಿ ವಿಶೇಷ ಉಪವಾಸ ಪ್ರಾರ್ಥನೆ ಮಾಡಲಾಗುವುದು" ಎಂದು ಸೇವಕರು ಹೇಳಿದ್ದು ನೆನಪಾಗಿ ಜೆನಿ ಛತ್ರಿ ತೆಗೆದುಕೊಂಡಳು.

 

ಜೆನಿ ಸೇವಕರು ಹೇಳಿದಂತೆಯೇ ಊಟ ಮಾಡದೆ ಉಪವಾಸದಿಂದ ಹೋದಳು. ಆಕೆಯ ನಂಬಿಕೆಯನ್ನು ನೋಡಿ ಹೆತ್ತವರು ಸಂತೋಷಪಟ್ಟರು. ಅವರು ಕುಟುಂಬ ಸಮೇತರಾಗಿ ಸುವಾರ್ತಾ ಕೂಟಕ್ಕೆ ಹೋಗಿದ್ದರು. ಜೆನಿಯ ಕೈಯಲ್ಲಿದ್ದ ಛತ್ರಿಯನ್ನು ನೋಡಿದ ಅಪ್ಪ, "ಸಂಜೆ ಕೂಟಕ್ಕೆ ಯಾಕಮ್ಮಾ ಛತ್ರಿ?" ಎಂದರು. “ಅಪ್ಪಾ ನಾವು ಮಳೆಗಾಗಿ ಪ್ರಾರ್ಥಿಸಲು ಹೋಗುತ್ತಿದ್ದೇವಲ್ಲಾ, ಯೇಸಪ್ಪ ನಮಗೆ ಚೆನ್ನಾಗಿ ಮಳೆಯನ್ನು ಕೊಡುತ್ತಾರೆ. ಆಗ ಮನೆಗೆ ಬಂದು ಸೇರಲು ಛತ್ರಿ ಬೇಕಲ್ವಾ ಅಪ್ಪ!” ಎಂದು ಕಲ್ಮಶವಿಲ್ಲದ ಮುಗ್ಧ ಸ್ವರದಲ್ಲಿ ಉತ್ತರ ಕೊಟ್ಟ ಜೆನಿಯನ್ನು ಕಂಡು ಹೆತ್ತವರು ಮೂಕರಾದರು. ಅಬ್ಬಾ! ಇವಳು ಮೋಸ ಹೋಗಬಾರದು ಎಂದು ತಂದೆ ಯೋಚಿಸಿದರು.

 

ಕೂಟ ಆರಂಭವಾಯಿತು. ಮಳೆಗಾಗಿ ಪ್ರಾರ್ಥಿಸಿದ ನಂತರ ಸೇವಕರು ಉಪದೇಶವನ್ನು ಪ್ರಾರಂಭಿಸಿದರು. ವಾಕ್ಯೋಪದೇಶದ ಮಧ್ಯದಲ್ಲಿ, ಕೆಲವು ಗುಡುಗುಗಳು ಅಪ್ಪಳಿಸಲು ಪ್ರಾರಂಭಿಸಿದವು ಮತ್ತು ಮಿಂಚು ಮಿಂಚಲು ಪ್ರಾರಂಭಿಸಿತು. ಜೆನಿಯು ಅಪ್ಪನ ಮುಖವನ್ನು ನೋಡಿದಳು "ಯೇಸಪ್ಪ ಪ್ರಾರ್ಥನೆಗೆ ಉತ್ತರ ಕೊಟ್ಟುಬಿಟ್ರು" ಎಂದು ಹೇಳುವಂತಿತ್ತು ಆ ನೋಟ. ಅಪ್ಪ ಸುತ್ತಮುತ್ತಲಿನ ಜನರನ್ನು ನೋಡಿದರು. ಕಪ್ಪು ಮೋಡ ಕವಿದಿತ್ತು. ವಾಕ್ಯೋಪದೇಶದ ಕೊನೆಯಲ್ಲಿ, ಅವರು "ಆಮೆನ್" ಎಂದು ಹೇಳುತ್ತಿದ್ದಂತೆ ಮಳೆಹನಿಗಳು ಬೀಳಲು ಪ್ರಾರಂಭಿಸಿದವು. ಅವರು ತಮ್ಮ ಬೈಬಲ್‌ಗಳು ಮತ್ತು ಹಾಡುಪುಸ್ತಕಗಳನ್ನು ಒದ್ದೆಯಾಗದಂತೆ ಇರಿಸಲು ಸ್ಥಳವನ್ನು ಹುಡುಕುತ್ತಾ ನಾಲ್ಕೂ ದಿಕ್ಕುಗಳಲ್ಲಿ ಓಡಿದರು. ಜೆನಿ ತಾನು ತಂದಿದ್ದ ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಬೈಬಲ್ ಮತ್ತು ಹಾಡು ಪುಸ್ತಕಗಳನ್ನು ಸುರಕ್ಷಿತವಾಗಿ ಇಟ್ಟುಕೊಂಡು ಛತ್ರಿಯನ್ನು ಹರಡಿದಳು. ಜೆನಿಯ ನಂಬಿಕೆಯನ್ನು ಕಂಡು ಅವಳ ತಂದೆ ತಾಯಿಯೂ ಛತ್ರಿ ತಂದಿದ್ದರು. ಕುಟುಂಬ ಸಮೇತರಾಗಿ ದೇವರನ್ನು ಸ್ತುತಿಸುತ್ತಾ ಮನೆಗೆ ಬಂದು ಸೇರಿದರು.

 

ಏನು ಪುಟಾಣಿಗಳೇ! ಜೆನಿ ಕರ್ತನ ಮೇಲಿಟ್ಟಿದ್ದ ನಂಬಿಕೆ ವ್ಯರ್ಥವಾಗಲಿಲ್ಲ ನೋಡುದ್ರಾ? ನೀವು ಸಹ ಪ್ರಾರ್ಥಿಸುವಾಗ, ಯೇಸಪ್ಪ ಅದ್ಬುತವನ್ನು ಮಾಡುತ್ತಾರೆ ಎಂದು ನಂಬಿಕೆಯಿಂದ ಕೇಳಿದರೆ ನಿಮಗೆ ಖಂಡಿತವಾಗಿ ಸಿಗುತ್ತದೆ. ನಂಬಿಕೆಯಿಂದ ಕೇಳಿ ನೋಡಿ. ನಂಬಲಾಗದ ಅದ್ಬುತವನ್ನು ಕಾಣುತ್ತೀರ!!! God bless you.

- Mrs. ಜೀವಾ ವಿಜಯ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)