Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 12.08.2022

ಧೈನಂದಿನ ಧ್ಯಾನ(Kannada) – 12.08.2022

 

ನಾಚಿಕೆ

 

"ಯೆಹೋವದೇವರು ಆದಾಮನಿಗೂ ಅವನ ಹೆಂಡತಿಗೂ ಚರ್ಮದ ಅಂಗಿಗಳನ್ನು ಮಾಡಿ ತೊಡಿಸಿದನು” - ಆದಿ. 3:21

 

ರಸ್ತೆ ಬದಿಗಳಲ್ಲಿ ಮಾನಸಿಕ ಅಸ್ವಸ್ಥರು ಸರಿಯಾದ ಬಟ್ಟೆ ಧರಿಸದೇ ಇರುವುದನ್ನು ನೋಡುತ್ತೇವೆ. ಕರುಣೆಯಿಂದ ಕೆಲವರು ಬಟ್ಟೆ ಕೊಟ್ಟರೂ ಅವರು ಧರಿಸುವುದಿಲ್ಲ. ಅದನ್ನು ಧರಿಸಬೇಕೆಂಬ ಆಲೋಚನೆಯೂ ಅವರಿಗಿಲ್ಲ. ಇಂತಹವರಿಗಾಗಿ ಕಣ್ಣೀರಿನಿಂದ ಪ್ರಾರ್ಥಿಸೋಣ. ಒಂದು ಮನುಷ್ಯನ ವಸ್ತ್ರಧಾರಣೆಯೇ ಅವನ ಸರಿಯಾದ ಮನಸ್ಥಿತಿಯನ್ನು ತೋರಿಸುತ್ತದೆ. ಹೀಗಾಗಿ, ನಾಚಿಕೆ ಎಂಬ ಒಂದು ಅಂಶ ಆರೋಗ್ಯಕರ ಮನಸ್ಥಿತಿಯ ಅಭಿವ್ಯಕ್ತಿಯಾಗಿದೆ.

 

ಈಗ ನಾವು ನಮ್ಮ ದೃಷ್ಟಿಯನ್ನು ಬೇರೆ ಕಡೆಗೆ ತಿರುಗಿಸೋಣ. ಕೆಲವೊಮ್ಮೆ ನಾವು ಟಿವಿ ಸುದ್ದಿಗಳಲ್ಲಿ ಶಿಕ್ಷೆಗೊಳಗಾದ ಅಪರಾಧಿಗಳನ್ನು ನೋಡುತ್ತೇವೆ. ನ್ಯಾಯಾಲಯಕ್ಕೆ ಕರೆದೊಯ್ಯುವಾಗ ಅವರು ನಡೆದುಕೊಳ್ಳುವ ರೀತಿಯನ್ನು ಆಧರಿಸಿ ಅವರನ್ನು ಎರಡು ವರ್ಗಗಳಾಗಿ ವಿಂಗಡಿಸಬಹುದು. ಮೊದಲ ವರ್ಗ ಟಿ.ವಿ. ಕ್ಯಾಮರಾ ನೋಡುವಾಗ ಕರವಸ್ತ್ರ ಅಥವಾ ಅಂಗಿಯಿಂದ ಮುಖ ಮುಚ್ಚಿಕೊಳ್ಳುತ್ತಾರೆ. ಇನ್ನೊಂದು ಪ್ರಕಾರದವರು ಕ್ಯಾಮೆರಾ ನೋಡಿ ಮುಗುಳ್ನಕ್ಕು ಮನುಕುಲಕ್ಕೆ ಏನನ್ನೋ ಸಾಧಿಸಿದ್ದೇವೆ ಎಂದು ಕೈ ಬೀಸುತ್ತಾರೆ. ಈ ಎರಡು ವಿಧದವರ ನಡುವೆ ಸಮುದ್ರದಷ್ಟು ವ್ಯತ್ಯಾಸವಿದೆ. ಮೊದಲನೆಯ ವರ್ಗದವರು ತಾವು ಮಾಡಿದ್ದು ತಪ್ಪು ಎಂದು ಅರಿತು ನಾಚಿಕೆಯಿಂದ ಮುಖ ಮುಚ್ಚಿಕೊಳ್ಳುತ್ತಾರೆ. ಅವರು ಸರಿಯಾದ ದಾರಿಯಲ್ಲಿ ಹೋಗುವ ಸಾಧ್ಯತೆಯಿದೆ. ಎರಡನೆಯ ವರ್ಗದವರು ತಮ್ಮ ಅಪರಾಧದ ಬಗ್ಗೆ ನಾಚಿಕೆಪಡುವುದಿಲ್ಲ. "ಅಪರಾಧಿಗಳಿಂದ ತುಂಬಿರುವ ಇಂತಹ ಸಮಾಜವು ಕರುಣಾಜನಕವಾಗಿದೆ" ಎಂದು Deliver us from Evil ಎಂಬ ಪುಸ್ತಕದ ಆಕ್ಕಿಯೋನ್ ಹೇಳುತ್ತಾರೆ. 

 

ಮತ್ತು ಇಂದಿನ ಸಿನಿಮಾ, ಟಿ.ವಿ ಗಳಲ್ಲಿ ಮಾತ್ರವಲ್ಲ, ಸಮಾಜದಲ್ಲೂ ದೇಹದ ಅಂಗಾಂಗಗಳು ಕಾಣುವಂತೆ ಡ್ರೆಸ್ ಮಾಡುವುದು ನಾಗರೀಕತೆ ಎಂದು ಪರಿಗಣಿಸಲಾಗುತ್ತಿದೆ. ನೀವು ಸ್ವಲ್ಪ ಅದರ ಬಗ್ಗೆ ಯೋಚಿಸಿದರೆ, ಮಾನಸಿಕ ಅಸ್ವಸ್ಥರ ಅರೆಬೆತ್ತಲೆ ವಸ್ತ್ರಾಧಾರಣೆಗೂ ಇವರಿಗೂ ನಡುವೆ ದೊಡ್ಡ ವ್ಯತ್ಯಾಸವೇನಿದೆ? ನಮ್ಮ ಸುತ್ತಲಿನ ಈ ನಾಚಿಕೆಯಿಲ್ಲದ ಸಮಾಜವು ರಕ್ಷಣೆಯ ವಸ್ತ್ರಗಳನ್ನು ಕಂಡುಕೊಳ್ಳಲು ಪ್ರಾರ್ಥಿಸೋಣ.

- J. ಸಂತೋಷ್

 

ಪ್ರಾರ್ಥನಾ ಅಂಶ:

ಉಜ್ಜೀವನವನ್ನು ಬಯಸುವವರ ಕೂಟದಲ್ಲಿ ಪಾಲ್ಗೊಂಡ ಪ್ರತಿಯೊಂದು ದೇವರ ಮಕ್ಕಳು ಎದ್ದು ಕರ್ತನಿಗಾಗಿ ಪ್ರಕಾಶಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)